ETV Bharat / state

ಹೊಸ ವರ್ಷದಂದು ಲೋಕಾಯುಕ್ತ ದಾಳಿ: ಲಂಚ ಪಡೆಯುತ್ತಿದ್ದ ಇಬ್ಬರು ಅಧಿಕಾರಿಗಳು‌ ಬಲೆಗೆ - LOKAYUKTA POLICE RAID

ಗುತ್ತಿಗೆದಾರನೊಬ್ಬನಿಂದ ಲಂಚ ಪಡೆಯುತ್ತಿದ್ದ ಇಬ್ಬರು ಅಧಿಕಾರಿಗಳನ್ನು ಲೋಕಾಯುಕ್ತ ಅಧಿಕಾರಿಗಳು ಬಂಧಿಸಿದ್ದಾರೆ.

LOKAYUKTA POLICE RAID
ಲೋಕಾಯುಕ್ತ ಕಚೇರಿ (ETV Bharat)
author img

By ETV Bharat Karnataka Team

Published : Jan 2, 2025, 11:36 AM IST

ಶಿವಮೊಗ್ಗ: ಹೊಸ ವರ್ಷದ ದಿನ ದಾಳಿ ನಡೆಸಿದ ಶಿವಮೊಗ್ಗ ಲೋಕಾಯುಕ್ತ ಪೊಲೀಸರು, ಗುತ್ತಿಗೆದಾರನೊಬ್ಬನಿಂದ 1.20 ರೂ. ಲಂಚ ಪಡೆಯುತ್ತಿದ್ದ ಇಬ್ಬರು ಅಧಿಕಾರಿಗಳನ್ನು ಬಂಧಿಸಿದ್ದಾರೆ.

ಭದ್ರಾ ಅಣೆಕಟ್ಟೆಯ ಗೊಂದಿ ಬಲದಂಡೆ ನಾಲೆಯ ಸಿಲ್ಟ್ ತೆಗೆಯುವ ಕಾಮಗಾರಿಯ ಟೆಂಡರ್​ ತಮಗೆ ಲಭಿಸಿದ್ದು, ಕಾಮಗಾರಿ 2024ರ ಜನವರಿಯಲ್ಲಿ ಪೂರ್ಣಗೊಂಡಿತ್ತು. ಆದರೆ, ಟೆಂಡರ್‌ ಹಣ 9,36,999 ಲಕ್ಷ ರೂ. ಗುತ್ತಿಗೆದಾರರಿಗೆ ಮಂಜೂರಾಗಿರಲಿಲ್ಲ. ಹಾಗಾಗಿ, ಮಂಜೂರಾತಿಗಾಗಿ ಹಲವು ಬಾರಿ ಮನವಿ ಮಾಡಿದ್ದೆ. ಕಳೆದ ಡಿ.27ರಂದು ನೀರಾವರಿ ನಿಗಮದ ಸೆಕ್ಷನ್‌ ಆಫೀಸರ್‌ ಕೊಟ್ರಪ್ಪ ಬಿಲ್‌ ಮಂಜೂರಾಗಬೇಕಿದ್ದರೆ 1.20 ಲಕ್ಷ ರೂ. ಹಣ ನೀಡುವಂತೆ ಬೇಡಿಕೆಯಿಟ್ಟಿದ್ದರು ಎಂದು ಬಳ್ಳಾರಿಯ ಗುತ್ತಿಗೆದಾರ ರವಿ ಎಂಬವರು ಲೋಕಾಯುಕ್ತಕ್ಕೆ ದೂರು ನೀಡಿದ್ದರು.

ಈ ದೂರಿನನ್ವಯ ಬುಧವಾರ ಕೊಟ್ರಪ್ಪ ಅವರ ಕಚೇರಿಯ ಲೈಟ್ ಮಜದೂರ್ ಅರವಿಂದ್ ಎಂಬವರಿಂದ 1.20 ಲಕ್ಷ ರೂ. ಹಣ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಹಣದ ಜೊತೆಗೆ ಕೊಟ್ರಪ್ಪ ಹಾಗೂ ಅರವಿಂದ್ ಎಂಬಿಬ್ಬರನ್ನು ಬಂಧಿಸಿದ್ದಾರೆ.

ಲೋಕಾಯುಕ್ತ ಪೊಲೀಸ್ ಇನ್ಸ್​ಪೆಕ್ಟರ್ ವೀರಭದ್ರಪ್ಪ ಕುಸಲಾಪುರ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.

ಲೋಕಾಯುಕ್ತ ಪೊಲೀಸ್ ಅಧಿಕ್ಷಕ ಮಂಜುನಾಥ ಚೌಧರಿ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ ಇನ್ಸ್‌ಪೆಕ್ಟರ್ ಸುರೇಶ್, ಪ್ರಕಾಶ್, ಸಿಬ್ಬಂದಿಯಾದ ಯೋಗೀಶ್, ಟೀಕಪ್ಪ, ಸುರೇಂದ್ರ, ಮಂಜುನಾಥ, ಶ್ರೀಕಾಂತ್ ಸೇರಿ ಇತರರಿದ್ದರು.

ಇದನ್ನೂ ಓದಿ: ಶಿವಮೊಗ್ಗ: ಇ-ಖಾತೆ ಮಾಡಿಕೊಡಲು 5 ಸಾವಿರ ರೂ‌. ಲಂಚ, ರೆಡ್​ಹ್ಯಾಂಡಾಗಿ ಲೋಕಾ ಬಲೆಗೆ ಬಿದ್ದ ಪಿಡಿಒ - LOKAYUKTA TRAP

ETV Bharat Logo

Copyright © 2025 Ushodaya Enterprises Pvt. Ltd., All Rights Reserved.