ಕಿರುತೆರೆಯ ಪಾಪ್ಯುಲರ್ ಪ್ರೋಗ್ರಾಮ್ ಬಿಗ್ ಬಾಸ್ ಕನ್ನಡ ಸೀನಸ್ 11 ಫಿನಾಲೆ ಹೊಸ್ತಿಲಿನಲ್ಲಿದೆ. ಇನ್ನೇನು ಕೆಲವೇ ದಿನಗಳಲ್ಲಿ ಆಟ ಪೂರ್ಣಗೊಳ್ಳಲಿದ್ದು, ವಿಜೇತರು ಯಾರಾಗಬಹುದು ಅನ್ನೋ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ.
ಸೂಪರ್ ಸಂಡೇ ವಿತ್ ಕಿಚ್ಚ ಸುದೀಪ ಸಂಚಿಕೆಯಲ್ಲಿ ನನ್ನ ಆಟಕ್ಕೆ ತ್ರಿವಿಕ್ರಮ್ ಅಡ್ಡಿ ಆಗಿದ್ದಾರೆ ಎಂದು ಭವ್ಯಾ ತಿಳಿಸಿದ್ದರು. ಕಳೆದ ಸಂಚಿಕೆಯಲ್ಲಿ ಇಬ್ಬರ ನಡುವೆಯೂ ಮನಸ್ತಾಪ ಮೂಡಿದೆ. ಇಂದಿನ ಎಪಿಸೋಡ್ನಲ್ಲಿ ಈ ಬಿರುಕು ಮತ್ತಷ್ಟು ಹೆಚ್ಚಾಗಲಿದೆ. ಇದರ ಒಂದು ಸುಳಿವನ್ನು ಬಿಗ್ ಬಾಸ್ ಇಂದು ಅನಾವರಣಗೊಳಿಸಿರುವ ಪ್ರೋಮೋದಲ್ಲಿ ಸಿಕ್ಕಿದೆ.
'ಸೆಮಿ-ಫಿನಾಲೆಯ ರಭಸಕ್ಕೆ ಸೂತ್ರ ಹರಿದ ಪಟವಾಯ್ತಾ ಕಲರ್ಫುಲ್ ದೋಸ್ತಿ?' ಬಿಗ್ ಬಾಸ್ ಕನ್ನಡ ಸೀಸನ್ 11, ಸೋಮ-ಶುಕ್ರ ರಾತ್ರಿ 9:30ಕ್ಕೆ ಪ್ರಸಾರ ಎಂಬ ಕ್ಯಾಪ್ಷನ್ನಡಿ ಅನಾವರಣಗೊಂಡಿರುವ ಪ್ರೋಮೋದಲ್ಲಿ ಅಪ್ಪಟ ದೋಸ್ತಿಗಳ ನಡುವೆ ಮನಸ್ತಾಪ ಆಗಿರೋದನ್ನು ಕಾಣಬಹುದು.
105 ದಿನಗಳಿಂದ ಇರೋ ಫ್ರೆಂಡ್ಶಿಪ್ ಆ್ಯಂಡ್ ಬಾಂಡ್... ಇನ್ನೊಬ್ರ ಜೊತೆ ಸೇರಿಕೊಂಡು, ಒಬ್ರುನ್ನ ಆಚೆ ಇಡ್ತೀಯಾ... ಬಹಳ ಬಂಡವಾಳಗಳು ಇವತ್ ಗೊತ್ತಾದಾಗ ಏನೂ ಮಾಡೋಕ್ಕಾಗಲ್ಲ ಎಂದು ತ್ರವಿಕ್ರಮ್ ಭವ್ಯಾ ಬಳಿ ಮಾತನಾಡುತ್ತಾ ಬಹಳ ಭಾವುಕರಾಗಿದ್ದಾರೆ. ಭವ್ಯಾ ಪ್ರತಿಕ್ರಿಯಿಸಿ, ಏನೇನೋ ತಲೆಗೆ ಹಾಕ್ಕೊಂಡು ನಿಮಗೆ ನೀವೇ ಹಾಳಾಗ್ತಿದ್ದೀರ ಅಷ್ಟೇ ಎಂದಿದ್ದಾರೆ. ನೀನೇನ್ ನನಿಗೇಳೋದು, ಇಷ್ಟೆಲ್ಲಾ ಪುಂಗೋ ಅಂತಾ ಅವಶ್ಯಕತೆ ಇಲ್ಲ. ನಿಮ್ ಫ್ರೆಂಡ್ಶಿಪ್ ಅನ್ನು ನಾನೆಲ್ಲಿ ಯೂಸ್ ಮಾಡ್ಕೊಂಡಿದ್ದೀನಿ ಎಂದು ಭವ್ಯಾ ಕೇಳುತ್ತಿದ್ದಂತೆ, ನೀನ್ ಫಸ್ಟ್ ಡೇ ಇದ್ದಂಗೆ ಇಲ್ಲ. ಬಟ್ ವೆಲ್ ಪ್ಲೇಯ್ಡ್ ಎಂದು ತ್ರವಿಕ್ರಮ್ ತಿಳಿಸಿದ್ದಾರೆ. ಸದಾ ಒಟ್ಟಿಗೆ ಕೂರುತ್ತಿದ್ದವರು ಇಂದು ಬೇರೆ ಬೇರೆ ಜಾಗದಲ್ಲಿರಲಿದ್ದಾರೆ.
ಇದನ್ನೂ ಓದಿ: ಶ್ರದ್ಧಾ ಕಪೂರ್ ಮೊಬೈಲ್ ವಾಲ್‌ಪೇಪರ್ ವೈರಲ್: ರಾಹುಲ್ ಮೋದಿಯೊಂದಿಗಿನ ಡೇಟಿಂಗ್ ವದಂತಿ ಉಲ್ಭಣ
ಕಳೆದ ಸಂಚಿಕೆಯಲ್ಲಿ ಟಾಸ್ಕ್‌ವೊಂದನ್ನು ನೀಡಲಾಗಿತ್ತು. ಚೆಂಡು ಕೆಳಗೆ ಬೀಳದಂತೆ ಸಂಭಾಳಿಸುತ್ತಾ, ಬಾಸ್ಕೆಟ್ನಲ್ಲಿ ಬೀಳಿಸಬೇಕೆಂದು ಸೂಚಿಸಲಾಗಿತ್ತು. ಆ ಪ್ರಕಾರ ತ್ರಿವಿಕ್ರಮ್, ಭವ್ಯಾ, ಮೋಕ್ಷಿತಾ, ಧನರಾಜ್ ಆಟಕ್ಕಿಳಿದಿದ್ದರು. ತ್ರಿವಿಕ್ರಮ್ ಆಟವನ್ನು ಮತ್ತೆ ಆಡಲು ಸೂಚಿಸಲಾಗಿತ್ತು. ಈ ಸಂದರ್ಭದಲ್ಲಿ ಭವ್ಯಾ ಅವರ ಕಡೆಯಿಂದ ಬಂದ ರಿಯಾಕ್ಷನ್ ತ್ರಿವಿಕ್ರಮ್ ಅವರಿಗೆ ಸಹಿಸಲು ಸಾಧ್ಯವಾಗಲಿಲ್ಲ. ನಂತರ ಮಾತಿಗೆ ಮಾತು ಬೆಳೆಯಿತು. ಈ ಮನಸ್ತಾಪ ಮುಂದುವರಿದಿದೆ.
ಇದನ್ನೂ ಓದಿ: ಐಶ್ವರ್ಯಾ ರೈ ವಿರುದ್ಧದ ಸ್ಪರ್ಧೆಯಿಂದ ಆಧ್ಯಾತ್ಮಿಕತೆವರೆಗೆ: ನಟನೆ ತೊರೆದು ಸನ್ಯಾಸಿಯಾದ ಈ ನಟಿ ಬಗ್ಗೆ ನಿಮಗೆಷ್ಟು ಗೊತ್ತು?
ಆರಂಭದಿಂದಲೂ ಭವ್ಯಾ ಮತ್ತು ತ್ರಿವಿಕ್ರಮ್ ಜೋಡಿಯಾಗಿ ಗುರುತಿಸಿಕೊಂಡಿದ್ದಾರೆ. ಇಬ್ಬರೂ ಪರಸ್ಪರ ಸಪೋರ್ಟ್ ಮಾಡುತ್ತಾ ಬಂದಿದ್ದಾರೆ. ಈ ಜೋಡಿ ಪ್ರೇಕ್ಷಕರನ್ನು ಆಕರ್ಷಿಸುವಲ್ಲಿ ಯಶ ಕಂಡಿದೆ. ಆದ್ರೀಗ ಇನ್ನೇನು ಕೆಲವೇ ದಿನಗಳಲ್ಲಿ ಗ್ರ್ಯಾಂಡ್ ಫಿನಾಲೆ ಕೂಡಾ ನಡೆಯಲಿದೆ ಎನ್ನುವಾಗ ಇಬ್ಬರ ನಡುವೆ ಅಸಮಧಾನಗಳು ಮೂಡಿವೆ.