ETV Bharat / state

ಅಡ್ಡ ಬಂದ ಹಾವು ತಪ್ಪಿಸಲು ಹೋಗಿ ಕಲ್ಲು ಬಂಡೆಗೆ ಡಿಕ್ಕಿಯಾದ ಕಾರು: ಮಹಿಳೆ ಸಾವು, ಇಬ್ಬರಿಗೆ ಗಾಯ - CAR ACCIDENT

ಅಡ್ಡ ಬಂದ ಹಾವು ತಪ್ಪಿಸಲು ಹೋಗಿ ಕಾರು ಪಲ್ಟಿಯಾಗಿದ್ದು, ಪರಿಣಾಮ ಕಾರಿನಲ್ಲಿದ್ದ ಮಹಿಳೆಯೊಬ್ಬರು ಮೃತಪಟ್ಟು ಇಬ್ಬರು ಗಾಯಗೊಂಡ ಘಟನೆ ಚಾಮರಾಜನಗರದ ಎಂ.ಜಿ.ದೊಡ್ಡಿ ಬಳಿ ನಡೆದಿದೆ.

CAR ACCIDENT
ಪಲ್ಟಿಯಾದ ಕಾರು (ETV Bharat)
author img

By ETV Bharat Karnataka Team

Published : Jan 14, 2025, 9:52 PM IST

ಚಾಮರಾಜನಗರ: ರಸ್ತೆಗೆ ಅಡ್ಡಲಾಗಿ ಬಂದ ಹಾವನ್ನು ಬಚಾವ್ ಮಾಡಲು ಹೋಗಿ ಕಾರು ಪಲ್ಟಿಯಾಗಿ ಪತ್ನಿ ಮೃತಪಟ್ಟು, ಪತಿ, ಸೋದರ ಸಂಬಂಧಿ ಗಾಯಗೊಂಡ ಘಟನೆ ಹನೂರು ತಾಲೂಕಿನ ಎಂ.ಜಿ.ದೊಡ್ಡಿ ಬಳಿ ಮಂಗಳವಾರ ನಡೆದಿದೆ‌.

ನಂಜನಗೂಡು ತಾಲೂಕಿನ ಕವಲಂದೇ ಗ್ರಾಮದ ಮಂಜುಳಾ ಮೃತಪಟ್ಟ ದುರ್ದೈವಿ. ಪತಿ ಪ್ರಕಾಶ್, ಸಹೋದರ ಸಂಬಂಧಿ ಸಚಿನ್ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮಕರ ಸಂಕ್ರಾಂತಿ ಹಿನ್ನೆಲೆ ಮಲೆ ಮಹದೇಶ್ವರ ಬೆಟ್ಟಕ್ಕೆ ಪೂಜೆಗೆ ತೆರಳುತ್ತಿದ್ದಾಗ ಹನೂರು ತಾಲೂಕಿನ ಎಂ.ಜಿ. ದೊಡ್ಡಿ ಬಳಿ ರಸ್ತೆಗೆ ಅಡ್ಡಲಾಗಿ ಭಾರಿ ಗಾತ್ರದ ಹಾವು ಬಂದಿದ್ದು, ಅದನ್ನು ತಪ್ಪಿಸಲು ಹೋಗಿ ಕಾರು ಕಲ್ಲು ಬಂಡೆಗೆ ಡಿಕ್ಕಿಯಾಗಿ ಪಲ್ಟಿಯಾಗಿದೆ‌.

ತೀವ್ರವಾಗಿ ಗಾಯಗೊಂಡಿದ್ದ ಮಂಜುಳಾ ಅವರನ್ನು ಕೊಳ್ಳೇಗಾಲ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಪ್ರಕಾಶ್ ಮತ್ತು ಸಚಿನ್ ಚಿಕಿತ್ಸೆ ಪಡೆಯುತ್ತಿದ್ದು, ರಾಮಾಪುರ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ‌.

ಇದನ್ನೂ ಓದಿ: ಚಿಕ್ಕಬಳ್ಳಾಪುರದಲ್ಲಿ ಭೀಕರ ಅಪಘಾತ : ಯುವ ಪತ್ರಕರ್ತ ಭರತ್ ಸಾವು - JOURNALIST DIED IN ACCIDENT

ETV Bharat Logo

Copyright © 2025 Ushodaya Enterprises Pvt. Ltd., All Rights Reserved.