ಆಗ್ರಾ(ಉತ್ತರ ಪ್ರದೇಶ): ಇಂಗ್ಲೆಂಡ್ನ ಮಾಜಿ ಪ್ರಧಾನಿ ರಿಷಿ ಸುನಕ್ ಮತ್ತು ಅವರ ಪತ್ನಿ ಅಕ್ಷತಾ ನಾರಾಯಣ ಮೂರ್ತಿ ಅವರು ಎರಡು ದಿನಗಳ ಭೇಟಿಗಾಗಿ ಶನಿವಾರ ಆಗ್ರಾಕ್ಕೆ ಆಗಮಿಸುತ್ತಿದ್ದಾರೆ. ರಾತ್ರಿ ಇಲ್ಲೇ ತಂಗಲಿರುವ ಈ ದಂಪತಿ ಭಾನುವಾರ ತಮ್ಮ ನಿಯೋಗದೊಂದಿಗೆ ತಾಜ್ ಮಹಲ್‌ಗೆ ಭೇಟಿ ನೀಡಲಿದ್ದಾರೆ.
ಈ ನಿಟ್ಟಿನಲ್ಲಿ ಮಾಜಿ ಪ್ರಧಾನಿಯವರ ಎರಡು ದಿನಗಳ ಆಗ್ರಾ ಭೇಟಿಯ ವೇಳಾಪಟ್ಟಿಯನ್ನು ಜಿಲ್ಲಾಡಳಿತ ಬಿಡುಗಡೆ ಮಾಡಿದೆ. ಮಾಜಿ ಪ್ರಧಾನಿ ರಿಷಿ ಸುನಕ್, ಅವರ ಪತ್ನಿ ಮತ್ತು ನಿಯೋಗ ದೆಹಲಿಯಿಂದ ವಿಶೇಷ ವಿಮಾನದ ಮೂಲಕ ಶನಿವಾರ ಎರಡು ದಿನಗಳ ಭೇಟಿಗಾಗಿ ಆಗ್ರಾಕ್ಕೆ ಆಗಮಿಸಲಿದೆ.
ನವದೆಹಲಿಯಿಂದ ವಿಶೇಷ ವಿಮಾನದ ಮೂಲಕ ಖೇರಿಯಾ ಸಿವಿಲ್ ಏರ್‌ಪೋರ್ಟ್‌ಗೆ ಶನಿವಾರ ಆಗಮಿಸಲಿದ್ದಾರೆ. ಅಲ್ಲಿಂದ ಅವರು ಶಿಲ್ಪಗ್ರಾಮ್ ಬಳಿ ಇರುವ ಹೋಟೆಲ್ ಒಬೆರಾಯ್ ತಲುಪಲಿದ್ದು, ಅಲ್ಲೇ ರಾತ್ರಿ ಉಳಿಯುತ್ತಾರೆ. ಭಾನುವಾರ ಬೆಳಗ್ಗೆ ತಾಜ್ ಮಹಲ್‌ಗೆ ಭೇಟಿ ನೀಡಲಿದ್ದಾರೆ. ಇದರೊಂದಿಗೆ ಇತರ ಸ್ಮಾರಕಗಳಿಗೂ ಭೇಟಿ ಕೊಡಲಿದ್ದಾರೆ ಎಂದು ಡಿಎಂ ಅರವಿಂದ ಮಲ್ಲಪ್ಪ ಬಂಗಾರಿ ತಿಳಿಸಿದ್ದಾರೆ.
ಭಾನುವಾರವೂ ಹೋಟೆಲ್ನಲ್ಲಿ ರಾತ್ರಿ ತಂಗಲಿದ್ದಾರೆ. ನಂತರ ಫೆಬ್ರವರಿ 17 ಸೋಮವಾರ ಬೆಳಗ್ಗೆ 9 ಗಂಟೆಗೆ ಖೇರಿಯಾ ವಿಮಾನ ನಿಲ್ದಾಣದಿಂದ ದೆಹಲಿಗೆ ಹೊರಡಲಿದ್ದಾರೆ.
ಭಾರತ - ರಿಷಿ ಸುನಕ್ ಅನನ್ಯ ಬಾಂಧವ್ಯ: ಬ್ರಿಟನ್‌ನ ಮಾಜಿ ಪ್ರಧಾನಿ ರಿಷಿ ಸುನಕ್ ಭಾರತ ಮತ್ತು ಭಾರತೀಯ ಸಂಸ್ಕೃತಿಯೊಂದಿಗೆ ಆಳವಾದ ಬಾಂಧವ್ಯವನ್ನು ಹೊಂದಿದ್ದಾರೆ. ಅವರ ಪತ್ನಿ ಅಕ್ಷತಾ ನಾರಾಯಣ ಮೂರ್ತಿ ಅವರು ಪ್ರಸಿದ್ಧ ಫ್ಯಾಷನ್ ಡಿಸೈನರ್. ಅಕ್ಷತಾ ನಾರಾಯಣ ಮೂರ್ತಿ ಮತ್ತು ರಿಷಿ ಸುನಕ್ ತಾಜ್ ಮಹಲ್ ನೋಡುವ ಬಯಕೆಯನ್ನು ಹಲವು ಬಾರಿ ವ್ಯಕ್ತಪಡಿಸಿದ್ದರು.
ಇದನ್ನೂ ಓದಿ: ಮಹಾಕುಂಭಕ್ಕೆ ಸರ್ಕಾರಿ ನೌಕರರು, ಶಿಕ್ಷಕರಿಗೆ 2 ದಿನ ರಜೆ ಕೊಡಿ: ಸರ್ಕಾರವನ್ನ ಕೋರಿದ ಶಾಸಕಿ