IRCTC Madhya Pradesh Jyotirlinga Darshan Package: ಈಗಾಗಲೇ ಹೊಸ ವರ್ಷವನ್ನು ಸಂಭ್ರಮದಿಂದ ಸ್ವಾಗತಿಸಲಾಗಿದೆ. ಅನೇಕರು ಈ ವರ್ಷ ಪೂರ್ತಿ ಖುಷಿ ಖುಷಿಯಾಗಿ ಬದುಕಲು ಬಯಸಿದ್ದಾರೆ. ವರ್ಷದ ಆರಂಭದಲ್ಲಿ ಸ್ನೇಹಿತರು ಮತ್ತು ಕುಟುಂಬದೊಂದಿಗೆ ದೇಶದ ಪ್ರಸಿದ್ಧ ದೇವಾಲಯಗಳಿಗೆ ಭೇಟಿ ನೀಡಲು ಪ್ಲಾನ್ ಮಾಡುತ್ತಿದ್ದಾರೆ. ನೀವೂ ಅಂತಹ ಯೋಜನೆಗಳ ಬಗ್ಗೆ ಯೋಚನೆ ಮಾಡುತ್ತಿದ್ದೀರಾ? ಹಾಗಾದರೆ, ಈ ಹೊಸ ವರ್ಷದ ಹಿನ್ನೆಲೆ ಇಂಡಿಯನ್ ರೈಲ್ವೆ ಕೇಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್ ಒಂದೇ ಪ್ರವಾಸದಲ್ಲಿ ಎರಡು ಜ್ಯೋತಿರ್ಲಿಂಗಗಳ ದರ್ಶನ ಮಾಡಬಹುದು. ಈ ಪ್ರವಾಸದ ಪ್ಯಾಕೇಜ್ ಯಾವುದು? ಟೂರ್ ಪ್ಯಾಕೇಜ್ನ ದರ ಎಷ್ಟು? ಯಾವೆಲ್ಲಾ ಪ್ರವಾಸಿ ತಾಣಗಳು ಒಳಗೊಂಡಿದೆ ಎಂಬುದರ ವಿವರಗಳನ್ನು ತಿಳಿಯೋಣ.
ಮಧ್ಯಪ್ರದೇಶದಲ್ಲಿ ಎರಡು ಜ್ಯೋತಿರ್ಲಿಂಗಗಳಿವೆ. ಒಂದು ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನ ಮತ್ತು ಎರಡನೆಯದು ಓಂಕಾರೇಶ್ವರ ದೇವಸ್ಥಾನ. ಇವೆರಡರ ಜೊತೆಗೆ ಇತರ ದೇವಾಲಯಗಳು ಹಾಗೂ ವಿವಿಧ ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡಬಹುದು. ಐಆರ್ಸಿಟಿಸಿ 'ಮಧ್ಯಪ್ರದೇಶ ಜ್ಯೋತಿರ್ಲಿಂಗ ದರ್ಶನ' ಎಂಬ ಹೆಸರಿನಲ್ಲಿ ಈ ಟೂರ್ ಪ್ಯಾಕೇಜ್ನ್ನು ತಂದಿದೆ. ಈ ಪ್ರವಾಸವು ಒಟ್ಟು ಐದು ರಾತ್ರಿಗಳು ಮತ್ತು ಆರು ಹಗಲುಗಳಾಗಿರುತ್ತದೆ. ಈ ರೈಲು ಪ್ರಯಾಣವು ಪ್ರತಿ ಬುಧವಾರದಂದು ನಿಗದಿಪಡಿಸಿದ ದಿನಾಂಕಗಳಲ್ಲಿ ಲಭ್ಯವಿರುತ್ತದೆ.
ಪ್ರವಾಸದ ಸಂಪೂರ್ಣ ವಿವರ:
1ನೇ ದಿನ: ಸಂಪರ್ಕ ಕ್ರಾಂತಿ ಎಕ್ಸ್‌ಪ್ರೆಸ್ ರೈಲು (ರೈಲು ಸಂಖ್ಯೆ: 12707) ಮೊದಲ ದಿನ ಸಂಜೆ 4:40ಕ್ಕೆ ಕಾಚಿಗುಡದಿಂದ ಹೊರಡುತ್ತದೆ. ಇಡೀ ಪ್ರಯಾಣವು ರಾತ್ರಿ ನಡೆಯುತ್ತದೆ.
2ನೇ ದಿನ: ಎರಡನೇ ದಿನ ಬೆಳಿಗ್ಗೆ 8:15ಕ್ಕೆ ಭೋಪಾಲ್ ರೈಲು ನಿಲ್ದಾಣಕ್ಕೆ ಬಂದು ತಲುಪಲಾಗುವುದು. ಅಲ್ಲಿ ಮೊದಲೇ ಕಾಯ್ದಿರಿಸಿದ ಹೋಟೆಲ್‌ಗೆ ತೆರಳಿ, ಚೆಕ್-ಇನ್ ಮಾಡಿ ಸ್ವಲ್ಪ ಸಮಯ ವಿಶ್ರಾಂತಿ ಪಡೆದುಕೊಳ್ಳಿ. ನಂತರ ಸಾಂಚಿ ಸ್ತೂಪ, ಭೋಜೇಶ್ವರ ಮಹಾದೇವ ದೇವಸ್ಥಾನಕ್ಕೆ ಭೇಟಿ ನೀಡಲಾಗುವುದು, ಮತ್ತೆ ಭೋಪಾಲ್‌ಗೆ ತಲುಪಲಾಗುವುದು. ಸಂಜೆ ಬುಡಕಟ್ಟು ವಸ್ತುಸಂಗ್ರಹಾಲಯಕ್ಕೆ ಭೇಟಿ ಕೊಡಲಾಗುವುದು. ಆ ರಾತ್ರಿ ಭೋಪಾಲ್ನಲ್ಲಿ ಉಳಿದುಕೊಳ್ಳಲಾಗುವುದು.
3ನೇ ದಿನ: ಮೂರನೇ ದಿನ ಉಪಹಾರ ಸೇವಿಸಿ, ಉಜ್ಜಯಿನಿಗೆ ಹೊರಡಲಾಗುವುದು. ಹೋಟೆಲ್‌ನಲ್ಲಿ ಚೆಕ್-ಇನ್ ಮಾಡಿದ ಬಳಿಕ, ಶ್ರೀ ಮಹಾಕಾಳೇಶ್ವರ ದೇವಸ್ಥಾನ, ಹರಸಿದ್ಧಿ ದೇವಸ್ಥಾನ, ಮಂಗಳನಾಥ ದೇವಸ್ಥಾನ, ನವಗ್ರಹ ಶನಿ ಮಂದಿರ, ಶ್ರೀ ಚಿಂತಾಮನ್ ಗಣೇಶ ದೇವಸ್ಥಾನ, ರಾಮ್ ಘಾಟ್, ಉಜ್ಜಯಿನಿಯ ಶ್ರೀ ಗಡ್ಕಾಲಿಕಾ ದೇವಸ್ಥಾನಕ್ಕೆ ಭೇಟಿ ನೀಡಲಾಗುವುದು. ಅಂದು ರಾತ್ರಿ ಉಜ್ಜಯಿನಿಯಲ್ಲಿ ವಾಸ್ತವ್ಯ ಹೂಡಲಾಗುವುದು.
4ನೇ ದಿನ: ನಾಲ್ಕನೇ ದಿನ ಉಪಹಾರ ಮುಗಿಸಿ ಮಹೇಶ್ವರಕ್ಕೆ ತೆರಳಲಾಗುವುದು. ಅಲ್ಲಿ ನೀವು ಅಹಲ್ಯಾದೇವಿ ಕೋಟೆ, ನರ್ಮದಾ ಘಾಟ್‌ಗೆ ಭೇಟಿ ಕೊಡಲಾಗುವುದು. ಅಲ್ಲಿಂದ ಓಂಕಾರೇಶ್ವರಕ್ಕೆ ತೆರಳಲಾಗುವುದು. ಅಲ್ಲಿ ಓಂಕಾರೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ ಬಳಿಕ, ಓಂಕಾರೇಶ್ವರದಲ್ಲಿ ರಾತ್ರಿ ವಾಸ್ತವ್ಯ ಹೂಡಲಾಗುವುದು.
5ನೇ ದಿನ: ಐದನೇ ದಿನ ಉಪಹಾರದ ಬಳಿಕ, ಇಂದೋರ್‌ಗೆ ಹೊರಡಲಾಗುವುದು. ಅಲ್ಲಿ ಲಾಲ್‌ಬಾಗ್ ಅರಮನೆ ಹಾಗೂ ಗಣೇಶ ಮಂದಿರಕ್ಕೆ ಭೇಟಿ ನೀಡಲಾಗುವುದು. ನಂತರ, ಇಂದೋರ್ ರೈಲು ನಿಲ್ದಾಣಕ್ಕೆ ಬರಲಾಗುವುದು. ವಾಪಸ್ ಮರಳುವ ಪ್ರಯಾಣವು (ರೈಲು ಸಂಖ್ಯೆ: 19301) ರಾತ್ರಿ 8ಕ್ಕೆ ಆರಂಭವಾಗುತ್ತದೆ. ಇಡೀ ರಾತ್ರಿ ಪ್ರಯಾಣ ಜರುಗುತ್ತದೆ.
6ನೇ ದಿನ: ಆರನೇ ದಿನ ರಾತ್ರಿ 10ಕ್ಕೆ ಕಾಚಿಗುಡ ರೈಲು ನಿಲ್ದಾಣಕ್ಕೆ ಬಂದು ತಲುಪಿದ ನಂತರ, ಪ್ರವಾಸ ಪೂರ್ಣಗೊಳ್ಳಲಿದೆ.
ಟೂರ್ ಪ್ಯಾಕೇಜ್ ಶುಲ್ಕ:
- 1ರಿಂದ 3 ಪ್ರಯಾಣಿಕರಿಗೆ ಬುಕ್ ಮಾಡಿದರೆ..
- ಕಂಫರ್ಟ್‌ನಲ್ಲಿ ಸಿಂಗಲ್ ಶೇರಿಂಗ್‌ಗೆ (ಒಬ್ಬ ಪ್ರಯಾಣಿಕರಿಗೆ) ₹36,190
- ಡಬಲ್ ಶೇರಿಂಗ್‌ಗೆ ₹20,360
- ಟ್ರಿಪಲ್ ಶೇರಿಂಗ್‌ಗೆ ₹15,880
- 5-11 ವರ್ಷದೊಳಗಿನ ಮಕ್ಕಳು ಹಾಸಿಗೆ ಸಹಿತ ₹12,010 ಹಾಗೂ ಹಾಸಿಗೆ ರಹಿತ ₹10,110 ಪಾವತಿಸಬೇಕು.
- ಸ್ಟ್ಯಾಂಡರ್ಡ್ನಲ್ಲಿ ಸಿಂಗಲ್ ಶೇರಿಂಗ್‌ಗೆ ₹33,680
- ಡಬಲ್ ಶೇರಿಂಗ್ ₹17,850
- ಟ್ರಿಪಲ್ ಹಂಚಿಕೆಗೆ ₹13,380
- 5-11 ವರ್ಷದೊಳಗಿನ ಮಕ್ಕಳಿಗೆ ಹಾಸಿಗೆ ಸಹಿತ ₹9,500 ಮತ್ತು ಹಾಸಿಗೆ ರಹಿತ ₹7,600 ಪಾವತಿಸಬೇಕು.
- ನಾಲ್ಕರಿಂದ ಆರು ಜನರು ಒಟ್ಟಿಗೆ ಬುಕ್ ಮಾಡಿದರೆ ದರ ಕಡಿಮೆಯಾಗುತ್ತದೆ.
- ಕಂಫರ್ಟ್‌ನಲ್ಲಿ ಡಬಲ್ ಶೇರಿಂಗ್‌ಗೆ ₹16,730
- ಟ್ರಿಪಲ್ ಶೇರಿಂಗ್‌ಗೆ ₹14,330
- 5-11 ವರ್ಷದೊಳಗಿನ ಮಕ್ಕಳಿಗೆ ಹಾಸಿಗೆ ಸಹಿತ ₹12,010, ವಿತ್ ಔಟ್ ಬೆಡ್ ₹10,110 ಪಾವತಿಸಬೇಕು.
- ಸ್ಟ್ಯಾಂಡರ್ಡ್ನಲ್ಲಿ ಡಬಲ್ ಹಂಚಿಕೆ ₹14,220
- ಟ್ರಿಪಲ್ ಹಂಚಿಕೆಗೆ ₹11,820
- 5-11 ವರ್ಷದೊಳಗಿನ ಮಕ್ಕಳಿಗೆ ಹಾಸಿಗೆ ಸಹಿತ ₹9,500 ಹಾಗೂ ₹7,600 ಪಾವತಿಸಬೇಕು.
ಪ್ಯಾಕೇಜ್ನಲ್ಲಿರುವ ಸೌಲಭ್ಯಗಳು:
- ರೈಲು ಟಿಕೆಟ್ಗಳು (ಹೈದರಾಬಾದ್ - ಭೋಪಾಲ್/ ಇಂಧೋರ್ - ಹೈದರಾಬಾದ್)
- ಪ್ಯಾಕೇಜ್ ಪ್ರಕಾರ ಸ್ಥಳ ವೀಕ್ಷಿಸುವ ವಾಹನ
- ಹೋಟೆಲ್ ವಸತಿ
- ಉಪಹಾರ
- ಪ್ರಯಾಣ ವಿಮೆ
- ಪ್ರಸ್ತುತ ಈ ಪ್ರವಾಸವು ಜನವರಿ 8, 15, 22 ಮತ್ತು 29 ರಂದು ಲಭ್ಯವಿದೆ.
- ಈ ಪ್ರವಾಸದ ಟಿಕೆಟ್ ಬುಕ್ಕಿಂಗ್ ಹಾಗೂ ಇತರ ವಿವರಗಳಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.
ಹೆಚ್ಚಿನ ಮಾಹಿತಿ ಈ ವೆಬ್ಸೈಟ್ನ್ನು ವೀಕ್ಷಿಸಬಹುದು: https://www.irctctourism.com/tourpackageBooking?packageCode=SHR097
ಇದನ್ನೂ ಓದಿ: ಇಂಡಿಯಾ ಗೇಟ್, ತಾಜ್ ಮಹಲ್ ಸೇರಿ ವಿವಿಧ ತಾಣಗಳ ವೀಕ್ಷಿಸುವ ಅವಕಾಶ; IRCTCಯಿಂದ ಕಡಿಮೆ ದರದಲ್ಲಿ ದೆಹಲಿಗೆ ಸೂಪರ್ ಟೂರ್