ETV Bharat / bharat

ಫೆ.12ರಂದು ಮಹಾಪಂಚಾಯತ್ : ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಜನರಿಗೆ ರೈತ ನಾಯಕ ಜಗಜಿತ್ ದಲ್ಲೆವಾಲ್ ಕರೆ - FARMERS MAHAPANCHAYAT

ಫೆಬ್ರವರಿ 12 ರಂದು ಖನೌರಿ ಗಡಿಯಲ್ಲಿ ನಡೆಯಲಿರುವ ಮಹಾ ಪಂಚಾಯತ್‌ಗೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಪಂಜಾಬ್​ ಜನತೆಗೆ ರೈತ ನಾಯಕ ಜಗಜಿತ್ ಸಿಂಗ್ ದಲ್ಲೆವಾಲ್ ಕರೆ ನೀಡಿದ್ದಾರೆ.

JAGJIT SINGH DALLEWAL
ರೈತ ನಾಯಕ ಜಗಜಿತ್ ಸಿಂಗ್ ದಲ್ಲೆವಾಲ್ (ETV Bharat)
author img

By ETV Bharat Karnataka Team

Published : Jan 28, 2025, 4:05 PM IST

ಖನೌರಿ (ಚಂಡಿಗಢ): ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಗೆ (ಎಂಎಸ್​ಪಿ) ಕಾನೂನು ಖಾತರಿ ಸೇರಿದಂತೆ 13 ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ಪಂಜಾಬ್ ಮತ್ತು ಹರಿಯಾಣ ರಾಜ್ಯಗಳ ಶಂಭು ಹಾಗೂ ಖನೌರಿ ಗಡಿಗಳಲ್ಲಿ ರೈತರ ಪ್ರತಿಭಟನೆ ಮುಂದುವರೆದಿದೆ. ತಮ್ಮ ಬೇಡಿಕೆ ಈಡೇರಿಸಬೇಕೆಂದು ಆಗ್ರಹಿಸಿ ರೈತ ನಾಯಕಜಗಜಿತ್ ಸಿಂಗ್ ದಲ್ಲೆವಾಲ್ ನಡೆಸುತ್ತಿರುವ ಉಪವಾಸ ಸತ್ಯಾಗ್ರಹ ಇಂದಿಗೆ 64ನೇ ದಿನಕ್ಕೆ ಕಾಲಿಟ್ಟಿದೆ. ಇದರ ನಡುವೆ ಫೆಬ್ರವರಿ 12 ರಂದು ಖನೌರಿ ಗಡಿಯಲ್ಲಿ ನಡೆಯಲಿರುವ ಮಹಾ ಪಂಚಾಯತ್‌ಗೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಪಂಜಾಬ್​ ಜನರಿಗೆ ರೈತ ನಾಯಕ ಜಗಜಿತ್ ಸಿಂಗ್ ದಲ್ಲೆವಾಲ್ ಕರೆ ನೀಡಿದ್ದಾರೆ.

ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ರೈತ ನಾಯಕ ಜಗಜಿತ್ ಸಿಂಗ್ ದಲ್ಲೆವಾಲ್, "ಕನಿಷ್ಠ ಬೆಂಬಲ ಬೆಲೆಗೆ ಕಾನೂನು ಖಾತರಿ ಇಡೀ ದೇಶದ ರೈತರ ಬೇಡಿಕೆಯಾಗಿತ್ತು. ಆದರೆ ದೆಹಲಿಯಲ್ಲಿ ನಡೆದ ರೈತ ಹೋರಾಟದಲ್ಲಿ ಕೆಲ ರೈತ ಮುಖಂಡರು, ಪಂಜಾಬ್‌ನ ಜನರು ಹೋರಾಟವನ್ನು ತೊರೆಯುತ್ತಿದ್ದಾರೆ ಎಂದು ದೂರಿದರು. ದೇವರ ದಯೆಯಿಂದ ನಾನು ಕನಿಷ್ಠ ಬೆಂಬಲ ಬೆಲೆಗೆ ಕಾನೂನು ಖಾತರಿಗಾಗಿ ಹೋರಾಡುತ್ತಿದ್ದೇನೆ. ಇಡೀ ದೇಶಕ್ಕೆ ಎಂಎಸ್​ಪಿ ಖಾತರಿ ಬೇಕು. ನಾನು ಇದನ್ನು ಮಾಡಲಿಲ್ಲ, ಬದಲಿಗೆ ದೇವರು ನಮ್ಮಿಂದ ಇದನ್ನು ಮಾಡಿಸುತ್ತಿದ್ದಾನೆ ಎಂದು ನಾನು ಹೇಳಲು ಬಯಸುತ್ತೇನೆ ಎಂದರು.

ರೈತರ ಬೇಡಿಕೆಗಳನ್ನು ಈಡೇರಿಸುವವರೆಗೂ ಉಪವಾಸ ಸತ್ಯಾಗ್ರಹ : "ಜ.18ರ ರಾತ್ರಿ ಕೇಂದ್ರದಿಂದ ಪತ್ರ ಬಂದಿದ್ದು, ನಾನು ವೈದ್ಯಕೀಯ ನೆರವು ಕೋರಿದ್ದೇನೆ. ಆದರೆ ರೈತರ ಬೇಡಿಕೆಗಳನ್ನು ಈಡೇರಿಸುವವರೆಗೂ ಉಪವಾಸ ಸತ್ಯಾಗ್ರಹ ಮುಂದುವರಿಯಲಿದೆ. ಫೆಬ್ರವರಿ 12 ರಂದು ರೈತರು ಮತ್ತು ರೈತ ಕಾರ್ಮಿಕರ ದೊಡ್ಡ ಕಿಸಾನ್ ಮಹಾ ಪಂಚಾಯತ್ ನಡೆಯಲಿದೆ. ಅಲ್ಲಿ ರೈತ ಮುಖಂಡರು ಫೆಬ್ರವರಿ 14ರ ಸಭೆಗೆ ನಾನು ಹಾಜರಾಗಬೇಕೇ ಅಥವಾ ಬೇಡವೇ ಎಂದು ಸಲಹೆ ನೀಡುತ್ತಾರೆ. ಫೆಬ್ರವರಿ 12ರಂದು ಖನೌರಿ ಗಡಿಯಲ್ಲಿ ನಡೆಯಲಿರುವ ಮಹಾ ಪಂಚಾಯತ್ ನಲ್ಲಿ ಪಂಜಾಬ್​ನ ಜನತೆ ಭಾಗವಹಿಸಬೇಕು, ನಿಮ್ಮ ಉಪಸ್ಥಿತಿಯಿಂದ ನಾನು ಬಲಗೊಳ್ಳುತ್ತೇನೆ" ಎಂದು ತಿಳಿಸಿದರು.

ಫೆ.11 ರಿಂದ 13ರ ವರೆಗೆ ಮೂರು ಮಹಾಪಂಚಾಯತ್​ಗಳು : ಫೆಬ್ರವರಿ 13ಕ್ಕೆ ರೈತರ ಹೋರಾಟಕ್ಕೆ ಒಂದು ವರ್ಷವಾಗಲಿದೆ. ಈ ಹಿನ್ನೆಲೆ ಫೆ.11 ರಿಂದ 13ರ ವರೆಗೆ ಮೂರು ಮಹಾಪಂಚಾಯತ್​ಗಳು ನಡೆಯಲಿವೆ. ಫೆ.11ರಂದು ರತ್ನಾಪುರ ಮುಂಭಾಗದಲ್ಲಿ ಮಹಾಪಂಚಾಯತ್ ನಡೆಯಲಿದೆ. ಫೆಬ್ರವರಿ 12 ರಂದು ಹರಿಯಾಣದ ಹಿಸಾರ್‌ನಲ್ಲಿ ಮತ್ತು ಫೆಬ್ರವರಿ 13 ರಂದು ಶಂಭು ನಗರದಲ್ಲಿ ಮಹಾಪಂಚಾಯತ್ ನಡೆಯಲಿದೆ.

ಇದನ್ನೂ ಓದಿ: ಶಂಭು ಗಡಿಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ ರೈತ; ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಸಾವು

ಇದನ್ನೂ ಓದಿ: 'ಮುಷ್ಕರ ನಿರತ ರೈತರು ಮಾತುಕತೆಗೆ ಒಪ್ಪಿದ್ದಾರೆ': ಸುಪ್ರೀಂ ಕೋರ್ಟ್​ಗೆ ಪಂಜಾಬ್ ಸರ್ಕಾರದ ಮಾಹಿತಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.