ಕರ್ನಾಟಕ

karnataka

ETV Bharat / state

ಹಾವೇರಿಯಲ್ಲಿ ಹಿಂದೂ-ಮುಸ್ಲಿಮರಿಂದ ಭಾವೈಕ್ಯತೆಯ ಗಣೇಶೋತ್ಸವ - Haveri Ganesha Festival - HAVERI GANESHA FESTIVAL

ಹಾವೇರಿಯ ಕುಡಪಲಿ ಗ್ರಾಮದಲ್ಲಿ ಹಿಂದೂ-ಮುಸ್ಲಿಮರು ಸಂಘ ಕಟ್ಟಿಕೊಂಡು ಪ್ರತೀ ವರ್ಷ ಭಾವೈಕ್ಯತೆಯಿಂದ ಗಣೇಶ ಹಬ್ಬವನ್ನು ಆಚರಿಸಿಕೊಂಡು ಬರುತ್ತಿದ್ದಾರೆ. ಇವರ ಒಗ್ಗಟ್ಟು ಕೋಮು ಸಾಮರಸ್ಯಕ್ಕೊಂದು ಉತ್ತಮ ನಿದರ್ಶನ.

ಮುಸ್ಲಿಂ ಬಾಂಧವರಿಂದ ಗಣೇಶ ಹಬ್ಬ ಆಚರಣೆ
ಹಿಂದೂ ಮುಸ್ಲಿಂ ಭಾವೈಕ್ಯತೆಯ ಗಣೇಶೋತ್ಸವ (ETV Bharat)

By ETV Bharat Karnataka Team

Published : Sep 12, 2024, 9:10 AM IST

ಹಾವೇರಿಯಲ್ಲಿ ಹಿಂದೂ-ಮುಸ್ಲಿಮರಿಂದ ಭಾವೈಕ್ಯತೆಯ ಗಣೇಶೋತ್ಸವ (ETV Bharat)

ಹಾವೇರಿ:ಜಿಲ್ಲೆಯ ರಟ್ಟೀಹಳ್ಳಿ ತಾಲೂಕಿನ ಕುಡುಪಲಿ ಗ್ರಾಮದಲ್ಲಿ ಮುಸ್ಲಿಮರು ಗಣೇಶನನ್ನು ಪ್ರತಿಷ್ಠಾಪಿಸಿ ಪೂಜಿಸುತ್ತಿದ್ದಾರೆ. ಕಳೆದ ಹಲವು ವರ್ಷಗಳಿಂದಲೂ ಮುಸ್ಲಿಮರು ಗಣೇಶನ ಮೂರ್ತಿ ಪ್ರತಿಷ್ಠಾಪಿಸಿ, ಪೂಜೆ ಸಲ್ಲಿಸಿಕೊಂಡು ಬರುತ್ತಿರುವುದು ವಿಶೇಷ.

ಗಜಾನನ ಯುವಕ ಸಂಘ ರಚಿಸಿದ್ದು ಇದರಲ್ಲಿ 10 ಮಂದಿ ಮುಸ್ಲಿಮರು ಮತ್ತು 5 ಮಂದಿ ಹಿಂದೂ ಸದಸ್ಯರಿದ್ದಾರೆ. ಮುಸ್ಲಿಮರು ಗಣೇಶನ ಮೂರ್ತಿ ಪ್ರತಿಷ್ಠಾಪಿಸುತ್ತಾರೆ. ನಂತರ ಮುಸ್ಲಿಮರು ತಮ್ಮ ಸಂಪ್ರದಾಯದಂತೆ ಹಿಂದೂಗಳು ತಮ್ಮ ಸಂಪ್ರದಾಯದಂತೆ ಐದು ದಿನಗಳ ಕಾಲ ಪೂಜೆ ಸಲ್ಲಿಸುತ್ತಾರೆ. ಐದನೇ ದಿನ ನಿಮಜ್ಜನೆ ನಡೆಯುತ್ತದೆ.

ಮಲೆನಾಡಿನಲ್ಲೂ ಭಾವೈಕ್ಯತೆಯ ಗಣೇಶೋತ್ಸವ: ಶಿವಮೊಗ್ಗದ ರಾಗಿಗುಡ್ಡದಲ್ಲಿ ಗಣಪತಿ ಪೆಂಡಲ್‌ಗೆ ಮುಸ್ಲಿಂ ಮುಖಂಡರು ಭೇಟಿ ನೀಡಿ ಪೂಜೆಯಲ್ಲಿ ಭಾಗಿಯಾದರು. ಕಳೆದ ವರ್ಷ ಈದ್ ಮಿಲಾದ್ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆದು ಇಲ್ಲಿ ಅಶಾಂತಿ ಉಂಟಾಗಿತ್ತು. ಕಲ್ಲು ತೂರಾಟದಿಂದ ಕೆಲವು ಮನೆಗಳಿಗೆ ಹಾನಿಯಾಗಿತ್ತು. ಹಲವರು ಗಾಯಗೊಂಡಿದ್ದರು. ಪೊಲೀಸರು ಹಲವರನ್ನು ಬಂಧಿಸಿದ್ದರು. ಈ ಬಾರಿ ಜಿಲ್ಲಾ ಪೊಲೀಸರು ಹಲವು ಸುತ್ತಿನ ಶಾಂತಿ ಸಭೆ ನಡೆಸಿದ್ದರು.

ಮಲೆನಾಡಿನಲ್ಲಿ ಭಾವೈಕ್ಯತೆ ಸಂದೇಶ ಸಾರಿದ ಮುಸ್ಲಿಂ ಮುಖಂಡರು (ETV Bharat)

ಸ್ಥಳೀಯರಾದ ರಾಘವೇಂದ್ರ ಪ್ರತಿಕ್ರಿಯಿಸಿ, "ಹಬ್ಬದ ಯಶಸ್ಸಿನಲ್ಲಿ ನಮ್ಮೆಲ್ಲರ ಸಹಕಾರ ಮುಖ್ಯವಾಗಿರುತ್ತದೆ. ಯಾರೋ ಕೆಲ ಕಿಡಿಗೇಡಿಗಳಿಂದ ಕಳೆದ ಬಾರಿ ಕಹಿ ಘಟನೆ ನಡೆದಿದೆ. ಅವೆಲ್ಲವನ್ನೂ ಮರೆತು ಯಾವುದೇ ವೈಮನಸ್ಸು ಮತ್ತು ಸಮಸ್ಯೆಗಳಿದ್ದಲ್ಲಿ ಬಗೆಹರಿಸಿಕೊಂಡು ಒಟ್ಟಾಗಿ ಸಾಗೋಣ. ಮುಂದಿನ ದಿನಗಳಲ್ಲಿ ಈ ರೀತಿಯ ಘಟನೆಗಳಾಗದಂತೆ ಶ್ರಮಿಸೋಣ. ಸಹೋದರತ್ವದ ಮನೋಭಾವದೊಂದಿಗೆ ಎಲ್ಲ ಧರ್ಮಗಳ ಹಬ್ಬಗಳಲ್ಲಿ ಒಟ್ಟಾಗಿ ಭಾಗವಹಿಸಿ ವಿಜೃಂಭಣೆಯಾಗಿ ಆಚರಿಸೋಣ" ಎಂದರು.

ಮುಸ್ಲಿಂ ಮುಖಂಡ ಸೈಯದ್​ ಮಾತನಾಡಿ, "ಭಾರತ ಹಲವು ವೈವಿಧ್ಯತೆ ಹೊಂದಿರುವ ದೇಶ. ಇಲ್ಲಿ ಅನೇಕ ಧರ್ಮ, ಭಾಷೆಗಳಿವೆ. ಎಲ್ಲರೂ ಒಂದೇ ಎಂಬ ಭಾವನೆ ಇದ್ದರೆ ಎಲ್ಲರೂ ಸುಖವಾಗಿರಬಹುದು" ಎಂದರು.

ರಾಗಿಗುಡ್ಡ ಶಾಂತಿ ಪಡೆ ಸಮಿತಿ ಸದಸ್ಯರು, ಪೊಲೀಸ್ ಅಧಿಕಾರಿ, ಸಿಬ್ಬಂದಿ ಸ್ಥಳದಲ್ಲಿದ್ದರು.

ಇದನ್ನೂ ಓದಿ:ಗಣೇಶ ನಿಮಜ್ಜನ ಮೆರವಣಿಗೆಯಲ್ಲಿ ಮುಸ್ಲಿಂ ಬಾಂಧವರು ಭಾಗಿ: ಬಿಗಿ ಪೊಲೀಸ್ ಬಂದೋಬಸ್ತ್ - Ganesha procession

ABOUT THE AUTHOR

...view details