ETV Bharat / health

ಶುಗರ್​ ಪೇಷಂಟ್​ಗಳು ದಿನಕ್ಕೆಷ್ಟು ಬಾರಿ ಊಟ ಮಾಡಬೇಕು?: 3 ಬಾರಿಯಂತೂ ಅಲ್ಲ, ಇನ್ನೆಷ್ಟು ಬಾರಿ ಗೊತ್ತಾ? - HOW MANY MEALS SHOULD DIABETIC EAT

ಶುಗರ್​ ಪೇಷಂಟ್​ಗಳು ಪ್ರತಿದಿನ ಎಷ್ಟು ಬಾರಿ ಊಟ ಮಾಡಿದರೆ, ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣದಲ್ಲಿರುತ್ತದೆ ಎಂಬುದರ ಬಗ್ಗೆ ಆರೋಗ್ಯ ತಜ್ಞರು ವಿವರವಾಗಿ ತಿಳಿಸಿದ್ದಾರೆ.

HOW MANY MEALS SHOULD DIABETIC EAT  HOW MUCH FOOD SHOULD A DIABETIC EAT  HOW MANY TIMES SHOULD DIABETIC EAT  HOW MUCH SHOULD A DIABETIC EAT
ಸಾಂದರ್ಭಿಕ ಚಿತ್ರ (Getty Images)
author img

By ETV Bharat Health Team

Published : Feb 19, 2025, 6:31 PM IST

How Many Meals Should a Diabetic Eat: ನೀವು ಟೈಪ್ 2 ಡಯಾಬಿಟಿಸ್‌ ಇಲ್ಲವೇ ಪ್ರಿಡಯಾಬಿಟಿಸ್‌ನಿಂದ ಬಳಲುತ್ತಿದ್ದೀರಾ? ಹಾಗಾದ್ರೆ, ನೀವು ದಿನಕ್ಕೆ ಎಷ್ಟು ಬಾರಿ ಊಟ ಮಾಡುತ್ತೀರಿ? ಉಪಾಹಾರ, ಮಧ್ಯಾಹ್ನ ಊಟ, ರಾತ್ರಿ ಊಟ ಮಾಡುತ್ತೀರಾ? ಅಂದ್ರೆ, ನೀವು ನಿಮ್ಮ ದೈನಂದಿನ ಊಟ ಮೂರು ಭಾಗಗಳಾಗಿ ವಿಂಗಡಿಸುತ್ತೀರಾ? ಆದರೆ, ಇದಕ್ಕೆ ವ್ಯತಿರಿಕ್ತವಾಗಿ ದಿನಕ್ಕೆ ಮೂರು ಬಾರಿಗಿಂತ ಹೆಚ್ಚು ಊಟ ಮಾಡುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣದಲ್ಲಿ ಇರುತ್ತದೆ ಎಂದು ಆರೋಗ್ಯ ತಜ್ಞರು ತಿಳಿಸುತ್ತಾರೆ.

2018ರಲ್ಲಿ ಡಯಾಬಿಟಿಸ್ & ಮೆಟಾಬಾಲಿಸಮ್ ಜರ್ನಲ್‌ನಲ್ಲಿ ಪ್ರಕಟವಾದ 'ಮಧುಮೇಹ ಇರುವ ಪ್ರತಿಯೊಬ್ಬರಿಗೂ ದಿನಕ್ಕೆ ಮೂರು ಊಟ ತಿನ್ನುವುದು ಸೂಕ್ತವಲ್ಲದಿರಬಹುದು: ಯಾದೃಚ್ಛಿಕ ನಿಯಂತ್ರಿತ ಪ್ರಯೋಗ' (Eating three meals a day may not be optimal for everyone with diabetes: A randomized controlled trial) ಎಂಬ ಅಧ್ಯಯನದಲ್ಲಿ ವಿಷಯವು ಬಹಿರಂಗವಾಗಿದೆ. (ಸಂಶೋಧನಾ ವರದಿಗಾಗಿ ಇಲ್ಲಿ ಕ್ಲಿಕ್ ಮಾಡಿ). ನೀವು ನಿಜವಾಗಿಯೂ ಎಷ್ಟು ಬಾರಿ ಊಟ ಮಾಡಿದರೆ ಉತ್ತಮ ಎಂಬುದರ ಬಗ್ಗೆ ಅರಿತುಕೊಳ್ಳೋಣ.

HOW MANY MEALS SHOULD DIABETIC EAT  HOW MUCH FOOD SHOULD A DIABETIC EAT  HOW MANY TIMES SHOULD DIABETIC EAT  HOW MUCH SHOULD A DIABETIC EAT
ಮಧುಮೇಹಿಗಳು ದಿನಕ್ಕೆ ಎಷ್ಟು ಬಾರಿ ಊಟ ಮಾಡಬೇಕು? - ಸಾಂದರ್ಭಿಕ ಚಿತ್ರ (Getty Images)

ಅಧ್ಯಯನ ಏನು ಹೇಳುತ್ತೆ?: ಅಧ್ಯಯನದ ಭಾಗವಾಗಿ 47 ಡಯಾಬಿಟಿಸ್ ಹೊಂದಿರುವವರನ್ನು ಮೂರು ಗುಂಪುಗಳಾಗಿ ವಿಂಗಡಿಸಲಾಗಿಯಿತು. ಎರಡು ಗುಂಪುಗಳಲ್ಲಿ ಪ್ರಿಡಿಯಾಬಿಟಿಸ್ ಇರುವ ಜನರು ಸೇರಿದ್ದರೆ, ಇನ್ನೊಂದು ಗುಂಪಿನಲ್ಲಿ ಟೈಪ್ 2 ಮಧುಮೇಹ ಇರುವವರು ಸೇರಿದ್ದಾರೆ. ಬಳಿಕ, ಅವರ ತೂಕವನ್ನು ಕಾಪಾಡಿಕೊಳ್ಳಲು ಆಹಾರಕ್ರಮವನ್ನು ಅನುಸರಿಸಲು ಅವರಿಗೆ ಸೂಚಿಸಲಾಯಿತು. ಅವರಲ್ಲಿ ಕೆಲವರು ದಿನಕ್ಕೆ ಮೂರು ಬಾರಿ ಊಟ ಮಾಡುತ್ತಾರೆ. ಮತ್ತು ಇತರರು ದಿನಕ್ಕೆ ಆರು ಊಟಗಳನ್ನು 12 ವಾರಗಳವರೆಗೆ ಸೇವಿಸಿದರು. ಬಳಿಕ ವಿಧಾನವನ್ನು ಬದಲಾಯಿಸಲಾಯಿತು ಹಾಗೂ ಇನ್ನೂ 12 ವಾರಗಳವರೆಗೆ ಮುಂದುವರಿಸಲಾಯಿತು.

24 ವಾರಗಳ ಬಳಿಕ ಅವರನ್ನು ಪರೀಕ್ಷಿಸಿದಾಗ, ಕಡಿಮೆ ಪ್ರಮಾಣದಲ್ಲಿ ಹೆಚ್ಚು ಬಾರಿ ಊಟ ಮಾಡಿದವರಿಗೆ ಉತ್ತಮ ಫಲಿತಾಂಶಗಳನ್ನು ಲಭಿಸಿರುವುದು ಕಂಡುಬಂದಿದೆ. ಎಲ್ಲರೂ ಒಂದೇ ಪ್ರಮಾಣದ ಕ್ಯಾಲೊರಿಗಳನ್ನು ಸೇವಿಸಿದರೂ, ಅವರ ಸಕ್ಕರೆ ಮಟ್ಟವು ನಿಯಂತ್ರಣದಲ್ಲಿತ್ತು ಎಂದು ಸಂಶೋಧನೆಯಿಂದ ತಿಳಿದುಬಂದಿದೆ. ಪ್ರಿಡಯಾಬಿಟಿಸ್‌ ಇರುವ ರೋಗಿಗಳಲ್ಲಿ ರಕ್ತದಲ್ಲಿನ ಸಕ್ಕರೆ ಮಟ್ಟವು ಹೆಚ್ಚಾಗಲು ಬಹಳ ಸಮಯ ತೆಗೆದುಕೊಳ್ಳುತ್ತದೆ. ಇದಲ್ಲದೆ, ಮೂರು ಬಾರಿ ಊಟ ಮಾಡಿದವರಿಗಿಂತ ಆರು ಬಾರಿ ಊಟ ಮಾಡಿದವರಿಗೆ ಹಸಿವು ಕಡಿಮೆ ಇರುತ್ತದೆ ಎಂದು ಸಂಶೋಧಕರು ವಿವರಿಸುತ್ತಾರೆ.

ರಕ್ತದಲ್ಲಿನ ಗ್ಲೂಕೋಸ್ ಮಟ್ಟ: ಕಡಿಮೆ ಪ್ರಮಾಣದಲ್ಲಿ ಆಹಾರವನ್ನು ಹೆಚ್ಚು ಬಾರಿ ಸೇವಿಸುವುದರಿಂದ ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ. ಮಧುಮೇಹ ಅಥವಾ ಪ್ರಿಡಯಾಬಿಟಿಸ್ ಇಲ್ಲದೆ ತೂಕ ನಷ್ಟಕ್ಕೆ ಈ ವಿಧಾನವನ್ನು ಬಳಸಬಾರದು. ದಿನಕ್ಕೆ ಆರು ಬಾರಿ ಊಟ ಮಾಡುವುದರಿಂದ ತೂಕ ಇಳಿಸಿಕೊಳ್ಳಲು ಸಾಧ್ಯವಿಲ್ಲ ಎಂದು ತಜ್ಞರು ಸಲಹೆ ನೀಡುತ್ತಾರೆ.

2017ರಲ್ಲಿ ಜರ್ನಲ್ ಆಫ್ ನ್ಯೂಟ್ರಿಷನ್‌ನಲ್ಲಿ ಪ್ರಕಟವಾದ 'ಊಟದ ಆವರ್ತನ ಮತ್ತು ಸಮಯವು ಅಡ್ವೆಂಟಿಸ್ಟ್ ಆರೋಗ್ಯ ಅಧ್ಯಯನದಲ್ಲಿ ದೇಹ ದ್ರವ್ಯರಾಶಿ ಸೂಚ್ಯಂಕದಲ್ಲಿನ ಬದಲಾವಣೆಗಳೊಂದಿಗೆ ಸಂಬಂಧಿಸಿದೆ' ( Meal Frequency and Timing Are Associated with Changes in Body Mass Index in Adventist Health Study) ಎಂಬ ಅಧ್ಯಯನದಿಂದ ತಿಳಿದುಬಂದಿದೆ (ಸಂಶೋಧನಾ ವರದಿಗಾಗಿ ಇಲ್ಲಿ ಕ್ಲಿಕ್ ಮಾಡಿ).

ವಾರಕ್ಕೆ 150 ನಿಮಿಷಗಳವರೆಗೆ ವ್ಯಾಯಾಮ: ಪ್ರಿಡಯಾಬಿಟಿಸ್​ನಿಂದ ಬಳಲುತ್ತಿರುವ ಜನರು ದಿನಕ್ಕೆ ಆರು ಬಾರಿ ಊಟ ಮಾಡುವುದರಿಂದ ಟೈಪ್ 2 ಮಧುಮೇಹ ಬರುವ ಸಾಧ್ಯತೆ ಕಡಿಮೆಯಾಗುತ್ತದೆ. ಇದು ಮಾತ್ರವಲ್ಲದೆ ವಾರಕ್ಕೆ 150 ನಿಮಿಷಗಳವರೆಗೆ ಮಾಡುವ ವ್ಯಾಯಾಮವೂ ಉತ್ತಮ ಫಲಿತಾಂಶಗಳನ್ನು ನೀಡುತ್ತದೆ. ದಿನಕ್ಕೆ ಆರು ಬಾರಿ ಆಹಾರ ಸೇವನೆ ಮಾಡುವುದರಿಂದ ಕೆಲವು ಜನರು ಅತಿಯಾಗಿ ತಿನ್ನುವ ಸಾಧ್ಯತೆ ಇದೆ. ಇಡೀ ಕುಟುಂಬ ದಿನಕ್ಕೆ ಮೂರು ಹೊತ್ತು ಊಟ ಮಾಡಿದರೆ, ಶುಗರ್​ ಪೇಷಂಟ್​ಗಳು ಆರು ಬಾರಿ ಊಟ ಮಾಡುವುದು ಸ್ವಲ್ಪ ಕಷ್ಟ ಆಗುತ್ತದೆ. ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಲು ಹಲವು ಆಹಾರ ವಿಧಾನಗಳಿವೆ. ಇದು ಅವುಗಳಲ್ಲಿ ಒಂದು ವಿಧಾನ ಮಾತ್ರವಾಗಿದೆ. ಈ ವಿಧಾನವನ್ನು ಒಂದು ತಿಂಗಳ ಕಾಲ ಅನುಸರಿಸಿದರೆ, ನಂತರ ಸಂದರ್ಭಗಳಿಗೆ ಅನುಗುಣವಾಗಿ ಮುಂದುವರಿಸಲು ತಜ್ಞರು ಸೂಚಿಸುತ್ತಾರೆ.

ಹೆಚ್ಚಿನ ಮಾಹಿತಿಗೆ ಈ ವೆಬ್​ಸೈಟ್​ಗಳನ್ನು ವೀಕ್ಷಿಸಬಹುದು:

ಓದುಗರಿಗೆ ವಿಶೇಷ ಸೂಚನೆ: ಈ ಲೇಖನದಲ್ಲಿ ನಿಮಗೆ ನೀಡಿರುವ ಎಲ್ಲ ಆರೋಗ್ಯ ಮಾಹಿತಿ, ಸಲಹೆಗಳು ನಿಮ್ಮ ತಿಳಿವಳಿಕೆಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯನ್ನು ಆಧರಿಸಿ ನಾವು ಈ ಮಾಹಿತಿಯನ್ನು ಒದಗಿಸುತ್ತಿದ್ದೇವೆ. ಆದರೆ, ಇವುಗಳನ್ನು ಅನುಸರಿಸುವ ಮೊದಲು ಪರಿಣಿತ ವೈದ್ಯರ ಸಲಹೆಗಳನ್ನು ತೆಗೆದುಕೊಳ್ಳುವುದು ಉತ್ತಮ.

ಇವುಗಳನ್ನೂ ಓದಿ:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.