ಸುಬ್ರಹ್ಮಣ್ಯ (ದಕ್ಷಿಣ ಕನ್ನಡ): ಕನ್ನಡ ಚಿತ್ರರಂಗದ ಖ್ಯಾತ, ಹಿರಿಯ ನಟ ದೇವರಾಜ್ ಕುಟುಂಬ ಇಂದು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಪತ್ನಿ, ತಮ್ಮಿಬ್ಬರು ಮಕ್ಕಳು ಮತ್ತು ಸೊಸೆಯೊಂದಿಗೆ ಸುಬ್ರಹ್ಮಣ್ಯ ಸನ್ನಿಧಿಗೆ ಭೇಟಿ ಕೊಟ್ಟು, ದೇವರ ದರ್ಶನ ಮಾಡಿ ಪ್ರಸಾದ ಸ್ವೀಕರಿಸಿದರು.
ಇದನ್ನೂ ಓದಿ: ಪ್ರಶಾಂತ್ ನೀಲ್ ಸಿನಿಮಾದಲ್ಲಿ ಮಲಯಾಳಂ ನಟ ಟೊವಿನೋ ಥಾಮಸ್: ಮಂಗಳೂರಿನಲ್ಲಿ ಶೂಟಿಂಗ್
ದೇವರಾಜ್ ಕುಟುಂಬಸ್ಥರನ್ನು ಶ್ರೀ ದೇವಳದ ಶಿಷ್ಟಾಚಾರ ಅಧಿಕಾರಿ ಜಯರಾಮ್ ರಾವ್ ಅವರು ದೇಗುಲದ ಪರವಾಗಿ ಬರಮಾಡಿಕೊಂಡರು. ಈ ಸಂದರ್ಭದಲ್ಲಿ ಕಡಬ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಸುದೀರ್ ಕುಮಾರ್ ಶೆಟ್ಟಿ, ಸುಬ್ರಹ್ಮಣ್ಯದ ರಾಜಕೀಯ ಮುಖಂಡರಾದ ಗೋಪಾಲ ಎಣ್ಣೆಮಜಲ್, ಕಿಶೋರ್ ಕುಮಾರ್ ಅರಂಪಾಡಿ, ಶಿವರಾಮ ರೈ, ಮಾಸ್ಟರ್ ಪ್ಲಾನ್ ಸಮಿತಿಯ ಲೋಲಾಕ್ಷ ಮತ್ತಿತರರು ಉಪಸ್ಥಿತರಿದ್ದರು.
ಇದನ್ನೂ ಓದಿ: 75 ರೂಪಾಯಿ ಸಂಭಾವನೆಗೆ ಡ್ಯಾನ್ಸರ್ ಆಗಿದ್ದ ಇವರ ಈಗಿನ ಆಸ್ತಿ 2,900 ಕೋಟಿ ರೂ.ಗೂ ಹೆಚ್ಚು!
ದೇವರಾಜ್ ಪುತ್ರ ಪ್ರಜ್ವಲ್ ದೇವರಾಜ್ ಸರಣಿ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. 2025ರ ಬಹುನಿರೀಕ್ಷಿತ ಚಿತ್ರಗಳಲ್ಲಿ ಅವರ ಕರಾವಳಿ ಕೂಡಾ ಒಂದು. ಈ ಸಿನಿಮಾ ಈಗಾಗಲೇ ಕನ್ನಡ ಚಿತ್ರರಂಗದಲ್ಲಿ ಗಮನ ಸೆಳೆದಿದೆ. ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಮತ್ತು ನಿರ್ದೇಶಕ ಗುರುದತ್ ಗಾಣಿಗ ಕಾಂಬಿನೇಷನ್ನ ಈ ಸಿನಿಮಾ ಮೇಲೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆಗಳನ್ನಿಟ್ಟುಕೊಂಡಿದ್ದಾರೆ.
![Devaraj family](https://etvbharatimages.akamaized.net/etvbharat/prod-images/06-02-2025/kn-dk-01-devarajvisit-av-pho-kac10008_06022025172729_0602f_1738843049_47.jpg)
![Devaraj family](https://etvbharatimages.akamaized.net/etvbharat/prod-images/06-02-2025/23487792_thumbnai.jpg)