Worlds First Tri Foldable Smartphone: ಪ್ರಸ್ತುತ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಫೋಲ್ಡ್ಬಲ್ ಮೊಬೈಲ್‌ಗಳಿಗೆ ಹೆಚ್ಚಿನ ಕ್ರೇಜ್ ಇದೆ. ಇದರಿಂದಾಗಿ ಪ್ರಮುಖ ಸ್ಮಾರ್ಟ್‌ಫೋನ್ ಉತ್ಪಾದನಾ ಕಂಪೆನಿಗಳು ಅಂತಹ ಮಾದರಿಗಳನ್ನು ಹೊರತರುವಲ್ಲಿ ಆಸಕ್ತಿ ತೋರಿಸುತ್ತಿವೆ. ಈ ಹಿನ್ನೆಲೆಯಲ್ಲಿ ಚೀನಾದ ಕಂಪೆನಿ ಹುವಾವೇ ಇತ್ತೀಚೆಗೆ ಮಾರುಕಟ್ಟೆಯಲ್ಲಿ ತನ್ನ ಮೊದಲ ಟ್ರೈ-ಫೋಲ್ಡಬಲ್ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿತು. ಇದನ್ನು 'ಹುವಾವೇ ಮೇಟ್ ಎಕ್ಸ್‌ಟಿ' ಎಂದು ಕರೆಯಲಾಗುತ್ತದೆ. ಇದರ ವಿಶೇಷವೆಂದರೆ ಇದು ವಿಶ್ವದ ಮೊದಲ ಟ್ರೈ-ಫೋಲ್ಡಬಲ್ ಸ್ಮಾರ್ಟ್‌ಫೋನ್ ಕೂಡ ಹೌದು.
ಹುವಾವೇ ಈ ಫೋನ್‌ನ ಮಾರಾಟವನ್ನು ಸೆಪ್ಟೆಂಬರ್ 2024ರಲ್ಲಿ ಪ್ರಾರಂಭಿಸಿತು. ಅಂದಿನಿಂದ ಇಲ್ಲಿಯವರೆಗೆ ಇದು ಜನಪ್ರಿಯತೆ ಗಳಿಸುತ್ತಲೇ ಇದೆ. ಆದರೂ, ಈ ಹಿಂದೆ ಈ ಫೋನ್ ಅನ್ನು ತನ್ನ ತವರು ಚೀನಾ ಮಾರುಕಟ್ಟೆಯಲ್ಲಿ ಮಾತ್ರ ಬಿಡುಗಡೆ ಮಾಡಿದ್ದ ಕಂಪೆನಿಯು ಇತ್ತೀಚೆಗೆ ಅದನ್ನು ಜಾಗತಿಕ ಮಾರುಕಟ್ಟೆಗೂ ತರುವುದಾಗಿ ಘೋಷಿಸಿದೆ. ಅದು ತನ್ನ ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್ನಲ್ಲಿ ಪೋಸ್ಟ್ ಮಾಡಿ, ಫೆಬ್ರವರಿ 18ರಂದು ವಿಶ್ವಾದ್ಯಂತ ಲಭ್ಯವಾಗಲಿದೆ ಎಂದು ಹೇಳಿದೆ. ಆದ್ರೂ ಸಹ ಕಂಪೆನಿಯು ಈ ಘೋಷಣೆ ಮಾಡುವ ಮೊದಲೇ ಈ ಫೋನ್ ಜಾಗತಿಕ ಪ್ರಮಾಣೀಕರಣದಲ್ಲಿ ಕಾಣಿಸಿಕೊಂಡಿತು.
Be part of the extraordinary as we unveil the ultimate. Join us at #HuaweiLaunch on 18 February 2025, Kuala Lumpur. #UnfoldtheClassic pic.twitter.com/O1RbUrBg9P
— Huawei Mobile (@HuaweiMobile) February 5, 2025
'ಹುವಾವೇ ಮೇಟ್ XT' ಫೋನ್ TDRA ಸರ್ಟಿಫಿಕೇಶನ್:
- ಈ ಫೋನ್ ಅನ್ನು ಯುಎಇ (ಯುನೈಟೆಡ್ ಅರಬ್ ಎಮಿರೇಟ್ಸ್) ಟಿಡಿಆರ್ಎ ಮಾದರಿ ಸಂಖ್ಯೆ GRL-LX9 ನೊಂದಿಗೆ ಪ್ರಮಾಣೀಕರಿಸಿದೆ.
- ಈ ಲಿಸ್ಟಿಂಗ್ ಫೋನ್ ಮಾರ್ಕೆಟಿಂಗ್ ಹೆಸರನ್ನು ಸಹ ಬಹಿರಂಗಪಡಿಸಿದೆ. ಹುವಾವೇ ಟೆಕ್ ಯುಎಇ ಬ್ರ್ಯಾಂಡ್ ಇದನ್ನು 'ಹುವಾವೇ ಮೇಟ್ ಎಕ್ಸ್‌ಟಿ' ಹೆಸರಿನಲ್ಲಿ ತರುತ್ತಿರುವುದು ಸ್ಪಷ್ಟವಾಗಿದೆ.
- ಆದರೆ ಈ ಬಗ್ಗೆ ಹೆಚ್ಚಿನ ವಿವರಗಳಿಲ್ಲ. ಇಲ್ಲದಿದ್ದರೆ ಈ ಫೋನ್‌ನ ಹಾರ್ಡ್‌ವೇರ್ ಚೀನೀ ರೂಪಾಂತರದಂತೆಯೇ ಇರುವ ಸಾಧ್ಯತೆಯಿದೆ.
ಹುವಾವೇ ಮೇಟ್ XT ಚೈನೀಸ್ ರೂಪಾಂತರದ ವೈಶಿಷ್ಟ್ಯಗಳು:
- ಡಿಸ್‌ಪ್ಲೇ: ಈ ಫೋನ್ ಸಂಪೂರ್ಣವಾಗಿ ಫೋಲ್ಡಬಲ್ ಮಾಡಿದಾಗ 6.4-ಇಂಚಿನ OLED ಸಿಂಗಲ್ ಸ್ಕ್ರೀನ್ ಮತ್ತು ಇದನ್ನು ಓಪನ್ ಮಾಡಿದಾಗ 7.9-ಇಂಚಿನ 2K ಡ್ಯುಯಲ್ ಸ್ಕ್ರೀನ್ ಮತ್ತು ಟ್ರಿಪಲ್ ಸ್ಕ್ರೀನ್ ಆಗಿ ಸಂಪೂರ್ಣವಾಗಿ ಓಪನ್ ಆದಾಗ 3K ರೆಸಲ್ಯೂಶನ್ ಹೊಂದಿರುವ ದೊಡ್ಡ 10.2-ಇಂಚಿನ ಡಿಸ್‌ಪ್ಲೇ ಹೊಂದಿದೆ. ಈ ಫೋಲ್ಡಬಲ್ ಓಪನ್ ಆದಾಗ 3.6 ಮಿಮೀ ದಪ್ಪವಾಗಿರುತ್ತದೆ. ಇದರ OLED ಸ್ಕ್ರೀನ್ 1.07 ಬಿಲಿಯನ್ ಕಲರ್ಸ್, P3 ವೈಡ್ ಕಲರ್ ಗ್ಯಾಮಟ್, LTPO ಅಡಾಪ್ಟಿವ್ ರಿಫ್ರೆಶ್, 1440Hz ಹೈ-ಫ್ರೀಕ್ವೆನ್ಸಿ PWM ಡಿಮ್ಮಿಂಗ್ ಮತ್ತು 240Hz ವರೆಗಿನ ಟಚ್ ಸ್ಯಾಂಪ್ಲಿಂಗ್ ರೇಟ್ ಅನ್ನು ಹೊಂದಿದೆ.
- ಪ್ರೊಸೆಸರ್: ಕಿರಿನ್ 9010 SoC
- ಕ್ಯಾಮೆರಾ ಸೆಟಪ್: ಈ ಫೋನ್ OIS, f/1.4-f/4.0 ವೇರಿಯಬಲ್ ಅಪರ್ಚರ್, 12MP ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್, 5.5x ಜೂಮ್ ಮತ್ತು OIS ಹೊಂದಿರುವ 12MP ಪೆರಿಸ್ಕೋಪ್ ಟೆಲಿಫೋಟೋ ಸೆನ್ಸರ್ ಹೊಂದಿರುವ 50MP ರಿಯರ್ ಕ್ಯಾಮೆರಾವನ್ನು ಹೊಂದಿದೆ. ಮುಂಭಾಗದಲ್ಲಿ, 8MP ಮುಂಭಾಗದ ಕ್ಯಾಮೆರಾ ಇದೆ.
- ಮೆಮೊರಿ: 16GB RAM ಜೊತೆಗೆ 256GB/512GB/1TB ಸ್ಟೋರೇಜ್ ಆಯ್ಕೆಗಳಿವೆ.
- ಬ್ಯಾಟರಿ: ಇದು 5,600mAh ಬ್ಯಾಟರಿಯನ್ನು ಹೊಂದಿದೆ. ಇದು 66W ಫಾಸ್ಟಿಂಗ್ ವೈರ್ಡ್ ಚಾರ್ಜಿಂಗ್ ಮತ್ತು 50W ವೈರ್‌ಲೆಸ್ ಚಾರ್ಜಿಂಗ್ ಅನ್ನು ಸಪೋರ್ಟ್ ಮಾಡುತ್ತದೆ.
- ಕನೆಕ್ಟಿವಿಟಿ ಫೀಚರ್ಸ್: 5G SA/NSA, ಡ್ಯುಯಲ್ 4G VoLTE, Wi-Fi, ಬ್ಲೂಟೂತ್ 5.2 LE, GPS, NavIC, NFC, USB ಟೈಪ್-C.
- ಈ 'ಹುವಾವೇ ಮೇಟ್ XT' ಟ್ರೈ ಫೋಲ್ಡ್ ಬೇಸ್ ರೂಪಾಂತರ 16GB + 256GB ಬೆಲೆ: 19,999 ಯುವಾನ್ (ಅಂದಾಜು ರೂ. 2.43 ಲಕ್ಷ)..
- ಇದರ 512 ಸ್ಟೋರೇಜ್ ರೂಪಾಂತರದ ಬೆಲೆ 21,999 ಯುವಾನ್ (ಸರಿಸುಮಾರು ರೂ. 2.59 ಲಕ್ಷ)..
- ಈ ಟ್ರೈ-ಫೋಲ್ಡಬಲ್ ಫೋನ್‌ನ 1TB ರೂಪಾಂತರದ ಬೆಲೆ: 23,999 ಯುವಾನ್ (ಸರಿಸುಮಾರು ರೂ. 2.93 ಲಕ್ಷ).
- ಆದರೂ ಈ ಟ್ರೈ-ಫೋಲ್ಡಿಂಗ್ ಫೋನ್ ಭಾರತದಲ್ಲಿ ಬಿಡುಗಡೆಯಾಗದಿರಬಹುದು. ಏಕೆಂದರೆ ನಮ್ಮ ದೇಶದಲ್ಲಿ ಸ್ಮಾರ್ಟ್‌ಫೋನ್ ವಿಭಾಗದಲ್ಲಿ ಹುವಾವೇ ರಿಟೇಲ್ ಮಾರಾಟವನ್ನು ಹೊಂದಿಲ್ಲ.
ಇದನ್ನೂ ಓದಿ: ಒಂದಕ್ಕಿಂತ ಒಂದು ವಿಭಿನ್ನ! ಈ ತಿಂಗಳು ಮಾರುಕಟ್ಟೆಗೆ ಲಗ್ಗೆಯಿಡುವ ಸ್ಮಾರ್ಟ್ಫೋನ್ಗಳಿವು