ಪತ್ತನಂತಿಟ್ಟ (ಕೇರಳ): ಪ್ರಸಿದ್ಧ ಅಯ್ಯಪ್ಪಸ್ವಾಮಿ ದೇಗುಲಕ್ಕೆ ವಿವಿಧ ರಾಜ್ಯಗಳಿಂದ ಲಕ್ಷಾಂತರ ಭಕ್ತರು ಪ್ರತಿವರ್ಷ ಸಂಕ್ರಾಂತಿ ಹಬ್ಬದಂದು ಕಾಣಿಸಿಕೊಳ್ಳುವ 'ಮಕರಜ್ಯೋತಿ'ಯನ್ನು ಕಣ್ತುಂಬಿಕೊಂಡರು. ಮಕರವಿಳಕ್ಕು ಎಂದು ಕರೆಯಲಾಗುವ ಉತ್ಸವದಲ್ಲಿ ಶರಣಂ ಅಯ್ಯಪ್ಪ ಘೋಷಣೆ ಮೊಳಗಿತು.
ಮಕರವಿಳಕ್ಕು ಉತ್ಸವದಲ್ಲಿ 50 ಸಾವಿರ ಭಕ್ತರಿಗೆ ಅವಕಾಶ ಮಾಡಿಕೊಡಲಾಗಿತ್ತು. ಎರಡು ತಿಂಗಳ ವಾರ್ಷಿಕ ತೀರ್ಥಯಾತ್ರೆ ಹಿನ್ನೆಲೆಯಲ್ಲಿ ಅಯ್ಯಪ್ಪ ದೇಗುಲದಲ್ಲಿ ಪ್ರಾರ್ಥನೆ ಸಲ್ಲಿಸಲು ಯಾತ್ರಾರ್ಥಿಗಳ ದಂಡೇ ಸೇರಿತ್ತು. ಗಂಟೆಗಳ ಕಾಲ ಸಾಲುಗಟ್ಟಿ ಜನರು ನಿಂತು ಸ್ವಾಮಿಯ ದರ್ಶನ ಮಾಡಿಕೊಂಡರು.
#WATCH | Kerala: Devotees throng Sabarimala Temple in large numbers to offer prayers to Lord Ayyappa on the occasion of Makaravilakku festival. pic.twitter.com/2Sf9DNJCPk
— ANI (@ANI) January 14, 2025
ಇರುಮುಡಿ ಹೊತ್ತ ಅಯ್ಯಪ್ಪನ ಭಕ್ತರು ದೇವಾಲಯದ ಆವರಣ ಮತ್ತು ಇತರಡೆಗಳಲ್ಲಿ ಮಕರಜ್ಯೋತಿಯ ದರ್ಶನಕ್ಕಾಗಿ ಕಾದು ನಿಂತಿದ್ದರು. ಸಂಜೆ 6.43 ರ ಸುಮಾರಿಗೆ ಪೊನ್ನಂಬಲಮೇಡು ಕಾಡಿನೊಳಗಿನಿಂದ ದಿವ್ಯಜ್ಯೋತಿ ಪ್ರಜ್ವಲಿಸಿತು. ಇದನ್ನು ಕಂಡು ಭಕ್ತರು ಕೃತಾರ್ಥರಾದರು. ಇದಕ್ಕೂ ಮೊದಲು ಪತ್ತನಂತಿಟ್ಟದ ಪಂದಳಂ ಅರಮನೆಯಿಂದ ತರಲಾದ ತಿರುವಾಭರಣ (ಪವಿತ್ರ ಆಭರಣಗಳು)ಗಳಿಂದ ಸ್ವಾಮಿಯ ಮೂರ್ತಿಯನ್ನು ಅಲಂಕರಿಸಲಾಯಿತು.
Sabarimala Makaravilakku Mahotsavam: Thousands of Ayyappa Swamy devotees witness #MakaraJyothi at Sabarimala temple.#Sabarimala pic.twitter.com/Y1T5JPJ6db
— All India Radio News (@airnewsalerts) January 14, 2023
ಮಕರಜ್ಯೋತಿ ಕಣ್ತುಂಬಿಕೊಳ್ಳಲು ಬಂದಿದ್ದ ಭಕ್ತರು ಶಬರಿಮಲೆಯ ವಿವಿಧ ಭಾಗಗಳಲ್ಲಿ ಗಂಟೆಗಟ್ಟಲೆ ಬೀಡುಬಿಟ್ಟಿದ್ದರು. ದೇವಾಲಯ ನಿರ್ವಹಣಾ ಸಮಿತಿಯು ಜನಸಂದಣಿ ನಿಯಂತ್ರಣಕ್ಕೆ ವ್ಯಾಪಕ ವ್ಯವಸ್ಥೆಗಳನ್ನು ಮಾಡಿತ್ತು. ದೇವಾಲಯ ಮತ್ತು ಅದರ ಆವರಣದಲ್ಲಿ ಭಕ್ತರ ಸುರಕ್ಷತೆಗಾಗಿ ಅಗತ್ಯ ಕ್ರಮ ಕೈಗೊಂಡಿದೆ.
ಜನವರಿ 19 ರವರೆಗೆ ಭಕ್ತರಿಗೆ ಶಬರಿಮಲೆಯಲ್ಲಿ ದರ್ಶನಕ್ಕೆ ಅವಕಾಶ ಇರುತ್ತದೆ. ಮಕರವಿಳಕ್ಕು ಹಬ್ಬದ ಮುಕ್ತಾಯದ ನಂತರ ಜನವರಿ 20 ರಂದು ದೇವಾಲಯ ಮುಚ್ಚಲಿದೆ. ಎರಡು ತಿಂಗಳ ಯಾತ್ರೆಯಲ್ಲಿ ಇಲ್ಲಿಯವರೆಗೆ 40 ಲಕ್ಷ ಭಕ್ತರು ಶಬರಿಮಲೆಗೆ ಭೇಟಿ ನೀಡಿದ್ದಾರೆ.
ಇದನ್ನೂ ಓದಿ:ಶಬರಿಮಲೆ ದೇವಸ್ಥಾನ: 41 ದಿನದಲ್ಲಿ 32 ಲಕ್ಷ ಭಕ್ತರ ಭೇಟಿ, ದಾಖಲೆಯ 297 ಕೋಟಿ ಆದಾಯ ಸಂಗ್ರಹ