India Won The Match: ಶುಭ್ಮನ್ ಗಿಲ್ ಅವರ 87 ರನ್‌ಗಳ ಅಮೋಘ ಪ್ರದರ್ಶನದಿಂದ ಭಾರತ ತಂಡ ಆಂಗ್ಲ ವಿರುದ್ಧ ಮೊದಲ ಏಕದಿನ ಪಂದ್ಯವನ್ನು ತನ್ನದಾಗಿಸಿಕೊಂಡಿದೆ. ಟೀಂ ಇಂಡಿಯಾ ಪಂದ್ಯದಲ್ಲಿ ಇಂಗ್ಲೆಂಡ್ ಅನ್ನು 4 ವಿಕೆಟ್‌ಗಳಿಂದ ಸೋಲಿಸಿತು.
ಭಾರತಕ್ಕೆ ಭರ್ಜರಿ ಗೆಲುವು : ನಾಗ್ಪುರದ ವಿದರ್ಭ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಈ ಪಂದ್ಯದಲ್ಲಿ ಇಂಗ್ಲೆಂಡ್ ನಾಯಕ ಜೋಸ್ ಬಟ್ಲರ್ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದರು. ಮೊದಲು ಬ್ಯಾಟಿಂಗ್ ಮಾಡಿದ ಪ್ರವಾಸಿ ತಂಡ 47.4 ಓವರ್‌ಗಳಲ್ಲಿ 248 ರನ್‌ಗಳನ್ನು ಮಾತ್ರ ಗಳಿಸಲು ಶಕ್ತವಾಯಿತು. ಇದಕ್ಕೆ ಉತ್ತರವಾಗಿ ಭಾರತ ತಂಡ 38.4 ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 251 ರನ್ ಬಾರಿಸುವ ಮೂಲಕ ಸರಣಿಯಲ್ಲಿ 1-0 ಮುನ್ನಡೆ ಕಾಯ್ದುಕೊಂಡಿದೆ.
ಗಿಲ್ ಅಬ್ಬರ : ಇನ್ನು ಈ ಪಂದ್ಯದಲ್ಲಿ ಗಿಲ್ ಅಬ್ಬರಿಸಿದ್ದಾರೆ. ಕೇವಲ 96 ಎಸೆತಕ್ಕೆ 87 ರನ್ಗಳಿಸುವ ಮೂಲಕ ಇಂಗ್ಲೆಂಡ್ ಬೌಲರ್ಗಳಿಗೆ ಬೆವರಿಳಿಸಿದರು. ಗಿಲ್ ಈ ಪಂದ್ಯದಲ್ಲಿ 14 ಬೌಂಡರಿಗಳನ್ನು ಬಾರಿಸಿದ್ದು, ಅವರ ಬ್ಯಾಟ್ನಿಂದ ಒಂದೇ ಒಂದು ಸಿಕ್ಸ್ ಬಂದಿಲ್ಲ. ಇದರಿಂದ ಅಭಿಮಾನಿಗಳಿಗೆ ಕೊಂಚ ಬೇಸರ ಆಗಿದೆ.
ಮೂವರು ಅರ್ಧ ಶತಕ : ಇನ್ನು ಈ ಪಂದ್ಯದಲ್ಲಿ ಶುಭ್ಮನ್ ಗಿಲ್ ಜೊತೆ ಇನ್ನಿಬ್ಬರು ಸಖತ್ ಬ್ಯಾಟಿಂಗ್ ಪ್ರದರ್ಶನ ತೋರಿಸಿದ್ದಾರೆ. ಅವರು ಸಹ ಅರ್ಧ ಶತಕ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಕ್ಷರ್ ಪಟೇಲ್ ಮತ್ತು ಶ್ರೇಯಸ್ ಅಯ್ಯರ್ ಇಂಗ್ಲೆಂಡ್ ಬೌಲರ್ಗಳನ್ನು ಸಮರ್ಥವಾಗಿ ಎದುರಿಸಿ ಅರ್ಧ ಶತಕ ಗಳಿಸಿದರು.
ಸಿಂಗಲ್ ಡಿಜಿಟ್ಗೆ ಕನ್ನಡಿಗ ಔಟ್ : ಇನ್ನು ಕನ್ನಡಿಗ ಕೆಎಲ್ ರಾಹುಲ್ ಕೇವಲ ಸಿಂಗಲ್ ಡಿಜಿಟ್ಗೆ ಔಟ್ ಆಗುವ ಮೂಲಕ ಕ್ರಿಕೆಟ್ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದಾರೆ. ಕೆಎಲ್ ರಾಹುಲ್ 9 ಬಾಲ್ಗೆ ಕೇವಲ ಎರಡು ಗಳಿಸಿದ್ದು, ಆದಿಲ್ ರಶೀದ್ ಬೌಲಿಂಗ್ನಲ್ಲಿ ಅವರಿಗೆ ಕ್ಯಾಚ್ ನೀಡಿ ಪೆವಿಲಿಯನ್ ಹಾದಿ ಹಿಡಿದರು.
ಒಟ್ನಲ್ಲಿ ಭಾರತ ತಂಡ ಪರ ಯಶಸ್ವಿ ಜೈಸ್ವಾಲ್ 15 ರನ್, ನಾಯಕ ರೋಹಿತ್ ಶರ್ಮಾ 2 ರನ್, ಶುಭ್ಮನ್ ಗಿಲ್ 87 ರನ್, ಶ್ರೇಯಸ್ ಅಯ್ಯರ್ 59 ರನ್, ಅಕ್ಷರ್ ಪಟೇಲ್ 52 ರನ್, ಕೆಎಲ್ ರಾಹುಲ್ 2 ರನ್.. ಇನ್ನು ಹಾರ್ದಿಕ್ ಪಾಂಡ್ಯ 9 ರನ್ ಮತ್ತು ರವೀಂದ್ರ ಜಡೇಜಾ 12 ರನ್ಗಳಿಸಿ ಅಜೇಯರಾಗಿ ಉಳಿದರು. ಮತ್ತೆ ಇಂಗ್ಲೆಂಡ್ ಪರ ಸಾಕಿಬ್ ಮಹಮೂದ್ ಮತ್ತ ಆದಿಲ್ ರಶೀದ್ ತಲಾ ಎರಡು ವಿಕೆಟ್ ಪಡೆದ್ರೆ, ಜೋಫ್ರಾ ಆರ್ಚರ್ ಮತ್ತು ಜಾಕೋಬ್ ಬೆಥೆಲ್ ತಲಾ ಒಂದೊಂದು ವಿಕೆಟ್ ಉರುಳಿಸಿದರು.
ಓದಿ: ಟೆಸ್ಟ್, ಟಿ20, ಐಪಿಎಲ್ನಲ್ಲಿ ‘ಯಶಸ್ವಿ’ ಪ್ರದರ್ಶನ! ಪಾದಾರ್ಪಣೆ ಪಂದ್ಯದಲ್ಲೇ ಅಲ್ಪ ಮೊತ್ತಕ್ಕೆ ಕುಸಿದ ಜೈಸ್ವಾಲ್