ಬೆಂಗಳೂರು : ಸೋಮವಾರದಿಂದ ನಗರದ ಯಲಹಂಕ ವಾಯುನೆಲೆಯಲ್ಲಿ ಏರೋ ಇಂಡಿಯಾ - 2025 ವೈಮಾನಿಕ ಪ್ರದರ್ಶನಕ್ಕೆ ಸಕಲ ಸಿದ್ಧತೆಗಳು ನಡೆದಿವೆ. ಯಲಹಂಕ ವಾಯುಸೇನಾ ನೆಲೆಯು ಬೆಂಗಳೂರು ಇಂಟರ್ ನ್ಯಾಷನಲ್ ಏರ್‌ಪೊರ್ಟ್ ರಸ್ತೆಗೆ ಹೊಂದಿಕೊಂಡಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳು ಸಂಚರಿಸುವುದರಿಂದ ಸುಗಮ ಸಂಚಾರದ ದೃಷ್ಟಿಯಿಂದ ಫೆಬ್ರವರಿ 10 ರಂದು ಬೆಳಗ್ಗೆ 5 ರಿಂದ ಫೆಬ್ರವರಿ 14 ರಂದು ರಾತ್ರಿ 10ರ ವರೆಗೆ ಸಂಚಾರ ವ್ಯವಸ್ಥೆಯಲ್ಲಿ ಕೆಲ ಮಾರ್ಪಾಡುಗಳನ್ನ ಮಾಡಲಾಗಿದೆ.
ಏಕಮುಖ ಸಂಚಾರ ವ್ಯವಸ್ಥೆ :
ನಿಟ್ಟೆ ಮೀನಾಕ್ಷಿ ಕಾಲೇಜ್ ರಸ್ತೆ (ಪೂರ್ವದಿಕ್ಕಿನಿಂದ ಪಶ್ಚಿಮ ದಿಕ್ಕಿನ ಕಡೆಗೆ)
ಬಾಗಲೂರು ಮುಖ್ಯರಸ್ತೆ (ಪಶ್ಚಿಮದಿಂದ ಪೂರ್ವದಿಕ್ಕಿನ ಕಡೆಗೆ)
ಏರೋ ಇಂಡಿಯಾ ಪಾರ್ಕಿಂಗ್ - (ಉಚಿತ)
ಜಿಕೆವಿಕೆ ಕ್ಯಾಂಪಸ್ : ಜಿಕೆವಿಕೆ ಪಾರ್ಕಿಂಗ್ ಸ್ಥಳದಿಂದ ಆಡ್ವಾ ಪಾರ್ಕಿಂಗ್ (Air Display View Area) ಹಾಗೂ ಡೊಮೆಸ್ಟಿಕ್ ಪಾರ್ಕಿಂಗ್ ಸ್ಥಳಕ್ಕೆ ತೆರಳಲು ಹಾಗೂ ವಾಪಸ್ ಜಿಕೆವಿಕೆ ಪಾರ್ಕಿಂಗ್ ಸ್ಥಳಕ್ಕೆ ಬರಲು ಬಿಎಂಟಿಸಿ ವತಿಯಿಂದ ಉಚಿತ ಎ.ಸಿ ವಿಶೇಷ ಬಸ್ ವ್ಯವಸ್ಥೆ ಮಾಡಲಾಗಿದೆ.
ಪಾವತಿ ಪಾರ್ಕಿಂಗ್ ಆಡ್ವಾ ಪಾರ್ಕಿಂಗ್ (Air Display View Area) : ಗೇಟ್ ನಂಬರ್ 8 ಮತ್ತು 9ರ ಮೂಲಕ ಪ್ರವೇಶ.
ಡೊಮೆಸ್ಟಿಕ್ ಪಾರ್ಕಿಂಗ್ : ಗೇಟ್ ನಂಬರ್ 5ರ ಮೂಲಕ ಪ್ರವೇಶ.
ಸೂಚಿಸಲಾದ ಮಾರ್ಗಗಳು : ಬೆಂಗಳೂರು ಪೂರ್ವ ದಿಕ್ಕಿನಿಂದ ಅಡ್ವಾ (Air Display View Area) ಪಾರ್ಕಿಂಗ್ ಕಡೆ ಬರುವವರು ಕೆ. ಆರ್ ಪುರ ನಾಗವಾರ ಜಂಕ್ಷನ್ - ಬಲತಿರುವು - ಥಣಿಸಂದ್ರ - ನಾರಾಯಣಪುರ ಕ್ರಾಸ್ ಎಡ - ಟೆಲಿಕಾಂ ಲೇಔಟ್ - ಜಕ್ಕೂರು ಕ್ರಾಸ್ - ಬಲ ತಿರುವು - ಯಲಹಂಕ ಬೈಪಾಸ್ - ಯಲಹಂಕ ಕಾಫಿ ಡೇ - ಪಾಲನಹಳ್ಳಿ ಗೇಟ್ ಸರ್ವಿಸ್ ರಸ್ತೆ (ಗ್ರೀಲ್ ಓಪನ್) ಎಡ ತಿರುವು- ನಿಟ್ಟೆ ಮೀನಾಕ್ಷಿ ಕಾಲೇಜ್ ರಸ್ತೆ - ಅಡ್ವಾ ಪಾರ್ಕಿಂಗ್ ತಲುಪಬಹುದು.
ಬೆಂಗಳೂರು ಪೂರ್ವ ದಿಕ್ಕಿನಿಂದ ಡೊಮೆಸ್ಟಿಕ್ ಪಾರ್ಕಿಂಗ್ ಕಡೆ ಬರುವವವರು ಕೆ. ಆರ್ ಪುರಂ - ಬಾಗಲೂರು - ಹೆಣ್ಣೂರು ಕ್ರಾಸ್ - ಕೊತ್ತನೂರು - ಗುಬ್ಬಿ ಕ್ರಾಸ್ - ಕಣ್ಣೂರು - ಬಾಗಲೂರು - ಬಾಗಲೂರು ಲೇಔಟ್ - ರಜಾಕ್ ಪಾಳ್ಯ ವಿದ್ಯಾನಗರ ಕ್ರಾಸ್ - ಡೊಮೆಸ್ಟಿಕ್ ಪಾರ್ಕಿಂಗ್ ತಲುಪಬಹುದು.
ಬೆಂಗಳೂರು ಪಶ್ಚಿಮ ದಿಕ್ಕಿನಿಂದ ಅಡ್ವಾ ಪಾರ್ಕಿಂಗ್ ಕಡೆಗೆ ಬರುವವರು ಗೊರಗುಂಟೆಪಾಳ್ಯ - ಬಿಇಎಲ್ ವೃತ್ತ ಗಂಗಮ್ಮ ವೃತ್ತ - ಎಂ. ಎಸ್ ಪಾಳ್ಯ ಸರ್ಕಲ್ - ಉನ್ನಿಕೃಷ್ಣನ್ ರಸ್ತೆ - ಮದರ್ ಡೈರಿ ಜಂಕ್ಷನ್ - ಉನ್ನಿ ಕೃಷ್ಣನ್ ಜಂಕ್ಷನ್ ಎಡ ತಿರುವು - ದೊಡ್ಡಬಳ್ಳಾಪುರ ರಸ್ತೆ -ನಾಗೇನಹಳ್ಳಿ ಗೇಟ್ ಬಲ ತಿರುವು - ಗಂಟೆಗಾನಹಳ್ಳಿ ಸರ್ಕಲ್ ಬಲ ತಿರುವು ಹಾರೋಹಳ್ಳಿ - ಗಂಟಿಗಾನಹಳ್ಳಿ ಸರ್ಕಲ್ ಬಲತಿರುವು ಪಡೆದು ಅಡ್ವಾ ಪಾರ್ಕಿಂಗ್ ತಲುಪಬಹುದು.
ಬೆಂಗಳೂರು ಪಶ್ಚಿಮ ದಿಕ್ಕಿನಿಂದ ಡೊಮೆಸ್ಟಿಕ್ ಪಾರ್ಕಿಂಗ್ ಕಡೆಗೆ ಬರುವವರು ಗೊರಗುಂಟೆಪಾಳ್ಯ - ಬಿಇಎಲ್ ವೃತ್ತ - ಗಂಗಮ್ಮ ವೃತ್ತ - ಎಂ. ಎಸ್ ಪಾಳ್ಯ ಸರ್ಕಲ್ - ಉನ್ನಿಕೃಷ್ಣನ್ ರಸ್ತೆ ಮದರ್ ಡೈರಿ ಜಂಕ್ಷನ್ - ದೊಡ್ಡಬಳ್ಳಾಪುರ ರಸ್ತೆ - ರಾಜಾನುಕುಂಟೆ - ಎಂವಿಐಟಿ ಕ್ರಾಸ್ - ವಿದ್ಯಾನಗರ ಕ್ರಾಸ್ ಯೂ ಟರ್ನ್ - ಹುಣಸಮಾರನಹಳ್ಳಿ ಮೂಲಕ ಡೊಮೆಸ್ಟಿಕ್ ಪಾರ್ಕಿಂಗ್ ತಲುಪಬಹುದು.
ಬೆಂಗಳೂರು ದಕ್ಷಿಣ ದಿಕ್ಕಿನಿಂದ ಅಡ್ವಾ ಪಾರ್ಕಿಂಗ್ ಕಡೆಗೆ ಬರುವವರು ಮೈಸೂರು ರಸ್ತೆ - ನಾಯಂಡಹಳ್ಳಿ - ಚಂದ್ರಾಲೇಔಟ್ - ಗೊರಗುಂಟೆಪಾಳ್ಯ - ಬಿಇಎಲ್ ವೃತ್ತ -ಗಂಗಮ್ಮ ವೃತ್ತ - ಎಂ. ಎಸ್ ಪಾಳ್ಯ ಸರ್ಕಲ್ - ಮದರ್ ಡೈರಿ ಜಂಕ್ಷನ್ - ಉನ್ನಿ ಕೃಷ್ಣನ್ ಜಂಕ್ಷನ್ ದೊಡ್ಡಬಳ್ಳಾಪುರ ಮುಖ್ಯ ರಸ್ತೆ ನಾಗೇನಹಳ್ಳಿ ಗೇಟ್ ಬಲ ತಿರುವು - ಹಾರೋಹಳ್ಳಿ ಮೂಲಕ - ಅಡ್ವಾ ಪಾರ್ಕಿಂಗ್ ತಲುಪಬಹುದು.
ಬೆಂಗಳೂರು ದಕ್ಷಿಣ ದಿಕ್ಕಿನಿಂದ ಡೊಮೆಸ್ಟಿಕ್ ಪಾರ್ಕಿಂಗ್ ಕಡೆಗೆ ಬರುವವರು ಮೈಸೂರು ರಸ್ತೆ - ನಾಯಂಡನಹಳ್ಳಿ ಚಂದ್ರಾಲೇಔಟ್ - ಗೊರಗುಂಟೆಪಾಳ್ಯ - ಬಿಇಎಲ್ ವೃತ್ತ - ಗಂಗಮ್ಮ ವೃತ್ತ ಎಂ. ಎಸ್ ಪಾಳ್ಯ ಸರ್ಕಲ್ - ಮದರ್ ಡೈರಿ - ಉನ್ನಿ ಕೃಷ್ಣನ್ ಜಂಕ್ಷನ್ ತಿರುವು ದೊಡ್ಡಬಳ್ಳಾಪುರ ರಸ್ತೆ - ರಾಜಾನುಕುಂಟೆ ಬಲ ತಿರುವು- ಅದ್ದಿಗಾನಹಳ್ಳಿ ಎಂವಿಐಟಿ ಕ್ರಾಸ್ ವಿದ್ಯಾನಗರ ಕ್ರಾಸ್ ಯೂ ಟರ್ನ್ ಪಡೆದು ಹುಣಸಮಾರನಹಳ್ಳಿ ಮೂಲಕ ಡೊಮೆಸ್ಟಿಕ್ ಪಾರ್ಕಿಂಗ್ ತಲುಪಬಹುದು.
ಕೆಂಪೇಗೌಡ ಇಂಟರ್ನ್ಯಾಷನಲ್ ಏರ್‌ಪೋರ್ಟ್ (KIAL) ಕಡೆಗೆ ತಲುಪಲು ಪರ್ಯಾಯ ಮಾರ್ಗ :
ಬೆಂಗಳೂರು ಪೂರ್ವ ದಿಕ್ಕಿನಿಂದ- ಕೆ. ಆರ್ ಪುರಂ - ಹೆಣ್ಣೂರು ಕ್ರಾಸ್ - ಕೊತ್ತನೂರು - ಗುಬ್ಬಿ ಕ್ರಾಸ್ - ಕಣ್ಣೂರು - ಬಾಗಲೂರು - ಮೈಲನಹಳ್ಳಿ - ಬೇಗೂರು -ನೈರುತ್ಯ ಪ್ರವೇಶದ್ವಾರದ ಮೂಲಕ ಏರ್‌ಪೋರ್ಟ್ ತಲುಪಬಹುದು.
ಬೆಂಗಳೂರು ಪಶ್ಚಿಮ ದಿಕ್ಕಿನಿಂದ - ಗೊರಗುಂಟೆಪಾಳ್ಯ - ಬಿಇಎಲ್ ವೃತ್ತ - ಗಂಗಮ್ಮ ವೃತ್ತ - ಎಂ. ಎಸ್ ಪಾಳ್ಯ ಸರ್ಕಲ್ - ಮದರ್ ಡೈರಿ ಉನ್ನಿ ಕೃಷ್ಣನ್ ಜಂಕ್ಷನ್ ಎಡ ತಿರುವು - ದೊಡ್ಡಬಳ್ಳಾಪುರ ರಸ್ತೆ - ರಾಜನುಕುಂಟೆ - ಅದ್ದಿಗಾನಹಳ್ಳಿ - ತಿಮ್ಮಸಂದ್ರ - ಎಂವಿಐಟಿ ಕ್ರಾಸ್ ವಿದ್ಯಾನಗರ ಕ್ರಾಸ್ ಮೂಲಕ ಏರ್‌ಪೋರ್ಟ್ ತಲುಪಬಹುದು.
ಬೆಂಗಳೂರು ದಕ್ಷಿಣ ದಿಕ್ಕಿನಿಂದ ಮೈಸೂರು ರಸ್ತೆ - ನಾಯಂಡನಹಳ್ಳಿ- ಚಂದ್ರಾಲೇಔಟ್ - ಗೊರಗುಂಟೆಪಾಳ್ಯ - ಬಿಇಎಲ್ ವೃತ್ತ - ಗಂಗಮ್ಮ ವೃತ್ತ - ಎಂ. ಎಸ್ ಪಾಳ್ಯ ಸರ್ಕಲ್ - ಮದರ್ ಡೈರಿ ಜಂಕ್ಷನ್ - ಉನ್ನಿಕೃಷ್ಣನ್ ಜಂಕ್ಷನ್ ಎಡ ತಿರುವು – ದೊಡ್ಡಬಳ್ಳಾಪುರ ರಸ್ತೆ -ರಾಜಾನುಕುಂಟೆ - ವಿದ್ಯಾನಗರ ಕ್ರಾಸ್ ಮೂಲಕ ಏರ್‌ಪೋರ್ಟ್ ತಲುಪಬಹುದು.
ಲಾರಿ, ಟ್ರಕ್, ಖಾಸಗಿ ಬಸ್‌ಗಳು ಮತ್ತಿತರೆ ಭಾರಿ ಸರಕು ಸಾಗಾಣಿಕೆಯ ವಾಹನಗಳ ಸಂಚಾರ ನಿರ್ಬಂಧಿಸಿರುವ ರಸ್ತೆಗಳು:
ಬೆಂಗಳೂರು - ಬಳ್ಳಾರಿ ರಸ್ತೆಯಲ್ಲಿ ಮೇಖ್ರಿ ವೃತ್ತದಿಂದ - ಎಂವಿಐಟಿ ಕ್ರಾಸ್‌ವರೆಗೆ ಮತ್ತು ಎಂವಿಐಟಿ ಕ್ರಾಸ್‌ನಿಂದ - ಮೇಖ್ರಿ ವೃತ್ತದ ವರೆಗೆ, ರಸ್ತೆಯ ಎರಡೂ ದಿಕ್ಕಿನಲ್ಲಿ ಸಂಚಾರವನ್ನು ನಿಷೇಧಿಸಲಾಗಿದೆ.
ಗೊರಗುಂಟೆ ಪಾಳ್ಯದಿಂದ ಹೆಬ್ಬಾಳ ಮಾರ್ಗವಾಗಿ ಹೆಣ್ಣೂರು ಕ್ರಾಸ್‌ನವರೆಗೆ ರಸ್ತೆಯ ಎರಡು ದಿಕ್ಕಿನಲ್ಲಿ ಸಂಚಾರವನ್ನು ನಿಷೇಧಿಸಲಾಗಿದೆ.
ನಾಗವಾರ ಜಂಕ್ಷನ್‌ನಿಂದ - ಥಣಿಸಂದ್ರ ಮುಖ್ಯ ರಸ್ತೆಯ ಮಾರ್ಗವಾಗಿ ಬಾಗಲೂರು ಮುಖ್ಯ ರಸ್ತೆ, ರೇವಾ ಕಾಲೇಜ್ ಜಂಕ್ಷನ್ ವರೆಗೆ ಸಂಚಾರವನ್ನು ನಿಷೇಧಿಸಲಾಗಿದೆ.
ಹೆಸರಘಟ್ಟ ಮತ್ತು ಚಿಕ್ಕಬಾಣಾವರ ಕಡೆಯಿಂದ ಬೆಂಗಳೂರು ನಗರದ ಕಡೆಗೆ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ.
ಎಲ್ಲಾ ವಾಹನ ನಿಲುಗಡೆ ನಿಷೇಧಿತ ರಸ್ತೆಗಳು : ನಾಗೇನಹಳ್ಳಿ ಗೇಟ್‌ನಿಂದ ಗಂಟಿಗಾನಹಳ್ಳಿ ಮಾರ್ಗವಾಗಿ ಬೆಂಗಳೂರು - ಬಳ್ಳಾರಿ ರಸ್ತೆ ಸೇರುವ ಫೋರ್ಡ್ ಶೋರೂಮ್ ಕ್ರಾಸ್(ಬಿಬಿ ರಸ್ತೆ)ವರೆಗೆ.
ಬೆಂಗಳೂರು - ಬಳ್ಳಾರಿ ರಸ್ತೆಯ ಮೇಖ್ರಿ ಸರ್ಕಲ್‌ನಿಂದ ದೇವನಹಳ್ಳಿವರೆಗೆ.
ಬಾಗಲೂರು ಕ್ರಾಸ್ ಜಂಕ್ಷನ್‌ನಿಂದ ಬಾಗಲೂರು ಮುಖ್ಯ ರಸ್ತೆಯ ಮಾರ್ಗವಾಗಿ ಸಾತನೂರುವರೆಗೆ.
ನಾಗವಾರ ಜಂಕ್ಷನ್‌ನಿಂದ ಥಣಿಸಂದ್ರ ಮುಖ್ಯ ರಸ್ತೆಯ ಮಾರ್ಗವಾಗಿ ರೇವಾ ಕಾಲೇಜ್ ಜಂಕ್ಷನ್‌ನವರೆಗೆ.
ಎಫ್‌ಟಿಐ ಜಂಕ್ಷನ್‌ನಿಂದ ಹೆಣ್ಣೂರು ಕ್ರಾಸ್ ಜಂಕ್ಷನ್‌ನವರೆಗೆ.
ಹೆಣ್ಣೂರು ಕ್ರಾಸ್‌ನಿಂದ ಬೇಗೂರು ಬ್ಯಾಕ್ ಗೇಟ್‌ನವರೆಗೆ.
ನಾಗೇನಹಳ್ಳಿ ಗೇಟ್ ಜಂಕ್ಷನ್‌ನಿಂದ ಯಲಹಂಕ ಸರ್ಕಲ್‌ವರೆಗೆ.
ಎಂವಿಐಟಿ ಕ್ರಾಸ್‌ನಿಂದ ನಾರಾಯಣಪುರ ರೈಲ್ವೇ ಕ್ರಾಸ್‌ವರೆಗೆ.
ಕೋಗಿಲು ಕ್ರಾಸ್ ಜಂಕ್ಷನ್‌ನಿಂದ ಕಣ್ಣೂರು ಜಂಕ್ಷನ್‌ನವರೆಗೆ.
ಮತ್ತಿಕೆರೆ ಕ್ರಾಸ್‌ನಿಂದ ದೊಡ್ಡಬಳ್ಳಾಪುರ ಮುಖ್ಯ ರಸ್ತೆಯ ಉನ್ನಿಕೃಷ್ಣನ್ ಜಂಕ್ಷನ್‌ನವರೆಗೆ.
ಜಾಲಹಳ್ಳಿ ಕ್ರಾಸ್ ಜಂಕ್ಷನ್‌ನಿಂದ ಗಂಗಮ್ಮ ಸರ್ಕಲ್ ಜಂಕ್ಷನ್‌ವರೆಗೆ.
ಯಲಹಂಕ ವಾಯುನೆಲೆಯಲ್ಲಿ ಏರೋ ಇಂಡಿಯಾ - 2025 ವೈಮಾನಿಕ ಪ್ರದರ್ಶನಕ್ಕೆ ಸಕಲ ಸಿದ್ಧತೆಗಳು
ಸಂಚಾರ ವಿಭಾಗದ ಜಂಟಿ ಆಯುಕ್ತ ಎಂ. ಎನ್ ಅನುಚೇತ್ ಅವರು ಮಾತನಾಡಿ, ''ಏರೋ ಇಂಡಿಯಾ - 2025 ವೈಮಾನಿಕ ಪ್ರದರ್ಶನವು ನಗರದ ಯಲಹಂಕ ವಾಯುನೆಲೆಯಲ್ಲಿ ನಡೆಯಲಿದೆ. ಈ ವೇಳೆ ಸಾರ್ವಜನಿಕರ ಸುಗಮ ಸಂಚಾರದ ದೃಷ್ಟಿಯಿಂದ ವ್ಯಾಪಕವಾಗಿ ಸಂಚಾರ ವ್ಯವಸ್ಥೆ ಮಾಡಲಾಗಿದೆ. ಈ ಸಂಚಾರ ವ್ಯವಸ್ಥೆ ಫೆಬ್ರವರಿ 10 ರಿಂದ 14ರ ವರೆಗೆ ಬೆಳಗ್ಗೆ 5 ರಿಂದ ರಾತ್ರಿ 10 ಗಂಟೆವರೆಗೆ ಎಲ್ಲಾ ದಿನಗಳಲ್ಲಿ ಜಾರಿಯಲ್ಲಿರುತ್ತದೆ. ಜಿಕೆವಿಕೆ ಕ್ಯಾಂಪಸ್ನಲ್ಲಿ ಉಚಿತ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ಪಾರ್ಕಿಂಗ್ ಸ್ಥಳದಿಂದ ಏರ್ಶೋಗೆ ಹೋಗಿ ಬರಲು ಉಚಿತ ಬಿಎಂಟಿಸಿ ಬಸ್ ಸೇವೆಯನ್ನ ಒದಗಿಸಲಾಗಿದೆ. ವೀಕ್ಷಣೆಗೆ ಬರುವವರು ಈ ಉಚಿತ ವ್ಯವಸ್ಥೆ ಬಳಸಿಕೊಳ್ಳಲು ಸೂಚಿಸಿದೆ'' ಎಂದರು.
ಸೂಚನೆಗಳು : ಏರೋ ಇಂಡಿಯಾ ವೀಕ್ಷಣೆಗೆ ಬರುವವರು ತಮಗೆ ನೀಡಲಾಗಿರುವ ಟಿಕೆಟ್ / ಪಾಸ್‌ನ QR ಕೋಡನ್ನು ಮೊದಲೇ ಸ್ಕ್ಯಾನ್ ಮಾಡಿ ಯಾವ ಗೇಟ್‌ನಿಂದ ಪ್ರವೇಶಿಸಬೇಕೆಂದು ಮೊದಲೇ ನಿರ್ಧರಿಸಿಕೊಂಡು ಪ್ರಯಾಣಿಸಿದರೆ ಅನಾವಶ್ಯಕ ವಿಳಂಬಕ್ಕೆ ಅವಕಾಶವಿರುವುದಿಲ್ಲ.
ಇದನ್ನೂ ಓದಿ : ಏರೋ ಇಂಡಿಯಾ-2025: ರಕ್ಷಣಾ ಸಚಿವ ರಾಜನಾಥ್ ಸಿಂಗ್ ಬೆಂಗಳೂರಿಗೆ ಆಗಮನ, ಎಚ್ಎಎಲ್ಗೆ ಭೇಟಿ - AERO INDIA 2025