ಬೆಂಗಳೂರು: ದಾಖಲೆ ಇಲ್ಲದೆ ಕೋಟ್ಯಂತರ ರೂಪಾಯಿಯನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ನೆರೆಯ ದೇಶ ಶ್ರೀಲಂಕಾದ ಇಬ್ಬರು ಆರೋಪಿಗಳು ಸೇರಿದಂತೆ ಮೂವರನ್ನು ಬೆಂಗಳೂರು ವಿಭಾಗದ ಜಾರಿ ನಿರ್ದೇಶನಾಲಯ (ಇ.ಡಿ.) ಅಧಿಕಾರಿಗಳು ಸೆರೆ ಹಿಡಿದಿದ್ದಾರೆ.
ಶ್ರೀಲಂಕಾದ ವಿಮಲರಾಜ್ ತುರೈಸಿಂಗಂ, ತಿಳಪ್ಪನ್ ಜಯಂತಿಕುಮಾರ್ ಹಾಗೂ ಭಾರತೀಯ ಪ್ರಜೆ ವೀರಕುಮಾರ್ ಎಂಬವರನ್ನು ಬಂಧಿಸಿ ಒಟ್ಟು 2.12 ಕೋಟಿ ಮೌಲ್ಯದ ವಿದೇಶಿ ಕರೆನ್ಸಿ ಜಪ್ತಿ ಮಾಡಿಕೊಂಡಿದೆ.
ED, Bengaluru Zonal Office has seized various foreign currency totalling worth Rs.2.12 Crore from a Sri Lankan National, Vimalraj Thuraisingam who was attempting to smuggle the same from Bangalore to Colombo. The said Sri Lankan National was accompanied with another Sri Lankan… pic.twitter.com/q8DgKRpuQc
— ED (@dir_ed) February 19, 2025
ಬೆಂಗಳೂರಿನಿಂದ ಶ್ರೀಲಂಕಾ ರಾಜಧಾನಿ ಕೊಲಂಬೊಗೆ ಕೋಟ್ಯಂತರ ರೂಪಾಯಿ ವಿದೇಶಿ ಕರೆನ್ಸಿಯನ್ನು ಅಕ್ರಮವಾಗಿ ಸಾಗಿಸುವಾಗ ಸಿಕ್ಕಿಬಿದ್ದಿದ್ದಾರೆ. ಸದ್ಯ ಮೂವರನ್ನು ಬಂಧಿಸಿ ಹೆಚ್ಚಿನ ವಿಚಾರಣೆಗೊಳಪಡಿಸಲಾಗಿದೆ ಎಂದು ಇ.ಡಿ.ಅಧಿಕಾರಿಗಳು ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಇಡಿ ಭರ್ಜರಿ ಬೇಟೆ;13.5 ಕೋಟಿ ರೂ. ವಶಕ್ಕೆ ಪಡೆದ ಜಾರಿ ನಿರ್ದೇಶನಾಲಯ - ED RAIDS