ಕರ್ನಾಟಕ

karnataka

ETV Bharat / state

ಬಿಜೆಪಿ ಎಂದರೆ ಗೊಂದಲ ಸೃಷ್ಟಿಸುವವರು: ಎಂಎಲ್​ಸಿ ಹೆಚ್.ವಿಶ್ವನಾಥ್ - ಬಿಜೆಪಿ

ಬಿಜೆಪಿಯವರು ಜಾತಿ, ಧರ್ಮ ಒಡೆಯುವವರು, ಗೊಂದಲ ಸೃಷ್ಟಿಸುವವರು ಎಂದು ಎಂಎಲ್​ಸಿ ಹೆಚ್.ವಿಶ್ವನಾಥ್ ಟೀಕಿಸಿದ್ದಾರೆ.

ಎಂಎಲ್​ಸಿ ಹೆಚ್ ವಿಶ್ವನಾಥ್
ಎಂಎಲ್​ಸಿ ಹೆಚ್ ವಿಶ್ವನಾಥ್

By ETV Bharat Karnataka Team

Published : Feb 9, 2024, 3:56 PM IST

ಎಂಎಲ್​ಸಿ ಹೆಚ್.ವಿಶ್ವನಾಥ್ ಹೇಳಿಕೆ

ಮೈಸೂರು: ಬಿಜೆಪಿಯವರು ಎಂದರೆ ಗೊಂದಲ ಸೃಷ್ಟಿ ಮಾಡುವವರು. ಜಾತಿ, ಧರ್ಮಗಳನ್ನು ಒಡೆಯುವವರು. ಇದರ ಜೊತೆಗೆ ಒಬ್ಬರ ಮೇಲೊಬ್ಬರನ್ನು ಎತ್ತಿ ಕಟ್ಟುವವರು. ಸಾಧ್ಯವಾದಷ್ಟು ಸುಳ್ಳು ಹೇಳುವವರು ಎಂದು ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ವಾಗ್ದಾಳಿ ನಡೆಸಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿ, ಚುನಾವಣೆ ಹತ್ತಿರ ಬರುತ್ತಿದ್ದಂತೆ ಏನೇನು ಆಗುತ್ತದೋ ಗೊತ್ತಾಗುತ್ತಿಲ್ಲ. ದೇಶದಲ್ಲಿ ಅಭಿವೃದ್ಧಿ ಆಡಳಿತದ ಬಗ್ಗೆ ಯಾರೂ ಮಾತನಾಡುತ್ತಿಲ್ಲ ಎಂದು ಹೇಳಿದ್ದಾರೆ.

ನಮ್ಮೆದುರು ಇರುವ ಸತ್ಯವನ್ನು ಸುಳ್ಳು ಎಂದು ಹೇಳುವ ಕೆಲಸವನ್ನು ಬಿಜೆಪಿಯವರು ಮಾಡುತ್ತಾರೆ. ಮಂಡ್ಯದಲ್ಲಿ ಇರುವವರು ಬಹಳ ಇನೋಸೆಂಟ್ ಜನಗಳು, ರೈತರು. ಅಲ್ಲಿ ಸಾಹುಕಾರ್ ಚನ್ನಯ್ಯನವರು, ಚೌಡಯ್ಯನವರು, ಮಹದೇವಯ್ಯನವರು ಶಾಂತಿಯುತವಾಗಿ ಆಡಳಿತ ನಡೆಸಿದ್ದಾರೆ. ಆದರೆ ಇಂದು ಮಂಡ್ಯವನ್ನು ಹೊತ್ತಿ ಉರಿಸುತ್ತಿದ್ದಾರೆ. ಆ ಮೂಲಕ ಮೈ ಕಾಯಿಸಿಕೊಳ್ಳಲು ತಯಾರಾಗಿದ್ದಾರೆ. ಮಂಡ್ಯದ ಜನರು ಬಿಜೆಪಿಯವರಿಗೆ ಓಟು ಹಾಕುತ್ತಾರೆ ಎಂಬುದು ಸುಳ್ಳು ಎಂದರು.

ಟ್ಯಾಕ್ಸ್ ಪೇಯರ್ ವಿಷಯದಲ್ಲಿ ಸಾಕಷ್ಟು ಸುಳ್ಳು ಹೇಳುತ್ತಾರೆ. ಅದು ದೇಶದ ಅತ್ಯುನ್ನತ ಸ್ಥಾನವಾದ ಸದನದಲ್ಲಿ. ಮೋದಿಯವರೇ ಸುಳ್ಳು ಹೇಳುತ್ತಾರೆ ಎಂದರೆ ಇನ್ನು ಯಾರನ್ನು ನಂಬೋಣ ನಾವು. ಹಾಗಾಗಿ ಸುಳ್ಳೇ ಅವರ ಮನೆ ದೇವರು. ಸುಳ್ಳೇ ಅವರ ಗಣತಂತ್ರ ವ್ಯವಸ್ಥೆ. ಸುಳ್ಳೇ ಅವರ ಸಂವಿಧಾನ ಎಂದು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಮತ್ತೊಮ್ಮೆ ಮೋದಿ ಎಂಬ ಗೋಡೆ ಬರಹದ ಅಭಿಯಾನದ ಬಗ್ಗೆ ಪ್ರತಿಕ್ರಿಯಿಸಿ, ಅಭಿಯಾನ ಮಾಡಲಿ ಬಿಡಿ ಅವರು. ಜನ ಏನು ತೀರ್ಮಾನ ತೆಗೆದುಕೊಳ್ಳುತ್ತಾರೆ ನೋಡೋಣ ಎಂದು ಪ್ರತಿಕ್ರಿಯಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸುತ್ತೂರು ಜಾತ್ರೆಗೆ ಮಾಂಸ ತಿಂದು ಹೋಗಿದ್ದಾರೆ ಎಂಬ ಬಿಜೆಪಿ ನಾಯಕರ ಟೀಕೆಗೆ, ಇವರು ಯಾರಾದರೂ ನೋಡಿದ್ದಾರೆಯೇ ಡೆಲ್ಲಿಗೆ ಹೋಗಿ ಮಾಂಸ ತಿಂದಿದ್ದನ್ನು. ಅವನ್ಯಾರಿ ಅವನು ಎಂಎಲ್​ಎ, ವಿಜಯೇಂದ್ರ ಬರೀ ಸುಳ್ಳು, ಸುಳ್ಳನ್ನೇ ಸತ್ಯ ಮಾಡಲು ಹೊರಟಿದ್ದಾರೆ. ಹಾಗಾಗಿ ಸುಳ್ಳನ್ನೇ ಹೇಳಿ ಹೇಳಿ ಈ ದೇಶದ ಅನ್ನ, ಅಕ್ಷರ, ಆರೋಗ್ಯ, ಉದ್ಯೋಗ, ಕೃಷಿ ಈ ಬಗ್ಗೆ ಏನೂ ಮಾತನಾಡುತ್ತಿಲ್ಲ. ನಾವಿದನ್ನು ಮಾಡುತ್ತೇವೆ ಎಂದು ಅವರು ಹೇಳಿಲ್ಲ. ಅಂಥದ್ದರಲ್ಲಿ ಅಲ್ಲಿ ಯಾರೋ ಬೆಂಕಿ ಹಚ್ಚಿದ್ರು, ಇಲ್ಯಾವನೋ ಮಾಂಸ ತಿಂದ ಎನ್ನುತ್ತಾರೆ ಎಂದು ಹೇಳಿದರು.

ಇದನ್ನೂ ಓದಿ:ಜಾತಿಗಣತಿ ವರದಿಯನ್ನು ಐಐಎಂ ವೈಜ್ಞಾನಿಕ ಎಂದಿದೆ, ಸಿಎಂ ಕೊಡಲೇ ವರದಿ ಸ್ವೀಕರಿಸಬೇಕು: ಹೆಚ್​ ವಿಶ್ವನಾಥ್​

ABOUT THE AUTHOR

...view details