ETV Bharat / sports

ಕೊಹ್ಲಿ ಬೇಗ ಔಟಾಗಲೂ ಬಟ್ಲರ್​ ​ಕಾರಣ: ಇಂಗ್ಲೆಂಡ್​ ನಾಯಕನ ವಿರುದ್ಧ ಫ್ಯಾನ್ಸ್​ ಗರಂ! - IND VS ENG 2ND ODI

IND vs ENG 2nd ODI: ಇಂಗ್ಲೆಂಡ್​ ವಿರುದ್ದ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ವಿರಾಟ್​ ಕೊಹ್ಲಿ 5ರನ್​ಗಳಿಸಿ ಔಟಾಗಿದ್ದು ಇಂಗ್ಲೆಂಡ್​ ನಾಯಕನ ವಿರುದ್ಧ ಫ್ಯಾನ್ಸ್​ ಆಕ್ರೋಶ ಹೊರಹಾಕಿದ್ದಾರೆ.

IND VS ENG 2ND ODI VIRAT KOHLI  JOS BUTTLER  VIRAT KOHLI  VIRAT KOHLI FANS
Virat Kohli (AP)
author img

By ETV Bharat Sports Team

Published : Feb 10, 2025, 1:50 PM IST

IND vs ENG 2nd ODI: ಇಂಗ್ಲೆಂಡ್​ ವಿರುದ್ಧ ನಡೆದ 2ನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ 4 ವಿಕೆಟ್​ಗಳಿಂದ ಗೆಲುವು ಸಾಧಿಸಿರುವುದು ಗೊತ್ತೇ ಇದೆ. ಆದರೆ, ಈ ಪಂದ್ಯದಲ್ಲಿ ವಿರಾಟ್​ ಕೊಹ್ಲಿ ಉತ್ತಮ ಬ್ಯಾಟಿಂಗ್​ ಮಾಡುವ ಮೂಲಕ ಮತ್ತೆ ಫಾರ್ಮ್​ಗೆ ಮರಳಲಿದ್ದಾರೆ ಎಂದುಕೊಂಡಿದ್ದ ಫ್ಯಾನ್ಸ್​​ಗೆ ಕೊಹ್ಲಿ ಶಾಕ್​ ನೀಡಿದ್ದರು. ಕೇವಲ 5 ರನ್​ಗಳಿಸಿ ಪೆವಿಲಿಯನ್​ ಸೇರಿದ್ದರು.

ಆರಂಭಿಕರಾಗಿ ಬ್ಯಾಟಿಂಗ್​ಗೆ ಇಳಿದ ರೋಹಿತ್ ಶರ್ಮಾ ಮತ್ತು ಶುಭಮನ್ ಗಿಲ್ ಮೊದಲ ವಿಕೆಟ್‌ಗೆ 136 ರನ್‌ಗಳನ್ನು ಬಾರಿಸುವ ಮೂಲಕ ತಂಡಕ್ಕೆ ಭದ್ರ ಬುನಾದಿ ಹಾಕಿದ್ದರು. ಗಿಲ್ (60) ಔಟಾದ ನಂತರ ಕ್ರೀಸ್​ಗೆಗೆ ಬಂದ ಕೊಹ್ಲಿ, ಆರಂಭದಲ್ಲಿ ನಿಧಾನವಾಗಿ ಬ್ಯಾಟಿಂಗ್​ ಮಾಡಿದರು. ಬಳಿಕ ಅಟ್ಕಿನ್ಸನ್ ಎಸೆತದಲ್ಲಿ ಭರ್ಜರಿ ಬೌಂಡರಿ ಬಾರಿಸಿ ಉತ್ತಮ್ಮ ಇನ್ನಿಂಗ್ಸ್​ ಕಲೆ ಹಾಕುವ ಸೂಚನೆ ನೀಡಿದ್ದರು. ಆದರೆ, ಅಭಿಮಾನಿಗಳ ಖುಷಿ ಕೆಲವೇ ಕ್ಷಣದಲ್ಲಿ ಕೊನೆ ಗೊಂಡಿತು. ಕಾರಣ ಕೊಹ್ಲಿ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ಉಳಿಯಲು ಸಾಧ್ಯವಾಗಲಿಲ್ಲ. ಆದಿಲ್ ರಶೀದ್ ಬೌಲಿಂಗ್​ನಲ್ಲಿ ಕೊಹ್ಲಿ ವಿಕೆಟ್ ಕೀಪರ್​ಗೆ ಕ್ಯಾಚಿತ್ತು ನಿರ್ಗಮಿಸಿದರು.

ಆರಂಭದಲ್ಲಿ ಅಂಪೈರ್ ನಾಟ್ ಔಟ್ ಎಂದು ತೀರ್ಪು ನೀಡಿದ್ದರು. ಆದರೆ, ಇಂಗ್ಲೆಂಡ್ ಡಿಆರ್‌ಎಸ್ ತೆಗೆದುಕೊಂಡಿತು. ಈ ವೇಳೆ ಚೆಂಡು ಬ್ಯಾಟ್​ಗೆ ತಾಗಿದ್ದು ಕಂಡು ಬಂದಿತ್ತು. ಬಳಿಕ ಅಂಪೈರ್​ ಔಟ್​ ನೀಡಿದ್ದರು. ಆದರೆ, ಕೊಹ್ಲಿ ಬೇಗ ಔಟಾಗಲು ಇಂಗ್ಲೆಂಡ್​ನ ನಾಯಕನೇ ಕಾರಣ ಎಂದು ಫ್ಯಾನ್ಸ್​ ಕಿಡಿಕಾರಿದ್ದಾರೆ.

ಜೊಸ್​ ಬಟ್ಲರ್​ ಕಾರಣ: ಭಾರತದ ಬ್ಯಾಟಿಂಗ್​ ವೇಳೆ ಆದಿಲ್ ರಶೀದ್ ಎಸೆದ 20ನೇ ಓವರ್‌ನ ಮೂರನೇ ಎಸೆತದಲ್ಲಿ ವಿರಾಟ್ ಔಟಾದರು. ಆದರೆ, ಕೊಹ್ಲಿ ಮೊದಲು ಎಸೆದ ಚೆಂಡನ್ನು ಡ್ರೈವ್ ಮಾಡಿದ್ದರು. ಅದು ನೇರವಾಗಿ ಇಂಗ್ಲೆಂಡ್ ನಾಯಕ ಜೋಸ್ ಬಟ್ಲರ್‌ ಕೈ ಸೇರಿತ್ತು. ಈ ವೇಳೆ ಕೊಹ್ಲಿ ಕ್ರೀಸ್​ನಲ್ಲಿದ್ದರು ಚೆಂಡನ್ನು ವಿಕೆಟ್ ಕೀಪರ್ ಕಡೆಗೆ ಎಸೆದಿದ್ದರು.

ಆದರೆ, ಅದು ವಿರಾಟ್ ಕೊಹ್ಲಿ ಬೆನ್ನಿಗೆ ಬಲವಾಗಿ ತಾಕಿತು. ಕೂಡಲೆ ಬಟ್ಲರ್ ಕೂಡ ಕ್ಷಮೆಯಾಚಿಸದರು. ಆದರೆ, ಇದರ ಮುಂದಿನ ಎಸೆತದಲ್ಲೇ ಕೊಹ್ಲಿ ಔಟಾದರು. ಬಟ್ಲರ್​ ಹಾಗೆ ಮಾಡಿದ್ದಕ್ಕೆ ಕೊಹ್ಲಿ ಏಕಾಗ್ರತೆ ಕಳೆದುಕೊಂಡು ಮುಂದಿನ ಎಸೆತದಲ್ಲೇ ಔಟಾಗಿದ್ದಾರೆ ಎಂದು ಫ್ಯಾನ್ಸ್​ ತೀವ್ರವಾಗಿ ಟೀಕಿಸಿದರು. ಉದ್ದೇಶಪೂರ್ವಕವಾಗಿ ಕೊಹ್ಲಿಗೆ ಚೆಂಡನ್ನು ಎಸೆದಂತೆ ಕಾಣುತ್ತಿದೆ ಎಂದು ಅಭಿಮಾನಿಯೊಬ್ಬರು ಎಕ್ಸ್​ನಲ್ಲಿ ಕಾಮೆಂಟ್ ಮಾಡಿದ್ದಾರೆ. ಕೊಹ್ಲಿ ಏಕಾಗ್ರತೆ ಕಳೆದುಕೊಳ್ಳುವಂತೆ ಮಾಡಲು ಬಟ್ಲರ್ ಪ್ರಯತ್ನಿಸಿದರು ಮತ್ತು ಅದರಲ್ಲಿ ಯಶಸ್ವಿಯಾದರು ಎಂದು ಹೇಳಿದ್ದಾರೆ.

ಇದನ್ನೂ ಓದಿ: ಹಿಟ್​ಮ್ಯಾನ್​ ವೇಗದ ಶತಕ : ಇಂಗ್ಲೆಂಡ್​ ವಿರುದ್ಧ ಏಕದಿನ ಸರಣಿ ಗೆದ್ದ ಭಾರತ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.