ETV Bharat / technology

ವಾರ್ಷಿಕ-ಲೈಫ್​ಟೈಮ್​ ಟೋಲ್​ ಪಾಸಗಳನ್ನು ಪರಿಚಯಿಸಲು ಕೇಂದ್ರ ಚಿಂತನೆ: ಇದರಿಂದ ಎಷ್ಟೆಲ್ಲ ಲಾಭಗಳಿವೆ ಗೊತ್ತಾ! - ANNUAL AND LIFETIME TOLL PASSES

Annual And Lifetime Toll Passes: ಟೋಲ್​ಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಆದಷ್ಟು ಬೇಗ ಮಹತ್ವದ ನಿರ್ಧಾರ ಕೈಗೊಳ್ಳಲಿದೆ. ಈ ನಿಯಮದಿಂದ ವಾಹನ ಸವಾರರು ಟೋಲ್​ ಬಗೆಗಿನ ಚಿಂತನೆ ಕಡಿಮೆಯಾಗಬಹುದಾಗಿದೆ.

CENTRAL GOVERNMENT  NATIONAL HIGHWAYS AND EXPRESSWAYS  FASTAG  TOLL PASSES
ವಾರ್ಷಿಕ-ಲೈಫ್​ಟೈಮ್​ ಟೋಲ್​ ಪಾಸ್​ (ETV Bharat)
author img

By ETV Bharat Tech Team

Published : Feb 6, 2025, 7:26 PM IST

Annual And Lifetime Toll Passes : ಟೋಲ್​ಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಹೊಸ ನಿಯಮ ತರಲು ಚಿಂತನೆ ನಡೆಸುತ್ತಿದೆ. ಒಂದು ವೇಳೆ ಈ ಹೊಸ ನಿಯಮ ಜಾರಿಗೆ ಬಂದ್ರೆ, ಹೆದ್ದಾರಿಗಳು ಮತ್ತು ಎಕ್ಸ್‌ಪ್ರೆಸ್‌ವೇಗಳ ಟೋಲ್​ಗೇಟ್​ ಬಳಿ ವಾಹನಗಳ ಸರತಿ ಸಾಲುಗಳು ಅಥವಾ ದಟ್ಟಣೆ ಇರುವುದಿಲ್ಲ. ಅಷ್ಟೇ ಅಲ್ಲ, ಫಾಸ್ಟ್‌ಟ್ಯಾಗ್ ಕಾರ್ಡ್‌ನಿಂದ ಪದೇ ಪದೇ ಹಣವನ್ನು ಕಡಿತಗೊಳಿಸಲಾಗುವುದಿಲ್ಲ.

ಇನ್ನು ಹೊಸ ನಿಮಯದ ಪ್ರಕಾರ ಸರ್ಕಾರವು ಖಾಸಗಿ ವಾಹನಗಳಿಗೆ ಟೋಲ್ ಪಾಸ್‌ಗಳನ್ನು ಪರಿಚಯಿಸಬಹುದಾಗಿದೆ. ಮಾಹಿತಿ ಪ್ರಕಾರ, ಈ ಟೋಲ್ ಪಾಸ್ ಬಂದ ನಂತರ ಜನರು ವರ್ಷಕ್ಕೊಮ್ಮೆ ಕೇವಲ 3,000 ರೂ. ಪಾವತಿಸುವ ಮೂಲಕ ಎಲ್ಲಿ ಬೇಕಾದರಲ್ಲಿ ಪ್ರಯಾಣಿಸಬಹುದಾಗಿದೆ. ಇದರ ಜೊತೆ ಸರ್ಕಾರ ಲೈಫ್​ಟೈಮ್​ ಪಾಸ್ ನೀಡುವ ಬಗ್ಗೆಯೂ ಆಲೋಚಿಸುತ್ತಿದೆ.

ಹೇಗಿರುತ್ತೆ ಹೊಸ ಫಾಸ್ಟ್‌ಟ್ಯಾಗ್ ನಿಯಮ ? ಒಂದೇ ಬಾರಿ ಹಣ ಪಾವತಿಸುವ ಮೂಲಕ ಇಡೀ ವರ್ಷಕ್ಕೆ ಟೋಲ್ ಪಾಸ್‌ಗಳನ್ನು ನೀಡಲು ಕೇಂದ್ರ ಸರ್ಕಾರ ಪ್ರಸ್ತಾಪಿಸಿದೆ. ವರ್ಷಕ್ಕೊಮ್ಮೆ ಕೇವಲ 3 ಸಾವಿರ ರೂಪಾಯಿ ಠೇವಣಿ ಇಡುವುದರಿಂದ ಯಾವುದೇ ರಾಷ್ಟ್ರೀಯ ಹೆದ್ದಾರಿ ಮತ್ತು ಎಕ್ಸ್‌ಪ್ರೆಸ್‌ವೇಯಲ್ಲಿ ವಾಹನವನ್ನು ತೆಗೆದುಕೊಂಡು ಹೋಗಲು ಟೋಲ್ ಪಾವತಿಸುವ ಅವಶ್ಯಕತೆಯಿಲ್ಲ. ಈ ಪ್ರಸ್ತಾವನೆಯು ಟೋಲ್ ಶುಲ್ಕವನ್ನು ಅಗ್ಗಗೊಳಿಸುವುದಲ್ಲದೆ, ಟೋಲ್ ಗೇಟ್‌ನಲ್ಲಿ ಸಂಚಾರವನ್ನು ಮತ್ತಷ್ಟು ಸುಲಭಗೊಳಿಸುತ್ತದೆ.

ಇದಲ್ಲದೇ ಸರ್ಕಾರವು ಕೇವಲ ಒಂದು ವರ್ಷಕ್ಕೆ ಮಾತ್ರವಲ್ಲದೆ, ಲೈಫ್​​ಟೈಮ್​ ಟೋಲ್ ಪಾಸ್ ಅನ್ನು ಪರಿಚಯಿಸುವ ಬಗ್ಗೆ ಯೋಚಿಸುತ್ತಿದೆ. 30 ಸಾವಿರ ರೂ.ಗಳನ್ನು ಒಮ್ಮೆ ಪಾವತಿಸಿದರೆ 15 ವರ್ಷಗಳವರೆಗೆ ಟೋಲ್ ಪಾಸ್ ಸೌಲಭ್ಯ ದೊರೆಯಲಿದೆ. ಈ ಟೋಲ್ ಪಾಸ್ ನಿಯಮದ ಮೂಲಕ ಭಾರತ ಸರ್ಕಾರವು ಟೋಲ್ ಸಂಗ್ರಹವನ್ನು ಸುಲಭಗೊಳಿಸಲು ಬಯಸುತ್ತದೆ. ಈ ಹೊಸ ನಿಯಮ ಜಾರಿಗೆ ಬಂದ ಬಳಿಕ ಟೋಲ್ ಬೂತ್‌ಗಳಲ್ಲಿ ವಾಹನಗಳ ದೀರ್ಘ ಸರತಿ ಸಾಲುಗಳು ಸಹ ನಿಲ್ಲುತ್ತವೆ ಅಥವಾ ವಾಹನ ದಟ್ಟಣೆಯೂ ಕಂಡು ಬರುವುದಿಲ್ಲ.

ನಿತಿನ್ ಗಡ್ಕರಿ ಹೇಳಿದ್ದು ಹೀಗೆ : ಖಾಸಗಿ ವಾಹನಗಳಿಂದ ಟೋಲ್ ಸಂಗ್ರಹಿಸಲು ಮಾಸಿಕ ಮತ್ತು ವಾರ್ಷಿಕ ಟೋಲ್ ಪಾಸ್‌ಗಳ ಸೌಲಭ್ಯವನ್ನು ಸರ್ಕಾರ ಒದಗಿಸಬಹುದು. ಒಟ್ಟು ಟೋಲ್ ಸಂಗ್ರಹದ ಶೇಕಡಾ 26 ರಷ್ಟು ಖಾಸಗಿ ವಾಹನಗಳಿಂದಲೇ ಬರುತ್ತದೆ. ಆದರೆ ಟೋಲ್ ಸಂಗ್ರಹದ ಶೇ. 74 ರಷ್ಟು ವಾಣಿಜ್ಯ ವಾಹನಗಳಿಂದಲೇ ಆಗುತ್ತದೆ ಎಂದು ರಸ್ತೆ ಮತ್ತು ಸಾರಿಗೆ ಸಚಿವ ನಿತಿನ್ ಗಡ್ಕರಿ ಕಳೆದ ತಿಂಗಳು ಹೇಳಿದ್ದರು.

ಕೇಂದ್ರ ಸರ್ಕಾರ ಈ ನಿಯಮಗಳನ್ನು ಜಾರಿಗೊಳಿಸಿದರೆ.. ಫಾಸ್ಟ್‌ಟ್ಯಾಗ್ ಖಾತೆದಾರರು ಮಾಸಿಕ ಮತ್ತು ವಾರ್ಷಿಕ ಟೋಲ್ ಪಾಸ್ ಯೋಜನೆಯ ಪ್ರಕಾರ ಅನ್​ಲಿಮಿಟೆಡ್​ ಎಂಟ್ರಿ ಪಡೆಯಬಹುದು, ಯಾವುದೇ ರಾಷ್ಟ್ರೀಯ ಹೆದ್ದಾರಿ ಮತ್ತು ಎಕ್ಸ್‌ಪ್ರೆಸ್‌ವೇಯಲ್ಲಿ ಅಡೆತಡೆಯಿಲ್ಲದೆ ಚಾಲನೆ ಮಾಡಲು ಅನುವು ಮಾಡಿಕೊಡುತ್ತದೆ.

ಓದಿ: ಪೆಸಿಫಿಕ್​ ಮಹಾಸಾಗರ ಕಾಣುವಂತೆ ಸೆಲ್ಫಿ ಕ್ಲಿಕ್ಕಿಸಿಕೊಂಡ ಸುನೀತಾ ವಿಲಿಯಮ್ಸ್​!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.