ETV Bharat / bharat

ಮಣಿಪುರದಲ್ಲಿ ನಿಷೇಧಿತ ಸಂಘಟನೆಗೆ ಸೇರಿದ 9 ಉಗ್ರರನ್ನು ಬಂಧಿಸಿದ ಪೊಲೀಸರು - 9 MILITANTS ARRESTED IN MANIPUR

ಅಪಹರಣ ಸೇರಿದಂತೆ ಅಕ್ರಮ ಚಟುವಟಿಕೆಯಲ್ಲಿ ತೊಡಗಿದ್ದ ಭದ್ರತಾ ಪಡೆ ಕಾರ್ಯಾಚರಣೆ ವೇಳೆ ಬಂಧಿಸಲಾಗಿದೆ

9-militants-arrested-by-security-force-from-two-manipur-districts
ಸಾಂದರ್ಭಿಕ ಚಿತ್ರ (ಎಎನ್​ಐ)
author img

By ETV Bharat Karnataka Team

Published : Feb 15, 2025, 10:37 AM IST

ಇಂಫಾಲ, ಮಣಿಪುರ: ಇಂಫಾಲ್ ಪೂರ್ವ ಮತ್ತು ತೌಬಲ್ ಜಿಲ್ಲೆಗಳಲ್ಲಿ ನಿಷೇಧಿತ ವಿವಿಧ ಸಂಘಟನೆಗಳಿಗೆ ಸೇರಿದ 9 ಉಗ್ರರನ್ನು ಭದ್ರತಾ ಪಡೆಗಳು ಬಂಧಿಸಿವೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.

ಅಪಹರಣ ಮತ್ತು ಸುಲಿಗೆ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ನಿಷೇಧಿತ ಸಂಘಟನೆ ಕಂಗ್ಲೇಪಕ್ ಕಮ್ಯುನಿಸ್ಟ್ ಪಕ್ಷದ (ನೊಯಾನ್) ನಾಲ್ವರು ಸದಸ್ಯರನ್ನು ತೌಬಲ್ ಜಿಲ್ಲೆಯ ಚಿಂಗ್‌ಡೊಂಪಾಕ್ ಪ್ರದೇಶದಲ್ಲಿ ಬಂಧಿಸಲಾಗಿದೆ ಎಂದು ಮಾಹಿತಿ ನೀಡಿದರು.

ಮತ್ತೊಂದು ಕಾರ್ಯಾಚರಣೆಯಲ್ಲಿ, ಇಂಫಾಲ್ ಪೂರ್ವ ಜಿಲ್ಲೆಯ ಖಬೀಸೊಯ್ ಪ್ರದೇಶದಲ್ಲಿ ಸುಲಿಗೆ ಚಟುವಟಿಕೆಯಲ್ಲಿ ತೊಡಗಿದ್ದ ಕೆಸಿಪಿ (ಪಿಡಬ್ಲ್ಯೂಜಿ)ಯ ನಾಲ್ವರು ಸಕ್ರಿಯ ಸದಸ್ಯರನ್ನು ಬಂಧಿಸಲಾಗಿದೆ. ಇಂಫಾಲ್ ಪೂರ್ವ ಜಿಲ್ಲೆಯ ನುಂಗೋಯ್ ಅವಾಂಗ್ ಲೈಕೈ ಪ್ರದೇಶದಿಂದ ಯುಎನ್‌ಎಲ್‌ಎಫ್ (ಪಂಬೈ)ನ ಒಬ್ಬ ಸದಸ್ಯನನ್ನು ಅರೆಸ್ಟ್​ ಮಾಡಲಾಗಿದೆ. ಈತನ ಬಳಿಯಿದ್ದ ಒನ್​ 32 ಪಿಸ್ತೂಲ್ ವಶಕ್ಕೆ ಪಡೆಯಲಾಗಿದೆ. ಈತ ಇಂಫಾಲ್ ನಗರ ಮತ್ತು ಸುತ್ತಮುತ್ತ ಸುಲಿಗೆ ಚಟುವಟಿಕೆಗಳು ಮತ್ತು ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳ ಸಾಗಣೆಯಲ್ಲಿ ತೊಡಗಿಸಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಈ ನಡುವೆ ಭದ್ರತಾ ಸಿಬ್ಬಂದಿ ಎರಡು ಬ್ಯಾರೆಲ್ ಗನ್, ಸ್ಕೋಪ್ ಹೊಂದಿರುವ ಮಾರ್ಪಡಿಸಿದ ಸ್ನೈಪರ್ ರೈಫಲ್, ಒಂದು ದೇಶೀ ನಿರ್ಮಿತ ಪಿಸ್ತೂಲ್, ಐದು ಹ್ಯಾಂಡ್ ಗ್ರೆನೇಡ್‌ಗಳು, ನಾಲ್ಕು ಐಇಡಿಗಳು, ಐಎನ್‌ಎಸ್‌ಎಎಸ್ ರೈಫಲ್‌ನ ಲೈವ್ ಸುತ್ತುಗಳು, ಎರಡು ಹ್ಯಾಂಡ್‌ಸೆಟ್‌ಗಳು ಮತ್ತು 9 ಎಂಎಂ ಪಿಸ್ತೂಲ್ ಮತ್ತು ಚೀನಾ ನಿರ್ಮಿತ ಡ್ರೋನ್ ಅನ್ನು ಹಿಯಾಂಗ್ಲಾಮ್ ನಟೆಖೋಂಗ್‌ನ ನದಿ ದಂಡೆಯಿಂದ ವಶಪಡಿಸಿಕೊಂಡಿವೆ.

ಇದನ್ನೂ ಓದಿ: ಪ್ರಯಾಗ್​ರಾಜ್​ ಹೈವೇಯಲ್ಲಿ ಭೀಕರ ಅಪಘಾತ: ಮಹಾಕುಂಭಕ್ಕೆ ತೆರಳುತ್ತಿದ್ದ 10 ಮಂದಿ ಸಾವು

ಇದನ್ನೂ ಓದಿ: ಮಾಜಿ ಪ್ರಧಾನಿ ರಿಷಿ ಸುನಕ್ ದಂಪತಿ 2 ದಿನಗಳ ಭಾರತ ಭೇಟಿ: ತಾಜ್​ ಮಹಲ್​ ವೀಕ್ಷಿಸಲಿರುವ ಬ್ರಿಟನ್​ ಜೋಡಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.