ETV Bharat / state

ಫೋನ್ ಪೇ ಮೂಲಕ ಲಂಚ ಪಡೆಯುತ್ತಿದ್ದ ಮಹಿಳಾ ಇನ್ಸ್​ಪೆಕ್ಟರ್ ಲೋಕಾಯುಕ್ತ ಬಲೆಗೆ - BRIBERY CASE

ಫೋನ್ ಪೇ ಮೂಲಕ ಲಂಚ ಪಡೆಯುತ್ತಿದ್ದ ಮಹಿಳಾ ಇನ್ಸ್​ಪೆಕ್ಟರ್​​ವೊಬ್ಬರು ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.

lady-inspector-detained-in-bribery-case
ಲೋಕಾಯುಕ್ತ ಕಚೇರಿ (ETV Bharat)
author img

By ETV Bharat Karnataka Team

Published : Feb 21, 2025, 10:08 PM IST

ಬೆಂಗಳೂರು: ಸ್ಲಂ ಬೋರ್ಡ್ ವತಿಯಿಂದ ಮನೆ ಪಡೆಯಲು ಸಲ್ಲಿಸಲಾಗಿದ್ದ ಜಾತಿ ಪ್ರಮಾಣ ಪತ್ರದ ನೈಜತೆ ಪರಿಶೀಲಿಸಲು ದೂರುದಾರರ ಬಳಿ ಲಂಚಕ್ಕೆ ಬೇಡಿಕೆ ಇಟ್ಟ ನಾಗರೀಕ ಹಕ್ಕು ಜಾರಿ ನಿರ್ದೇಶನಾಲಯದಲ್ಲಿ (ಡಿಸಿಆರ್​​ಇ) ಕರ್ತವ್ಯ ನಿರ್ವಹಿಸುತ್ತಿದ್ದ ಮಹಿಳಾ ಇನ್ಸ್​ಪೆೆಕ್ಟರ್​ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿದ್ಧಾರೆ.

ದೇವರಬೀಸನಹಳ್ಳಿ ನಿವಾಸಿ ಲೊಕೇಶ್ ಎಂಬವರು ನೀಡಿದ ದೂರಿನ ಮೇರೆಗೆ ಡಿಸಿಆರ್​​ಇ ಇನ್‌ಸ್ಪೆಕ್ಟರ್ ಗೀತಾ ಹಾಗೂ ಖಾಸಗಿ ವ್ಯಕ್ತಿ ರಿಚರ್ಡ್ ಅವರನ್ನು ಬಂಧಿಸಲಾಗಿದೆ.

ಕೊಳೆಗೇರಿ ನಿಗಮದ ವತಿಯಿಂದ ಮನೆ ಪಡೆಯಲು ಲೊಕೇಶ್ ಅರ್ಜಿ ಸಲ್ಲಿಸಿದ್ದರು. ನಕಲಿ ಜಾತಿಪ್ರಮಾಣ ಪತ್ರ ಸಲ್ಲಿಸಿ ಲಾಭ ಪಡೆಯಲು ಮುಂದಾಗಿದ್ದಾರೆ ಎಂದು ಆರೋಪಿಸಿ ಲೊಕೇಶ್ ವಿರುದ್ದ ತನಿಖೆ ನಡೆಸುವಂತೆ ವ್ಯಕ್ತಿಯೊಬ್ಬರು ಡಿಸಿಆರ್​​ಇ ಇಲಾಖೆಗೆ ದೂರು ನೀಡಿದ್ದರು.

ನೈಜತೆ ಪರಿಶೀಲಿಸಿ ತನಿಖೆ ಕೈಗೊಂಡ ಇನ್ಸ್​ಪೆೆಕ್ಟರ್ ಗೀತಾ, ಅರ್ಜಿಯನ್ನು ವಿಲೇವಾರಿ ಮಾಡಲು ದೂರುದಾರರಿಗೆ 25 ಸಾವಿರ ರೂ ಲಂಚ ನೀಡುವಂತೆ ಬೇಡಿಕೆ ಇಟ್ಟಿದ್ದರು. ಈ ಸಂಬಂಧ ಲೊಕೇಶ್ ಲೋಕಾಯುಕ್ತರಿಗೆ ದೂರು ನೀಡಿದ್ದರು. ಇದರಂತೆ ಅಧಿಕಾರಿಗಳು ಶುಕ್ರವಾರ (ಇಂದು) ಸಂಜೆ ಕಾರ್ಯಾಚರಣೆ ಕೈಗೊಂಡಿದ್ದು, ದೂರುದಾರನಿಂದ ಫೋನ್ ಪೇ ಮೂಲಕ 10 ಸಾವಿರ ರೂಪಾಯಿ ಪಡೆಯುವಾಗ ಇನ್ಸ್​ಪೆೆಕ್ಟರ್ ಸಿಕ್ಕಿಬಿದ್ದಿದ್ಧಾರೆ. ಲಂಚ ಸ್ವೀಕರಿಸಲು ಮಧ್ಯವರ್ತಿಯಾಗಿದ್ದ ರಿಚರ್ಡ್ ಎಂಬವನನ್ನೂ ಬಂಧಿಸಲಾಗಿದೆ. ಇಬ್ಬರ ವಿರುದ್ಧ ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಲೋಕಾಯುಕ್ತ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ದೆಹಲಿ ವಿವಾಹಿತೆಯ ಮೇಲೆ ಬೆಂಗಳೂರಿನಲ್ಲಿ ಸಾಮೂಹಿಕ ಅತ್ಯಾಚಾರ; ಮೂವರ ಬಂಧನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.