4 Balls 4 Wicket: ಕ್ರಿಕೆಟ್‌ನಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆಯುವುದು ಸುಲಭದ ಮಾತಲ್ಲ, ಆದರೆ ಇಲ್ಲೊಬ್ಬ ಬೌಲರ್ ಡಬಲ್ ಹ್ಯಾಟ್ರಿಕ್ ವಿಕೆಟ್ ಪಡೆದು ಚರಿತ್ರೆ ಸೃಷ್ಟಿಸಿದ್ದಾರೆ.
ಹೌದು, ಐಸಿಸಿ ಪುರುಷರ T20 ವಿಶ್ವಕಪ್ ಅಮೆರಿಕ ಸಬ್ ರೀಜಿನಲ್ ಕ್ವಾಲಿಫೈಯರ್ ಪಂದ್ಯದಲ್ಲಿ ಈ ದಾಖಲೆ ನಿರ್ಮಾಣವಾಗಿದೆ. ಸೈಮನ್ ಐಲ್ಯಾಂಡ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಅರ್ಜೆಂಟೀನಾದ ಆಟಗಾರ ಹೆರ್ನಾನ್ ಫೆನ್ನೆಲ್ ಡಬಲ್ ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ. ಫೆನೆಲ್ 4 ಎಸೆತಗಳಲ್ಲಿ 4 ವಿಕೆಟ್ ಪಡೆದು ಇತಿಹಾಸ ನಿರ್ಮಿಸಿದರು. ಅವರು ಓವರ್‌ನ ಮೂರನೇ ಎಸೆತದಲ್ಲಿ ಟ್ರಾಯ್ ಟೇಲರ್ ಅವರನ್ನು ಔಟ್ ಮಾಡಿದರು ನಂತರ ಮುಂದಿನ ಮೂರು ಎಸೆತಗಳಲ್ಲಿ ಅಲೆಸ್ಟೈರ್ ಇಫ್ಲೆ, ರೊನಾಲ್ಡ್ ಎಬ್ಯಾಂಕ್ಸ್ ಮತ್ತು ಅಲೆಜಾಂಡ್ರೊ ಮಾರಿಸ್ ಅವರ ವಿಕೆಟ್‌ಗಳನ್ನು ಕಬಳಿಸುವ ಮೂಲಕ ಚರಿತ್ರೆ ಸೃಷ್ಟಿಸಿದ್ದಾರೆ.
A double hat-trick and a five-wicket haul!
— ICC (@ICC) December 16, 2024
A day to remember for Hernan Fennell in Americas #T20WorldCup qualifying 🇦🇷
More 👉 https://t.co/zIjpcvA2AB pic.twitter.com/Lja2JQDOcF
ಇದರೊಂದಿಗೆ ಈ ಪಂದ್ಯದಲ್ಲಿ ಫೆನ್ನೆಲ್ ಒಟ್ಟು 5 ವಿಕೆಟ್‌ಗಳನ್ನು ಪಡೆದು ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡರು. ಅವರು ತಮ್ಮ ವಿಧ್ವಂಸಕ ಬೌಲಿಂಗ್ ಮೂಲಕ ಕೇವಲ 14 ರನ್ ನೀಡಿದರು. ಈ ಮೂಲಕ ಟಿ-20 ಕ್ರಿಕೆಟ್ ಇತಿಹಾಸದಲ್ಲಿ ಡಬಲ್ ಹ್ಯಾಟ್ರಿಕ್ಗಳಿಸಿದ ಆರನೇ ಬೌಲರ್ ಎನಿಸಿಕೊಂಡರು. ಲಸಿತ್ ಮಾಲಿಂಗ, ರಶೀದ್ ಖಾನ್, ಕರ್ಟಿಸ್ ಕಾನ್ಫರ್, ಜೇಸನ್ ಹೋಲ್ಡರ್ ಮತ್ತು ವಾಸಿಮ್ ಯಾಕೋಬ್ ಒಳಗೊಂಡಿರುವ ಬೌಲರ್‌ಗಳ ಪಟ್ಟಿಗೆ ಫೆನ್ನೆಲ್ ಸೇರಿದ್ದಾರೆ.
ಈ ಡಬಲ್ ಹ್ಯಾಟ್ರಿಕ್‌ನೊಂದಿಗೆ 36 ವರ್ಷದ ಅರ್ಜೆಂಟೀನಾದ ವೇಗಿ ಟಿ20 ಕ್ರಿಕೆಟ್‌ನಲ್ಲಿ ಒಂದಕ್ಕಿಂತ ಹೆಚ್ಚು ಹ್ಯಾಟ್ರಿಕ್ ಗಳಿಸಿದ ಬೌಲರ್‌ಗಳ ಪಟ್ಟಿಯಲ್ಲಿ ಸ್ಥಾನ ಪಡೆದರು. ಇದಕ್ಕೂ ಮೊದಲು, ಫೆನ್ನೆಲ್ ಐಸಿಸಿ ಪುರುಷರ T20 ವಿಶ್ವಕಪ್ ಅಮೆರಿಕದ ಪ್ರಾದೇಶಿಕ ಅರ್ಹತಾ ಪಂದ್ಯದ 2021ರಲ್ಲಿ ಪನಾಮ ವಿರುದ್ಧ ಈ ಸಾಧನೆ ಮಾಡಿದ್ದರು. ಒಟ್ಟಾರೆ ಈ ಸಾಧನೆ ಮಾಡಿದ ವಿಶ್ವದ ಆರನೇ ಬೌಲರ್ ಎನಿಸಿಕೊಂಡರು. ಇದುವರೆಗೆ ವಾಸಿಂ ಅಬ್ಬಾಸ್, ಪ್ಯಾಟ್ ಕಮ್ಮಿನ್ಸ್, ಮಾರ್ಕ್ ಪಾವ್ಲೋವಿಚ್, ಟಿಮ್ ಸೌದಿ ಮತ್ತು ಲಸಿತ್ ಮಾಲಿಂಗ ಮಾತ್ರ ಡಬಲ್ ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ.
ಪೆನ್ನೆಲ್ 5 ವಿಕೆಟ್ ಪಡೆದರೂ ಈ ಪಂದ್ಯದಲ್ಲಿ ಅರ್ಜೆಂಟೀನಾ ಸೋಲನುಭವಿಸಿತು. ಮೊದಲು ಬ್ಯಾಟ್ ಮಾಡಿದ್ದ ಕೇಮನ್ ಐಲ್ಯಾಂಡ್ಸ್ ತಂಡ 116 ರನ್ ಗಳಿಸಿತು. ಇದಕ್ಕುತ್ತರವಾಗಿ ಅರ್ಜೆಂಟೀನಾ 94 ರನ್‌ಗಳಿಗೆ ಸರ್ವಪತನ ಕಂಡಿತು. ಅಂತಿಮವಾಗಿ ಅರ್ಜೆಂಟೀನಾ ಈ ಪಂದ್ಯವನ್ನು 22 ರನ್‌ಗಳಿಂದ ಕಳೆದುಕೊಂಡಿತು.
ಇದನ್ನೂ ಓದಿ: ಮಿನಿ ಹರಾಜಿನಲ್ಲಿ ನಾಲ್ವರನ್ನು ಖರೀದಿಸಿದ RCB: ಹೀಗಿದೆ 18 ಆಟಗಾರರ ಬಲಿಷ್ಠ ತಂಡ!