Hyundai Sales Report 2024: ಹ್ಯುಂಡೈ ಕಂಪನಿ 2025ರ ಮೊದಲ ದಿನ ತನ್ನ ಕಾರು ಮಾರಾಟದ ವಾರ್ಷಿಕ ವರದಿ ಬಿಡುಗಡೆ ಮಾಡಿದೆ. ಇದರಲ್ಲಿ ಕಳೆದ ವರ್ಷ ದೇಶೀಯವಾಗಿ 6 ಲಕ್ಷದ 5 ಸಾವಿರದ 433 ಯುನಿಟ್‌ಗಳು ಮಾರಾಟವಾಗಿರುವುದಾಗಿ ತಿಳಿಸಿದೆ.
ಈ ಮಾರಾಟದೊಂದಿಗೆ ಕಂಪನಿ ಭಾರತೀಯ ವಾಹನೋದ್ಯಮದಲ್ಲಿ ಮೊದಲ ಸ್ಥಾನವನ್ನು ಸಾಧಿಸಿದೆ. ಇದಲ್ಲದೇ ಒಟ್ಟು 7 ಲಕ್ಷದ 64 ಸಾವಿರದ 119 ಯುನಿಟ್‌ಗಳನ್ನು ವಿದೇಶಿ ಮಾರುಕಟ್ಟೆಗೆ ರವಾನಿಸಿದೆ. ಕ್ರೆಟಾ, ವೆನ್ಯೂ, ವೆರ್ನಾ ಮತ್ತು ಎಕ್ಸೆಟರ್ ಗ್ರಾಹಕರನ್ನು ಹೆಚ್ಚಿನ ಸಂಖ್ಯೆಯಲ್ಲಿ ಸೆಳೆದಿರುವ ಕಾರುಗಳು.
ಕಳೆದ ತಿಂಗಳ ಮಾರಾಟವೆಷ್ಟು?: ಕಳೆದ ತಿಂಗಳು (ಡಿಸೆಂಬರ್ 2024) 55 ಸಾವಿರ 78 ಯುನಿಟ್‌ಗಳ ಮಾರಾಟ ದಾಖಲಿಸಿದೆ. ಈ ಪೈಕಿ 42 ಸಾವಿರದ 208 ಯುನಿಟ್ ದೇಶೀಯ ಮಾರುಕಟ್ಟೆಗೆ ಹಾಗೂ 12,870 ಯೂನಿಟ್ ವಿದೇಶಿ ಮಾರುಕಟ್ಟೆಗೆ ರಫ್ತಾಗಿದೆ. ಮಹತ್ವದ ವಿಷಯವೆಂದರೆ, ಹ್ಯುಂಡೈ ಕ್ರೆಟಾ ಗೇಮ್ ಚೇಂಜರ್ ಎಂದು ಸಾಬೀತಾಗಿದೆ. ಕಳೆದ ವರ್ಷ ಒಟ್ಟು 1 ಲಕ್ಷದ 86 ಸಾವಿರದ 919 ಯುನಿಟ್ ಕ್ರೆಟಾ ಮಾರಾಟವಾಗಿತ್ತು.
ಕ್ರೆಟಾ ಹ್ಯುಂಡೈ ಕಂಪನಿಯ ಜನಪ್ರಿಯ ಕಾರು. ಇದರ ಮೂಲ ಮಾದರಿಯ ಬೆಲೆ 11 ಲಕ್ಷ ರೂ.ಯಿಂದ ಪ್ರಾರಂಭವಾಗುತ್ತದೆ. ಟಾಪ್ ಮಾದರಿಯ ಬೆಲೆ 20.30 ಲಕ್ಷ ರೂ ಎಕ್ಸ್ ಶೋರೂಂ ಬೆಲೆ ಇದೆ. ಕ್ರೆಟಾ ಮೂರು 1.5-ಲೀಟರ್ ಎಂಜಿನ್ ರೂಪಾಂತರಗಳೊಂದಿಗೆ ಮಾರುಕಟ್ಟೆಯಲ್ಲಿ ಲಭ್ಯ. ನೈಸರ್ಗಿಕವಾಗಿ ಆಸ್ಪಿರೆಟೆಡ್ ಪೆಟ್ರೋಲ್ ಎಂಜಿನ್, ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳನ್ನು ಹೊಂದಿದೆ.
ಈ ವೈಶಿಷ್ಟ್ಯಗಳು ಕ್ರೆಟಾದಲ್ಲಿ ಲಭ್ಯ: ಪರಿಷ್ಕೃತ ಕ್ರೆಟಾವು 6-ಸ್ಪೀಡ್ ಮ್ಯಾನುವಲ್, ಇಂಟೆಲಿಜೆಂಟ್ ವೇರಿಯಬಲ್ ಟ್ರಾನ್ಸ್‌ಮಿಷನ್ (IVT), 7-ಸ್ಪೀಡ್ ಡ್ಯುಯಲ್ ಕ್ಲಚ್ ಟ್ರಾನ್ಸ್‌ಮಿಷನ್ (DCT) ಮತ್ತು 6-ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮೆಟಿಕ್ ಟ್ರಾನ್ಸ್‌ಮಿಷನ್ ಆಯ್ಕೆಗಳನ್ನು ಹೊಂದಿದೆ. ಹುಂಡೈ ಕ್ರೆಟಾದಲ್ಲಿ ನೀವು ADAS ಲೆವೆಲ್-2, 360 ಡಿಗ್ರಿ ಕ್ಯಾಮೆರಾ, ಪವರ್ಡ್ ಡ್ರೈವರ್ ಸೀಟ್, ವೆಂಟಿಲೇಟೆಡ್ ಸೀಟ್ ಮತ್ತು ಹೆಚ್ಚಿನದ್ದನ್ನು ಪಡೆಯುತ್ತೀರಿ. ಇನ್ಫೋಟೈನ್‌ಮೆಂಟ್ ಸಿಸ್ಟಂ ಹೆಚ್ಚು ಸಂಪರ್ಕಿತ ಕಾರ್ ತಂತ್ರಜ್ಞಾನದೊಂದಿಗೆ ಅಪ್ಡೇಟ್ ಮಾಡಲಾಗಿದೆ.
ಇದನ್ನೂ ಓದಿ: Apple TV+ ಉಚಿತ ಸ್ಟ್ರೀಮಿಂಗ್: ಎಲ್ಲಿಂದ ಎಲ್ಲಿವರೆಗೆ?