ವರದಿ - ಸೌರಭ್ ಶುಕ್ಲಾ, ಈಟಿವಿ ಭಾರತ
ನವದೆಹಲಿ : ಚಿನ್ನದ ದರವು ಇತ್ತೀಚಿನ ದಿನಗಳಲ್ಲಿ ಗಗನಮುಖಿಯಾಗಿದೆ. ಕಳೆದ 15 ದಿನಗಳಲ್ಲಿ 10 ಸಾವಿರಕ್ಕೂ ಅಧಿಕ ರೂಪಾಯಿ ಏರಿಕೆ ಕಂಡಿದೆ. ಹಳದಿ ಲೋಹದ ಬೆಲೆಯು ಇಲ್ಲಿಗೆ ನಿಲ್ಲುವ ಲಕ್ಷಣವಿಲ್ಲ. ಮುಂದಿನ ಎರಡು ವರ್ಷಗಳಲ್ಲಿ ದರವು ವಿಪರೀತ ಹೆಚ್ಚಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಮುಂದಿನ 2 ವರ್ಷಗಳಲ್ಲಿ ಚಿನ್ನದ ಬೆಲೆ ಮತ್ತೆ ಏರಿಕೆಯಾಗಲಿದೆ. ಬೇಡಿಕೆ ಹೆಚ್ಚಿದ ಹಿನ್ನೆಲೆ ಮುಂಗಡ ಬುಕ್ಕಿಂಗ್ ಕೂಡ ಹೆಚ್ಚಾಗುವ ಸಾಧ್ಯತೆ ಇದೆ. ಭವಿಷ್ಯದಲ್ಲಿ ಚಿನ್ನದ ಮೇಲಿನ ಹೂಡಿಕೆಯು ಭಾರೀ ಲಾಭ ತಂದು ಕೊಡಲಿದೆ ಎಂದು ತಿಳಿಸಿದ್ದಾರೆ.
1. 25 ಲಕ್ಷ ರೂಪಾಯಿಗೆ ತಲುಪದಲಿದೆ ಹಳದಿ ಲೋಹ ; ಮುಂದಿನ ಒಂದೂವರೆ ಅಥವಾ ಎರಡು ವರ್ಷಗಳಲ್ಲಿ ಚಿನ್ನದ ಬೆಲೆ 10 ಗ್ರಾಂಗೆ 1.25 ಲಕ್ಷ ರೂಪಾಯಿ ತಲುಪಬಹುದು ಎಂದು ತಜ್ಞರು ಭವಿಷ್ಯ ನುಡಿದಿದ್ದಾರೆ. ಜಾಗತಿಕ ವಿದ್ಯಮಾನಗಳು ವಿವಿಧ ಕ್ಷೇತ್ರಗಳ ಮೇಲೆ ಪರಿಣಾಮ ಬೀರುತ್ತಿರುವ ಕಾರಣ, ಚಿನ್ನಕ್ಕೆ ಬೇಡಿಕೆ ಹೆಚ್ಚುತ್ತಿದೆ. ಹೀಗಾಗಿ, ಅದರ ದರವೂ, ವಿಪರೀತ ಏರಿಕೆ ಗತಿಯಲ್ಲಿದೆ ಎಂದಿದ್ದಾರೆ.
ಹೆಚ್ಡಿಎಫ್ಸಿ ಸೆಕ್ಯುರಿಟೀಸ್‌ನ ಕರೆನ್ಸಿ ಮತ್ತು ಸರಕುಗಳ ಮುಖ್ಯಸ್ಥರು ಈಟಿವಿ ಭಾರತ್ಗೆ ತಿಳಿಸಿದಂತೆ, 10 ಗ್ರಾಂ ಚಿನ್ನವು 87 ಸಾವಿರ ದಾಟಿದೆ. ಇದು ಮುಂದಿನ ದಿನಗಳಲ್ಲಿ ಮತ್ತಷ್ಟು ಏರಿಕೆಯಾಗುವ ನಿರೀಕ್ಷೆಯಿದೆ. ಹೂಡಿಕೆದಾರರು ಜಾಣ್ಮೆ ಬಳಸಿ ಹೂಡಿಕೆ ಮಾಡಬೇಕು ಎಂದು ಸಲಹೆ ನೀಡಿದರು. ದೀರ್ಘಾವಧಿಯಲ್ಲಿ ಚಿನ್ನದ ಬೆಲೆ ಏರುವ ಜೊತೆಗೆ, ಅಲ್ಪಾವಧಿಯಲ್ಲಿ ಬುಕಿಂಗ್ ಹೆಚ್ಚುವ ಸಾಧ್ಯತೆಯಿದೆ ಎಂದೂ ತಿಳಿಸಿದರು.
ಅಖಿಲ ಭಾರತ ರತ್ನ ಮತ್ತು ಆಭರಣ ದೇಶೀಯ ಮಂಡಳಿಯ (ಜಿಜೆಸಿ) ಅಧ್ಯಕ್ಷರು ಹೇಳುವಂತೆ, ಎರಡು ಮೂರು ದಿನಗಳಿಂದ ಈಚೆಗೆ ಚಿನ್ನದ ದರವು ಸ್ವಲ್ಪ ಕಡಿಮೆಯಾಗಿದೆ. ಆದರೆ, ಮುಂದಿನ 3- 4 ತಿಂಗಳುಗಳಲ್ಲಿ ಅದರ ಬೆಲೆಯು 10 ಗ್ರಾಂಗೆ 90 ಸಾವಿರ ರೂಪಾಯಿಗೆ ತಲುಪುವ ನಿರೀಕ್ಷೆಯಿದೆ. ಮೇ-ಜೂನ್‌ನಲ್ಲಿ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡುಬರಬಹುದು. ಮುಂದಿನ ಒಂದೂವರೆ ವರ್ಷದಲ್ಲಿ 10 ಗ್ರಾಂ ಚಿನ್ನವು 1.25 ಲಕ್ಷ ರೂಪಾಯಿಗೆ ತಲುಪಬಹುದು ಎಂದರು.
ಬೆಳ್ಳಿ ಬೆಲೆಯಲ್ಲಿ ಏರಿಕೆ ನಿರೀಕ್ಷೆ ಇಲ್ಲ ; ಚಿನ್ನದಂತೆ ಬೆಳ್ಳಿಯ ಬೆಲೆಯಲ್ಲಿ ಇದೇ ರೀತಿಯ ಏರಿಕೆ ಕಂಡುಬರುವ ನಿರೀಕ್ಷೆಯಿಲ್ಲ ಎಂದೂ ಅಂದಾಜಿಸಿದ್ದಾರೆ.
ಇದನ್ನೂ ಓದಿ: ಆಭರಣ ಪ್ರಿಯರಿಗೆ Good ನ್ಯೂಸ್; ಸತತ ಏರಿಕೆ ಕಂಡಿದ್ದ ಚಿನ್ನ- ಬೆಳ್ಳಿ ದರದಲ್ಲಿ ಇಳಿಕೆ