ETV Bharat / technology

ಈ ವರ್ಷ AI ಜಾತ್ರೆ; ಗೂಗಲ್​, ಆಪಲ್​, ಸ್ಯಾಮ್​ಸಂಗ್ ಸೇರಿ ಎಲ್ಲ ಮೊಬೈಲ್​​​ಗಳಲ್ಲಿ ಬದಲಾವಣೆ ಪರ್ವ: ಏನೆಲ್ಲ ಹೊಸತು, ಇಲ್ಲಿದೆ​ ಡೀಟೇಲ್ಸ್​! - YEARENDER 2024

Yearender 2024: ಈ ವರ್ಷ ಗೂಗಲ್​, ಆಪಲ್​ ಮತ್ತು ಸ್ಯಾಮ್​ಸಂಗ್​ ಸೇರಿದಂತೆ ಅನೇಕ ಕಂಪನಿಗಳು ಎಐ ಸ್ಮಾರ್ಟ್​ಫೋನ್​ಗಳನ್ನು ಗ್ರಾಹಕರಿಗೆ ಪರಿಚಯಿಸಿದೆ. ಅವುಗಳ ಬೆಲೆ, ವಿಶೇಷತೆಗಳು ಮತ್ತು ವೈಶಿಷ್ಟ್ಯಗಳ ಬಗ್ಗೆ ಒಂದು ನೋಟ ಇಲ್ಲಿದೆ.

YEARENDER 2024 STORY  SMARTPHONES WITH AI FEATURES  AI FEATURES PHONES  2024 YEAR STORIES
ಈ ವರ್ಷ ಗೂಗಲ್​, ಆಪಲ್​, ಸ್ಯಾಮ್​ಸಂಗ್ ಸೇರಿದಂತೆ ಅನೇಕ ಕಂಪನಿಗಳು ಎಐ ಫೀಚರ್​ಗೆ​ ಲಗ್ಗೆ (Photo: Apple, Samsung, Google)
author img

By ETV Bharat Tech Team

Published : Dec 16, 2024, 2:17 PM IST

Yearender 2024: ತಂತ್ರಜ್ಞಾನ ಬೆಳದಂತೆ ಜನರು ಸಹ ಅಪ್​ಡೇಟ್​ ಆಗುತ್ತಿದ್ದಾರೆ. ಗ್ರಾಹಕರ ಅಭಿರುಚಿಗೆ ತಕ್ಕಂತೆ ಮೊಬೈಲ್​ ತಯಾರಿಕಾ ಕಂಪನಿಗಳು ಸಹ ಮೊಬೈಲ್​ಗಳನ್ನು ಮಾರುಕಟ್ಟೆಗೆ ಬಿಡುತ್ತಿದ್ದಾರೆ. ಮೊಬೈಲ್​ಗಳಲ್ಲಿ ಅನೇಕ ಹೊಸ ಹೊಸ ವೈಶಿಷ್ಟ್ಯಗಳು ಪರಿಚಯಿಸುವ ಮೂಲಕ ಗ್ರಾಹಕರನ್ನು ತಮ್ಮತ್ತ ಸೆಳೆಯುತ್ತಿವೆ ಅನೇಕ ಬ್ರ್ಯಾಂಡೆಡ್ ಕಂಪನಿಗಳು. ಅದರಲ್ಲಿ ಎಐ ಮಾದರಿಗಳ ಸ್ಮಾರ್ಟ್​ಫೋನ್​ಗಳು ಎಲ್ಲಿಲ್ಲದ ಬೇಡಿಕೆ ಹೆಚ್ಚು. ಈ ವರ್ಷ ಮಾರುಕಟ್ಟೆಗೆ ಲಗ್ಗೆಯಿಟ್ಟ ಎಐ ಮಾದರಿಗಳ ಸ್ಮಾರ್ಟ್​ಗಳು ಯಾವುವು? ಅದರ, ವಿಶೇಷತೆಗಳು ಮತ್ತು ಬೆಲೆಗಳ ಬಗ್ಗೆ ತಿಳಿದುಕೊಳ್ಳೊಣ.

ಗೂಗಲ್‌ನಿಂದ ಆಪಲ್‌ವರೆಗೆ ಮತ್ತು ಮಾರ್ಕ್ ಜುಕರ್‌ಬರ್ಗ್‌ನಿಂದ ಎಲೋನ್ ಮಸ್ಕ್‌ವರೆಗೆ ಎಲ್ಲರೂ ಎಐ ಕುರಿತೇ ಚರ್ಚಿಸುತ್ತಿದ್ದಾರೆ. ಸ್ಯಾಮ್‌ಸಂಗ್ ಮತ್ತು ಆಪಲ್‌ನಂತಹ ಕಂಪನಿಗಳು ತಮ್ಮ ಫೋನ್‌ಗಳಲ್ಲಿ ಎಐಗೆ ಬಹಳ ಒತ್ತು ನೀಡುತ್ತಿವೆ. ಈಗ ಮಾರುಕಟ್ಟೆಗೆ ಲಗ್ಗೆ ಇಡುತ್ತಿರುವ ಪ್ರತಿಯೊಂದು ಹೊಸ ಸ್ಮಾರ್ಟ್‌ಫೋನ್​ಗಳು ಆರ್ಟಿಫಿಶಿಯಲ್​ ಇಂಟೆಲಿಜೆನ್ಸ್​, ಮಷಿನ್​ ಲರ್ನಿಂಗ್​ ಮತ್ತು ಲಾರ್ಜ್​ ಲ್ಯಾಂಗ್ವೇಜ್​ ಮಾಡೆಲ್ಸ್​ ಸೇರಿದಂತೆ ಅನೇಕ ರೀತಿಯ ಫೀಚರ್​ಗಳನ್ನು ಪರಿಚಯಿಸುತ್ತಿದ್ದಾರೆ. ಅಷ್ಟೇ ಅಲ್ಲ ವಿವಿಧ ಪ್ರಮುಖ ಮಾದರಿಗಳು AI - ವರ್ಧಿತ ಕ್ಯಾಮೆರಾಗಳು ಮತ್ತು ಇಮೇಜ್ - ಎಡಿಟಿಂಗ್ ವೈಶಿಷ್ಟ್ಯಗಳು ಸಹ ಲಭ್ಯ ಇವೆ. ಇಂತಹ ಹಲವು ಹತ್ತಾರು ಸ್ಮಾರ್ಟ್​ಫೋನ್​ಗಳು ಈಗಾಗಲೇ ಖರೀದಿಗೆ ಲಭ್ಯವಿದೆ.

Flagship Smartphones with AI features

Google Pixel 9 series: ವಿಶ್ವದಾದ್ಯಂತ ಗೂಗಲ್​ನ ಪಿಕ್ಸೆಲ್ 9 ಸೀರಿಸ್​ ಸ್ಮಾರ್ಟ್‌ಫೋನ್‌ಗಳು ಸಂಚಲನ ಮೂಡಿಸಿರುವುದು ಗೊತ್ತಿರುವ ಸಂಗತಿ. ಗೂಗಲ್​ ಈ ಫೋನ್​ಗಳನ್ನು ಎಐ ವೈಶಿಷ್ಟ್ಯದೊಂದಿಗೆ (ಆರ್ಟಿಫಿಶಿಯಲ್ ಇಂಟೆಲಿಜೆನ್ಸ್) ಬಿಡುಗಡೆ ಮಾಡಿದೆ. ಈ ಫೋನ್‌ಗಳು ಭಾರತದಲ್ಲಿಯೂ ಲಭ್ಯವಿದೆ. ಗೂಗಲ್ ಈ ಸಿರೀಸ್​ನಲ್ಲಿ Google Pixel 9, Pixel 9 Pro, Pixel 9 Pro Fold ಮತ್ತು Pixel 9 Pro XL ಬಿಡುಗಡೆ ಮಾಡಿದೆ. ಕಂಪನಿಯ ಪ್ರಕಾರ, ಈ ಫೋನ್‌ನ ಬಳಕೆದಾರರು ಏಳು ವರ್ಷಗಳವರೆಗೆ ಆಂಡ್ರಾಯ್ಡ್ ಅಪ್​ಡೇಟ್​ಗಳನ್ನು ಪಡೆಯುತ್ತಾರೆ.

ಗೂಗಲ್​ ಪಿಕ್ಸೆಲ್​ 9 ಸೀರಿಸ್​ ವೈಶಿಷ್ಟ್ಯಗಳು: ಗೂಗಲ್ ತನ್ನ ಫೋನ್‌ಗಳನ್ನು ಉತ್ತಮ ವೈಶಿಷ್ಟ್ಯಗಳೊಂದಿಗೆ ಪರಿಚಯಿಸಿದೆ. ಇದರಲ್ಲಿ, ಬಳಕೆದಾರರು ಟೆನ್ಸರ್ ಜಿ4 ಪ್ರೊಸೆಸರ್, ಸೆಕ್ಯೂರಿಟಿಗಾಗಿ ಟೈಟಾನ್ ಎಂ2 ಚಿಪ್‌ಸೆಟ್, ಪವರ್​ಫುಲ್​ ಜೆಮಿನಿ ಎಐ, ಜೆಮಿನಿ ನ್ಯಾನೋ ಮಲ್ಟಿ ಮಾಡೆಲ್ ಮತ್ತು ಸ್ಯಾಟಲೈಟ್ ಎಸ್‌ಒಎಸ್ ಅನುಭವ ಪಡೆಯುತ್ತಾರೆ. ಈ ಸ್ಮಾರ್ಟ್‌ಫೋನ್‌ಗಳ ಜೊತೆಗೆ ಕಂಪನಿಯು ಹೊಸ ಪಿಕ್ಸೆಲ್ ಸ್ಮಾರ್ಟ್‌ವಾಚ್‌ಗಳು ಮತ್ತು ಇಯರ್‌ಬಡ್‌ಗಳನ್ನು ಸಹ ಬಿಡುಗಡೆ ಮಾಡಿದೆ.

Google Pixel 9 ಸೀರಿಸ್​ ವೈಶಿಷ್ಟ್ಯಗಳು:

  • ಡಿಸ್​ಪ್ಲೇ: 6.3-ಇಂಚಿನ LTOP OLED
  • ಬ್ಯಾಟರಿ: 4,700mAh
  • ಸೆಕ್ಯೂರಿಟಿ ಚಿಪ್ಸೆಟ್: ಟೈಟಾನ್ M2
  • ರಿಯರ್​ ಕ್ಯಾಮೆರಾ: 50MP
  • ಅಲ್ಟ್ರಾವೈಡ್ ಕ್ಯಾಮೆರಾ: 48MP
  • ಫ್ರಂಟ್​ ಕ್ಯಾಮೆರಾ: 42MP
  • ವಿಶೇಷತೆ: ಡಸ್ಟ್​ ಮತ್ತು ವಾಟರ್​ ರೆಸಿಸ್ಟನ್ಸಿ
  • ಆಂಡ್ರಾಯ್ಡ್14 ಆಪರೇಟಿಂಗ್ ಸಿಸ್ಟಮ್
  • ಬೆಲೆ: ಆರಂಭಿಕ ಬೆಲೆ ರೂ. 79,999.

ಐಫೋನ್​ 16 ಸೀರಿಸ್​: ಆಪಲ್ ತನ್ನ ಮೆಗಾ ಈವೆಂಟ್‌ನಲ್ಲಿ 9 ಸೆಪ್ಟೆಂಬರ್ 2024 ರಂದು ವಿಶ್ವಾದ್ಯಂತ ಇತ್ತೀಚಿನ ಐಫೋನ್​ 16 ಸೀರಿಸ್​ ಅನ್ನು ಪರಿಚಯಿಸಿರುವುದು ಗೊತ್ತಿರುವ ಸಂಗತಿ. ಕಂಪನಿಯು ಈ ಸೀರಿಸ್​ನಲ್ಲಿ 4 ಫೋನ್‌ಗಳನ್ನು ಬಿಡುಗಡೆ ಮಾಡಿತ್ತು. ಐಫೋನ್ 16 ಪ್ಲಸ್ ಡಿಸ್​ಪ್ಲೇ 6.7 ಇಂಚು ಇದೆ. ಸೂಪರ್ ರೆಟಿನಾ XDR OLED ಡಿಸ್​ಪ್ಲೇ ಹೊಂದಿದೆ. ಹಿಂಭಾಗದಲ್ಲಿ 48 MP ವೈಡ್ - ಆ್ಯಂಗಲ್ ಕ್ಯಾಮೆರಾ ಮತ್ತು 12 ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಕ್ಯಾಮೆರಾ ಹೊಂದಿದೆ. ಸೆಲ್ಫಿಗಾಗಿ ಮುಂಭಾಗ 12 MP ಕ್ಯಾಮೆರಾ ಅಳವಡಿಸಲಾಗಿದೆ. ಕ್ಯಾಮೆರಾ ನಿಯಂತ್ರಣ ಬಟನ್‌ನೊಂದಿಗೆ ಫೋಟೋಗಳು ಮತ್ತು ವಿಡಿಯೋಗಳನ್ನು ಬಹಳ ಸುಲಭವಾಗಿ ಕ್ಲಿಕ್ಕಿಸಲು ಸುಧಾರಿತ ವೈಶಿಷ್ಟ್ಯವಿದೆ.

ಐಫೋನ್​ 16 ವೈಶಿಷ್ಟ್ಯಗಳು: ಈ ಇತ್ತೀಚಿನ ಐಫೋನ್‌ನ ವೈಶಿಷ್ಟ್ಯಗಳ ಕುರಿತು ನಾವು ಮಾತನಾಡೋದಾದರೆ, ಕಂಪನಿಯು ಐಫೋನ್ 16 ನಲ್ಲಿ 6.1-ಇಂಚಿನ ಸೂಪರ್ ರೆಟಿನಾ XDR OLED ಡಿಸ್​ಪ್ಲೇಯನ್ನು ನೀಡಿದೆ. ಇದಲ್ಲದೇ, ಈ ಫೋನ್ A18 ಪ್ರೊಸೆಸರ್ ಅನ್ನು ಹೊಂದಿದೆ. ಈ ಚಿಪ್‌ಸೆಟ್ A16 ಬಯೋನಿಕ್‌ಗಿಂತ 30 ಪ್ರತಿಶತ ವೇಗವಾಗಿದೆ ಎಂದು ಆಪಲ್ ಹೇಳಿಕೊಂಡಿದೆ. iOS 18 ನೊಂದಿಗೆ ಹೊಸ ಮಾದರಿಗಳು ಎಐ ವೈಶಿಷ್ಟ್ಯಗಳೊಂದಿಗೆ ಆಪಲ್ ಇಂಟೆಲಿಜೆನ್ಸ್ ಅನ್ನು ಹೊಂದಿವೆ. ಸದ್ಯ ಎಲ್ಲ ಐಫೋನ್​ಗಳು 18.2 ಐಒಎಸ್​ಗಳನ್ನು ಅಪ್​ಡೇಟ್​ ನೀಡಲಾಗಿದೆ

ಐಫೋನ್​ 16 ಸೀರಿಸ್​​ ವೈಶಿಷ್ಟ್ಯಗಳು:

  • Apple iPhone 16 ಸಿರೀಸ್​ನಲ್ಲಿ ಹತ್ತು ಹಲವು ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸಲಾಗಿದೆ. ಹೊಸ ಸೀರಿಸ್​ನ ಫೋನ್‌ಗಳು ಏರೋಸ್ಪೇಸ್ ದರ್ಜೆಯ ಅಲ್ಯೂಮಿನಿಯಂನಿಂದ ಮಾಡಲ್ಪಟ್ಟಿವೆ. ಇದು ಗ್ಲಾಸ್ ಬ್ಯಾಕ್ ಫೋನ್‌ಗಳಿಗಿಂತ ಎರಡು ಪಟ್ಟು ಹೆಚ್ಚು ಬಾಳಿಕೆ ಬರುತ್ತವೆ ಎಂದು ಆ್ಯಪಲ್ ತಿಳಿಸಿದೆ.
  • ಐಫೋನ್ 16 ಡಿಸ್​ಪ್ಲೇ 6.1 ಇಂಚುಗಳಷ್ಟು ಉದ್ದವಿದೆ. ಇದನ್ನು ವೆನಿಲ್ಲಾ ರೂಪಾಂತರದೊಂದಿಗೆ ವಿನ್ಯಾಸಗೊಳಿಸಲಾಗಿದೆ. iOS 18ನೊಂದಿಗೆ ಕಾರ್ಯನಿರ್ವಹಿಸುತ್ತದೆ. ಬ್ರೈಟ್​ನೆಸ್​ ಅನ್ನು 2000 ನಿಟ್‌ಗಳವರೆಗೆ ಹೆಚ್ಚಿಸಬಹುದು.
  • ಐಫೋನ್ 16 ಪ್ಲಸ್ ಡಿಸ್​ಪ್ಲೇ 6.7 ಇಂಚು ಉದ್ದವಾಗಿದೆ. ಹಿಂಭಾಗದಲ್ಲಿ 48 MP ವೈಡ್ - ಆ್ಯಂಗಲ್ ಕ್ಯಾಮೆರಾ ಮತ್ತು 12 ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಕ್ಯಾಮೆರಾ ಹೊಂದಿದೆ. ಸೆಲ್ಫಿಗಾಗಿ ಮುಂಭಾಗ 12 MP ಕ್ಯಾಮೆರಾ ಅಳವಡಿಸಲಾಗಿದೆ. ಕ್ಯಾಮೆರಾ ಕಂಟ್ರೋಲ್​ ಬಟನ್‌ನೊಂದಿಗೆ ಫೋಟೋಗಳು ಮತ್ತು ವಿಡಿಯೋಗಳನ್ನು ಬಹಳ ಸುಲಭವಾಗಿ ತೆಗೆಯಲು ಸುಧಾರಿತ ವೈಶಿಷ್ಟ್ಯವಿದೆ.
  • ಬೆಲೆಗಳ ವಿವರ: ಐಫೋನ್ 16 ಸೀರಿಸ್​ನ ಆರಂಭಿಕ ಬೆಲೆ ರೂ.79,900. ಐಫೋನ್ 16ನಲ್ಲಿ 'AAA ಗೇಮ್ಸ್' ಆಡುವ ಅವಕಾಶ ಒದಗಿಸಲಾಗಿದೆ. ಮೊದಲು ಈ ವೈಶಿಷ್ಟ್ಯ ಪ್ರೊ ಮಾದರಿಗಳಲ್ಲಿ ಮಾತ್ರ ಸಿಗುತ್ತಿತ್ತು.

Samsung Galaxy Models: ಎಐ ಫೀಚರ್​ವುಳ್ಳ ಸ್ಯಾಮ್​ಸಂಗ್​ ಗ್ಯಾಲೆಕ್ಸಿ ಮಾಡೆಲ್​ಗಳು ಅತ್ಯುತ್ತಮ ಸ್ಮಾರ್ಟ್​ಫೋನ್​ಗಳ ಮಾಡೆಲ್​ಗಳಲ್ಲೊಂದು. Samsung Galaxy S24 Ultra, Samsung Galaxy S24 Plus ಮತ್ತು Samsung Galaxy S24 5G ಸ್ಮಾರ್ಟ್​ಫೊನ್​ಗಳಲ್ಲಿ ಅನೇಕ ವೈಶಿಷ್ಟ್ಯಗಗಳು ಲಭ್ಯಗಳಿವೆ. ಇದರಲ್ಲಿ ಸರ್ಕಲ್ ಟು ಸರ್ಚ್, ಲೈವ್ ಟ್ರಾನ್ಸ್‌ಲೇಟ್, ನೋಟ್ ಅಸಿಸ್ಟ್, ಜನರೇಟಿವ್ ಎಡಿಟ್, ಚಾಟ್ ಅಸಿಸ್ಟ್, ಸೂಪರ್ ಎಚ್‌ಡಿಆರ್ ಮತ್ತು ಫೋಟೋ ಅಸಿಸ್ಟ್ ಒಳಗೊಂಡಿದೆ.

ಗೂಗಲ್​ನ ಪಾಲುದಾರಿಕೆಯಲ್ಲಿ ಅಭಿವೃದ್ಧಿಪಡಿಸಲಾದ ಸರ್ಕಲ್ ಟು ಸರ್ಚ್ ಗೂಗಲ್​ನ ಸ್ವಂತ ಸಾಧನಗಳಲ್ಲಿ ಪ್ರಾರಂಭಿಸುವ ಮೊದಲು ಗ್ಯಾಲೆಕ್ಸಿ ಎಸ್​24 ಸೀರಿಸ್​ನಲ್ಲಿ ಪರಿಚಯಿಸಲಾಯಿತು. ಈ ಫೀಚರ್​ ಆ್ಯಕ್ಟಿವೇಟ್​ ಮಾಡಲು ಕೆಲ ಕ್ಷಣದವರೆಗೆ ಹೋಮ್ ಬಟನ್ ಒತ್ತಿ ಹಿಡಿದುಕೊಳ್ಳಬೇಕು. ಇದು ಬಳಕೆದಾರರಿಗೆ ಫೋನ್‌ನ ಸ್ಕ್ರೀನ್​ನ ಮೇಲೆ ಕಾಣುತ್ತದೆ. ನೀವು ಅದನ್ನು ಬಳಸಿ ತಮಗೆ ಬೇಕಾದ ಮಾಹಿತಿಗಳನ್ನು ಕೇಳಬಹುದು. ಈ ಫೀಚರ್​ ಯಾವುದೇ ಅಪ್ಲಿಕೇಶನ್ ಅಥವಾ ವೆಬ್‌ಸೈಟ್‌ಗೆ ಸೆಟ್​ ಆಗುತ್ತದೆ. ಅಷ್ಟೇ ಅಲ್ಲ ಸಾಮಾನ್ಯವಾಗಿ ತಕ್ಷಣದ ಫಲಿತಾಂಶಗಳು ಒದಗಿಸುತ್ತದೆ. ಹೆಚ್ಚುವರಿಯಾಗಿ ಹೆಚ್ಚಿನ ಒಳನೋಟಗಳಿಗಾಗಿ ಟೆಕ್ಸ್ಟ್​ ಸೇರಿಸುವ ಮೂಲಕ ನಿಮ್ಮ ಇಮೇಜ್ ಸರ್ಚ್ಸ್​ ನೀವು ಹೆಚ್ಚಿಸಬಹುದಾಗಿದೆ. ಸ್ಯಾಮ್​ಸಂಗ್​ ತನ್ನ ಹೊಸ ಎಐ ಚಾಲಿತ ವೈಶಿಷ್ಟ್ಯಗಳನ್ನು ಕಾರ್ಯಗತಗೊಳಿಸುವಾಗ ಬಳಕೆದಾರರ ಗೌಪ್ಯತೆಗೆ ಆದ್ಯತೆ ನೀಡಿದೆ. ಹೀಗೆ ಹತ್ತಾರು ವೈಶಿಷ್ಟ್ಯಗಳು ಇದರಲ್ಲಿ ಲಭ್ಯ ಇವೆ..

Samsung Galaxy S24 Ultra ವೈಶಿಷ್ಟ್ಯಗಳು:

  • ಡಿಸ್‌ಪ್ಲೇ- 6.78 ಇಂಚಿನ ಡೈನಾಮಿಕ್ LTPO AMOLED
  • ಫ್ರಂಟ್ ಕ್ಯಾಮೆರಾ- 12MP
  • ಚಿಪ್‌ಸೆಟ್- ಸ್ನಾಪ್‌ಡ್ರಾಗನ್ 8 ಜನ್ 3
  • ಬ್ಯಾಟರಿ-5000mAh
  • RAM 12GB/ 1TB ಸ್ಟೋರೇಜ್​
  • ಚಾರ್ಜಿಂಗ್-45W
  • ರಿಯರ್​ ಕ್ಯಾಮೆರಾ- 200MP+50MP+12MP
  • ಒಎಸ್​- ಆಂಡ್ರಾಯ್ಡ್​ 14
  • ಬೆಲೆ: ರೂ.96,900 ರಿಂದ ಪ್ರಾರಂಭ

Xiaomi AI Smartphones: ಎಐ ವೈಶಿಷ್ಟ್ಯಗಳೊಂದಿಗೆ ಮತ್ತೊಂದು ಸ್ಮಾರ್ಟ್​ಫೋನ್​ಗಳ ಬಗ್ಗೆ ಮಾತನಾಡೋದಾದರೆ Xiaomi ಕಂಪನಿ ಉತ್ತಮವಾಗಿದೆ. Xiaomi 12 Pro, Xiaomi13 Pro, Xiaomi 14 ಮತ್ತು Xiaomi 14 Ultra ಮಾಡೆಲ್​ಗಳು ಈ ಸಾಧನದಲ್ಲಿ ಅನೇಕ ಎಐ ವೈಶಿಷ್ಟ್ಯಗಳು ಲಭ್ಯ ಇವೆ. ಎಐ ಆಲ್ಬಮ್ ಸರ್ಚ್​, ಎಐ ಭಾವಚಿತ್ರಗಳು ಮತ್ತು ಎಐ ವಿಸ್ತರಣೆಯೊಂದಿಗೆ ಬರುತ್ತದೆ. ಬಹುತೇಕ ಒಂದೇ ರೀತಿಯ ವೈಶಿಷ್ಟ್ಯಗಳು ಒಳಗೊಂಡಿದೆ. ವಿಡಿಯೋ ಕಾಲ್​ಗಳು, ರಿಯಲ್​ ಟೈಂ ಸಬ್​ಟೈಟಲ್​ಗಳು, ಇಂಟೆಲಿಜೆಂಟ್​ ಫೋಟೋ ಸರ್ಚ್​ ಮೂಲಕ ನೈಸರ್ಗಿಕ ಲ್ಯಾಂಗ್ವೆಜ್​ ಪ್ರೊಸೆಸ್ಸಿಂಗ್​ ಮತ್ತು ಫೋಟೋ ವರ್ಧನೆಗಾಗಿ ಎಐ ವಿಸ್ತರಣೆಯೊಂದಿಗೆ ಸಜ್ಜುಗೊಂಡ ಎಐ ಎಡಿಟರ್‌ನಂತಹ ಎಐ ಕಾರ್ಯನಿರ್ವಹಣೆಗಳನ್ನು ಇದರಲ್ಲಿ ಕಾಣಬಹುದಾಗಿದೆ.

ಇದರಲ್ಲಿರುವ ವೈಶಿಷ್ಟ್ಯಗಳಿವು:

  • ಡಿಸ್‌ಪ್ಲೇ- 6.73-ಇಂಚಿನ ಡೈನಾಮಿಕ್ LTPO AMOLED
  • ಫ್ರಂಟ್ ಕ್ಯಾಮೆರಾ- 32MP
  • ಚಿಪ್‌ಸೆಟ್- ಸ್ನಾಪ್‌ಡ್ರಾಗನ್ 8 ಜನ್ 3
  • ಬ್ಯಾಟರಿ-5000mAh
  • RAM+ಸ್ಟೋರೇಜ್​- 16GB/ 1TB
  • ಚಾರ್ಜಿಂಗ್-90W
  • ರಿಯರ್​ ಕ್ಯಾಮೆರಾ - 50MP+50MP+50MP+50MP
  • ಒಎಸ್​- ಆಂಡ್ರಾಯ್ಡ್​ 14
  • ಬೆಲೆ: ರೂ.40,999 ರಿಂದ ಪ್ರಾರಂಭ

Motorola Razr 50 Ultra: ಮೊಟೊ ರಾಜ್ರ್​ 50 ಅಲ್ಟ್ರಾ ಸ್ಮಾರ್ಟ್​ಫೋನ್​ಗಳಲ್ಲಿ ಎಐ ವೈಶಿಷ್ಟ್ಯಗಳನ್ನು ಕಾಣಬಹುದು. ಮ್ಯಾಜಿಕ್ ಕ್ಯಾನ್ವಾಸ್, ಗೂಗಲ್ ಜೆಮಿನಿ, ಮ್ಯಾಜಿಕ್ ಎಡಿಟರ್, ಮ್ಯಾಜಿಕ್ ಎರೇಸರ್, ಫೋಟೋ ಅನ್ಬ್ಲರ್, ಎಐ ಆಕ್ಷನ್ ಶಾಟ್, ಎಐ ಅಡಾಪ್ಟಿವ್ ಸ್ಟೆಬಿಲೈಸೇಶನ್, ಇಂಟೆಲಿಜೆಂಟ್ ಆಟೋ ಫೋಕಸ್ ಟ್ರ್ಯಾಕಿಂಗ್, AI ಫೋಟೋ ವರ್ಧನೆ ಜೊತೆ ಬರುತ್ತದೆ. ಪ್ರಚಲಿತದಲ್ಲಿರುವ "ಎಐ" ಬ್ರ್ಯಾಂಡಿಂಗ್ ಜೊತೆಗೆ ಮೊಟೊರಾಲನ ಎಐ ಕಾರ್ಯಚಟುವಟಿಕೆಗಳು ಸ್ಪಷ್ಟವಾದ ಪ್ರಯೋಜನಗಳನ್ನು ಒದಗಿಸುತ್ತವೆ.

ಕವರ್ ಸ್ಕ್ರೀನ್​ನಲ್ಲಿ ಜೆಮಿನಿಯ ಇಂಟಿಗ್ರೇಷನ್ ವಿಶೇಷವಾಗಿ ಗಮನಾರ್ಹವಾಗಿದೆ. ಸ್ಟೈಲ್ ಸಿಂಕ್ ಮತ್ತು ಮ್ಯಾಜಿಕ್ ಕ್ಯಾನ್ವಾಸ್‌ನಂತಹ ವೈಶಿಷ್ಟ್ಯಗಳು ಬಳಕೆದಾರರಿಗೆ ಟೆಕ್ಸ್ಟ್​ ವಿವರಣೆಗಳು ಸೇರಿದಂತೆ ಇನ್ನಿತರ ಟೂಲ್​ಗಳಿಂದ ಪ್ರೇರಿತವಾದ ಕಸ್ಟಮೈಸ್ ಮಾಡಿದ ವಾಲ್‌ಪೇಪರ್‌ಗಳನ್ನು ವಿನ್ಯಾಸಗೊಳಿಸಲು ಅನುವು ಮಾಡಿಕೊಡುತ್ತದೆ. ಕೆಲವು ವೈಶಿಷ್ಟ್ಯಗಳು ಸ್ವಲ್ಪ ಮೇಲ್ನೋಟಕ್ಕೆ ಬರಬಹುದಾದರೂ, ಕೆಲವು ಪ್ರತಿಸ್ಪರ್ಧಿ ಬ್ರ್ಯಾಂಡ್‌ಗಳು ನೀಡುತ್ತಿರುವುದನ್ನು ಹೋಲಿಸಿದರೆ ಎಐಯ ಒಟ್ಟಾರೆ ಅಪ್ಲಿಕೇಶನ್ ಅನ್ನು ಹೆಚ್ಚು ಪರಿಗಣಿಸಲಾಗುತ್ತದೆ.

ಇತರ ವೈಶಿಷ್ಟ್ಯಗಳು ಹೀಗಿವೆ:

  • ಡಿಸ್‌ಪ್ಲೇ- 6.9 - ಇಂಚಿನ P-OLED
  • ಫ್ರಂಟ್ ಕ್ಯಾಮೆರಾ - 32MP
  • ಚಿಪ್‌ಸೆಟ್- ಸ್ನಾಪ್‌ಡ್ರಾಗನ್ 8s Gen 3
  • ಬ್ಯಾಟರಿ-4000mAh
  • RAM+ಸ್ಟೋರೇಜ್​ - 12GB/ 512GB
  • ಚಾರ್ಜಿಂಗ್-45W
  • ರಿಯರ್​ ಕ್ಯಾಮೆರಾ- 50MP+50MP
  • ಓಎಸ್​ - ಆಂಡ್ರಾಯ್ಡ್​ 14 ಆಧಾರಿತ Hello UI
  • ಬೆಲೆ: 54,999 ರೂ.ದಿಂದ ಪ್ರಾರಂಭ

Honor 200 Pro: ಹಾನರ್​ 200 ಪ್ರೊ (ರೀವಿವ್​) ಎಐ-ಚಾಲಿತ ಫೋಟೋ ವರ್ಧನೆಯಂತಹ ಎಐ ವೈಶಿಷ್ಟ್ಯಗಳನ್ನು ಮತ್ತು ಲೋ-ಲೈಟ್​ ಶಾಟ್‌ಗಳನ್ನು ಸುಧಾರಿಸಲು ಎಐ ಬಳಸುವ ನೈಟ್ ಪೋರ್ಟ್ರೇಟ್ ಮೋಡ್‌ನಂತಹ ಮೆಡಿಯಾ ಎಡಿಟಿಂಗ್ ಟೂಲ್​ಗಳನ್ನು ಒಳಗೊಂಡಿದೆ. ಹೆಚ್ಚುವರಿಯಾಗಿ, ಇನ್‌ಸ್ಟಂಟ್ ಮೂವಿ ಶಾರ್ಟ್​ ವಿಡಿಯೋ ವೈಶಿಷ್ಟ್ಯ, ಮ್ಯಾಜಿಕ್ ಎರೇಸರ್ 8.0, ಮ್ಯಾಜಿಕ್ ಎನಿವೇರ್ ಡೋರ್, ಮ್ಯಾಜಿಕ್ ಕ್ಯಾಪ್ಸುಲ್ ಸೇರಿದಂತೆ ಇನ್ನು ಹೆಚ್ಚಿನ ಆಪ್ಷನ್​ಗಳನ್ನು ಹೊಂದಿದೆ. ಎಐ ಶಿಫಾರಸುಗಳು ಗ್ರಹಿಸಿದ ಬಳಕೆದಾರರ ಆದ್ಯತೆಗಳ ಆಧಾರದ ಮೇಲೆ ಆಯ್ಕೆಗಳನ್ನು ಪ್ರಸ್ತುತಪಡಿಸುತ್ತವೆ. ಆದರೆ ಮ್ಯಾಜಿಕ್ ಪೋರ್ಟಲ್ ಬಳಕೆದಾರರಿಗೆ ಟೆಕ್ಸ್ಟ್​ ಅಥವಾ ಇಮೇಜ್​ಗಳನ್ನು ಸೂಕ್ತ ಅಪ್ಲಿಕೇಶನ್‌ಗಳಿಗೆ ಮನಬಂದಂತೆ ಡ್ರ್ಯಾಗ್​ ಆ್ಯಂಡ್​ ಡ್ರಾಪ್​ಗೆ ಅನುವು ಮಾಡಿಕೊಡುತ್ತದೆ. ಹೆಚ್ಚುವರಿಯಾಗಿ, ಮ್ಯಾಜಿಕ್ ಕ್ಯಾಪ್ಸುಲ್ ಕ್ಯಾಮೆರಾ ಕಟೌಟ್ ಸುತ್ತಲೂ ವಿಸ್ತರಿಸುತ್ತದೆ. ಆಪಲ್‌ನ ಡೈನಾಮಿಕ್ ಐಲ್ಯಾಂಡ್‌ನಂತೆಯೇ ಮಿಡಿಯಾ ಕಂಟ್ರೋಲ್​ನಂತಹಗಳು ವೈಶಿಷ್ಟ್ಯಗಳನ್ನು ಒದಗಿಸುತ್ತದೆ. ಈ ಸಾಧನವು ಏರ್ ಗೆಸ್ಚರ್‌ಗಳನ್ನು ಸಹ ಬೆಂಬಲಿಸುತ್ತದೆ. ಭೌತಿಕ ಸ್ಪರ್ಶದ ಬದಲಿಗೆ ಕೈ ಚಲನೆಗಳೊಂದಿಗೆ ಅದನ್ನು ನಿಯಂತ್ರಿಸಲು ಬಳಕೆದಾರರಿಗೆ ಅನುವು ಮಾಡಿಕೊಡುತ್ತದೆ.

ಇತರ ವೈಶಿಷ್ಟ್ಯಗಳು:

  • ಡಿಸ್ಪ್ಲೇ- 6.78-ಇಂಚಿನ AMOLED
  • ಫ್ರಂಟ್ ಕ್ಯಾಮೆರಾ- 50MP
  • ಚಿಪ್‌ಸೆಟ್- ಸ್ನಾಪ್‌ಡ್ರಾಗನ್ 8s Gen 3
  • ಬ್ಯಾಟರಿ-5200mAh
  • RAM+ಸ್ಟೋರೇಜ್​- 12GB/ 512GB
  • ಚಾರ್ಜಿಂಗ್-100W
  • ರಿಯರ್​ ಕ್ಯಾಮೆರಾ- 200MP+50MP+12MP
  • ಓಎಸ್​ - ಆಂಡ್ರಾಯ್ಡ್​ 14
  • ಬೆಲೆ: 47,999 ರೂ.ದಿಂದ ಪ್ರಾರಂಭ..

AI ವೈಶಿಷ್ಟ್ಯಗಳೊಂದಿಗೆ ಮಧ್ಯಮ ಶ್ರೇಣಿಯ ಸ್ಮಾರ್ಟ್‌ಫೋನ್‌ಗಳು:

ವಿವೋ, ಒಪ್ಪೋ ಮತ್ತು ಒನ್​ಪ್ಲಸ್​ನಂತಹ ಬ್ರ್ಯಾಂಡ್‌ಗಳ ಪ್ರಮುಖ ಸ್ಮಾರ್ಟ್‌ಫೋನ್‌ಗಳು ಸಹ AI ವೈಶಿಷ್ಟ್ಯಗಳೊಂದಿಗೆ ಬರುತ್ತವೆ. ಇವುಗಳಲ್ಲಿ Vivo X200 ಸರಣಿ, Oppo Find X8 ಸೀರಿಸ್​ ಮತ್ತು OnePlus 13 ಸರಣಿಯಂತಹ ಸಾಧನಗಳು ಸೇರಿವೆ. ಆದರೂ ಈ ಬ್ರ್ಯಾಂಡ್‌ಗಳಿಂದ ಹಲವಾರು ಮಧ್ಯಮ-ಶ್ರೇಣಿಯ ಸಾಧನಗಳಿವೆ, ಅದು ಉಪಯುಕ್ತ AI-ಚಾಲಿತ ವೈಶಿಷ್ಟ್ಯಗಳ ಅನುಭವ ನೀಡುತ್ತವೆ. ಅಂತಹ ಕೆಲವು ಗಮನಾರ್ಹ ಸ್ಮಾರ್ಟ್​ಫೋನ್​ಗಳ ಬಗ್ಗೆ ಮಾಹಿತಿ ನೀಡಲಾಗಿದೆ.

VIVO X200 Series: ಸ್ಮಾರ್ಟ್​ಫೋನ್​ ತಯಾರಿಕಾ ಕಂಪನಿ ವಿವೋ ತನ್ನ ಬಹು ನಿರೀಕ್ಷಿತ ಸ್ಮಾರ್ಟ್​ಫೋನ್​ ಎಕ್ಸ್​ 200 ಸೀರಿಸ್​ ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಈ ಸೀರಿಸ್​ನಲ್ಲಿ, ಕಂಪನಿಯು ವಿವೋ ಎಕ್ಸ್​200 ಮತ್ತು ವಿವೋ ಎಕ್ಸ್​200 ಪ್ರೊ ಒಳಗೊಂಡಿರುವ ಎರಡು ಮಾದರಿಗಳನ್ನು ಬಿಡುಗಡೆ ಮಾಡಿದೆ. ಈ ಫೋನ್‌ನಲ್ಲಿ ಬಳಕೆದಾರರು 6000mAh ವರೆಗಿನ ಪವರ್​ಫುಲ್​ ಬ್ಯಾಟರಿ ಪಡೆಯಲಿದ್ದಾರೆ. ಈ ಫೋನ್‌ನಲ್ಲಿ 200 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಕೂಡ ಲಭ್ಯವಿದೆ.

  • 6.67 ಇಂಚಿನ ಕ್ವಾಡ್-ಕರ್ವ್ಡ್ OLED LTPS ಡಿಸ್​ಪ್ಲೇ
  • 120Hz ವರೆಗೆ ವೇರಿಯಬಲ್ ರಿಫ್ರೆಶ್ ರೇಟ್​
  • 1.63mm ನ ಅಲ್ಟ್ರಾ-ಸ್ಲಿಮ್ ಬೆಜೆಲ್ಸ್​
  • 200MP Zeiss APO ಟೆಲಿಫೋಟೋ ಕ್ಯಾಮೆರಾ
  • 4K HDR ಸಿನಿಮಾ ಪೋರ್ಟ್ರೇಟ್ ವಿಡಿಯೋ ರೆಕಾರ್ಡ್
  • ಪವರ್​ಫುಲ್​ 6000mAh ಬ್ಯಾಟರಿ
  • 90W ಸ್ಪೀಡ್​ ಚಾರ್ಜಿಂಗ್
  • ಮೀಡಿಯಾ ಟೆಕ್ ಡೈಮೆನ್ಸಿಟಿ 9400 ಚಿಪ್‌ಸೆಟ್‌
  • 3nm ಪ್ರೊಸೆಸರ್ ಟೆಕ್ನಾಲಾಜಿ
  • ಇದರ ಆರಂಭಿಕ ಬೆಲೆ 65,999 ರೂ. ಆಗಿದೆ.

Vivo V40 Pro: ವಿವೊ ವಿ40 ಪ್ರೊ (ರೀವಿವ್​) AI ಎರೇಸರ್ ಮತ್ತು AI ಫೋಟೋ ವರ್ಧಕ ಒಳಗೊಂಡಿದೆ. ವಿವೊ ತನ್ನ ಇತ್ತೀಚಿನ ಮಾಡೆಲ್​ನಲ್ಲಿ ಕೆಲವು ಸೀಮಿತ ಕ್ಯಾಮೆರಾ ಎಐ ವೈಶಿಷ್ಟ್ಯಗಳೊಂದಿಗೆ ಎಐ ಜೆಮಿನಿ ಮತ್ತು ಇತರ ಸಾಮರ್ಥ್ಯಗಳ ಮೇಲೆ ಬೆಳಕು ಚೆಲ್ಲುತ್ತದೆ.

ಇತರ ವೈಶಿಷ್ಟ್ಯಗಳು:

  • ಡಿಸ್​ಪ್ಲೇ - 6.78-ಇಂಚಿನ AMOLED
  • ಫ್ರಂಟ್ ಕ್ಯಾಮೆರಾ - 50MP
  • ಚಿಪ್ಸೆಟ್- ಮೀಡಿಯಾ ಟೆಕ್ ಡೈಮೆನ್ಸಿಟಿ 9200+
  • ಬ್ಯಾಟರಿ-5500mAh
  • RAM+ಸ್ಟೋರೇಜ್​- 12GB/512GB
  • ಚಾರ್ಜಿಂಗ್-80W
  • ರಿಯರ್​ ಕ್ಯಾಮೆರಾ- 200MP+50MP+50MP
  • ಓಎಸ್​ - ಆಂಡ್ರಾಯ್ಡ್​ 14
  • ಬೆಲೆ: 49,999 ರೂ.ದಿಂದ ಪ್ರಾರಂಭ..

OnePlus Nord 4 : ಒನ್​ಪ್ಲಸ್​ ನಾರ್ಡ್​ 4 ಮೊಬೈಲ್​ ಒಂದು ಎಐ ಸ್ಮಾರ್ಟ್​ಫೋನ್​ ಆಗಿದ್ದು, ಫೋಟೋ ಎಡಿಟ್​ಗೆ ಉತ್ತಮವಾಗಿದೆ. ಎಐ ಎರೇಸರ್ 2.0, ಎಐ ಸ್ಮಾರ್ಟ್ ಕಟೌಟ್ 2.0, ಎಐ ಕ್ಲಿಯರ್ ಫೇಸ್, ಎಐ ಸ್ಪೀಕ್, ಎಐ ಸಮ್ಮರಿ​, AI ರೈಟರ್, ರೆಕಾರ್ಡಿಂಗ್ ಸಮ್ಮರಿ ಮತ್ತು ಎಐ ಲಿಂಕ್ ಬೂಸ್ಟ್‌ನಂತಹ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಹೈಲೈಟ್ ಮಾಡಲಾದ ವೈಶಿಷ್ಟ್ಯವೆಂದರೆ AI ಸ್ಪೀಕ್, ನೀವು ಪ್ರಸ್ತುತ ವೀಕ್ಷಿಸುತ್ತಿರುವ ಯಾವುದೇ ವೆಬ್ ಪೇಜ್​ ಅನ್ನು ಟೆಕ್ಸ್ಟ್​ ಟು ಸ್ಪೀಚ್​ನಿಂದ ಭಾಷಣದ ಕಾರ್ಯಚಟುವಟಿಕೆಯಾಗಿದೆ. ಬಳಕೆದಾರರು ವಾಯ್ಸ್​ ಜೆಂಡರ್​ ಮತ್ತು ರೀಡಿಂಗ್​ ಸ್ಪೀಡ್​ ಸೇರಿದಂತೆ ಎರಡನ್ನೂ ಮಾರ್ಪಡಿಸಲು ಅನುವು ಮಾಡಿಕೊಟ್ಟಿದೆ.

ಪರಿಚಯಿಸಲಾದ ಇತರೆ ವೈಶಿಷ್ಟ್ಯವೆಂದರೆ ಎಐ ರೈಟರ್, ಇಮೇಲ್‌ಗಳು,ಎಸ್ಸೆಗಳು, ರೀವ್ಯೂವ್ಸ್​ ಮತ್ತು ಟೆಕ್ಸ್ಟ್​ ಮೆಸೇಜ್​ಗಳನ್ನು ಕ್ರಿಯೆಟ್​ ಮಾಡುವ ಸಾಮರ್ಥ್ಯವಿರುವ ದೃಢವಾದ ಸಾಧನವಾಗಿದೆ. ಈ ವೈಶಿಷ್ಟ್ಯವನ್ನು ಯಾವುದೇ ಟೆಕ್ಸ್ಟ್​ ಕ್ಷೇತ್ರದಲ್ಲಿ ಸಕ್ರಿಯಗೊಳಿಸಬಹುದು. ಇದು ಬಳಕೆದಾರರಿಗೆ ಲಿಖಿತ ವಿಷಯದ ವಾಯ್ಸ್​ ಅನ್ನು ಸರಿಹೊಂದಿಸಲು ಅನುವು ಮಾಡಿಕೊಡುತ್ತದೆ.

ಇತರ ವೈಶಿಷ್ಟ್ಯಗಳು:

  • ಡಿಸ್ಪ್ಲೇ- 6.74-ಇಂಚಿನ AMOLED
  • ಫ್ರಂಟ್ ಕ್ಯಾಮೆರಾ- 16MP
  • ಚಿಪ್‌ಸೆಟ್- ಸ್ನಾಪ್‌ಡ್ರಾಗನ್ 7+ Gen 3
  • ಬ್ಯಾಟರಿ-5500mAh
  • RAM+ ಸ್ಟೋರೇಜ್​- 8GB/ 256GB
  • ಚಾರ್ಜಿಂಗ್-100W
  • ರಿಯರ್​ ಕ್ಯಾಮೆರಾ- 50MP+8MP
  • ಓಎಸ್​- ಆಂಡ್ರಾಯ್ಡ್​ 14
  • ಬೆಲೆ: ರೂ.29,999 ದಿಂದ ಪ್ರಾರಂಭ..

Oppo Reno 12 5G: AI ವೈಶಿಷ್ಟ್ಯಗಳೊಂದಿಗೆ ಒಪ್ಪೊ ರೆನೋ 12 ಪ್ರೊ ಉತ್ತಮ ಸ್ಮಾರ್ಟ್​ಫೋನ್​ ಎಂದೇ ಹೇಳಬಹುದು. ಇದರಲ್ಲಿ ಎಐ ಸ್ಟುಡಿಯೋ, ಎಐ ಟೂಲ್‌ಬಾಕ್ಸ್, ಸ್ಮಾರ್ಟ್ ಸ್ಕ್ರೀನ್‌ಶಾಟ್‌ಗಳು, ಎಐ ಎರೇಸರ್ 2.0, ಎಐ ಪರ್ಫೆಕ್ಟ್ ಶಾಟ್, ಎಐ ಬೆಸ್ಟ್ ಫೇಸ್, ಎಐ ರೈಟರ್, ಎಐ ಕ್ಲಿಯರ್ ವಾಯ್ಸ್, ಎಐ ಲಿಂಕ್ ಬೂಸ್ಟ್, ಬೀಕನ್ ಲಿಂಕ್ ಟೆಕ್ ಸೇರಿದಂತೆ ಅನೇಕ ಎಐ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

AI ಕ್ಲಿಯರ್ ವಾಯ್ಸ್ ವೈಶಿಷ್ಟ್ಯ ಬಳಸುವುದರಿಂದ ಕರೆಯಲ್ಲಿರುವಾಗ ಇತರ ವ್ಯಕ್ತಿಯ ಧ್ವನಿಯನ್ನು ಹೆಚ್ಚು ಸ್ಪಷ್ಟವಾಗಿ ಕೇಳಲು ನಿಮಗೆ ಅನುಮತಿಸುತ್ತದೆ. ಸಂವಹನವನ್ನು ಉತ್ತಮಗೊಳಿಸಲು ಇದು ಹಿನ್ನೆಲೆ ಶಬ್ದವನ್ನು ಫಿಲ್ಟರ್ ಮಾಡುತ್ತದೆ. ಇನ್ನೂ ಕೆಲವು AI ವೈಶಿಷ್ಟ್ಯಗಳು ಇವೆ. ಆದರೆ ಅವುಗಳು ಛಾಯಾಗ್ರಹಣ-ಸಂಬಂಧಿತ AI ಸಾಮರ್ಥ್ಯಗಳಾಗಿರುವುದರಿಂದ ಅದು ಕ್ಯಾಮೆರಾ ವಿಭಾಗದ ಒಂದು ಭಾಗವಾಗಿರುತ್ತದೆ.

ಇತರ ಪೀಚರ್ಸ್​​:

  • ಡಿಸ್ಪ್ಲೇ- 6.7 ಡೈನಾಮಿಕ್ FHD+ OLED
  • ಫ್ರಂಟ್ ಕ್ಯಾಮೆರಾ- 32MP
  • ಚಿಪ್ಸೆಟ್- ಮೀಡಿಯಾ ಟೆಕ್ ಡೈಮೆನ್ಸಿಟಿ 7300 ಎನರ್ಜಿ
  • ಬ್ಯಾಟರಿ-5000mAh
  • RAM+ಸ್ಟೋರೇಜ್​- 12GB/ 512GB
  • ಚಾರ್ಜಿಂಗ್-80W
  • ಹಿಂಬದಿಯ ಕ್ಯಾಮೆರಾ- 200MP+50MP+8MP
  • ಒಎಸ್​ - ಆಂಡ್ರಾಯ್ಡ್​ 14
  • ಇದರ ಆರಂಭಿಕ ಬೆಲೆ 27,399 ರೂ.ಗಳಿಂದ ಆರಂಭ..

ಓದಿ: ನೀರಿನಲ್ಲಿ ಬಿದ್ರೂ ಭಯ ಪಡುವ ಆತಂಕವಿಲ್ಲ; ಜಬರ್ದಸ್ತ್​ ವಾಟರ್​ಪ್ರೂಫ್​, ಕೈಗೆಟುಕುವ ದರದಲ್ಲಿ ಲಭ್ಯವಾಗಲಿದೆ ರಿಯಲ್​ಮಿ 14ಎಕ್ಸ್ ಫೋನ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.