Finger Millet Health Benefits: ನಮ್ಮ ದೇಹವು ಸದೃಢವಾಗಿರಲು ಹಾಗೂ ಸರಿಯಾಗಿ ಕಾರ್ಯ ನಿರ್ವಹಿಸಲು ಆರೋಗ್ಯಕರ ಮೂಳೆಗಳು ಅವಶ್ಯವಾಗಿದೆ. ಇಂದಿನ ಬದಲಾದ ಜೀವನಶೈಲಿ ಹಾಗೂ ಆಹಾರ ಪದ್ಧತಿಯಿಂದಾಗಿ ಹಲವರು ಚಿಕ್ಕ ವಯಸ್ಸಿನಲ್ಲಿಯೇ ಕೀಲು ನೋವು, ಮಂಡಿ ನೋವು ಹಾಗೂ ಬೆನ್ನುನೋವಿನಂತಹ ಸಮಸ್ಯೆಗಳಿಗೆ ತುತ್ತಾಗುತ್ತಾರೆ. ಮುಖ್ಯವಾಗಿ ಕ್ಯಾಲ್ಸಿಯಂ ಕೊರತೆಯು ಮೂಳೆ ಸಮಸ್ಯೆಗಳಿಗೆ ಕಾರಣ ಆಗುತ್ತದೆ. ಹಲವು ಜನರು ಮೂಳೆ ಬೆಳವಣಿಗೆಗೆ ಅಗತ್ಯವಾದ ಹಾಲು ಹಾಗೂ ಹಾಲಿನ ಉತ್ಪನ್ನಗಳನ್ನು ಆಯ್ಕೆ ಮಾಡುತ್ತಾರೆ.
ಹಾಲಿನಲ್ಲಿ ಕ್ಯಾಲ್ಸಿಯಂ ಮತ್ತು ಇತರ ಪೋಷಕಾಂಶಗಳಲ್ಲಿ ಸಮೃದ್ಧವಾಗಿವೆ. ಇವು ಮೂಳೆಗಳನ್ನು ಬಲವಾಗಿ ಹಾಗೂ ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ. ಕೆಲವರಿಗೆ ಹಾಲಿನಲ್ಲಿರುವ ಲ್ಯಾಕ್ಟೋಸ್‌ನಿಂದಾಗಿ ಜೀರ್ಣಕ್ರಿಯೆಯ ಸಮಸ್ಯೆ ಉಂಟಾಗುತ್ತದೆ. ಜೊತೆಗೆ ಕಡಿಮೆ ಕಾರ್ಬ್ ಹಾಗೂ ಕೆಟೋಜೆನಿಕ್ ಆಹಾರಗಳ ಸೇವಿಸಬೇಕಾಗುತ್ತದೆ. ಮೂಳೆಗಳು ಗಟ್ಟಿಯಾಗಬೇಕಾದರೆ, ರಾಗಿ ಸೇವಿಸುವುದು ಉತ್ತಮ ಎಂದು ತಜ್ಞರು ತಿಳಿಸುತ್ತಾರೆ.
ರಾಗಿಯಲ್ಲಿ ಅಧಿಕ ಕ್ಯಾಲ್ಸಿಯಂ: ಬಲವಾದ ಮೂಳೆಗಳಿಗೆ ಅಗತ್ಯವಿರುವ ಪ್ರಮುಖ ಪೋಷಕಾಂಶಗಳಲ್ಲಿ ಕ್ಯಾಲ್ಸಿಯಂ ಕೂಡ ಒಂದಾಗಿದೆ. ಇದು ಹಾಲಿಗಿಂತ ರಾಗಿಯಲ್ಲಿ ಹೆಚ್ಚು ಇದೆ. 250 ಮಿಲಿ ಹಾಲಿನಲ್ಲಿ 300 ಗ್ರಾಂ ಕ್ಯಾಲ್ಸಿಯಂ ಇದ್ದರೆ, 100 ಗ್ರಾಂ ರಾಗಿಯಲ್ಲಿ 344 ಗ್ರಾಂ ಕ್ಯಾಲ್ಸಿಯಂ ಇದೆ ಎಂದು ತಜ್ಞರು ತಿಳಿಸುತ್ತಾರೆ. ಕ್ಯಾಲ್ಸಿಯಂ ಅನ್ನು ಹಾಲಿನ ರೂಪದಲ್ಲಿ ತೆಗೆದುಕೊಂಡರೆ, ಅದರಲ್ಲಿರುವ ಪೋಷಕಾಂಶಗಳು ಸವೆತ ತಡೆಯಲು ಸಾಕಾಗುತ್ತದೆ. ಇನ್ನು ರಾಗಿಯನ್ನು ನೆನೆಸಿ ಬೇಯಿಸಿ ಸೇವಿಸಿದರೆ ಈ ಸಮಸ್ಯೆಗೆ ಪರಿಹಾರ ಲಭಿಸುತ್ತದೆ. ಹಾಲಿನಲ್ಲಿರುವ ಲ್ಯಾಕ್ಟೋಸ್ ಅನ್ನು ಜೀರ್ಣಿಸಿಕೊಳ್ಳಲು ಸಾಧ್ಯವಾಗದ ಜನರು, ಲೋಕಾರ್ಬ್ ಮತ್ತು ಕೆಟೋಜೆನಿಕ್ ಆಹಾರಗಳು ತಮ್ಮ ದೈನಂದಿನ ಆಹಾರದಲ್ಲಿ ಅಂದ್ರೆ, ರಾಗಿಯನ್ನು ಸೇರಿಸುವುದು ಒಳ್ಳೆಯದು ಎಂದು ತಜ್ಞರು ಸಲಹೆ ನೀಡುತ್ತಾರೆ.
2018ರಲ್ಲಿ 'ಫುಡ್ ಸೈನ್ಸ್ ಅಂಡ್ ಟೆಕ್ನಾಲಜಿ' ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನವು, ರಾಗಿಯಿಂದ ಮಾಡಿದ ಆಹಾರಗಳು ಮೂಳೆಯ ಆರೋಗ್ಯ ಹಾಗೂ ಬಲಗೊಳ್ಳಲು ತುಂಬಾ ಪ್ರಯೋಜನಕಾರಿಯಾಗಿದೆ ಎಂದು ಬಹಿರಂಗಪಡಿಸಿದೆ. ಹೈದರಾಬಾದ್‌ನಲ್ಲಿರುವ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ನ್ಯೂಟ್ರಿಷನ್‌ನಿಂದ ಖ್ಯಾತ ಪೌಷ್ಟಿಕತಜ್ಞ ಡಾ.ವೆಂಕಟೇಶ್ ಬಾಬು ಈ ಸಂಶೋಧನೆಯಲ್ಲಿ ಪಾಲ್ಗೊಂಡಿದ್ದರು.
ಮಧುಮೇಹ ನಿಯಂತ್ರಣಕ್ಕೆ ರಾಗಿ ಉತ್ತಮ: ಮಧುಮೇಹ ಇರುವವರಿಗೆ ಹಾಲಿಗಿಂತ ರಾಗಿಯು ಉತ್ತಮ ಆಯ್ಕೆಯಾಗಿದೆ. ಸಮತೋಲಿತ ಆಹಾರ ಸೇವಿಸಲು ಬಯಸುವವರು ರಾಗಿಯನ್ನು ತಮ್ಮ ಆಹಾರದಲ್ಲಿ ಸೇವನೆ ಮಾಡಿಕೊಳ್ಳಬಹುದು. ರಾಗಿಯಲ್ಲಿ ಕ್ಯಾಲ್ಸಿಯಂ ಮಾತ್ರವಲ್ಲದೇ ಕಬ್ಬಿಣ, ಅಮೈನೋ ಆಮ್ಲಗಳು ಹಾಗೂ ಫೈಬರ್ ಹೇರಳವಾಗಿದೆ. ವಿಶೇಷವಾಗಿ ರಾಗಿ ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ ಮಟ್ಟವನ್ನು ಹೊಂದಿದ್ದು, ರಾಗಿಯು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಿಸಲು ತುಂಬಾ ಒಳ್ಳೆಯದು.
ಮಧುಮೇಹ ಕಾಯಿಲೆ ಇರುವವರು ನಿತ್ಯದ ಆಹಾರದಲ್ಲಿ ರಾಗಿಯನ್ನು ಸೇರಿಸಿಕೊಳ್ಳುವುದರಿಂದ ಆರೋಗ್ಯಕ್ಕೆ ಉತ್ತಮ ಲಾಭಗಳು ದೊರೆಯುತ್ತದೆ ಎನ್ನುತ್ತಾರೆ ತಜ್ಞರು. ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್‌ನ ಸದಸ್ಯರ ತಂಡ ನಡೆಸಿದ ಸಂಶೋಧನೆಯ ಪ್ರಕಾರ, ರಾಗಿ ಸೇವನೆಯು ಮಧುಮೇಹಿಗಳಿಗೆ ತುಂಬಾ ಉಪಯುಕ್ತವಾಗಿದೆ (ವರದಿಗಾಗಿ ಇಲ್ಲಿ ಕ್ಲಿಕ್ ಮಾಡಿ).
ಹೆಚ್ಚಿನ ಮಾಹಿತಿಗಾಗಿ ಈ ವೆಬ್ಸೈಟ್ನ್ನು ವೀಕ್ಷಿಸಬಹುದು:
ಓದುಗರಿಗೆ ಪ್ರಮುಖ ಸೂಚನೆ: ಇಲ್ಲಿ ನಿಮಗೆ ನೀಡಿರುವ ಎಲ್ಲ ಆರೋಗ್ಯ ಮಾಹಿತಿ ಮತ್ತು ಸಲಹೆಗಳು ನಿಮ್ಮ ತಿಳಿವಳಿಕೆಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆ ಆಧರಿಸಿ ನಾವು ಈ ಮಾಹಿತಿ ನಿಮಗೆ ನೀಡಿದ್ದೇವೆ. ಆದರೆ, ಇವುಗಳನ್ನು ಅನುಸರಿಸುವ ಮೊದಲು ಪರಿಣತ ವೈದ್ಯರ ಸಲಹೆಯನ್ನು ತೆಗೆದುಕೊಳ್ಳುವುದು ಉತ್ತಮ.