Peanut Chutney Recipe: ನೀವು ಬೆಳಿಗ್ಗೆ ಉಪಹಾರಕ್ಕಾಗಿ ಯಾವುದೇ ಟಿಫಿನ್ ಸೇವಿಸಿದರೂ ಕೂಡ ಶೇಂಗಾ ಚಟ್ನಿ ಇದ್ದೆ ಇರುತ್ತದೆ. ಈ ಚಟ್ನಿ ಎಲ್ಲಾ ಪ್ರಕಾರದ ಉಪಹಾರಗಳ ಜೊತೆಗೆ ಸರಿಯಾಗಿ ಸಂಯೋಜನೆಯಾಗಿದೆ. ಕೆಲವರಿಗೆ ಶೇಂಗಾ ಚಟ್ನಿ ಜೊತೆಗೆ ಸೇವಿಸಿದರೆ ಮಾತ್ರ ಉಪಹಾರ ಪರಿಪೂರ್ಣವಾಗುತ್ತದೆ. ಶೇಂಗಾ ಚಟ್ನಿಯನ್ನು ಪರಿಪೂರ್ಣವಾಗಿ ಹೇಗೆ ಸಿದ್ಧಪಡಿಸಬೇಕೆಂದು ಬಹುತೇಕರಿಗೆ ತಿಳಿದಿಲ್ಲ.
ಮನೆಯಲ್ಲಿ ಎಷ್ಟೇ ಬಾರಿ ಶೇಂಗಾ ಚಟ್ನಿ ತಯಾರಿಸಿದರೂ ಕೂಡ ಏನಾದರು ವ್ಯತ್ಯಾಸ ಇದ್ದೇ ಇರುತ್ತದೆ. ಅಂತಹವರು ಈ ಬಾರಿ ನಾವು ತಿಳಿಸುವಂತೆ ಶೇಂಗಾ ಚಟ್ನಿ ಮಾಡಿದರೆ ಸಾಕು, ರುಚಿ ಮಾತ್ರ ದುಪ್ಪಟ್ಟಾಗುತ್ತದೆ. ಈ ಚಟ್ನಿಯು ಎಲ್ಲಾ ಉಪಹಾರಗಳ ಜೊತೆಗೂ ಸರಿಯಾಗಿ ಹೊಂದಿಕೊಂಡಂತೆ ಭಾಸವಾಗುತ್ತದೆ. ಶೇಂಗಾ ಚಟ್ನಿ ತಯಾರಿಸುವುದು ತುಂಬಾ ಸರಳವಾಗಿದೆ. ಇದೀಗ ರುಚಿಕರವಾದ ಶೇಂಗಾ ಚಟ್ನಿಗೆ ಬೇಕಾಗುವ ಸಾಮಗ್ರಿಗಳೇನು? ಸಿದ್ಧಪಡಿಸುವ ವಿಧಾನದ ಬಗ್ಗೆ ತಿಳಿದುಕೊಳ್ಳೋಣ.

ಶೇಂಗಾ ಚಟ್ನಿಗೆ ಅಗತ್ಯವಿರುವ ಸಾಮಗ್ರಿ:
- ಶೇಂಗಾ - ಒಂದು ಕಪ್
- ಗೋಡಂಬಿ - 10
- ಹಸಿಮೆಣಸಿನಕಾಯಿ - 4
- ಬೆಳ್ಳುಳ್ಳಿ ಎಸಳು - 3 ರಿಂದ 4
- ಹುಣಸೆಹಣ್ಣು - ಸ್ವಲ್ಪ
- ಉಪ್ಪು - ರುಚಿಗೆ ಬೇಕಾಗುವಷ್ಟು
- ಎಣ್ಣೆ - 3 ಟೀಸ್ಪೂನ್
- ಕರಿಬೇವು - 2 ಎಲೆಗಳು
- ಜೀರಿಗೆ - 1 ಟೀಸ್ಪೂನ್
- ಸಾಸಿವೆ - 1 ಟೀಸ್ಪೂನ್
- ಕಡಲೆಬೇಳೆ - ಸ್ವಲ್ಪ
- ಉದ್ದಿನ ಬೇಳೆ - ಸ್ವಲ್ಪ
- ಒಣ ಮೆಣಸಿನಕಾಯಿ - 2
ಶೇಂಗಾ ಚಟ್ನಿ ತಯಾರಿಸುವ ವಿಧಾನ:

- ಮೊದಲು ಹುಣಸೆಹಣ್ಣನ್ನು ಚಿಕ್ಕ ಬೌಲ್ನಲ್ಲಿ ನೆನೆಸಿಡಬೇಕು. ಇದೀಗ ಒಲೆಯ ಮೇಲೆ ಒಂದು ಪ್ಯಾನ್ ಇರಿಸಿ ಅದರೊಳಗೆ ಶೇಂಗಾ ಬಣ್ಣ ಬದಲಾಗುವವರೆಗೆ ಕಡಿಮೆ ಉರಿಯಲ್ಲಿ ಚೆನ್ನಾಗಿ ಹುರಿದು ಪಕ್ಕಕ್ಕೆ ಇಡಿ.
- ಬಳಿಕ ಅದೇ ಪ್ಯಾನ್ನಲ್ಲಿ ಗೋಡಂಬಿ ಹುರಿದು ತಣ್ಣಗಾಗಲು ಬಿಡಬೇಕಾಗುತ್ತದೆ. ಚಟ್ನಿಯಲ್ಲಿ ಶೇಂಗಾ ಜೊತೆಗೆ ಗೋಡಂಬಿ ಸೇರಿಸುವುದರಿಂದ ಚಟ್ನಿ ಪರಿಪೂರ್ಣವಾಗುವುದಲ್ಲದೆ ರುಚಿಯೂ ಹೆಚ್ಚಾಗುತ್ತದೆ.
- ಇದೀಗ ಅದೇ ಪ್ಯಾನ್ನಲ್ಲಿ 1 ಟೀಸ್ಪೂನ್ ಎಣ್ಣೆ ಹಾಕಿ ಹಸಿ ಮೆಣಸಿನಕಾಯಿಗಳನ್ನು ಹುರಿದುಕೊಳ್ಳಿ. ಬಳಿಕ ಅವುಗಳನ್ನು ಒಂದು ತಟ್ಟೆಯಲ್ಲಿ ತೆಗೆದುಕೊಂಡು ತಣ್ಣಗಾಗಲು ಬಿಡಿ. ತಣ್ಣಗಾದ ಶೇಂಗಾ ಸಿಪ್ಪೆ ತೆಗೆದು ಪಕ್ಕಕ್ಕೆ ಇಡಿ.
- ಬಳಿಕ ಮಿಕ್ಸರ್ ಜಾರ್ ತೆಗೆದುಕೊಂಡು ಹುರಿದ ಗೋಡಂಬಿ, ಸಿಪ್ಪೆ ಸುಲಿದ ಶೇಂಗಾ, ಹಸಿರು ಮೆಣಸಿನಕಾಯಿ, ಬೆಳ್ಳುಳ್ಳಿ ಎಸಳು, ಉಪ್ಪು ಮತ್ತು ನೆನೆಸಿದ ಹುಣಸೆಹಣ್ಣನ್ನು ಒಂದೊಂದಾಗಿ ಸೇರಿಸಿ.
- ಬಳಿಕ ಅಗತ್ಯಕ್ಕೆ ತಕ್ಕಷ್ಟು ಚಟ್ನಿಯೊಳಗೆ ನೀರು ಸೇರಿಸಿ, ನುಣ್ಣಗೆ ಪುಡಿಮಾಡಿ ಪಕ್ಕಕ್ಕೆ ಇಡಿ.
- ಈಗ ನಾವು ಒಗ್ಗರಣೆ ಹಾಕಬೇಕಾಗುತ್ತದೆ. ಒಲೆಯ ಮೇಲೆ ಪಾತ್ರೆ ಇಡಿ, ಅದರೊಳಗೆ ಎಣ್ಣೆ ಹಾಕಿ. ಎಣ್ಣೆ ಸ್ವಲ್ಪ ಬಿಸಿಯಾದ ಬಳಿಕ, ಜೀರಿಗೆ, ಸಾಸಿವೆ, ಉದ್ದಿನ ಬೇಳೆ, ಕಡಲೆ ಬೇಳೆ, ಒಣಮೆಣಸಿನಕಾಯಿ, ಕರಿಬೇವು ಸೇರಿಸಿ ಚೆನ್ನಾಗಿ ಫ್ರೈ ಮಾಡಿ.
- ಒಗ್ಗರಣೆ ಚೆನ್ನಾಗಿ ಬೆಂದ ಬಳಿಕ ಅದನ್ನು ಮೊದಲೇ ಸಿದ್ಧಪಡಿಸಿದ ಚಟ್ನಿಗೆ ಸೇರಿಸಿ ಹಾಗೂ ಎಲ್ಲವೂ ಚೆನ್ನಾಗಿ ಮಿಶ್ರಣ ಮಾಡಿ. ಈಗ ತುಂಬಾ ರುಚಿಕರವಾದ ಶೇಂಗಾ ಚಟ್ನಿ ಸಿದ್ಧವಾಗಿದೆ.
- ನೀವು ಯಾವುದೇ ಉಪಹಾರ ಜೊತೆಗೆ ಸೇವಿಸಿದರೆ ಸೂಪರ್ ರುಚಿ ನೀಡುತ್ತದೆ.