How to Make Makhana Paddu: ಕಮಲದ ಬೀಜಗಳು ಅಥವಾ ಮಖಾನ ಆರೋಗ್ಯಕರ ತಿಂಡಿಗಳಲ್ಲಿ ಮೊದಲ ಸ್ಥಾನದಲ್ಲಿ ಬರುತ್ತವೆ. ಮಖಾನ ಬೀಜಗಳಲ್ಲಿ ವಿವಿಧ ಪೋಷಕಾಂಶಗಳಿವೆ. ಪ್ರೋಟೀನ್, ಕಾರ್ಬೋಹೈಡ್ರೇಟ್‌ಗಳು ಹಾಗೂ ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿರುವ ಈ ಮಖಾನದಿಂದ ತೂಕ ನಷ್ಟ ಸೇರಿದಂತೆ ವಿವಿಧ ಆರೋಗ್ಯ ಪ್ರಯೋಜನಗಳನ್ನು ಲಭಿಸುತ್ತವೆ. ಮಖಾನದಿಂದ ಹಲವು ಬಗೆಯ ಅಡುಗೆಗಳನ್ನು ಕೂಡ ತಯಾರಿಸಲಾಗುತ್ತದೆ.
ಮಖಾನದಿಂದ ಖೀರ್, ಮಸಾಲ ಕರಿ, ರೈತಾ ಹೀಗೆ ವಿವಿಧ ಅನೇಕ ಪ್ರಕಾರ ಖಾದ್ಯಗಳನ್ನು ರೆಡಿ ಮಾಡಬಹುದು. ಇವುಗಳ ಜೊತೆಗೆ ಪಡ್ಡುಗಳನ್ನು ಸಹ ಮಖಾನದಿಂದ ಸಿದ್ಧಪಡಿಸಬಹುದು. ಈ ಮಖಾನ ಪಡ್ಡು ಸೇವಿಸಲು ರುಚಿಕರ ಮಾತ್ರವಲ್ಲದೇ, ಆರೋಗ್ಯಕರವೂ ಆಗಿದೆ. ಇದರೊಂದಿಗೆ ಮಖಾನ ಪಡ್ಡು ಉಪಹಾರಕ್ಕೆ ಉತ್ತಮ ಆಯ್ಕೆಯಾಗಿದೆ. ಸಖತ್ ರುಚಿಯಾಗಿ ಮಖಾನ ಪಡ್ಡು ಮಾಡುವುದು ಹೇಗೆ? ಅದಕ್ಕೆ ಬೇಕಾಗಿರುವ ಪದಾರ್ಥಗಳೇನು ಎಂಬುದನ್ನು ತಿಳಿಯೋಣ.
ಮಖಾನ ಪಡ್ಡು ಸಿದ್ಧಪಡಿಸಲು ಬೇಕಾಗಿರುವ ಪದಾರ್ಥಗಳು:
- ಬಾಂಬೆ ರವೆ - ಕಪ್
- ಮಖಾನ - ಕಪ್
- ಪನ್ನೀರ್ - ಅರ್ಧ ಕಪ್
- ಮೊಸರು - ಕಾಲು ಕಪ್
- ಆಲೂಗಡ್ಡೆ - 1
- ಕ್ಯಾಪ್ಸಿಕಂ - 1
- ಕ್ಯಾರೆಟ್ - 2
- ಕೊತ್ತಂಬರಿ ಸೊಪ್ಪು - ಸ್ವಲ್ಪ
- ಉಪ್ಪು - ರುಚಿಗೆ ತಕ್ಕಷ್ಟು
- ಕಾಳುಮೆಣಸಿನ ಪುಡಿ - ಅರ್ಧ ಟೀಸ್ಪೂನ್
- ನಿಂಬೆ ರಸ - ಅರ್ಧ ಟೀಸ್ಪೂನ್
- ಜೀರಿಗೆ - ಒಂದು ಟೀಸ್ಪೂನ್
- ಹಸಿಮೆಣಸಿನಕಾಯಿ ಪುಡಿ - ಚಮಚ
- ಇಂಗು - ಒಂದು ಚಿಟಿಕೆ
- ಎಣ್ಣೆ - 2 ಟೀಸ್ಪೂನ್
ಮಖಾನ ಪಡ್ಡು ತಯಾರಿ ವಿಧಾನ:
- ಮೊದಲು ಆಲೂಗಡ್ಡೆ ಬೇಯಿಸಬೇಕು. ಸಿಪ್ಪೆ ಸುಲಿದು ಸಣ್ಣಗೆ ಕಟ್ ಮಾಡಿ. ಕ್ಯಾರೆಟ್ ತುರಿದುಕೊಳ್ಳಿ. ಪನೀರ್ ಅನ್ನು ಕೂಡ ತುರಿದು ಇಡಬೇಕಾಗುತ್ತದೆ. ಕ್ಯಾಪ್ಸಿಕಂ ತೆಳುವಾಗಿ ಕಟ್ ಮಾಡಿ ಇಟ್ಟುಕೊಳ್ಳಿ.
- ಒಲೆ ಆನ್ ಮಾಡಿ, ಅದರ ಮೇಲೆ ಪಾತ್ರೆ ಇಡಿ. ಬಾಂಬೆ ರವೆ ಮತ್ತು ಮಖಾನವನ್ನು ಪ್ರತ್ಯೇಕವಾಗಿ ಹುರಿದುಕೊಳ್ಳಿ. ತಣ್ಣಗಾದ ಬಳಿಕ ಎರಡನ್ನೂ ಒಟ್ಟಿಗೆ ಬೆರೆಸಿ ನುಣ್ಣಗೆ ರುಬ್ಬಿಕೊಳ್ಳಿ. ಒಂದು ದೊಡ್ಡ ಬೌಲ್ಗೆ ತೆಗೆದುಕೊಳ್ಳಿ.
- ಇದಕ್ಕೆ ಕಾಳುಮೆಣಸಿನ ಪುಡಿ, ಮೊಸರು, ಕ್ಯಾಪ್ಸಿಕಂ ಪೀಸ್, ತುರಿದ ಕ್ಯಾರೆಟ್, ತುರಿದ ಪನೀರ್, ಕೊತ್ತಂಬರಿ ಸೊಪ್ಪು, ಹಸಿಮೆಣಸಿನಕಾಯಿ ಪೇಸ್ಟ್, ಜೀರಿಗೆ, ಇಂಗು ಮತ್ತು ಸಣ್ಣಗೆ ಕಟ್ ಮಾಡಿದ ಆಲೂಗಡ್ಡೆ ಸೇರಿಸಿ, ಸ್ವಲ್ಪ ಸ್ವಲ್ಪವೇ ನೀರು ಸೇರಿಸಿ ಮಿಕ್ಸ್ ಮಾಡಿ ಪಕ್ಕಕ್ಕೆ ಇಡಿ. ಸಾಮಾನ್ಯವಾಗಿ ಇದು ದೋಸೆ ಹಿಟ್ಟಿನಂತೆ ರೆಡಿ ಮಾಡಿ. ಇದು ಸ್ವಲ್ಪ ಗಟ್ಟಿಯಾಗಿರಬೇಕಾಗುತ್ತದೆ.
- ಕಾಲು ಗಂಟೆ ನೆನೆಸಿದ ಬಳಿಕ ನಿಂಬೆ ರಸ ಹಾಗೂ ಉಪ್ಪು ಸೇರಿಸಿ ಪುನಃ ಮಿಕ್ಸ್ ಮಾಡಿ.
- ಈಗ ಒಲೆ ಆನ್ ಮಾಡಿ, ಅದರ ಮೇಲೆ ಪಡ್ಡಿನ ಮಣೆ ಇಡಿ. ಎಲ್ಲಾ ಪಡ್ಡಿನ ಮಣೆಯ ಖಾನೆಗಳಿಗೂ ಎಣ್ಣೆ ಹಾಕಿ ನಂತರದ ರೆಡಿಯಾದ ಹಿಟ್ಟಿನ ಮಿಶ್ರಣವನ್ನು ಅದರೊಳಗೆ ಹಾಕಿ ಮುಚ್ಚಳವನ್ನು ಮುಚ್ಚಿ ಬೇಯಿಸಬೇಕು.
- ಒಂದು ಬದಿಯಲ್ಲಿ ಬೆಂದ ಬಳಿಕ, ಅದನ್ನು ತಿರುಗಿಸಿ ಇನ್ನೊಂದು ಬದಿಯಲ್ಲಿ ಸರಿಯಾಗಿ ಬೇಯಿಸಬೇಕು. ಬಳಿಕ ರೆಡಿಯಾದ ಪಡ್ಡುಗಳನ್ನು ತಟ್ಟೆಯಲ್ಲಿ ತೆಗೆದುಕೊಳ್ಳಿ. ಇಡೀ ಹಿಟ್ಟಿನಿಂದ ಇದೇ ರೀತಿ ಪಡ್ಡುಗಳನ್ನು ಸಿದ್ಧಪಡಿಸಬೇಕು.
- ಈ ಪಡ್ಡುಗಳನ್ನು ಯಾವುದೇ ಚಟ್ನಿ ಇಲ್ಲವೇ ಸಾಸ್‌ನೊಂದಿಗೆ ಸೇವಿಸಬಹುದು. ಈ ಪಡ್ಡುಗಳು ಮಕ್ಕಳು ಮತ್ತು ವಯಸ್ಕರಿಬ್ಬರಿಗೂ ಇಷ್ಟವಾಗುತ್ತವೆ. ಅವುಗಳು ಲಂಚ್ ಬಾಕ್ಸ್ಗೆ ಉತ್ತಮ ಆಯ್ಕೆಯಾಗಿದೆ.
ಇದನ್ನೂ ಓದಿ: ಬಾಯಲ್ಲಿ ನೀರೂರಿಸುವ 'ಶಾವಿಗೆ ಎಗ್ ಪಡ್ಡು': ಇದನ್ನು ಸಿದ್ಧಪಡಿಸಲು ಐದೇ ನಿಮಿಷ ಸಾಕು, ರುಚಿಯೂ ಅದ್ಭುತ!
ಒಂದೇ ಹಿಟ್ಟಿನಿಂದ ಸ್ಪಂಜಿನಂತಹ ಇಡ್ಲಿ, ಖಡಕ್ ದೋಸೆ, ಪಡ್ಡು ಸಿದ್ಧ: ರುಚಿಯೂ ಅದ್ಭುತ!