ETV Bharat / business

ಶುಭಸುದ್ದಿ: ವೈಯಕ್ತಿಕ, ಗೃಹ, ಕಾರು ಸಾಲಗಳ ಮೇಲಿನ ಬಡ್ಡಿದರ ಕಡಿತ: ಯಾವ ಬ್ಯಾಂಕ್‌ನಲ್ಲಿ ಎಷ್ಟು Interest? - PNB SLASHES RETAIL LOANS RATES

ಎಸ್‌ಬಿಐ ಹಾದಿ ಹಿಡಿದ ಪಂಜಾಬ್ ನ್ಯಾಷನಲ್ ಬ್ಯಾಂಕ್ - ಚಿಲ್ಲರೆ ಸಾಲಗಳ ಮೇಲಿನ ಬಡ್ಡಿದರದಲ್ಲಿ 25 ಬೇಸಿಸ್​ ಪಾಯಿಂಟ್ ಕಡಿತ. ಫೆಬ್ರವರಿ 10 ರಿಂದಲೇ ಅನ್ವಯವಾಗುವಂತೆ ಜಾರಿ.

pnb-slashes-retail-loans-rates-by-25-bps
ಶುಭಸುದ್ದಿ: ವೈಯಕ್ತಿಕ, ಗೃಹ, ಕಾರು ಸಾಲಗಳ ಮೇಲಿನ ಬಡ್ಡಿದರ ಕಡಿತ: ಯಾವ ಬ್ಯಾಂಕ್‌ನಲ್ಲಿ ಎಷ್ಟು Interest? (ETV Bharat)
author img

By ETV Bharat Karnataka Team

Published : Feb 21, 2025, 8:16 AM IST

PNB Slashes Retail Loans Rates : ಸಾರ್ವಜನಿಕ ವಲಯದ ಪ್ರಮುಖ ಬ್ಯಾಂಕ್ ಆಗಿರುವ ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB) ಚಿಲ್ಲರೆ ಸಾಲಗಳ ಮೇಲಿನ ಬಡ್ಡಿದರಗಳನ್ನು 25 ಬೇಸಿಸ್​ ಪಾಯಿಂಟ್ಸ್​ ಕಡಿತಗೊಳಿಸುವುದಾಗಿ ಗುರುವಾರ ಪ್ರಕಟಿಸಿದೆ. ಇದರೊಂದಿಗೆ, ವೈಯಕ್ತಿಕ ಸಾಲ ಸೇರಿದಂತೆ ಗೃಹ, ವಾಹನ ಮತ್ತು ಶಿಕ್ಷಣ ಸಾಲಗಳ ಮೇಲಿನ ಬಡ್ಡಿದರಗಳ ಹೊರೆ ಬಹಳವಾಗಿ ಕಡಿಮೆಯಾಗಲಿದೆ.

ಆರ್​​​​ ಬಿಐ ಸುಮಾರು 5 ವರ್ಷಗಳ ನಂತರ ರೆಪೊ ದರ ಕಡಿಮೆ ಮಾಡಿದೆ. ಇದರೊಂದಿಗೆ ಬ್ಯಾಂಕ್‌ಗಳು ತಮ್ಮ ಸಾಲದ ಬಡ್ಡಿದರಗಳನ್ನು ಪರಿಷ್ಕರಿಸುತ್ತಿವೆ. ಇತ್ತೀಚೆಗೆ ದೇಶದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಬಡ್ಡಿದರಗಳನ್ನು ಕಡಿಮೆ ಮಾಡಿದೆ ಮತ್ತು ಈಗ ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ) ಸಹ ಇದೇ ನಿರ್ಧಾರವನ್ನು ತೆಗೆದುಕೊಂಡಿದೆ. PNB ತನ್ನ ಚಿಲ್ಲರೆ ಸಾಲಗಳ ಮೇಲಿನ ಬಡ್ಡಿದರವನ್ನು 25 ಮೂಲಾಂಶಗಳವರೆಗೆ ಕಡಿಮೆ ಮಾಡುತ್ತಿದೆ ಎಂದು ಗುರುವಾರ ಘೋಷಿಸಿದೆ.

ಗೃಹ, ವಾಹನ ಮತ್ತು ಶಿಕ್ಷಣ ಸಾಲಗಳ ಮೇಲಿನ ಬಡ್ಡಿದರ ಇಳಿಕೆ: ಬಡ್ಡಿದರಗಳಲ್ಲಿನ ಈ ಕಡಿತವು ವೈಯಕ್ತಿಕ ಸಾಲಗಳಿಗೆ ಮತ್ತು ಮನೆ, ವಾಹನ ಮತ್ತು ಶಿಕ್ಷಣ ಸಾಲಗಳಿಗೆ ಅನ್ವಯಿಸುತ್ತದೆ. ಇತ್ತೀಚಿನ ಪರಿಷ್ಕರಣೆಯೊಂದಿಗೆ, ಪಿಎನ್‌ಬಿಯಲ್ಲಿ ಗೃಹ ಸಾಲಗಳ ಮೇಲಿನ ಆರಂಭಿಕ ಬಡ್ಡಿ ದರವು ಶೇಕಡಾ 8.15 ಕ್ಕೆ ಇಳಿಕೆ ಕಂಡಿದೆ. ರೂ.1 ಲಕ್ಷ ಸಾಲಕ್ಕೆ ಮಾಸಿಕ ಕಂತು (ಇಎಂಐ) ರೂ.744 ಆಗಲಿದೆ ಎಂದು ಪಿಎನ್‌ಬಿ ತಿಳಿಸಿದೆ. ಹೊಸ ದರಗಳು ಫೆಬ್ರವರಿ 10 ರಿಂದಲೇ ಅನ್ವಯವಾಗುವಂತೆ ಜಾರಿ ಮಾಡಲಾಗಿದೆ.

  • ಆಟೋಮೊಬೈಲ್ ಸಾಲಗಳ ಮೇಲಿನ ಬಡ್ಡಿ ದರವು ಶೇ 8.50 ರಿಂದ ಪ್ರಾರಂಭವಾಗುತ್ತದೆ. ಅಂದರೆ ಮಾಸಿಕ ಕಂತು (ಇಎಂಐ) ರೂ.1,240 ರಿಂದ ಪ್ರಾರಂಭವಾಗುತ್ತದೆ.
  • ಶಿಕ್ಷಣ ಸಾಲದ ಮೇಲಿನ ಕನಿಷ್ಠ ಬಡ್ಡಿಯನ್ನು ಶೇ.7.85ಕ್ಕೆ ಇಳಿಸಲಾಗಿದೆ ಎಂದು ಪಿಎನ್‌ಬಿ ತಿಳಿಸಿದೆ.
  • ರೂ.20 ಲಕ್ಷದವರೆಗಿನ ವೈಯಕ್ತಿಕ ಸಾಲಗಳ ಮೇಲಿನ ಪರಿಷ್ಕೃತ ಬಡ್ಡಿ ದರವು ಶೇ11.25 ಆಗಿರುತ್ತದೆ.
  • ಫೆಬ್ರವರಿ 7, 2025 ರಂದು, ಭಾರತೀಯ ರಿಸರ್ವ್ ಬ್ಯಾಂಕ್ ರೆಪೊ ದರವನ್ನು 25 ಬೇಸಿಸ್ ಪಾಯಿಂಟ್‌ಗಳಿಂದ 6.50 ಪ್ರತಿಶತದಿಂದ 6.25 ಪ್ರತಿಶತಕ್ಕೆ ಇಳಿಸಿತ್ತು. ಇದರೊಂದಿಗೆ ಬ್ಯಾಂಕುಗಳು ತಮ್ಮ ಸಾಲದ ಮೇಲಿನ ಬಡ್ಡಿದರವನ್ನು ಕಡಿಮೆ ಮಾಡುತ್ತಿವೆ.

ಗೃಹ ಸಾಲದ ಮೇಲೆ ವಿವಿಧ ಬ್ಯಾಂಕ್‌ಗಳು ವಿಧಿಸುವ ಬಡ್ಡಿ ದರಗಳ ವಿವರ ಇಂತಿದೆ!

  • ಕೋಟಕ್ ಮಹೀಂದ್ರಾ ಬ್ಯಾಂಕ್ - 8.75 ಪ್ರತಿಶತದಿಂದ ಆರಂಭ
  • ಬ್ಯಾಂಕ್ ಆಫ್ ಬರೋಡಾ - 8.40
  • HDFC ಬ್ಯಾಂಕ್ - 8.75 ಪ್ರತಿಶತ
  • ಆಕ್ಸಿಸ್ ಬ್ಯಾಂಕ್ - ಶೇಕಡಾ 8.75
  • IDBI ಬ್ಯಾಂಕ್ - 8.50 ಪ್ರತಿಶತ
  • ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ - ಶೇಕಡಾ 8.35
  • ಎಲ್ಐಸಿ ಹೌಸಿಂಗ್ ಫೈನಾನ್ಸ್ - ಶೇ.8.50
  • ಬ್ಯಾಂಕ್ ಆಫ್ ಇಂಡಿಯಾ - 8.40 ಪ್ರತಿಶತ
  • ಕೆನರಾ ಬ್ಯಾಂಕ್ - ಶೇಕಡಾ 8.40

(ಮೂಲ: 17 ಫೆಬ್ರವರಿ 2025 ರಂತೆ ಆಯಾ ಬ್ಯಾಂಕ್‌ಗಳ ಅಧಿಕೃತ ವೆಬ್‌ಸೈಟ್‌ಗಳಲ್ಲಿ ಲಭ್ಯವಿರುವ ಮಾಹಿತಿಯ ಆಧಾರದ ಮೇಲೆ ಈ ಕೋಷ್ಟಕವನ್ನು ನೀಡಲಾಗಿದೆ.)

ETV Bharat Logo

Copyright © 2025 Ushodaya Enterprises Pvt. Ltd., All Rights Reserved.