ETV Bharat / state

ಡ್ರಗ್ಸ್ ಪ್ರಕರಣ ಸಂಬಂಧ ರಾಜ್ಯದಲ್ಲಿ 200 ಮಂದಿ ವಿದೇಶಿಗರ ಮೇಲೆ ಕ್ರಮ: ಪರಮೇಶ್ವರ್ - DRUG CASES

ಬೆಂಗಳೂರು ಸೇರಿದಂತೆ ಕರ್ನಾಟಕದಲ್ಲಿ ಸರಬರಾಜು ಆಗುತ್ತಿರುವ ಡ್ರಗ್ಸ್‌ ನಿಯಂತ್ರಣಕ್ಕೆ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದ್ದು, ಡ್ರಗ್ಸ್ ಬಳಕೆ ಮತ್ತು ಮಾರಾಟ ನಿಲ್ಲಿಸಲಾಗಿದೆ ಅಂತ ಡಿಕ್ಲೇರ್ ಮಾಡಿರುವುದಾಗಿ ಸಚಿವ ಜಿ. ಪರಮೇಶ್ವರ್ ತಿಳಿಸಿದ್ದಾರೆ.

PARAMESHWARA ON DRUG CASE
ಗೃಹ ಸಚಿವ ಜಿ. ಪರಮೇಶ್ವರ್ (ETV Bharat)
author img

By ETV Bharat Karnataka Team

Published : Feb 22, 2025, 6:57 AM IST

ತುಮಕೂರು: ಡ್ರಗ್ಸ್ ಬಳಕೆಗೆ ಸಂಬಂಧಿಸಿದಂತೆ ರಾಜ್ಯದಲ್ಲಿ ಇತ್ತೀಚೆಗೆ ಸುಮಾರು 200 ಮಂದಿ ವಿದೇಶಿಗರ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಗೃಹ ಸಚಿವ ಜಿ. ಪರಮೇಶ್ವರ್ ತಿಳಿಸಿದ್ದಾರೆ.

ತುಮಕೂರಿನಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಹಲವು ದಿನಗಳಿಂದ ಕೋಟ್ಯಂತರ ರೂಪಾಯಿ ಮೌಲ್ಯದ ಕೆಜಿ ಗಟ್ಟಲೆ ಡ್ರಗ್ಸ್ ಅನ್ನು ಈಗಾಗಲೇ ವಶಕ್ಕೆ ಪಡೆದು ಸುಟ್ಟು ಹಾಕಿದ್ದೇವೆ. ಬಹಳ ಕಡೆ ಶಿಕ್ಷೆ ಕೂಡ ಪ್ರಕಟವಾಗಿದೆ ಎಂದು ಮಾಹಿತಿ ನೀಡಿದರು.

ಗೃಹ ಸಚಿವ ಜಿ. ಪರಮೇಶ್ವರ್ (ETV Bharat)

ಬೆಂಗಳೂರು ಇರಬಹುದು ಅಥವಾ ರಾಜ್ಯದ ಯಾವುದೇ ಭಾಗದಲ್ಲಿಯಾದರೂ ವ್ಹೀಲಿಂಗ್​ ಮಾಡುವ ಬಗ್ಗೆ ಪೊಲೀಸ್ ಇಲಾಖೆ ಕಠಿಣವಾಗಿ ಕ್ರಮ ತೆಗೆದುಕೊಳ್ಳಲಿದೆ. ಅಲ್ಲದೇ ರಾಜ್ಯದಲ್ಲಿ ಡ್ರಗ್ಸ್ ಬಳಕೆ ಮತ್ತು ಮಾರಾಟ ನಿಲ್ಲಿಸಲಾಗಿದೆ ಅಂತ ಡಿಕ್ಲೇರ್ ಮಾಡಿದ್ದೇವೆ ಎಂದರು.

ಈ ಬಗ್ಗೆ ಸಂಬಂಧಪಟ್ಟ ಎಂಬೆಸ್ಸಿಗಳಿಗೆ ಕೂಡ ಮಾಹಿತಿ ನೀಡಲಾಗಿದೆ. ಅನೇಕ ಮಂದಿ ವಿದೇಶಿ ವಿದ್ಯಾರ್ಥಿಗಳು ವೀಸಾ ಪಡೆದು ಇಲ್ಲಿಗೆ ಬರುತ್ತಿದ್ದಾರೆ. ವೀಸಾ ಅವಧಿ ಮುಗಿದರೂ ಇಲ್ಲಿಯೇ ಇರುತ್ತಿರುವ ಮಾಹಿತಿ ಲಭ್ಯವಾಗಿದೆ. ಅವರನ್ನು ಪತ್ತೆ ಹಚ್ಚಿ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದರು.

ಇದನ್ನೂ ಓದಿ: ವಶಕ್ಕೆ ಪಡೆದ 38.11 ಕೋಟಿ ಮೌಲ್ಯದ ಮಾದಕ ಪದಾರ್ಥಗಳನ್ನು ನಾಶಪಡಿಸಿದ ಬೆಂಗಳೂರು ಪೊಲೀಸರು - DRUGS DESTROYED

ETV Bharat Logo

Copyright © 2025 Ushodaya Enterprises Pvt. Ltd., All Rights Reserved.