ETV Bharat / international

ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ 10 ಭಯೋತ್ಪಾದಕರನ್ನು ಹೊಡೆದುರುಳಿಸಿದ ಪಾಕ್ ಭದ್ರತಾ ಪಡೆ - PAK SECURITY FORCE KILL TERRORIST

ಗುಪ್ತಚರ ಮಾಹಿತಿಯನ್ನು ಆಧರಿಸಿ ಪಾಕ್​ ಭದ್ರತಾ ಪಡೆಗಳು ಭಾನುವಾರ ರಾತ್ರಿಯಿಂದ ಸೋಮವಾರ ಮುಂಜಾನೆವರೆಗೆ ಬಾಗ್ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಿವೆ.

FES17-PAK-MILITANTS
ಸಾಂದರ್ಭಿಕ ಚಿತ್ರ (ETV Bharat)
author img

By PTI

Published : Feb 25, 2025, 7:06 AM IST

ಪೇಶಾವರ,ಪಾಕಿಸ್ತಾನ​: ಗುಪ್ತಚರ ಮಾಹಿತಿ ಆಧರಿಸಿ ಖೈಬರ್​ ಪಖ್ತುಂಖ್ವಾ ಪ್ರಾಂತ್ಯದಲ್ಲಿ ನಡೆಸಿದ ಕಾರ್ಯಾಚರಣೆ ನಡೆಸಿದ ಪಾಕಿಸ್ತಾನಿ ಭದ್ರತಾ ಪಡೆಗಳು 10 ಭಯೋತ್ಪಾದಕರನ್ನು ಹೊಡೆದುರುಳಿಸಿವೆ ಎಂದು ಮಿಲಿಟರಿಯ ಮಾಧ್ಯಮ ವಿಭಾಗ ಸೋಮವಾರ ತಿಳಿಸಿದೆ.

ಭಯೋತ್ಪಾದಕ ಚಟುವಟಿಕೆಯ ಬಗ್ಗೆ ಗುಪ್ತಚರ ಮಾಹಿತಿಯ ಆಧಾರದ ಮೇಲೆ ಭಾನುವಾರ ರಾತ್ರಿಯಿಂದ ಸೋಮವಾರ ಮುಂಜಾನೆವರೆಗೆ ಬಾಗ್ ಪ್ರದೇಶದಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದೆ ಎಂದು ಇಂಟರ್-ಸರ್ವೀಸಸ್ ಪಬ್ಲಿಕ್ ರಿಲೇಶನ್ಸ್ (ISPR) ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ಹೇಳಿದೆ.

ಭಯೋತ್ಪಾದಕರ ವಿರುದ್ಧ ತೀವ್ರ ಕಾರ್ಯಾಚರಣೆ ನಡೆಸಿ, ಭದ್ರತಾ ಪಡೆಗಳು 10 ಜನರನ್ನು ಹತ್ಯೆ ಮಾಡಿದ್ದಾರೆ. ಈ ಪ್ರದೇಶದಲ್ಲಿ ಉಳಿದಿರುವ ಯಾವುದೇ ಬೆದರಿಕೆಗಳನ್ನು ತೆರವುಗೊಳಿಸಲು ಕಾರ್ಯಾಚರಣೆ ಮುಂದುವರಿದಿದೆ.

ಖೈಬರ್​ ಪಖ್ತುಂಖ್ವಾದ ಡೇರಾ ಇಸ್ಮಾಯಿಲ್​ ಖಾನ್​ ಜಿಲ್ಲೆಯಲ್ಲಿ ನಡೆಸಿದ ಎರಡು ಪ್ರತ್ಯೇಕ ದಾಳಿಗಳ ನಂತರ ಈ ಕಾರ್ಯಾಚರಣೆ ನಡೆಸಲಾಗಿದೆ. ಈ ಕಾರ್ಯಾಚರಣೆಯ ಒಂದು ದಿನದ ಹಿಂದೆ ಭದ್ರತಾ ಪಡೆ ಏಳು ಭಯೋತ್ಪಾದಕರನ್ನು ಹತ್ಯೆ ಮಾಡಿದ್ದರು. ಕಳೆದ ವಾರ ದಕ್ಷಿಣ ವಜೀರಿಸ್ತಾನ್​ ಜಿಲ್ಲೆಯಲ್ಲಿ ನಡೆದ ಕಾರ್ಯಾಚರಣೆಯಲ್ಲಿ 30 ಭಯೋತ್ಪಾದಕರು ಸಾವನ್ನಪ್ಪಿದ್ದರು.

ನಿಷೇಧಿತ ತೆಹ್ರೀಕ್​- ಇ- ಪಾಕಿಸ್ತಾನ್​ (ಟಿಟಿಪಿ) 2022ರಲ್ಲಿ ಸರ್ಕಾರದ ಜೊತೆಗಿನ ತನ್ನ ಕದನ ವಿರಾಮವನ್ನು ಕೊನೆಗೊಳಿಸಿದ ನಂತರ ಪಾಕಿಸ್ತಾನದಲ್ಲಿ ವಿಶೇಷವಾಗಿ ಖೈಬರ್​ ಪಖ್ತುಂಖ್ವಾ ಮತ್ತು ಬಲೂಚಿಸ್ತಾನ್​ ಪ್ರಾಂತ್ಯಗಳಲ್ಲಿ ಭಯೋತ್ಪಾಕದ ಚಟುವಟಿಕೆಗಳು ಹೆಚ್ಚಾಗಿವೆ.

ಇಸ್ಲಾಮಾಬಾದ್ ಮೂಲದ ಚಿಂತಕರ ಚಾವಡಿ ಪಾಕ್ ಇನ್ಸ್ಟಿಟ್ಯೂಟ್ ಫಾರ್ ಪೀಸ್ ಸ್ಟಡೀಸ್‌ನ ಇತ್ತೀಚಿನ ಭದ್ರತಾ ವರದಿಯು 2014ರ ಮಟ್ಟ ಹಾಗೂ 2024ರ ಮಟ್ಟಕ್ಕೆ ಹೋಲಿಕೆ ಮಾಡಿ, ಭಯೋತ್ಪಾದಕ ದಾಳಿಗಳಲ್ಲಿ ಹೆಚ್ಚಳವನ್ನು ಎತ್ತಿ ತೋರಿಸಿದೆ. ಭಯೋತ್ಪಾದಕರು 2014 ರಲ್ಲಿ ಮಾಡಿದಂತೆ ಪ್ರದೇಶಗಳನ್ನು ನಿಯಂತ್ರಿಸದಿದ್ದರೂ, ಖೈಬರ್ ಪಖ್ತುಂಖ್ವಾ ಮತ್ತು ಬಲೂಚಿಸ್ತಾನದ ಕೆಲವು ಭಾಗಗಳಲ್ಲಿ ಅಭದ್ರತೆ ಪ್ರಮುಖ ಕಳವಳಕಾರಿಯಾಗಿದೆ.

2024ರಲ್ಲಿ ನಡೆದ ಭಯೋತ್ಪಾದಕ ದಾಳಿಗಳಲ್ಲಿ ಶೇ. 95ರಷ್ಟು ಈ ಎರಡು ಪ್ರಾಂತ್ಯಗಳಲ್ಲಿ ಕೇಂದ್ರೀಕೃತವಾಗಿವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಖೈಬರ್ ಪಖ್ತುಂಖ್ವಾದಲ್ಲಿ ಅತಿ ಹೆಚ್ಚು ಘಟನೆಗಳು ದಾಖಲಾಗಿದ್ದು, 295 ದಾಳಿಗಳು ನಡೆದಿವೆ. ಈ ಮಧ್ಯೆ, ಬಲೂಚ್ ದಂಗೆಕೋರ ಗುಂಪುಗಳು, ವಿಶೇಷವಾಗಿ ಬಲೂಚಿಸ್ತಾನ್ ಲಿಬರೇಶನ್ ಆರ್ಮಿ ನಡೆಸಿದ ದಾಳಿಗಳು ಶೇ. 119ರಷ್ಟು ಹೆಚ್ಚಾಗಿದ್ದು, ಬಲೂಚಿಸ್ತಾನ್‌ನಲ್ಲಿ 171 ಘಟನೆಗಳು ವರದಿಯಾಗಿವೆ.

ಇದನ್ನೂ ಓದಿ: ಖೈಬರ್ ಪಖ್ತುಂಖ್ವಾದಲ್ಲಿ ಪಾಕ್ ಸೈನಿಕರ ಕಾರ್ಯಾಚರಣೆ; 15 ಖ್ವಾರಿಜ್ ಉಗ್ರರು ಹತ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.