ETV Bharat / technology

‘ರಾಯಲ್​’ ಬೈಕ್ ಪ್ರಿಯರಿಗೆ ಸಿಹಿ ಸುದ್ದಿ, ಮುಂದಿನ ವರ್ಷ ಲಗ್ಗೆ ಇಡಲಿವೆ 650 ಎನ್​ಫೀಲ್ಡ್​ ವಾಹನಗಳಿವು! - UPCOMING ROYAL ENFIELD 650 CC BIKES

Upcoming Royal Enfield Bikes: ದೇಶಿಯ ದ್ವಿಚಕ್ರ ವಾಹನ ಮಾರುಕಟ್ಟೆಗೆ ಹೊಸ ರಾಯಲ್​ ಎನ್​ಫೀಲ್ಡ್​ ಬೈಕ್​ಗಳು ಕಾಲಿಡಲಿವೆ. ಈ ಬೈಕ್​ಗಳು 650 ಸೀರಿಸ್​ನಲ್ಲಿ ಬರಲಿದ್ದು, ಅವುಗಳ ಸಂಕ್ಷಿಪ್ತ ವಿವರಣೆ ಇಲ್ಲಿದೆ..

ROYAL ENFIELD 650 BIKES  ROYAL ENFIELD BIKES DETAILS  ROYAL ENFIELD BIKES  ROYAL ENFIELD BIKES FEATURES
ಮುಂದಿನ ವರ್ಷ ಲಗ್ಗೆಯಿಡಲಿವೆ 650 ಎನ್​ಫೀಲ್ಡ್​ ವಾಹನಗಳಿವು (Royal Enfield)
author img

By ETV Bharat Tech Team

Published : 2 hours ago

Upcoming Royal Enfield Bikes: ರಾಯಲ್ ಎನ್‌ಫೀಲ್ಡ್ ಬೈಕ್‌ಗಳಿಗೆ ದೇಶದಲ್ಲಿ ಎಲ್ಲಿಲ್ಲದ ಬೇಡಿಕೆ ಇರುವುದು ಗೊತ್ತಿರುವ ಸಂಗತಿ. ಈ ಬೈಕ್​ಗಳು ಭಾರತೀಯ ಗ್ರಾಹಕರಲ್ಲಿ ಸಾಕಷ್ಟು ಜನಪ್ರಿಯವಾಗಿವೆ. ಇವುಗಳಲ್ಲಿ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್‌ನಿಂದ ಬುಲೆಟ್‌ವರೆಗಿನ ಹಲವು ಬೈಕ್‌ಗಳ ಹೆಸರುಗಳು ಸೇರಿವೆ. ನೀವು ಹೊಸ ರಾಯಲ್ ಎನ್‌ಫೀಲ್ಡ್ ಮೋಟಾರ್‌ಸೈಕಲ್ ಖರೀದಿಸಲು ಯೋಜಿಸುತ್ತಿದ್ದರೆ, ನೀವು ಸ್ವಲ್ಪ ದಿನ ಕಾಯಬೇಕಾಗಿದೆ. ಏಕೆಂದರೆ ಶೀಘ್ರದಲ್ಲೇ ನಾಲ್ಕು ಹೊಸ ರಾಯಲ್ ಎನ್‌ಫೀಲ್ಡ್ ಬೈಕ್‌ಗಳು ದೇಶಿಯ ಮಾರುಕಟ್ಟೆಗೆ ಲಗ್ಗೆಯಿಡಲಿವೆ. ಶೀಘ್ರದಲ್ಲೇ ಬಿಡುಗಡೆಯಾಗಲಿರುವ ರಾಯಲ್ ಎನ್‌ಫೀಲ್ಡ್ ಬೈಕ್‌ಗಳು ಯಾವುವು ಎಂಬುದರ ಲಿಸ್ಟ್​ ಇಲ್ಲಿದೆ.

ಚೆನ್ನೈ ಮೂಲದ ಬ್ರ್ಯಾಂಡ್ ಈಗಾಗಲೇ 350cc ಮತ್ತು 450cc ಮೋಟಾರ್‌ಸೈಕಲ್ ವಿಭಾಗಗಳಲ್ಲಿ ವೈವಿಧ್ಯಮಯ ಪೋರ್ಟ್‌ ಫೋಲಿಯೊವನ್ನು ಹೊಂದಿದೆ. ಆದರೆ, ಅದು ಈಗ ತನ್ನ ಗಮನವನ್ನು 650cc ಗೆ ಬದಲಾಯಿಸಿದೆ. ಕಂಪನಿಯು ಈಗಾಗಲೇ ಈ ವಿಭಾಗದಲ್ಲಿ ಇಂಟರ್‌ಸೆಪ್ಟರ್ 650, ಕಾಂಟಿನೆಂಟಲ್ ಜಿಟಿ 650, ಶಾಟ್‌ಗನ್ 650 ಮತ್ತು ಇತ್ತೀಚೆಗೆ ಬಿಡುಗಡೆಯಾದ ಬೇರ್ 650 ಜೊತೆಗೆ ದೊಡ್ಡ ಸ್ಥಾನವನ್ನೇ ಹೊಂದಿದೆ. ಆದರೂ ರಾಯಲ್ ಎನ್‌ಫೀಲ್ಡ್ ಕನಿಷ್ಠ ನಾಲ್ಕು 650 ಸಿಸಿ ಬೈಕ್‌ಗಳೊಂದಿಗೆ ಭಾರತದಲ್ಲಿ ಬಿಡುಗಡೆಯಾಗಲಿದೆ.

ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 650: ಹೆಚ್ಚು ಮಾರಾಟವಾದ ಮೋಟಾರ್‌ಸೈಕಲ್ ಕ್ಲಾಸಿಕ್ 350ರ ಯಶಸ್ಸಿನ ನಂತರ, ಕಂಪನಿಯು ಈಗ ಕ್ಲಾಸಿಕ್ 650 ಅನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಲು ಯೋಜಿಸುತ್ತಿದೆ. ಕಳೆದ ತಿಂಗಳು ಇಟಲಿಯಲ್ಲಿ ನಡೆದ EICMA 2024 ನಲ್ಲಿ ಪದಾರ್ಪಣೆ ಮಾಡಿದ ನಂತರ, ನವೆಂಬರ್‌ನಲ್ಲಿ Motoverse 2024 ನಲ್ಲಿ ಸಂಭಾವ್ಯ ಭಾರತೀಯ ಖರೀದಿದಾರರಿಗೆ ಇದನ್ನು ಪ್ರದರ್ಶಿಸಲಾಯಿತು. ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 650 ಶಾಟ್‌ಗನ್ 650 ನಿಂದ ಬಹಳಷ್ಟು ಹಾರ್ಡ್‌ವೇರ್ ಎರವಲು ಪಡೆಯುತ್ತದೆ. ಆದರೆ ಸ್ಟೈಲಿಂಗ್ ಕ್ಲಾಸಿಕ್ 350 ನಿಂದ ಸ್ಫೂರ್ತಿ ಪಡೆದಿದೆ. ಇದು ಇಲ್ಲಿಯವರೆಗೆ ಬ್ರ್ಯಾಂಡ್‌ನ ಅತಿ ಹೆಚ್ಚು ಮಾರಾಟವಾದ ಮಾದರಿಯಾಗಿದೆ.

ವರದಿಗಳ ಪ್ರಕಾರ, ಮುಂಬರುವ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 650 ತನ್ನ ಪವರ್‌ಟ್ರೇನ್ ಆಗಿ 648cc ಪ್ಯಾರಲಲ್ ಟ್ವಿನ್ ಎಂಜಿನ್ ಅನ್ನು ಹೊಂದಿರುತ್ತದೆ. ಇದು 47.4 bhp ಗರಿಷ್ಠ ಪವರ್​ ಮತ್ತು 52.4nm ನ ಗರಿಷ್ಠ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಮಾಧ್ಯಮ ವರದಿಗಳ ಪ್ರಕಾರ, ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 650 ಅನ್ನು 2025 ರ ಮೊದಲ ತ್ರೈಮಾಸಿಕದಲ್ಲಿ ಬಿಡುಗಡೆ ಮಾಡಬಹುದು.

ರಾಯಲ್ ಎನ್‌ಫೀಲ್ಡ್ ಬುಲೆಟ್ 650: ಬುಲೆಟ್ 650 ಅನ್ನು ರಾಯಲ್ ಎನ್‌ಫೀಲ್ಡ್ ಶೀಘ್ರದಲ್ಲೇ ಬಿಡುಗಡೆ ಮಾಡಬಹುದಾಗಿದೆ. ಕಂಪನಿಯು ನೀಡುವ ಈ ಮೋಟಾರ್‌ ಸೈಕಲ್‌ನಲ್ಲಿ ನೀವು ಅನೇಕ ಉತ್ತಮ ವೈಶಿಷ್ಟ್ಯಗಳನ್ನು ಪಡೆಯಲಿದ್ದೀರಿ. ರಾಯಲ್ ಎನ್‌ಫೀಲ್ಡ್ ಬುಲೆಟ್ 650 ಪರೀಕ್ಷೆಯ ವೇಳೆ ದೇಶಿಯ ರೋಡ್​ಗಳಲ್ಲಿ ಹಲವಾರು ಬಾರಿ ಕಂಡು ಬಂದಿದೆ. ಶಾಟ್‌ಗನ್ 650 ಮತ್ತು ಸೂಪರ್ ಮೀಟಿಯರ್ 650 ರಂತೆಯೇ ಅದೇ ಫ್ರೇಮ್ ಅನ್ನು ಆಧರಿಸಿದೆ. ಇದು 2025 ರ ಮಧ್ಯಭಾಗದಲ್ಲಿ ಭಾರತದಲ್ಲಿ ಬಿಡುಗಡೆಯಾಗಲಿದೆ. ಒಟ್ಟಾರೆ ವಿನ್ಯಾಸವು ಬುಲೆಟ್ 350 ಮತ್ತು ಇನ್ನೂ ಬಿಡುಗಡೆಯಾಗಬೇಕಿರುವ ಕ್ಲಾಸಿಕ್ 650 ನಿಂದ ಸ್ಫೂರ್ತಿ ಪಡೆಯುತ್ತದೆ. ರಾಯಲ್ ಎನ್‌ಫೀಲ್ಡ್ ಬುಲೆಟ್ 650 ವೈರ್-ಸ್ಪೋಕ್ ವೀಲ್‌ಗಳಲ್ಲಿ ಸವಾರಿ ಮಾಡುತ್ತದೆ. ಆದರೆ ಇದು ಅಲಾಯ್​ ವ್ಹೀಲ್​ಗಳನ್ನು ಹೊಂದಿಲ್ಲ. ರಾಯಲ್ ಎನ್‌ಫೀಲ್ಡ್ ಬುಲೆಟ್ 650 ಬೈಕು 6-ಸ್ಪೀಡ್ ಟ್ರಾನ್ಸ್‌ಮಿಷನ್‌ ಮತ್ತು ಜನಪ್ರಿಯ 648cc ಟ್ವಿನ್-ಸಿಲಿಂಡರ್ ಎಂಜಿನ್ ಅನ್ನು ಒದಗಿಸುವ ಸಾಧ್ಯತೆಯಿದೆ.

ರಾಯಲ್ ಎನ್‌ಫೀಲ್ಡ್ ಹಿಮಾಲಯನ್ 650: ನೀವು ಹೊಸ ರಾಯಲ್ ಎನ್‌ಫೀಲ್ಡ್ ಬೈಕ್ ಖರೀದಿಸಲು ಯೋಜಿಸುತ್ತಿದ್ದರೆ ಹಿಮಾಲಯನ್ 650 ಸಹ ನಿಮಗೆ ಉತ್ತಮ ಆಯ್ಕೆಯಾಗಿದೆ. ಮುಂದಿನ ವರ್ಷ ಈ ಬೈಕ್ ಅನ್ನು ಪರಿಚಯಿಸಬಹುದು. ಆಂತರಿಕವಾಗಿ 'R2G' ಎಂಬ ಸಂಕೇತನಾಮವನ್ನು ಹೊಂದಿರುವ ರಾಯಲ್ ಎನ್‌ಫೀಲ್ಡ್ ಹಿಮಾಲಯನ್ 650 ಅನ್ನು ಬ್ರ್ಯಾಂಡ್‌ಗಾಗಿ 2025 ರ ಅತಿದೊಡ್ಡ ಬಿಡುಗಡೆ ಎಂದು ಕರೆಯಬಹುದು. ಇಂಟರ್‌ಸೆಪ್ಟರ್‌ನ ಟ್ರೆಲ್ಲಿಸ್ ಫ್ರೇಮ್ ಆಧರಿಸಿದೆ. ಇದು ಭಾರತದಲ್ಲಿ 2025 ರ (ಅಕ್ಟೋಬರ್ - ನವೆಂಬರ್) ಹಬ್ಬದ ಋತುವಿನಲ್ಲಿ ಬಿಡುಗಡೆಯಾಗಲಿದೆ.

ಮಾಹಿತಿ ಪ್ರಕಾರ, USD ಫ್ರಂಟ್ ಫೋರ್ಕ್ಸ್, ಸ್ಪ್ಲಿಟ್-ಸೀಟ್ ಸೆಟಪ್, ಸ್ಪೋಕ್ - ವೀಲ್ಹ್​ಗಳು ಮತ್ತು ಸೈಡ್-ಸ್ವೆಪ್ಟ್ ಎಕ್ಸಾಸ್ಟ್ ಪೈಪ್‌ನಂತಹ ಕೆಲವು ಅಂಶಗಳನ್ನು ಬಹಿರಂಗಪಡಿಸಿವೆ. ಸ್ಟೈಲಿಂಗ್ ಸೂಚನೆಗಳನ್ನು ಹಿಮಾಲಯನ್ 450 ನಿಂದ ಎರವಲು ಪಡೆಯಲಾಗುವುದು ಮತ್ತು ಅದೇ 648cc ಪ್ಯಾರಲಲ್-ಟ್ವಿನ್ ಎಂಜಿನ್ ಅನ್ನು ಹೊಂದಿದೆ. ಹಿಮಾಲಯನ್ 650 ದೇಶದಲ್ಲಿ ಬಿಡುಗಡೆಯಾದ ನಂತರ ಅತ್ಯಂತ ದುಬಾರಿ ರಾಯಲ್ ಎನ್‌ಫೀಲ್ಡ್ ಬೈಕ್ ಆಗಲಿದೆ ಎಂದು ತಿಳಿದು ಬಂದಿದೆ.

2025 ರಾಯಲ್ ಎನ್‌ಫೀಲ್ಡ್ ಇಂಟರ್‌ಸೆಪ್ಟರ್ 650: ರಾಯಲ್ ಎನ್‌ಫೀಲ್ಡ್ ಇಂಟರ್‌ಸೆಪ್ಟರ್ 650 ನ ಅಪ್​ಡೇಟ್ಡ್​ ಆವೃತ್ತಿಯನ್ನು ಸಿದ್ಧಪಡಿಸುತ್ತಿದೆ. ಇದನ್ನು ಪರೀಕ್ಷೆಯ ಹಂತದಲ್ಲಿ ಅನೇಕ ಬಾರಿ ಪರಿಶೀಲಿಸಲಾಗಿದೆ. ಈ ಬೈಕ್​ ಹಲವು ವರ್ಷಗಳಿಂದಲೂ ಇದೆ. ಆದ್ದರಿಂದ ಸ್ಪರ್ಧೆಯಲ್ಲಿ ಜೀವಂತವಾಗಿರಲು ಇದಕ್ಕೆ ಗಣನೀಯವಾದ ಅಪ್​ಡೇಟ್​ ಅಗತ್ಯವಿದೆ. 2025 ಇಂಟರ್ಸೆಪ್ಟರ್ ಅನೇಕ ಕಾಸ್ಮೆಟಿಕ್ ಬದಲಾವಣೆಗಳು ಮತ್ತು ಹೊಸ ವೈಶಿಷ್ಟ್ಯಗಳೊಂದಿಗೆ ಬರಲಿದೆ. ಹೊಸ ಸಸ್ಪೆನ್ಷನ್ ಸೆಟಪ್ ಮತ್ತು ಬ್ರೇಕ್ ಯುನಿಟ್​ಗಳನ್ನು ಕಂಪನಿ ಬಹಿರಂಗಪಡಿಸಿವೆ. ಆದರೆ 648cc ಎಂಜಿನ್ ಅನ್ನು ನಡೆಯುತ್ತಿರುವ ಮಾದರಿಯಿಂದ ಹೊರತರಲಾಗುತ್ತದೆ.

ಓದಿ: ರಫ್ತು ವಿಷಯದಲ್ಲಿ ಭಾರತ ದಾಖಲೆ: ಕೇವಲ ಒಂದೇ ತಿಂಗಳಲ್ಲಿ 20 ಸಾವಿರ ಕೋಟಿಗೂ ಹೆಚ್ಚು ವಹಿವಾಟು!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.