Kurukshetra War: ಮಹಾಭಾರತದಲ್ಲಿ ಕೌರವರು ಹಾಗೂ ಪಾಂಡವರ ಮಧ್ಯೆ ಭೀಕರ ಕುರುಕ್ಷೇತ್ರ ಯುದ್ಧ ನಡೆದಿತ್ತು. 18 ದಿನ ನಡೆದಿದ್ದ ಈ ಮಹಾ ಯುದ್ಧದಲ್ಲಿ 18 ಅಕ್ಷೋಹಿಣಿ ಸೈನಿಕರು ಪ್ರಾಣ ಕಳೆದುಕೊಂಡರು. ಹಾಗಾದರೆ, ಒಂದು ಅಕ್ಷೋಹಿಣಿಯಲ್ಲಿ ಎಷ್ಟು ಸೈನಿಕರಿರುತ್ತಾರೆ? ಎಷ್ಟು ಕುದುರೆಗಳು ಹಾಗೂ ಆನೆಗಳು ಇರುತ್ತವೆ? ಯುದ್ಧ ಮುಗಿದ ಬಳಿಕ ಎಷ್ಟು ಜನರು ಬದುಕುಳಿದಿದ್ದರು? ಎಂಬುದನ್ನು ಸಂಪೂರ್ಣವಾಗಿ ತಿಳಿದುಕೊಳ್ಳೋಣ.
ಪಥಿ: 1 ರಥ, 1 ಆನೆ, 3 ಕುದುರೆಗಳು ಹಾಗೂ ಐದು ಸೈನಿಕರನ್ನು ಒಳಗೊಂಡ ತಂಡವನ್ನು 'ಪಥಿ' ಎಂದು ಕರೆಯುತ್ತಾರೆ.
ಸೇನಾಮುಖ: ಅಂತಹ ಮೂರು ಹತ್ತಿ ತಂಡಗಳು ಸೇರಿ 'ಸೇನಾಮುಖ' ಆಗುತ್ತದೆ.
ಗುಲ್ಮಾ: ಮೂರು ಸೇನಾಮುಖಗಳು ಒಟ್ಟಾಗಿ ಸೇರಿದರೆ 'ಗುಲ್ಮಾ' ಸಿದ್ಧ.
ಗಣ: 3 'ಗಣ' ಸೇರಿದರೆ ಒಂದು ಗುಲ್ಮಾ ಸಂಯೋಜನೆ.
ವಾಹಿನಿ: ಮೂರು ಗಣಗಳು ಸೇರಿದ 'ವಾಹಿನಿ' ಆಗುತ್ತದೆ.
ಪೃಥನ: ಮೂರು ವಾಹಿನಿ ಒಟ್ಟಾಗಿ ಸೇರಿದರೆ ಅದನ್ನು 'ಪೃಥನ' ಎಂದು ಕರೆಯಲಾಗುತ್ತದೆ.
ಚಾಮು: 3 ಪೃಥನಗಳು ಸೇರಿದರೆ ಅದನ್ನು 'ಚಾಮು' ಎಂದು ಹೇಳಲಾಗುತ್ತದೆ.
ಅನಿಕಿನಿ: ಮೂರು ಚಾಮುಗಳನ್ನು ಒಟ್ಟುಗೂಡಿಸಿದರೆ ಅದನ್ನು 'ಅನಿಕಿನಿ' ಎನ್ನುತ್ತಾರೆ.
ಅಕ್ಷೋಹಿಣಿ: 10 ಅನಿಕಿನಿಗಳನ್ನು ಒಟ್ಟುಗೂಡಿಸಿದರೆ, 'ಅಕ್ಷೋಹಿಣಿ' ಆಗುತ್ತದೆ.
ಒಂದು ಅಕ್ಷೋಹಿಣಿಯಲ್ಲಿ 109,350,500 ಯೋಧರು ಇರುತ್ತಿದ್ದರು.
- ರಥಗಳು = 21,870
- ಆನೆಗಳು = 21,870
- ಕುದುರೆಗಳು = 65,610
18 ಅಕ್ಷೋಹಿಣಿ ಸೈನ್ಯವೂ ಕೊಲ್ಲಲ್ಪಟ್ಟಿತ್ತು: ಕುರುಕ್ಷೇತ್ರ ಯುದ್ಧವು ಇತಿಹಾಸದಲ್ಲಿ ಅತ್ಯಂತ ಘೋರ ಯುದ್ಧವಾಗಿದೆ. ಈ ಯುದ್ಧದಲ್ಲಿ ಒಟ್ಟು 18 ಅಕ್ಷೋಹಿಣಿ ಸೈನಿಕರು ಪ್ರಾಣ ಕಳೆದುಕೊಂಡಿದ್ದರು. ಸರಳವಾಗಿ ಹೇಳುವುದಾದರೆ, ಒಟ್ಟು 19 ಲಕ್ಷ 68 ಸಾವಿರ 300 ಸೈನಿಕರು ಮೃತಪಟ್ಟಿದ್ದರು. ಅನೇಕ ವನ್ಯಜೀವಿಗಳು ಪ್ರಾಣ ಕಳೆದುಕೊಂಡಿವೆ. ಜೊತೆಗೆ ಅಪಾರ ಆಸ್ತಿಪಾಸ್ತಿಗೆ ಹಾನಿಯಾಗಿತ್ತು.
ಪ್ರಾಣ ಕಳೆದುಕೊಂಡ ಮಹಾನ್ ವ್ಯಕ್ತಿಗಳು ಯಾರು?: ಕುರುಕ್ಷೇತ್ರ ಯುದ್ಧದಲ್ಲಿ ಎಲ್ಲಾ ಸಾಮಾನ್ಯ ಸೈನಿಕರು ಮಡಿದ್ದರು. ಅವರ ಜೊತೆಗೆ ಅತಿರಥ ಹಾಗೂ ಮಹಾರಥರೂ ಸಹ ಪ್ರಾಣ ಕಳೆದುಕೊಂಡಿದ್ದರು. ಭೀಷ್ಮ, ದ್ರೋಣ, ದುರ್ಯೋಧನ, ಕರ್ಣ, ಸೈಂಧವ, ಅಭಿಮನ್ಯು, ದ್ರುಪದ ಸೇರಿದಂತೆ ಅನೇಕರು ಯುದ್ಧಭೂಮಿಯಲ್ಲಿ ಮಡಿದರು. ಕೌರವರ ಪರವಾಗಿ ಹೋರಾಡಿದ ಬಹುತೇಕರೆಲ್ಲರೂ ಜೀವ ಕಳೆದುಕೊಂಡಿದ್ದರು. ಪಾಂಡವ ಪಡೆಗೂ ಕೂಡ ಅಷ್ಟೇ ದೊಡ್ಡ ಹಾನಿಯಾಗಿತ್ತು.
ಯುದ್ಧದಲ್ಲಿ ಬದುಕುಳಿದವರು ಕೇವಲ 10 ಜನ: 18 ದಿನಗಳ ಕಾಲ ಜರುಗಿದ್ದ ಕುರುಕ್ಷೇತ್ರದ ರಣರಂಗ ಶವಗಳ ರಾಶಿಯಿಂದಲೇ ತುಂಬಿ ಹೋಗಿತ್ತು. ಹಾಳಾಗಿ ಬಿದ್ದ ರಥಗಳು, ಬಿಲ್ಲು, ಬಾಣಗಳು ಮತ್ತು ಕತ್ತಿಗಳು ರಾಶಿರಾಶಿಯಾಗಿ ಬಿದ್ದಿದ್ದವು. ಆಯುಧಗಳೆಲ್ಲ ಎಲ್ಲೆಂದರಲ್ಲಿ ಬಿದ್ದಿದ್ದವು. ಭಯಂಕರ ಯುದ್ಧದಲ್ಲಿ ಕೇವಲ ಹತ್ತು ಜನರು ಮಾತ್ರ ಬದುಕುಳಿದ್ದರು. ಪಾಂಡವರ (ಧರ್ಮರಾಜ, ಭೀಮ, ಅರ್ಜುನ, ನಕುಲ, ಸಹದೇವ) ಜೊತೆಗೆ ಶ್ರೀಕೃಷ್ಣ, ಅಶ್ವತ್ಥಾಮ, ಸತ್ಯಕಿ, ಕೃತವರ್ಮ ಮತ್ತು ಕೃಪಾಚಾರ್ಯರು ಮಾತ್ರ ಯುದ್ಧದಲ್ಲಿ ಬದುಕುಳಿದಿದ್ದರು. ಉಳಿದವರೆಲ್ಲರೂ ಘನಘೋರ ಕದನದಲ್ಲಿ ಮಡಿದಿದ್ದರು.
ಇದನ್ನೂ ಓದಿ: ಇಂದು ರಥ ಸಪ್ತಮಿ: ಹೀಗೆ ಸ್ನಾನ ಮಾಡಿದರೆ ಏಳು ಜನ್ಮಗಳ ಪಾಪಗಳು ತೊಲಗುತ್ತದೆಯಂತೆ!.. ಪೂಜೆಯ ಮಹತ್ವ ಹೀಗಿದೆ