ETV Bharat / technology

ಗ್ಲೋಬಲ್ ಎನ್‌ಸಿಎಪಿಯ ಕ್ರ್ಯಾಶ್ ಪರೀಕ್ಷೆಯಲ್ಲಿ 5 - ಸ್ಟಾರ್, ಆಸ್ಟ್ರೇಲಿಯಾದಲ್ಲಿ 1-ಸ್ಟಾರ್​ ಪಡೆದ ಮಾರುತಿ ಸ್ವಿಫ್ಟ್​! - MARUTI SWIFT ANCAP RATING

Maruti Swift ANCAP Rating: ಸುಜುಕಿ ಸ್ವಿಫ್ಟ್ ಇತ್ತೀಚಿಗೆ ಆಸ್ಟ್ರೇಲಿಯನ್ ನ್ಯೂ ಕಾರ್ ಅಸೆಸ್‌ಮೆಂಟ್ ಪ್ರೋಗ್ರಾಂ ಕ್ರ್ಯಾಶ್ - ಟೆಸ್ಟ್ ನಡೆಸಿದ್ದು, ಈ ಕಾರಿಗೆ ಸುರಕ್ಷತಾ ವಿಚಾರದಲ್ಲಿ ಆಸ್ಟ್ರೇಲಿಯ ಕೇವಲ ಒಂದು ಸ್ಟಾರ್​ ನೀಡಿದೆ.

MARUTI SWIFT ANCAP RATING 2024  MARUTI SWIFT CAR FEATURES  MARUTI SWIFT PRICE
ಮಾರುತಿ ಸ್ವಿಫ್ಟ್ (Photo Credit: Maruti Suzuki)
author img

By ETV Bharat Tech Team

Published : 3 hours ago

Maruti Swift ANCAP Rating: ಜಪಾನಿನ ವಾಹನ ತಯಾರಕರ ಅತ್ಯಂತ ಜನಪ್ರಿಯ ಮತ್ತು ಕೈಗೆಟುಕುವ ವಾಹನಗಳಲ್ಲಿ ಮಾರುತಿ ಸ್ವಿಫ್ಟ್ ಹೆಸರನ್ನು ಸೇರಿಸಲಾಗಿದೆ. ಭಾರತೀಯ ಮಾರುಕಟ್ಟೆಯಲ್ಲೂ ಈ ವಾಹನಕ್ಕೆ ಸಾಕಷ್ಟು ಬೇಡಿಕೆಯಿದೆ. ಈ ಕಾರನ್ನು ಜಪಾನ್ ಮತ್ತು ಭಾರತದಲ್ಲಿ ಮಾತ್ರವಲ್ಲದೇ ಪ್ರಪಂಚದ ಅನೇಕ ದೇಶಗಳಲ್ಲಿ ಮಾರಾಟ ಮಾಡಲಾಗುತ್ತದೆ. ಈ ಕಾರು ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ನ ಮಾರುಕಟ್ಟೆಗಳಲ್ಲಿಯೂ ಲಭ್ಯವಿದೆ. ಈ ಕಾರಿನ ಸುರಕ್ಷತಾ ವೈಶಿಷ್ಟ್ಯಗಳನ್ನು ಆಸ್ಟ್ರೇಲಿಯಾದಲ್ಲಿ ಪರೀಕ್ಷಿಸಲಾಯಿತು. ಆಸ್ಟ್ರೇಲಿಯನ್ ನ್ಯೂ ಕಾರ್ ಅಸೆಸ್‌ಮೆಂಟ್ ಪ್ರೋಗ್ರಾಂ (ANCAP) ಈ ಕಾರಿಗೆ ಕ್ರ್ಯಾಶ್ ಟೆಸ್ಟ್‌ಗಳಲ್ಲಿ ಕೇವಲ 1-ಸ್ಟಾರ್ ನೀಡಿದೆ.

ಮಾರುತಿ ಸ್ವಿಫ್ಟ್ ಸೇಫ್ಟಿ ರೇಟಿಂಗ್: ಮಾರುತಿ ಸ್ವಿಫ್ಟ್ ಅನ್ನು ಈಗಾಗಲೇ ಕ್ರ್ಯಾಶ್ ಟೆಸ್ಟ್‌ಗೆ ಒಳಪಡಿಸಲಾಗಿದೆ. ಯುರೋ ಎನ್​ಕ್ಯಾಪ್​ ಪರೀಕ್ಷೆಯಲ್ಲಿ ಈ ಕಾರು 3-ಸ್ಟಾರ್‌ಗಳನ್ನು ಪಡೆದುಕೊಂಡಿದೆ. ಆದರೆ, ಯುರೋ ಎನ್‌ಸಿಎಪಿ ಪರೀಕ್ಷೆಯಲ್ಲಿ ಬಳಸಲಾದ ಕಾರಿನ ವೈಶಿಷ್ಟ್ಯಗಳು ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ನಲ್ಲಿ ಮಾರಾಟವಾಗುವ ಸ್ವಿಫ್ಟ್‌ಗಿಂತ ಸ್ವಲ್ಪ ಭಿನ್ನವಾಗಿವೆ. ಮಾರುತಿ ಸ್ವಿಫ್ಟ್ ಕಾರ್ಯಕ್ಷಮತೆಯ ಕುರಿತು ANCAP ನ ಸಿಇಒ ಅವರು ಕ್ರ್ಯಾಶ್ ಪರೀಕ್ಷೆಯ ವೇಳೆಯಲ್ಲಿ ಈ ವಾಹನವು ಶಕ್ತಿಯ ಕೊರತೆ ಹೊಂದಿದೆ ಎಂದು ಹೇಳಿದರು.

ಮಾರುತಿ ಸ್ವಿಫ್ಟ್ ಸ್ಕೋರ್ ಎಷ್ಟು?: ಆಸ್ಟ್ರೇಲಿಯಾದ NCAP ನಾಲ್ಕು ವಿಭಾಗಳಲ್ಲಿ ನಾಲ್ಕನೇ ತಲೆಮಾರಿನ ಮಾರುತಿ ಸುಜುಕಿ ಡಿಜೈರ್ ಅನ್ನು ಪರೀಕ್ಷಿಸಿದೆ. ವಯಸ್ಕರ ನಿವಾಸಿಗಳ ರಕ್ಷಣೆ​​, ಮಕ್ಕಳ ನಿವಾಸಿಗಳ ರಕ್ಷಣೆ, ದುರ್ಬಲ ರಸ್ತೆ ಬಳಕೆದಾರರ ರಕ್ಷಣೆ ಮತ್ತು ಸೇಫ್ಟಿ ಅಸಿಸ್ಟ್​ ಎಂಬ ವಿಭಾಗಳಲ್ಲಿ ಎಎನ್​ಕ್ಯಾಪ್​. ಹ್ಯಾಚ್‌ಬ್ಯಾಕ್ ಈ ವಿಭಾಗಗಳಲ್ಲಿ ಕ್ರಮವಾಗಿ 47%, 59%, 76% ಮತ್ತು 54% ಮಾರ್ಕ್ಸ್​ ಗಳಿಸಿತು. ವಯಸ್ಕರ ಆಕ್ಯುಪೆನ್ಸಿ ವಿಭಾಗದಲ್ಲಿ ಮಾರುತಿ ಸ್ವಿಫ್ಟ್ 40 ರಲ್ಲಿ 18.88 ಅಂಕಗಳನ್ನು ಪಡೆದಿದೆ. ಈ ಕಾರು ಮುಂಭಾಗದ ಆಫ್‌ಸೆಟ್ ಬ್ಯಾರಿಯರ್ ಪರೀಕ್ಷೆಯಲ್ಲಿ 8 ಅಂಕಗಳಲ್ಲಿ 2.56, ಪೂರ್ಣ ಅಗಲದ ಮುಂಭಾಗದ ಪರೀಕ್ಷೆಯಲ್ಲಿ 8 ರಲ್ಲಿ 0, ಸೈಡ್ ಇಂಪ್ಯಾಕ್ಟ್ ಪರೀಕ್ಷೆಯಲ್ಲಿ 6 ರಲ್ಲಿ 5.51 ಮತ್ತು ಓರೆಯಾದ ಪೋಲ್ ಪರೀಕ್ಷೆಯಲ್ಲಿ 6ಕ್ಕೆ 6 ಅಂಕಗಳನ್ನು ಪಡೆದುಕೊಂಡಿದೆ. ಈ ಮಾರುತಿ ವಾಹನವು ಮುಂಭಾಗದ ಪ್ರಯಾಣಿಕರಿಗೆ ವಿಪ್ಲ್ಯಾಶ್ ರಕ್ಷಣೆಯಲ್ಲಿ 4 ರಲ್ಲಿ 3.97 ಅಂಕಗಳನ್ನು ಮತ್ತು ರೆಸ್ಕ್ಯೂ ಪರೀಕ್ಷೆಯಲ್ಲಿ 4 ರಲ್ಲಿ 0.83 ಅಂಕಗಳನ್ನು ಗಳಿಸಿದೆ.

ಮಕ್ಕಳ ಆಕ್ಯುಪೆನ್ಸಿ ವಿಭಾಗದ ಬಗ್ಗೆ ಮಾತನಾಡುವುದಾದರೆ ಮಾರುತಿ ಸ್ವಿಫ್ಟ್ 49 ರಲ್ಲಿ 29.24 ಅಂಕಗಳನ್ನು ಪಡೆದಿದೆ. ಇದು ಮುಂಭಾಗದ ಡೈನಾಮಿಕ್ ಪರೀಕ್ಷೆಯಲ್ಲಿ 16 ರಲ್ಲಿ 5.47 ಅಂಕಗಳನ್ನು, ಸೈಡ್ ಡೈನಾಮಿಕ್ ಪರೀಕ್ಷೆಯಲ್ಲಿ 8 ರಲ್ಲಿ 5.54 ಅಂಕಗಳನ್ನು ಮತ್ತು ಆನ್-ಬೋರ್ಡ್ ಸುರಕ್ಷತಾ ವೈಶಿಷ್ಟ್ಯಗಳಲ್ಲಿ 13 ರಲ್ಲಿ 7 ಅಂಕಗಳನ್ನು ಪಡೆದುಕೊಂಡಿದೆ. ಈ ವಾಹನವು ರಿಸ್ಟ್ರೈಂಟ್​ ಇನ್​​ಸ್ಟಾಲೇಷನ್​ನಲ್ಲಿ12 ರಲ್ಲಿ 11.22 ಅಂಕಗಳನ್ನು ಗಳಿಸಿದೆ.

ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ನಲ್ಲಿ ಮಾರಾಟವಾಗುವ ಸ್ವಿಫ್ಟ್, ಭಾರತ - ಸ್ಪೆಕ್ ಮಾಡೆಲ್‌ಗಿಂತ ಹೆಚ್ಚಿನ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿದೆ. ಇದು ಆರು ಏರ್‌ಬ್ಯಾಗ್‌ಗಳು ಮತ್ತು ಎಡಿಎಎಸ್ ಸೂಟ್ ಅನ್ನು ಪ್ರಮಾಣಿತವಾಗಿ ನೀಡುತ್ತದೆ, ಆದರೆ, ಇಂಡಿಯಾ-ಸ್ಪೆಕ್ ಮಾಡೆಲ್ ಆರು ಏರ್‌ಬ್ಯಾಗ್‌ಗಳನ್ನು ಹೊಂದಿದೆ. ಇದು ಹೆಚ್ಚಿನ ಟ್ರಿಮ್‌ಗಳಲ್ಲಿ ಮಾತ್ರ ಕಂಡು ಬರುತ್ತದೆ. ಇಂಡಿಯಾ-ಸ್ಪೆಕ್ ಸ್ವಿಫ್ಟ್ ಹೊಸ-ಜೆನ್ ಡಿಜೈರ್‌ಗೆ ನಿಕಟ ಸಂಬಂಧ ಹೊಂದಿದೆ. ಇದು ಗ್ಲೋಬಲ್ ಎನ್‌ಸಿಎಪಿಯ ಕ್ರ್ಯಾಶ್ ಪರೀಕ್ಷೆಗಳಲ್ಲಿ 5-ಸ್ಟಾರ್ ಸುರಕ್ಷತಾ ರೇಟಿಂಗ್ ಅನ್ನು ಗಳಿಸಿದೆ. ಆದರೆ ಮಾರುತಿ ಸ್ವಿಫ್ಟ್​ ಸಕ್ರಿಯ ಸುರಕ್ಷತಾ ಪರೀಕ್ಷೆಯಿಂದ 1-ಸ್ಟಾರ್ ರೇಟಿಂಗ್‌ನೊಂದಿಗೆ ತೀವ್ರವಾಗಿ ಪೈಪೊಟಿ ನಡೆಸಲಿದೆ.. ಈ ಸುತ್ತಿನಲ್ಲಿದ್ದ ಇತರ ಎರಡು ವಾಹನಗಳಾದ ಟೊಯೊಟಾ ಲ್ಯಾಂಡ್ ಕ್ರೂಸರ್ ಪ್ರಾಡೊ ಮತ್ತು ಕಿಯಾ ಇವಿ5 5 ಸ್ಟಾರ್‌ಗಳನ್ನು ಪಡೆದಿವೆ. ನಾಲ್ಕನೇ ತಲೆಮಾರಿನ ಮಾರುತಿ ಸುಜುಕಿ ಡಿಜೈರ್​ ಎಕ್ಸ್ ​ಶೋರೂಂ ಬೆಲೆ 6.79 ರೂ. ಆಗಿದೆ.

ಓದಿ: ‘ರಾಯಲ್​’ ಬೈಕ್ ಪ್ರಿಯರಿಗೆ ಸಿಹಿ ಸುದ್ದಿ, ಮುಂದಿನ ವರ್ಷ ಲಗ್ಗೆ ಇಡಲಿವೆ 650 ಎನ್​ಫೀಲ್ಡ್​ ವಾಹನಗಳಿವು!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.