How to Make Jaggery Urad dal Laddu at Home: ಸಂಕ್ರಾಂತಿ ಹಬ್ಬಕ್ಕೆ ಇನ್ನು ಕೆಲವು ದಿನಗಳು ಮಾತ್ರ ಬಾಕಿ ಉಳಿದಿದೆ. ಈಗಾಗಲೇ ಬಹುತೇಕರ ಮನೆಗಳಲ್ಲಿ ವಿವಿಧ ಸಿಹಿ ತಿನಿಸುಗಳು ಮತ್ತು ಖಾರದ ತಿಂಡಿಗಳು ಸಿದ್ಧಪಡಿಸಲಾಗುತ್ತಿದೆ. ಇವುಗಳನ್ನು ಮಾತ್ರವಲ್ಲದೆ, ಬೆಲ್ಲದ ಉದ್ದಿನಬೇಳೆ ಲಡ್ಡುಗಳನ್ನು ಸಹ ರೆಡಿ ಮಾಡಲಾಗುತ್ತದೆ.
ಸಂಕ್ರಾಂತಿ ಹಬ್ಬದಲ್ಲಿ ಈ ಲಡ್ಡು ಪ್ರಯತ್ನಿಸಿ ನೋಡಿ, ಮನೆ ಮಂದಿಯಲ್ಲ ಇಷ್ಟಪಟ್ಟು ತಿನ್ನುತ್ತಾರೆ. ಬೆಲ್ಲದ ಉದ್ದಿನಬೇಳೆ ಲಡ್ಡು ತುಂಬಾ ರುಚಿಕರವಾಗಿರುತ್ತವೆ. ಇದು ಆರೋಗ್ಯಕ್ಕೂ ತುಂಬಾ ಉತ್ತಮವಾಗಿದೆ. ಬೆಲ್ಲದ ಉದ್ದಿನಬೇಳೆ ಲಡ್ಡು ರೆಡಿ ಮಾಡಲು ಬೇಕಾಗುವ ಪದಾರ್ಥಗಳು ಯಾವುವು? ತಯಾರಿಸುವ ವಿಧಾನ ಹೇಗೆ ಎಂಬುದನ್ನು ನೋಡೋಣ.
ಬೆಲ್ಲದ ಉದ್ದಿನಬೇಳೆ ಲಡ್ಡು ಸಿದ್ಧಪಡಿಸಲು ಬೇಕಾಗಿರುವ ಪದಾರ್ಥಗಳು:
- ಸಿಪ್ಪೆ ತೆಗೆಯದೆ ಇರುವ ಉದ್ದಿನ ಬೇಳೆ - ಒಂದೂವರೆ ಕಪ್
- ಸಿಪ್ಪೆ ತೆಗೆದ ಉದ್ದಿನ ಬೇಳೆ - ಅರ್ಧ ಕಪ್
- ಅಕ್ಕಿ - 2 ಟೀಸ್ಪೂನ್
- ತುರಿದ ಬೆಲ್ಲ - 2 ಕಪ್
- ತುಪ್ಪ - 1/3 ಕಪ್
ಬೆಲ್ಲದ ಉದ್ದಿನಬೇಳೆ ಲಡ್ಡು ತಯಾರಿಸುವ ವಿಧಾನ:
- ಮೊದಲು ಒಲೆ ಆನ್ ಮಾಡಿ ಪ್ಯಾನ್ ಇಡಬೇಕು, ಅದರೊಳಗೆ ಸಿಪ್ಪೆ ಇರುವ ಉದ್ದಿನ ಬೇಳೆಯನ್ನು ಮಧ್ಯಮ ಉರಿಯಲ್ಲಿ ಉತ್ತಮ ಪರಿಮಳ ಬರುವವರೆಗೆ ಹುರಿದುಕೊಳ್ಳಿ. ಬಳಿಕ ಅದರ ಸಿಪ್ಪೆಗಳನ್ನು ತೆಗೆದುಹಾಕಬೇಕು. ಅದೇ ಪ್ಯಾನ್ನಲ್ಲಿ ಸಿಪ್ಪೆ ತೆಗೆದಿರುವ ಉದ್ದಿನ ಬೇಳೆಯನ್ನು ಸೇರಿಸಿ ಸುವಾಸನೆ ಬರುವವರೆಗೆ ಹುರಿಯಿರಿ.
- ಬೇಳೆ ಹುರಿದ ನಂತರ, ಅಕ್ಕಿ ಅದರೊಳಗೆ ಸೇರಿಸಿ ಇನ್ನೊಂದು ಎರಡು ನಿಮಿಷ ಹುರಿಯಿರಿ. ಅಕ್ಕಿ ಸೇರಿಸುವುದರಿಂದ ಲಡ್ಡು ತಿನ್ನುವಾಗ ಹಲ್ಲು, ನಾಲಿಗೆಗೆ ಅಂಟಿಕೊಳ್ಳುವುದನ್ನು ತಡೆಯುತ್ತದೆ.
- ಬೇಳೆ ಮತ್ತು ಅಕ್ಕಿ ಸಂಪೂರ್ಣವಾಗಿ ಹುರಿದ ನಂತರ, ಅವುಗಳನ್ನು ಒಂದು ದೊಡ್ಡ ಬೌಲ್ಗೆ ತೆಗೆದುಕೊಳ್ಳಬೇಕಾಗುತ್ತದೆ. ನಂತರ ಇದನ್ನು ಸಂಪೂರ್ಣವಾಗಿ ತಣ್ಣಗಾಗಲು ಬಿಡಬೇಕಾಗುತ್ತದೆ.
- ತಣ್ಣಗಾದ ಬಳಿಕ ಮಿಕ್ಸರ್ ಜಾರ್ ತೆಗೆದುಕೊಂಡು ಸ್ವಲ್ಪ ಹುರಿದಿರುವ ಉದ್ದಿನ ಬೇಳೆ ಹಾಗೂ ಅಕ್ಕಿಯನ್ನು ಹಾಕಿ ನುಣ್ಣಗೆ ರುಬ್ಬಿಕೊಳ್ಳಬೇಕಾಗುತ್ತದೆ, ಇನ್ನೊಂದು ತಟ್ಟೆಯಲ್ಲಿ ತೆಗೆದುಕೊಳ್ಳಿ.
- ರುಬ್ಬಿದ ಉದ್ದಿನ ಬೇಳೆ ಮಿಶ್ರಣಕ್ಕೆ ತುರಿದ ಬೆಲ್ಲದೊಳಗೆ ಸೇರಿಸಿ ಹಾಗೂ ನಿಮ್ಮ ಕೈಗಳಿಂದ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು.
- ಮತ್ತೆ ಮಿಕ್ಸರ್ ಜಾರ್ ತೆಗೆದುಕೊಂಡು ಬೆಲ್ಲ ಮತ್ತು ಉದ್ದಿನ ಬೇಳೆ ಮಿಶ್ರಣವನ್ನು ಸೇರಿಸಿ ರುಬ್ಬಿಕೊಳ್ಳಬೇಕಾಗುತ್ತದೆ.
- ಈಗ ಒಲೆ ಆನ್ ಮಾಡಿ ಅದರ ಮೇಲೆ ಪಾತ್ರೆ ಇಡಿ, ಅದರೊಳಗೆ ತುಪ್ಪ ಹಾಕಿ ಬಿಸಿ ಮಾಡಿ.
- ತುಪ್ಪ ಸಂಪೂರ್ಣ ಕರಗಿದ ಬಳಿಕ, ಅದನ್ನು ಬೆಲ್ಲ, ಉದ್ದಿನ ಬೇಳೆ ಮಿಶ್ರಣಕ್ಕೆ ಸ್ವಲ್ಪ ಸ್ವಲ್ಪವಾಗಿ ಸುರಿಯಿರಿ, ಹಿಟ್ಟನ್ನು ಮಿಕ್ಸ್ ಮಾಡುತ್ತಾ ರೌಂಡ್ ಆಗಿ ಉಂಡೆಗಳನ್ನು ಮಾಡಿಕೊಳ್ಳಿ. ಇದೇ ರೀತಿ ಎಲ್ಲಾ ತುಪ್ಪವನ್ನು ಸುರಿದು, ಈ ಹಿಟ್ಟಿನಿಂದ ಉಂಡೆಗಳಾಗಿ ರೆಡಿ ಮಾಡಿಕೊಳ್ಳಿ.
- ಹಿಟ್ಟಿನೊಳಗೆ ಸ್ವಲ್ಪ ಸ್ವಲ್ಪವೇ ತುಪ್ಪ ಸುರಿಯುತ್ತಾ ಉಂಡೆಗಳನ್ನು ಮಾಡದಿದ್ದರೆ, ಈ ಹಿಟ್ಟಿಗೆ ಎಲ್ಲಾ ತುಪ್ಪವನ್ನು ಒಮ್ಮಲೇ ಸುರಿದರೆ ಉಂಡೆಗಳು ಸಾಫ್ಟ್ ಆಗಿ ಬರುವುದಿಲ್ಲ. ಇದೀಗ ರುಚಿಕರ ಮತ್ತು ಆರೋಗ್ಯಕರ ಬೆಲ್ಲದ ಉದ್ದಿನಬೇಳೆ ಲಡ್ಡು ಸಿದ್ಧ. ಈ ರೆಸಿಪಿ ನಿಮಗೆ ಇಷ್ಟವಾದರೆ, ಸಂಕ್ರಾಂತಿ ಹಬ್ಬಕ್ಕೆ ಟ್ರೈ ಮಾಡಿ.