How to Make Kajjaya Recipe: ದೇಶದಾದ್ಯಂತ ಸಂಕ್ರಾಂತಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ. ಸುಗ್ಗಿ ಹಬ್ಬ ಎಂದು ಕರೆಯಲ್ಪಡುವ ಮಕರ ಸಂಕ್ರಾಂತಿಯನ್ನು ಕರ್ನಾಟಕ ರಾಜ್ಯದಲ್ಲಿ ಜೋರಾಗಿಯೇ ಆಚರಣೆ ಮಾಡಲಾಗುತ್ತದೆ. ಈ ಹಬ್ಬದ ಹಿನ್ನೆಲೆಯಲ್ಲಿ ಪ್ರತಿಯೊಬ್ಬರ ಮನೆಗಳಲ್ಲಿ ವಿವಿಧ ಬಗೆಯ ಖಾದ್ಯಗಳನ್ನು ತಯಾರಿಸಲಾಗುತ್ತದೆ.
ಈ ಸಲ ಹಬ್ಬಕ್ಕಾಗಿ ವಿಶೇಷ ಸಿಹಿ ತಿನಿಸುಗಳನ್ನು ತಯಾರಿಸಬೇಕು ಅಂದುಕೊಂಡಿದ್ದರೆ, ನಾವು ನಿಮಗಾಗಿ ವಿಶೇಷ ರೆಸಿಪಿಯನ್ನು ತಂದಿದ್ದೇವೆ. ಅದುವೇ... ಭರ್ಜರಿ ರುಚಿಯ ಬಿಸಿ ಬಿಸಿ ಕಜ್ಜಾಯ. ಈ ಕಜ್ಜಾಯಗಳನ್ನು ತಯಾರಿಸುವುದು ತುಂಬಾ ಸುಲಭ. ಈ ಸಿಹಿ ತಿನಿಸು ಮಾಡಲು ಬೇಕಾಗಿರುವ ಪದಾರ್ಥಗಳು ಮತ್ತು ತಯಾರಿಕೆಯ ವಿಧಾನ ಹೇಗೆ ಎಂಬುದನ್ನು ಕಲಿಯೋಣ.
ಕಜ್ಜಾಯಕ್ಕೆ ಅಗತ್ಯವಿರುವ ಪದಾರ್ಥಗಳು:
- ಅಕ್ಕಿ ಹಿಟ್ಟು - 1 ಕಪ್
- ಗೋಧಿ ಹಿಟ್ಟು - ಅರ್ಧ ಕಪ್
- ಬೆಲ್ಲ - 1 ಕಪ್
- ನೀರು - ಒಂದೂವರೆ ಕಪ್
- ತುಪ್ಪ - ಬೇಕಾಗುವಷ್ಟು
- ಏಲಕ್ಕಿ ಪುಡಿ - 1 ಟೀಸ್ಪೂನ್
- ಎಳ್ಳು - 1 ಟೀಸ್ಪೂನ್
- ಎಣ್ಣೆ - ಡೀಪ್ ಫ್ರೈ ಮಾಡಲು ಬೇಕಾದಷ್ಟು
ಕಜ್ಜಾಯ ತಯಾರಿಸುವ ವಿಧಾನ ಹೇಗೆ?:
- ಮೊದಲು ಒಂದು ತಟ್ಟೆಯಲ್ಲಿ ಅಕ್ಕಿ ಹಿಟ್ಟು ಹಾಗೂ ಗೋಧಿ ಹಿಟ್ಟನ್ನು ಮಿಶ್ರಣ ಮಾಡಿ ಪಕ್ಕಕ್ಕೆ ಇಟ್ಟುಕೊಳ್ಳಿ.
- ಒಲೆ ಆನ್ ಮಾಡಿ, ಅದರ ಮೇಲೆ ಒಂದು ಪಾತ್ರೆ ಇಡಿ. ಅದರೊಳಗೆ ನೀರು ಸುರಿದು ಬೆಲ್ಲ ಹಾಕಿ ಕರಗಿಸಿ. ಬೆಲ್ಲ ಸಂಪೂರ್ಣವಾಗಿ ಕರಗಿದ ನಂತರ, ಅದನ್ನು ಸೋಸಿಕೊಳ್ಳಬೇಕು.
- ಮತ್ತೊಂದು ಪಾತ್ರೆಯನ್ನು ಒಲೆಯ ಮೇಲೆ ಇಟ್ಟು ಸೋಸಿದ ಬೆಲ್ಲದ ನೀರಿಗೆ 1 ಟೀಸ್ಪೂನ್ ತುಪ್ಪ, ಏಲಕ್ಕಿ ಪುಡಿ ಹಾಗೂ ಎಳ್ಳು ಸೇರಿಸಿ ಕುದಿಸಬೇಕು.
- ನೀರು ಕುದಿಯುತ್ತಿರುವಾಗ, ಮೊದಲೇ ಮಿಕ್ಸ್ ಮಾಡಿದ ಅಕ್ಕಿ ಹಿಟ್ಟು ಮತ್ತು ಗೋಧಿ ಹಿಟ್ಟಿನ ಮಿಶ್ರಣವನ್ನು ಕ್ರಮೇಣವಾಗಿ ಸೇರಿಸಿಕೊಳ್ಳಬೇಕಾಗುತ್ತದೆ. ಯಾವುದೇ ಉಂಡೆಗಳಾಗದಂತೆ ಬೆರೆಸಿಕೊಳ್ಳಿ.
- ಬಳಿಕ ಮಧ್ಯದಲ್ಲಿ ತುಪ್ಪ ಸೇರಿಸಿಕೊಳ್ಳಿ. ಹಿಟ್ಟಿನ ಮಿಶ್ರಣವು ಪಾತ್ರೆಗೆ ಅಂಟಿಕೊಳ್ಳದವರೆಗೆ ಬೇಯಿಸಿ.
- ಹಿಟ್ಟು ಸಿದ್ಧವಾದ ಬಳಿಕ ಒಲೆ ಆಫ್ ಮಾಡಿ ಹಾಗೂ ಅದು ಗಟ್ಟಿಯಾಗದಂತೆ ಮುಚ್ಚಳದಿಂದ ಮುಚ್ಚಿ.
- ಈಗ ಒಲೆ ಆನ್ ಮಾಡಿ, ಅದರ ಮೇಲೆ ಕಡಾಯಿ ಇಡಿ, ಡೀಪ್ ಫ್ರೈಗೆ ಬೇಕಾದಷ್ಟು ಎಣ್ಣೆಯನ್ನು ಸುರಿದು ಬಿಸಿ ಮಾಡಿ.
- ಎಣ್ಣೆ ಬಿಸಿಯಾಗುವ ಮೊದಲು, ಬೆಚ್ಚಗಿನ ಹಿಟ್ಟಿನ ಮಿಶ್ರಣವನ್ನು ಒಂದು ತಟ್ಟೆಗೆ ತೆಗೆದುಕೊಂಡು ಚೆನ್ನಾಗಿ ಮಿಕ್ಸ್ ಮಾಡಿ. ಸಣ್ಣ ಉಂಡೆಗಳನ್ನಾಗಿ ಮಾಡಿಕೊಂಡು, ಚಪಾತಿ ಮಣೆಯ ತುಪ್ಪ ಸವರಿ ಅವುಗಳನ್ನು ಚಿಕ್ಕ ಪೂರಿಗಳಂತೆ ರೆಡಿ ಮಾಡಬೇಕಾಗುತ್ತದೆ.
- ಈ ಕಜ್ಜಾಯಗಳನ್ನು ಕುದಿಯುತ್ತಿರುವ ಎಣ್ಣೆಯಲ್ಲಿ ಬಿಟ್ಟು ಕರಿಯಿರಿ. ಒಂದು ನಿಮಿಷ ಅಲ್ಲಿಯೇ ಬಿಡಿ, ಬಳಿಕ ಅದನ್ನು ಎರಡೂ ಬದಿಗಳಲ್ಲಿ ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಫ್ರೈ ಮಾಡಿ, ನಂತರ ಎಣ್ಣೆಯಿಂದ ಸೋಸಿ ತಟ್ಟೆಯಲ್ಲಿ ತೆಗೆಯಿರಿ.
- ಈ ರೀತಿ ಎಲ್ಲಾ ಕಜ್ಜಾಯಗಳನ್ನು (Sankranti Special Kajjaya Recipe) ರೆಡಿ ಮಾಡಬೇಕಾಗುತ್ತದೆ. ಕೆಲವೇ ನಿಮಿಷಗಳಲ್ಲಿ ಕಜ್ಜಾಯಗಳನ್ನು ಸಿದ್ಧಪಡಿಸಬಹುದು
- ಈ ರೆಸಿಪಿ ನಿಮಗೆ ಇಷ್ಟವಾದರೆ, ಸಂಕ್ರಾಂತಿ ಹಬ್ಬಕ್ಕೆ ಟ್ರೈ ಮಾಡಿ.
ಇದನ್ನೂ ಓದಿ: ಸಂಕ್ರಾಂತಿ ವಿಶೇಷ: 'ಬೆಲ್ಲದ ಉದ್ದಿನಬೇಳೆ ಲಡ್ಡು' ಸಿದ್ಧಪಡಿಸೋದು ತುಂಬಾ ಸರಳ!
ಸಂಕ್ರಾಂತಿ ವಿಶೇಷ: ರವೆ ಲಡ್ಡು ಹೀಗೆ ಮಾಡಿದರೆ, ತಿಂಗಳವರೆಗೆ ಸಾಫ್ಟ್ & ತಾಜಾ ಆಗಿರುತ್ತೆ!