ETV Bharat / lifestyle

ಪುಸ್ತಕ ತೆರೆದ ತಕ್ಷಣವೇ ನಿಮಗೆ ನಿದ್ರೆ ಬರುತ್ತಿದೆಯೇ? ತಜ್ಞರ ಟಾಪ್​ ಟೆನ್ ಟಿಪ್ಸ್​ ಇಲ್ಲಿವೆ ನೋಡಿ - EXPERT TIPS FOR EXAM PREPARATION

ವಿದ್ಯಾರ್ಥಿಗಳು ಅಧ್ಯಯನ ಮಾಡುವಾಗ ಎಚ್ಚರವಾಗಿರಲು, ಗಮನ ಕೇಂದ್ರೀಕರಿಸಲು ಪೂರಕವಾಗುವ ನಿಟ್ಟಿನಲ್ಲಿ ತಜ್ಞರು, ಕೆಲವು ಸರಳ ಮತ್ತು ಪರಿಣಾಮಕಾರಿಯಾದ ಸಲಹೆಗಳನ್ನು ನೀಡಿದ್ದಾರೆ.

HOW TO STUDY WITHOUT FALLING ASLEEP  HOW TO MEMORIZE EVERYTHING  EXPERT TIPS FOR EXAM PREPARATION  TIPS FOR EXAM SUCCESS
ಸಾಂದರ್ಭಿಕ ಚಿತ್ರ (pexels)
author img

By ETV Bharat Lifestyle Team

Published : Jan 11, 2025, 1:32 PM IST

HOW TO STUDY WITHOUT FALLING ASLEEP: ವಿದ್ಯಾರ್ಥಿಗಳಿಗೆ ಪರೀಕ್ಷೆಗಳು ಹತ್ತಿರವಿರುವಾಗ ಸಮಯ ಕೂಡ ಕಡಿಮೆ ಇರುತ್ತದೆ. ಓದಲು ಬಹಳಷ್ಟು ವಿಷಯಗಳು ಇರುತ್ತವೆ. ಇದರಿಂದ ಈ ಎಲ್ಲಾ ವಿಷಯಗಳನ್ನು ಅಧ್ಯಯನ ಮಾಡುವುದು ಸವಾಲಿನ ಕಾರ್ಯವಾಗುತ್ತದೆ. ಕೆಲವರಿಗೆ ಪುಸ್ತಕ ತೆರೆದು ಓದಲು ಕುಳಿತ ತಕ್ಷಣವೇ ನಿದ್ರೆ ಬರುತ್ತದೆ. ಹಾಗಾದ್ರೆ, ಚಿಂತಿಸಬೇಕಾದ ಅಗತ್ಯವಿಲ್ಲ. ಅಧ್ಯಯನ ಮಾಡುವಾಗ ಎಚ್ಚರವಾಗಿರಲು ಮತ್ತು ಗಮನಕೇಂದ್ರೀಕರಿಸಲು ನಿಮಗೆ ಸಹಾಯ ಮಾಡಲು ತಜ್ಞರು, ಕೆಲವು ಸರಳ ಹಾಗೂ ಪರಿಣಾಮಕಾರಿಯಾದ ಸಲಹೆಗಳನ್ನು ನೀಡಿದ್ದಾರೆ. ತಜ್ಞರು ತಿಳಿಸಿದ ಟಾಪ್​ ಟೆನ್ ಟಿಪ್ಸ್ ಇಲ್ಲಿವೆ ನೋಡಿ...

1. ಸರಿಯಾದ ಭಂಗಿ ಕುಳಿತುಕೊಳ್ಳಬೇಕು: ಓದಲು ಅನುಕೂಲವಾಗಬಾರದು ಎಂಬ ಉದ್ದೇಶದಿಂದ ಮೇಜಿನ ಮುಂದೆ ಕುರ್ಚಿ ಹಾಕಿಕೊಂಡು ಕುಳಿತುಕೊಳ್ಳಿ. ಹಾಸಿಗೆಯ ಮೇಲೆ ಮಲಗಿರುವಾಗ ಅಧ್ಯಯನ ಮಾಡುವುದನ್ನು ತಪ್ಪಿಸಬೇಕು. ಏಕೆಂದರೆ, ಹಾಸಿಗೆ ಮೇಲೆ ಕುಳಿತು ಓದಿದರೆ, ನಿಮ್ಮ ದೇಹವು ವಿಶ್ರಾಂತಿ ಪಡೆಯುವಂತೆ ಸೂಚಿಸುತ್ತದೆ. ಇದರಿಂದ ನಿಮಗೆ ನಿದ್ರೆ ಬರುತ್ತದೆ. ಆದ್ದರಿಂದ ಇನ್ನು ಆದಷ್ಟು ತಪ್ಪಿಸಬೇಕು.

HOW TO STUDY WITHOUT FALLING ASLEEP  HOW TO MEMORIZE EVERYTHING  EXPERT TIPS FOR EXAM PREPARATION  TIPS FOR EXAM SUCCESS
ಸಾಂದರ್ಭಿಕ ಚಿತ್ರ (pexels)

2. ದೇಹವನ್ನು ಹೈಡ್ರೇಟೆಡ್ ಆಗಿರುವಂತೆ ನೋಡಿಕೊಳ್ಳಿ: ಅಧ್ಯಯನ ಮಾಡುವಾಗ ಆಗಾಗ ಸ್ವಲ್ಪ ಸ್ವಲ್ಪ ನೀರನ್ನು ಕುಡಿಯುತ್ತಲೇ ಇರಬೇಕು. ಇಲ್ಲದಿದ್ದರೆ, ನಿರ್ಜಲೀಕರಣದಿಂದ ಆಯಾಸ, ತಲೆನೋವು ಹಾಗೂ ಜಾಗರೂಕತೆಯ ಕೊರತೆಗೆ ಕಾರಣವಾಗುತ್ತದೆ.

3. ಸರಿಯಾದ ಬೆಳಕಿರುವ ಕಡೆ ಕುಳಿತುಕೊಳ್ಳಿ: ಹಾಸಿಗೆಯ ಪಕ್ಕದಲ್ಲಿರುವ ದೀಪಗಳ ಮಂದ ಬೆಳಕಿನಲ್ಲಿ ಓದಲು ಕುಳಿತುಕೊಳ್ಳಬಾರದು. ಸರಿಯಾದ ಬೆಳಕಿನಲ್ಲಿ ಅಧ್ಯಯನ ಮಾಡುವುದು ಏಕಾಗ್ರತೆ ಹಾಗೂ ಗಮನಕೇಂದ್ರಿಕರೀಸಲು ಸಹಾಯ ಮಾಡುತ್ತದೆ. ಇದರಿಂದ ಓದಿದ್ದು ಸರಿಯಾಗಿ ನೆನಪಿನಲ್ಲಿ ಉಳಿಯುತ್ತದೆ.

4. ನಿಯಮಿತವಾಗಿ ಉಪಹಾರ, ಊಟ ಸೇವಿಸಿ: ಅಧ್ಯಯನ ಮಾಡುವ ಮೊದಲು ಅತಿಯಾಗಿ ಆಹಾರ ಸೇವಿಸುವುದು ಕೂಡ ಹೆಚ್ಚು ನಿದ್ರೆ ಬರುವಂತೆ ಮಾಡುತ್ತದೆ. ಎಚ್ಚರವಾಗಿರಲು ಮತ್ತು ಚೈತನ್ಯದಿಂದ ಇರಲು ನಿಯಮಿತವಾಗಿ ಉಪಹಾರ, ಊಟ ಸೇವಿಸುವುದು ಒಳ್ಳೆಯದು.

5. ರಾತ್ರಿ ಚೆನ್ನಾಗಿ ನಿದ್ರೆ ಮಾಡಿ: ಹಗಲಿನಲ್ಲಿ ಉಲ್ಲಾಸದಿಂದಿರಲು ರಾತ್ರಿ ಚೆನ್ನಾಗಿ ನಿದ್ರೆ ಮಾಡಬೇಕಾಗುತ್ತದೆ. ಬೇಗ ಮಲಗಿ ಹಾಗೂ ಬೇಗ ಎದ್ದೇಳಲು ರೂಢಿ ಮಾಡಿಕೊಳ್ಳಿ. ಇದರಿಂದ ಅಧ್ಯಯನ ಮಾಡುವಾಗ ಮನಸ್ಸು ಶಾಂತವಾಗಿರುತ್ತದೆ. ರಾತ್ರಿ ಚೆನ್ನಾಗಿ ನಿದ್ರೆ ಮಾಡಿದ್ರೆ ಹಗಲಿನಲ್ಲಿ ಲವಲವಿಕೆಯಿಂದ ಇರಲು ಸಾಧ್ಯವಾಗುತ್ತದೆ.

6. ಮಧ್ಯಾಹ್ನ ಕಿರು ನಿದ್ರೆ ಮಾಡಿ: ನೀವು ಮಧ್ಯಾಹ್ನ ನಿದ್ರಿಸುತ್ತಿದ್ದರೆ, ಕಿರು ನಿದ್ರೆ ಮಾಡಬಹುದು. ಇದು ನಿಮ್ಮ ಶಕ್ತಿಯ ಮಟ್ಟವನ್ನು ಮರುಪೂರಣಗೊಳಿಸುತ್ತದೆ. ರಿಫ್ರೆಶ್​ ಆಗಿರುವಂತೆ ಮಾಡುತ್ತದೆ.

7. ಆಗಾಗ ಸ್ನ್ಯಾಕ್ಸ್ ಸೇವಿಸಿ: ಪ್ರೋಟೀನ್ ಭರಿತ ಆಹಾರ, ಚಾಕೊಲೇಟ್‌ಗಳು, ಬೀಜಗಳು ಅಥವಾ ಹಣ್ಣುಗಳನ್ನು ಪಕ್ಕದಲ್ಲಿ ಇಟ್ಟುಕೊಳ್ಳಿ. ಈ ತಿಂಡಿಗಳು ತ್ವರಿತ ಶಕ್ತಿಯನ್ನು ಒದಗಿಸುತ್ತವೆ. ಚಹಾ ಅಥವಾ ಕಾಫಿ ಅರೆನಿದ್ರಾವಸ್ಥೆಯನ್ನು ಎದುರಿಸಲು ಸಹಾಯ ಮಾಡುತ್ತದೆ. ಆದರೆ ಅವುಗಳನ್ನು ಮಿತವಾಗಿ ಸೇವಿಸಬಹುದು.

8. ರಾತ್ರಿಯಲ್ಲಿ ಸಮಯದಲ್ಲಿ ಸರಳವಾದ ವಿಷಯಗಳನ್ನು ಓದಿ: ತಡರಾತ್ರಿಯ ಅಧ್ಯಯನ ಮಾಡುವಾಗ ಆಸಕ್ತಿದಾಯಕ ಮತ್ತು ಸರಳವಾದ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ನಿಮ್ಮ ಮೆದುಳು ಸ್ವಾಭಾವಿಕವಾಗಿ ಹೆಚ್ಚು ಸಕ್ರಿಯವಾಗಿರುವ ಬೆಳಿಗ್ಗೆ ಸಮಯದಲ್ಲಿ ಕಠಿಣ, ಸವಾಲಿನ ವಿಷಯಗಳನ್ನು ಅಧ್ಯಯನ ಮಾಡಿದರೆ ಉತ್ತಮ.

9. ದೈಹಿಕವಾಗಿ ಆ್ಯಕ್ಟಿವ್​ ಆಗಿರಿ: ಹೆಚ್ಚು ಹೊತ್ತು ಒಂದೇ ಸ್ಥಾನದಲ್ಲಿ ಕುಳಿತುಕೊಳ್ಳುವುದು ನಿಮ್ಮನ್ನು ಆಲಸ್ಯಕ್ಕೆ ಕಾರಣವಾಗಬಹುದು. ನಿಮ್ಮ ದೇಹ ಮತ್ತು ಮನಸ್ಸನ್ನು ಪುನರುಜ್ಜೀವನಗೊಳಿಸಲು ಸಣ್ಣ ವಿರಾಮಗಳನ್ನು ತೆಗೆದುಕೊಳ್ಳಿ, ಸ್ವಲ್ಪ ಹೊತ್ತು ವಾಕಿಂಗ್​ ಮಾಡಿ.

10. ಮೆದುಳನ್ನು ಸಕ್ರಿಯಗೊಳಿಸಿ: ನೀವು ಓದಿರುವುದನ್ನು ನೋಡದೆ ಬರೆಯುವ ಅಭ್ಯಾಸವನ್ನು ಮಾಡಬೇಕಾಗುತ್ತದೆ. ಇದು ನಿಮ್ಮ ಮೆದುಳನ್ನು ಆ್ಯಕ್ಟಿವ್​ ಆಗಿ ಇರಿಸುತ್ತದೆ. ಜೊತೆಗೆ ಸ್ಮರಣೆಯನ್ನು ಬಲಪಡಿಸುತ್ತದೆ. ಜೋರಾಗಿ ಓದುವುದನ್ನು ಅಭ್ಯಾಸ ಮಾಡಿಕೊಳ್ಳಿ, ಇದು ಗಮನಹರಿಸಲು ಮತ್ತೊಂದು ಉತ್ತಮ ತಂತ್ರವಾಗಿದೆ.

ತಜ್ಞರ ಈ ಸಲಹೆಗಳೊಂದಿಗೆ ನೀವು ಅಧ್ಯಯನ ಮಾಡಿದರೆ, ನಿದ್ರೆ ಬರುವ ದೂರ ಮಾಡಲು ಸಾಧ್ಯವಾಗುತ್ತದೆ. ನಿಮ್ಮ ಕಲಿಕಾ ಸಮಯವನ್ನು ಹೆಚ್ಚು ಪರಿಣಾಮಕಾರಿಯಾಗಿಸಬಹುದು. ಶಿಸ್ತುಬದ್ಧವಾಗಿ ಪರೀಕ್ಷೆಗೆ ತಯಾರಿ ನಡೆಸಿದರೆ ಯಶಸ್ಸು ಗಳಿಸಲು ಸಾಧ್ಯವಿದೆ ಎಂದು ತಜ್ಞರು ತಿಳಿಸುತ್ತಾರೆ.

ಇದನ್ನೂ ಓದಿ: ನಿಮ್ಮ ಬ್ರೈನ್ ಸೂಪರ್ ಆಗಿ ಕೆಲಸ ಮಾಡಬೇಕಾ? ವೈದ್ಯರು ತಿಳಿಸಿದ ಈ ಆಹಾರಗಳನ್ನು ಸೇವಿಸಲು ಮರೆಯದಿರಿ... - Improve brain power food

ETV Bharat Logo

Copyright © 2025 Ushodaya Enterprises Pvt. Ltd., All Rights Reserved.