ಬಿಜಾಪುರ (ಛತ್ತೀಸ್ಗಢ): ಜಿಲ್ಲೆಯಲ್ಲಿ ಭದ್ರತಾ ಸಿಬ್ಬಂದಿ ಮತ್ತು ನಕ್ಸಲರ ನಡುವೆ ಗುರುವಾರ ಗುಂಡಿನ ಚಕಮಕಿ ನಡೆದಿದೆ. ದಕ್ಷಿಣ ಬಿಜಾಪುರದ ಅರಣ್ಯ ಪ್ರದೇಶದಲ್ಲಿ ಬೆಳಗ್ಗೆ 9ರ ಸುಮಾರಿಗೆ ನಕ್ಷಲ್ ವಿರೋಧಿ ಕಾರ್ಯಾಚರಣೆಯನ್ನು ಭದ್ರತಾ ಸಿಬ್ಬಂದಿ ಜಂಟಿ ತಂಡ ಆರಂಭಿಸಿತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ವೇಳೆ ನಕ್ಸಲರು ಸಿಬ್ಬಂದಿ ವಿರುದ್ಧ ಪ್ರತಿದಾಳಿ ನಡೆಸಿದ್ದು, ಈ ಕುರಿತು ಮತ್ತಷ್ಟು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೂರು ಜಿಲ್ಲೆಗಳ ಜಿಲ್ಲಾ ರಿಸರ್ವ್ ಗಾರ್ಡ್, ಸಿಆರ್ಪಿಎಫ್ ಐದು ಬೆಟಾಲಿಯನ್ ಕೋಬ್ರಾ ಘಟಕ ಮತ್ತು ಸಿಆರ್ಪಿಎಫ್ 229ನೇ ಬೆಟಾಲಿಯನ್ ಈ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದೆ.
ಜನವರಿ 12ರಂದು ಕೂಡ ಬಿಜಾಪುರದಲ್ಲಿ ನಡೆದ ಎನ್ಕೌಂಟರ್ ಕಾರ್ಯಾಚರಣೆಯಲ್ಲಿ ಇಬ್ಬರು ಮಹಿಳೆಯರು ಸೇರಿದಂತೆ ಐದು ನಕ್ಸಲರು ಎನ್ಕೌಂಟರ್ಗೆ ಬಲಿಯಾಗಿದ್ದರು.
ಮತ್ತೊಂದು ಐಇಡಿ ಬ್ಲಾಸ್ಟ್: ಜಿಲ್ಲೆಯಲ್ಲಿ ಇಂದು ಮತ್ತೊಂದು ಐಇಡಿ ಸ್ಪೋಟಿಸಿದ ಪರಿಣಾಮ ಇಬ್ಬರು ಸಿಬ್ಬಂದಿ ಗಾಯಗೊಂಡಿರುವ ಘಟನೆ ನಡೆದಿದೆ. ಬಿಜಾಪುರ ಜಿಲ್ಲೆಯ ಬಸಗುಡ ಪೊಲೀಸ್ ಠಾಣೆ ಮಿತಿಯ ಪುಟ್ಕೆಲ್ ಅರಣ್ಯ ಪ್ರದೇಶದಲ್ಲಿ ಈ ಸ್ಪೋಟ ಸಂಭವಿಸಿದೆ. ಈ ಕುರಿತು ಮಾಹಿತಿ ನೀಡಿದ ಬಿಜಾಪುರ ಪೊಲೀಸ್ ವಕ್ತಾರರು, ಸಿಆರ್ಪಿಎಫ್ 229 ಮತ್ತು ಕೋಬ್ರಾ ಪುಟ್ಕೆಲ್ ಕ್ಯಾಂಪ್ನಿಂದ ಕಾರ್ಯಾಚರಣೆಗೆ ತೆರಳಿದ್ದರು. ಈ ಶೋಧ ಕಾರ್ಯಾಚರಣೆ ವೇಳೆ ನಕ್ಸಲರು ಅಡಗಿಸಿಟ್ಟ ಐಇಡಿ ಬಾಂಬ್ ಸ್ಪರ್ಶಿಸಿ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಕಾನ್ಸ್ಟೇಬಲ್ ಮೃದುಲ್ ಬುರ್ಮಾನ್ ಮತ್ತು ಕೋಬ್ರಾದ 206ನೇ ಬೆಟಾಲಿಯನ್ನ ಮೊಹಮ್ಮದ್ ಇಶಾಕ್ ಎಂದು ಗುರುತಿಸಲಾಗಿದೆ. ಅವರನ್ನು ಸಿಆರ್ಪಿಎಫ್ ಕ್ಯಾಂಪ್ನಲ್ಲಿ ಅವರಿಗೆ ಚಿಕಿತ್ಸೆ ಮುಂದುವರೆದಿದೆ ಎಂದರು.
ಕಳೆದೆರಡು ದಿನಗಳ ಹಿಂದೆ ಬಸ್ತಾರ್ ವಿಭಾಗದ ಸುಕ್ಮಾದಲ್ಲಿ ಕೂಡ ನಕ್ಸಲರು ಅಡಗಿಸಿಟ್ಟದ್ದ ಬಾಂಬ್ ಅನ್ನು ಆಟ ಆಡುವಾಗ ಸ್ಪರ್ಶಿಸಿದಾಗ ಸ್ಪೋಟಗೊಂಡು ಗಂಭೀರವಾಗಿ ಗಾಯಗೊಂಡಿದ್ದಳು.
ಜನವರಿ 6ರಂದು ಬಿಜಾಪುರದಲ್ಲಿ ನಕ್ಸಲರು ಐಇಡಿ ಬಳಸಿ ಯೋಧರ ವಾಹನವನ್ನು ಗುರಿಯಾಗಿಸಿ ನಡೆಸಿದ ದಾಳಿಯಲ್ಲಿ ದಾಂತೇವಾಡದ 8 ಡಿಆರ್ಜಿ ಯೋಧರು ಹಾಗೂ ಚಾಲಕ ಸೇರಿದಂತೆ 9 ಜನರು ಸಾವನ್ನಪ್ಪಿದ್ದರು. (PTI)
ಇದನ್ನೂ ಓದಿ: ಆಟವಾಡುತ್ತಾ ನಕ್ಸಲರಿಟ್ಟ ಐಇಡಿ ಮೇಲೆ ಕಾಲಿಟ್ಟ ಬಾಲಕಿ!