Tips to Avoid Cockroaches at Home:ಮನೆಯನ್ನು ಎಷ್ಟೇ ಶುಚಿಯಾಗಿಟ್ಟರೂ ಜಿರಳೆಗಳು ವಿವಿಧೆಡೆ ಓಡಾಡುವುದು ಕಂಡು ಬರುತ್ತದೆ. ಈ ಸಮಸ್ಯೆಯಂತೂ ಅಡುಗೆಮನೆಯಲ್ಲಿ ಹೆಚ್ಚು ಗೋಚರಿಸುತ್ತದೆ. ಕಿಚನ್ ಸಿಂಕ್, ಸ್ವಿಚ್ ಬೋರ್ಡ್, ಪ್ಲಾಸ್ಟಿಕ್ ಡಬ್ಬಗಳು, ಕಪಾಟುಗಳು ಸೇರಿದಂತೆ ಅಡುಗೆ ಮನೆಯನ್ನು ಆಕ್ರಮಿಸಿಕೊಳ್ಳುತ್ತವೆ. ಜಿರಳೆಗಳನ್ನು ಹಿಮ್ಮೆಟ್ಟಿಸಲು ವಿವಿಧ ಸ್ಪ್ರೇಗಳನ್ನು ಬಳಸುತ್ತಾರೆ. ಇದರಿಂದ ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಅದಕ್ಕಾಗಿಯೇ ಅವುಗಳನ್ನು ತೊಡೆದುಹಾಕಲು ಕೆಲವು ನೈಸರ್ಗಿಕ ಸಲಹೆಗಳನ್ನು ಅನುಸರಿಸಲು ತಜ್ಞರು ಸೂಚಿಸುತ್ತಾರೆ. ಜಿರಳೆಗಳನ್ನು ಹೋಗಲಾಡಿಸಲು ತಜ್ಞರು ನೀಡಿರುವ ಸಲಹೆಗಳು ಹೀಗಿವೆ.
ಕಿತ್ತಳೆಸಿಪ್ಪೆಗಳು:ಜಿರಳೆಗಳನ್ನು ಮನೆಯಿಂದ ಓಡಿಸಲು ಕಿತ್ತಳೆ ಸಿಪ್ಪೆಗಳು ಉತ್ತಮ ಪರಿಹಾರ. ಏಕೆಂದರೆ ಕಿತ್ತಳೆ ಸಿಪ್ಪೆಯಲ್ಲಿ ಲಿಮೋನೆನ್ ಎಂಬ ರಾಸಾಯನಿಕ ಇರುತ್ತದೆ. ಜಿರಳೆಗಳು ಈ ವಾಸನೆಯನ್ನು ಇಷ್ಟಪಡುವುದಿಲ್ಲ. ಇದಕ್ಕಾಗಿ ಕಿತ್ತಳೆ ಸಿಪ್ಪೆಯನ್ನು ಸಂಪೂರ್ಣವಾಗಿ ಬಿಸಿಲಿನಲ್ಲಿ ಒಣಗಿಸಬೇಕು. ನಂತರ ಅವುಗಳನ್ನು ಅಡುಗೆಮನೆ ಸೇರಿದಂತೆ ಮನೆಯ ಎಲ್ಲಾ ಮೂಲೆಗಳಲ್ಲಿ ಜಿರಳೆಗಳು ಹೆಚ್ಚಾಗಿ ಬರುವ ಸ್ಥಳಗಳಲ್ಲಿ ಇಡಬೇಕು. ಸಾಧ್ಯವಾದರೆ ಅವುಗಳನ್ನು ಒಣಗಿಸಿ ಜಿರಳೆಗಳು ಸಂಚರಿಸುವ ಸ್ಥಳಗಳಲ್ಲಿ ಇಡಬೇಕಾಗುತ್ತದೆ.
ಲವಂಗ ಮತ್ತು ಬಿರಿಯಾನಿ ಎಲೆ:ಜಿರಳೆಗಳು ಲವಂಗದ ಕಟುವಾದ ವಾಸನೆಯನ್ನೂ ಸಹ ಇಷ್ಟಪಡುವುದಿಲ್ಲ. ಲವಂಗವು ಜಿರಳೆಗಳನ್ನು ಸುಲಭವಾಗಿ ಓಡಿಸಲು ಸಹಾಯ ಮಾಡುತ್ತದೆ. ಮೊದಲು ಸ್ವಲ್ಪ ಲವಂಗವನ್ನು ತೆಗೆದುಕೊಂಡು ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿಕೊಳ್ಳಬೆಕಾಗುತ್ತದೆ. ನಂತರ ಒಂದು ಲೋಟ ನೀರನ್ನು ಕುದಿಸಿ ಹಾಗೂ ಅದರಲ್ಲಿ ಈ ಪುಡಿಯನ್ನು ಮಿಶ್ರಣ ಮಾಡಿ. ಮನೆ ಹಾಗೂ ಅಡುಗೆ ಮನೆಗಳನ್ನು ಸ್ವಚ್ಛಗೊಳಿಸುವಾಗ, ಒಂದು ಬಕೆಟ್ ನೀರಿನಲ್ಲಿ ಲವಂಗ ನೀರನ್ನು ಬೆರೆಸಿ ಒರೆಸಿ. ಮತ್ತು ಅಡುಗೆ ಮನೆಯ ಮೂಲೆಗಳಲ್ಲಿ ಲವಂಗವನ್ನು ಹಾಕಿದರೂ ಅವು ಓಡಿಹೋಗುತ್ತವೆ. ಇಲ್ಲಿ ನೀವು ಲವಂಗದ ಬದಲಿಗೆ ಬಿರಿಯಾನಿ ಎಲೆಗಳನ್ನು ಸಹ ಬಳಸಬಹುದು ಎಂದು ತಜ್ಞರು ತಿಳಿಸುತ್ತಾರೆ.