ETV Bharat / international

ಉಕ್ರೇನ್​ ಯುದ್ಧದಲ್ಲಿ ರಷ್ಯಾದ ಸೇನೆ ಸೇರಿದ್ದ ಕೇರಳಿಗ ಸಾವು: ಮತ್ತೊಬ್ಬನಿಗೆ ಗಾಯ - INDIAN DEATH IN RUSSIA

ಉಕ್ರೇನ್​ ಯುದ್ಧದಲ್ಲಿ ರಷ್ಯಾದ ಪರವಾಗಿ ಹೋರಾಡುತ್ತಿರುವ ಭಾರತೀಯರಲ್ಲಿ ಓರ್ವ ಸಾವನ್ನಪ್ಪಿದ್ದಾನೆ. ಮತ್ತೊಬ್ಬ ಗಾಯಗೊಂಡಿದ್ದಾನೆ.

ಉಕ್ರೇನ್​ ಯುದ್ಧದಲ್ಲಿ ರಷ್ಯಾದ ಸೇನೆ ಸೇರಿದ್ದ ಕೇರಳಿಗ ಸಾವು, ಮತ್ತೊಬ್ಬನಿಗೆ ಗಾಯ
ಉಕ್ರೇನ್​ ಯುದ್ಧದಲ್ಲಿ ರಷ್ಯಾದ ಸೇನೆ ಸೇರಿದ್ದ ಕೇರಳಿಗ ಸಾವು, ಮತ್ತೊಬ್ಬನಿಗೆ ಗಾಯ (AP Photo)
author img

By ETV Bharat Karnataka Team

Published : Jan 14, 2025, 10:55 PM IST

ನವದೆಹಲಿ: ಉಕ್ರೇನ್ ವಿರುದ್ಧ ನಡೆಸುತ್ತಿರುವ ಯುದ್ಧದಲ್ಲಿ ರಷ್ಯಾದ ಸೇನೆಯ ಪರವಾಗಿ ಹೋರಾಟ ನಡೆಸುತ್ತಿದ್ದ ಭಾರತೀಯ ಪ್ರಜೆಯೊಬ್ಬರು ಸಾವನ್ನಪ್ಪಿದ್ದಾರೆ. ಮತ್ತೊಬ್ಬರು ಗಾಯಗೊಂಡಿದ್ದಾರೆ. ಮೃತ ಮತ್ತು ಗಾಯಗೊಂಡ ಭಾರತೀಯರನ್ನು ಕೇರಳದ ಮೂಲದವರು ಎಂದು ಗುರುತಿಸಲಾಗಿದೆ. ಇಬ್ಬರೂ ರಷ್ಯಾದ ಸೇನೆ ಸೇರಿಕೊಂಡಿದ್ದರು.

ಈ ಬಗ್ಗೆ ವಿದೇಶಾಂಗ ಸಚಿವಾಲಯ ಮಾಹಿತಿ ಹಂಚಿಕೊಂಡಿದ್ದು, ಕೇರಳ ಮೂಲದ ಭಾರತೀಯ ಪ್ರಜೆ ರಷ್ಯಾ ಉಕ್ರೇನ್​ ಯುದ್ಧದಲ್ಲಿ ಸಾವನ್ನಪ್ಪಿದ್ದಾನೆ. ಆತನ ದೇಹವನ್ನು ತಾಯ್ನಾಡಿಗೆ ಕಳುಹಿಸಲು ರಷ್ಯಾ ಸರ್ಕಾರಕ್ಕೆ ಕೋರಲಾಗಿದೆ ಎಂದು ಹೇಳಿದ್ದಾರೆ.

ರಷ್ಯಾದ ಸೇನೆಯಲ್ಲಿ ನೇಮಕಗೊಂಡಿರುವ ಭಾರತೀಯ ಪ್ರಜೆಗಳನ್ನು ಶೀಘ್ರವೇ ಬಿಡುಗಡೆ ಮಾಡಬೇಕು ಎಂದು ಪುಟಿನ್​ ಸರ್ಕಾರವನ್ನು ಒತ್ತಾಯಿಸಲಾಗುತ್ತಿದೆ. ಈಗಾಗಲೇ ಹಲವರನ್ನು ಬಿಡುಗಡೆ ಮಾಡಿದ್ದಾರೆ. ಇನ್ನುಳಿದವರ ಬಿಡುಗಡೆಗಾಗಿ ಪ್ರಯತ್ನ ಸಾಗಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ತಿಳಿಸಿದ್ದಾರೆ.

ರಷ್ಯಾದ ಸೇನೆಯಲ್ಲಿ ಸೇವೆ ಸಲ್ಲಿಸಲು ನೇಮಕಗೊಂಡಿದ್ದ ಕೇರಳದ ಭಾರತೀಯ ಪ್ರಜೆಯ ಸಾವು ದುರದೃಷ್ಟಕರ. ಮತ್ತೊಬ್ಬ ಭಾರತೀಯ ಪ್ರಜೆ ಗಾಯಗೊಂಡು ಮಾಸ್ಕೋದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ರಷ್ಯಾ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ ಎಂದು ಅವರು ಹೇಳಿದ್ದಾರೆ.

ಮಾಸ್ಕೋದಲ್ಲಿರುವ ಭಾರತೀಯ ರಾಯಭಾರ ಕಚೇರಿ ಅಧಿಕಾರಿಗಳು ಈ ಇಬ್ಬರು ಭಾರತೀಯರ ಕುಟುಂಬಗಳೊಂದಿಗೆ ಸಂಪರ್ಕದಲ್ಲಿದೆ. ಅವರಿಗೆ ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡಲಾಗುತ್ತದೆ. ಮೃತ ದೇಹವನ್ನು ಭಾರತಕ್ಕೆ ತರಲು ರಷ್ಯಾದ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸುತ್ತಿದ್ದೇವೆ ಎಂದು ಜೈಸ್ವಾಲ್ ಮಾಹಿತಿ ನೀಡಿದ್ದಾರೆ.

ಗಾಯಗೊಂಡ ವ್ಯಕ್ತಿಯನ್ನೂ ಬಿಡುಗಡೆ ಮಾಡಿ ಭಾರತಕ್ಕೆ ವಾಪಸ್ ಕರೆತರಲು ಪ್ರಯತ್ನಿಸಿದ್ದೇವೆ ಎಂದು ಇದೇ ವೇಳೆ ಅವರು ಹೇಳಿದರು.

ಇದನ್ನೂ ಓದಿ: ಮೋಸದಿಂದ ರಷ್ಯಾ ಸೇನೆ ಸೇರಿದ್ದ ಗುಜರಾತ್​ ಯುವಕ ಸಾವು: ತವರಿಗೆ ಬಂದ ಮೃತದೇಹ, ಅಂತ್ಯಕ್ರಿಯೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.