ETV Bharat / state

ಲೈಂಗಿಕ ಕಿರುಕುಳ ಆರೋಪ: ಕಿರುತೆರೆ ನಟನ ವಿರುದ್ಧ ಮತ್ತೊಂದು ಪ್ರಕರಣ ದಾಖಲು - SEXUAL HARASSMENT CASE

ಲೈಂಗಿಕ ಕಿರುಕುಳ ಆರೋಪ ಹೊರಿಸಿ ಮಹಿಳೆ ನೀಡಿದ ದೂರಿನ ಹಿನ್ನೆಲೆಯಲ್ಲಿ ಕಿರುತೆರೆ ನಟ ಚರಿತ್ ಬಾಳಪ್ಪ ವಿರುದ್ಧ ಮತ್ತೊಂದು ಪ್ರಕರಣ ದಾಖಲಾಗಿದೆ.

ಕಿರುತೆರೆ ನಟ ಚರಿತ್ ಬಾಳಪ್ಪ, Serial Actor Charith Balappa, harassment case
ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆ (ETV Bharat)
author img

By ETV Bharat Karnataka Team

Published : Feb 16, 2025, 1:01 PM IST

ಬೆಂಗಳೂರು: ಬ್ಲ್ಯಾಕ್‌ಮೇಲ್ ಮಾಡಿ ಹಣ ಸುಲಿಗೆ ಮಾಡಿದ್ದಲ್ಲದೆ ಲೈಂಗಿಕ‌ ಕಿರುಕುಳ‌ ನೀಡಿದ್ದಾಗಿ ಕಿರುತೆರೆ ನಟ ಚರಿತ್ ಬಾಳಪ್ಪ ವಿರುದ್ಧ ಮಹಿಳೆಯೊಬ್ಬರು ಆರೋಪಿಸಿ ದೂರು ನೀಡಿದ್ದಾರೆ. ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ದೂರಿನ ವಿವರ: ಸಿನಿಮಾ‌ ಶೂಟಿಂಗ್ ನೋಡಲು ತೆರಳಿದ್ದಾಗ ಪರಿಚಯವಾದ ಚರಿತ್ ಬಾಳಪ್ಪ, ನನ್ನೊಂದಿಗೆ ಪ್ರೀತಿಯ ನಾಟಕವಾಡಿ ಲೈಂಗಿಕವಾಗಿ ಬಳಸಿಕೊಂಡಿದ್ದರು. ನನಗೆ ಕೈಕೊಟ್ಟು ಮತ್ತೊಬ್ಬಳ ಜೊತೆ ಮದುವೆ ಮಾಡಿಕೊಂಡು, ಬಳಿಕವೂ ನನ್ನೊಂದಿಗೆ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದರು. ಅಲ್ಲದೇ ಪತ್ನಿಯಿಂದ ವಿಚ್ಚೇದನ ಪಡೆದ ಬಳಿಕ ಪುನಃ ನನ್ನನ್ನು ಪ್ರೀತಿಸುವಂತೆ‌‌ ಒತ್ತಾಯಿಸಿದ್ದರು. ಒಪ್ಪದಿದ್ದಾಗ ನಮ್ಮಿಬ್ಬರ ಖಾಸಗಿ‌ ಫೋಟೋಗಳನ್ನು ತೋರಿಸಿ ಬ್ಲ್ಯಾಕ್‌ಮೇಲ್ ಮಾಡಿದ್ದಾರೆ. ಹಣ ಸುಲಿಗೆ ಮಾಡಿ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಸಂತ್ರಸ್ತೆ ದೂರಿನಲ್ಲಿ ಆರೋಪಿಸಿದ್ದಾರೆ.

ಮಹಿಳೆಯ ದೂರಿನನ್ವಯ ಚರಿತ್ ಬಾಳಪ್ಪ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಿರುಕುಳ ಆರೋಪದಲ್ಲಿ ಬಂಧಿತರಾಗಿದ್ದ ಚರಿತ್ ಬಾಳಪ್ಪ: ಎರಡು ತಿಂಗಳ ಹಿಂದೆ ಪ್ರಕರಣವೊಂದರಲ್ಲಿ ಬಂಧಿಸಲ್ಪಟ್ಟಿದ್ದ ಚರಿತ್ ಬಾಳಪ್ಪ ವಿರುದ್ಧ ಇದೀಗ ಮತ್ತೊಂದು ಪ್ರಕರಣ ದಾಖಲಾಗಿದೆ.

ಯುವತಿಗೆ ಲೈಂಗಿಕ ಕಿರುಕುಳ ಹಾಗೂ ಹಲ್ಲೆಗೆ ಯತ್ನಿಸಿದ ಆರೋಪದಡಿ ಚರಿತ್ ಬಾಳಪ್ಪ ಅವರನ್ನು ರಾಜರಾಜೇಶ್ವರಿ ನಗರ ಪೊಲೀಸರು ಕಳೆದ ಡಿಸೆಂಬರ್​ನಲ್ಲಿ ಬಂಧಿಸಿದ್ದರು.

ಮೂಲತಃ ಮಂಗಳೂರು ಮೂಲದ ಕಿರುತೆರೆ ನಟ ಹಲವು ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಯೂರಿದ್ದು, ಕನ್ನಡದ ಮುದ್ದುಲಕ್ಷ್ಮಿ ಸೇರಿ ತೆಲುಗಿನ ಅನೇಕ ಧಾರವಾಹಿಗಳಲ್ಲಿ ನಟನಾಗಿ ಗುರುತಿಸಿಕೊಂಡಿದ್ದಾರೆ.

ಇದನ್ನೂ ಓದಿ: ಯುವತಿಗೆ ಲೈಂಗಿಕ ಕಿರುಕುಳ, ಹಲ್ಲೆ ಆರೋಪ: ಕಿರುತೆರೆ ನಟ ಅರೆಸ್ಟ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.