ETV Bharat / bharat

PM ಮಹತ್ವಾಕಾಂಕ್ಷೆಯ ಅಮೃತ ಭಾರತ ಎಕ್ಸ್‌ಪ್ರೆಸ್ ಪ್ರಾಯೋಗಿಕ ಪರೀಕ್ಷೆ ಇಂದು: ಈ ರೈಲಲ್ಲಿ ಏನೇನೆಲ್ಲಾ ವ್ಯವಸ್ಥೆ ಇದೆ ಗೊತ್ತಾ? - AMRUT BHARAT EXPRESS EXCLUSIVE NEWS

ಅಮೃತ್ ಭಾರತ್ ಎಕ್ಸ್‌ಪ್ರೆಸ್ ರೈಲನ್ನು ಇಂದು ಇಗತ್‌ಪುರಿಯಿಂದ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ ಮಾರ್ಗದಲ್ಲಿ ಪ್ರಾಯೋಗಿಕ ಪರೀಕ್ಷಾರ್ಥ ಸಂಚಾರ ಮಾಡಲಾಗುವುದು.

Etv Bharat
Etv Bharat (Etv Bharat)
author img

By ETV Bharat Karnataka Team

Published : Feb 21, 2025, 9:47 AM IST

ಮುಂಬೈ, ಮಹಾರಾಷ್ಟ್ರ: ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಯೋಜನೆಗಳಲ್ಲಿ ಒಂದಾದ ಅಮೃತ್ ಭಾರತ್ ಎಕ್ಸ್‌ಪ್ರೆಸ್ ರೈಲು ಪರೀಕ್ಷೆಯ ಹಂತದಲ್ಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ವಂದೇ ಭಾರತ್ ಎಕ್ಸ್‌ಪ್ರೆಸ್ ಅನಾವರಣಗೊಳಿಸಿದ ನಂತರ, ತನ್ನ ದುಬಾರಿ ಟಿಕೆಟ್‌ಗಳಿಗಾಗಿ ಈ ರೈಲು ಭಾರೀ ಟೀಕೆಗೆ ಗುರಿಯಾಗಿತ್ತು.

ಹಾಗಾಗಿ, ಇದಕ್ಕೆ ಪರ್ಯಾಯವಾಗಿ ನಾನ್ ಎಸಿ ಅಮೃತ್ ಭಾರತ್ ಎಕ್ಸ್ ಪ್ರೆಸ್ ಆರಂಭಿಸಲಾಗಿದೆ. ಮಹಾರಾಷ್ಟ್ರವು ಇನ್ನೂ ಅಮೃತ್ ಭಾರತ್ ಎಕ್ಸ್‌ಪ್ರೆಸ್ ರೈಲಿನ ಓಡಾಟ ಆರಂಭಿಸದಿದ್ದರೂ ರೈಲ್ವೆ ಇಲಾಖೆ ಮಹಾರಾಷ್ಟ್ರದ ವಿವಿಧ ವಿಭಾಗಗಳಲ್ಲಿ ರೈಲು ಓಡಿಸುವ ಮೂಲಕ ಪ್ರಯೋಗ ಮಾಡಲಾಗುತ್ತಿದೆ. ಪಶ್ಚಿಮ ರೈಲ್ವೆಯ ಮುಂಬೈ ಸೆಂಟ್ರಲ್ ನಂತರ, ಈಗ ಈ ರೈಲು ಸೆಂಟ್ರಲ್ ರೈಲ್ವೆಯ ಮಜಗಾಂವ್ ಕಾರ್​ ಶೆಡ್​ ತಲುಪಿದೆ.

Amrut Bharat Express exclusive news
ಇಗತ್‌ಪುರಿಯಿಂದ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ ಮಾರ್ಗದಲ್ಲಿ ಪ್ರಾಯೋಗಿಕ ಪರೀಕ್ಷೆ (ETV Bharat)

ಸೆಂಟ್ರಲ್ ರೈಲ್ವೆ ನೀಡಿದ ಮಾಹಿತಿಯ ಪ್ರಕಾರ, ಫೆಬ್ರವರಿ 21 ರಂದು ಅಂದರೆ ಶುಕ್ರವಾರವಾದ ಇಂದು ಅಮೃತ್ ಭಾರತ್ ಎಕ್ಸ್‌ಪ್ರೆಸ್ ರೈಲನ್ನು ಪರೀಕ್ಷಾರ್ಥ ಸಂಚಾರಕ್ಕೆ ಒಳಪಡಿಸಲಾಗುತ್ತದೆ. ಇಗತ್‌ಪುರಿಯಿಂದ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ ನಿಲ್ದಾಣದವರೆಗಿನ ಮಾರ್ಗದಲ್ಲಿ ಈ ರೈಲು ಪರೀಕ್ಷಾರ್ಥವಾಗಿ ಸಂಚರಿಸಲಿದೆ. ಈ ಪರೀಕ್ಷೆಯ ನಂತರ ವರದಿ ಸಿದ್ಧಪಡಿಸಿ ರೈಲ್ವೆ ಮಂಡಳಿಗೆ ಕಳುಹಿಸಿ ಕೊಡಲಾಗುತ್ತದೆ. ಕೆಲವು ದಿನಗಳ ಹಿಂದೆ ಪಶ್ಚಿಮ ರೈಲ್ವೆಯ ಮುಂಬೈ ಸೆಂಟ್ರಲ್ ನಿಲ್ದಾಣದಲ್ಲಿ ಪ್ರಾಯೋಗಿಕ ಸಂಚಾರ ನಡೆಸಲಾಗಿತ್ತು. ಈ ಪರೀಕ್ಷಾರ್ಥ ಪ್ರಯೋಗದ ನಂತರ ಈ ರೈಲು ಈಗ ಕೇಂದ್ರ ರೈಲ್ವೆಯ ಛತ್ರಪತಿ ಶಿವಾಜಿ ಮಹಾರಾಜ್ ನಿಲ್ದಾಣವನ್ನು ಪ್ರವೇಶಿಸಿದೆ.

ಈ ಎಲ್ಲ ಸೌಲಭ್ಯಗಳು ಇದರಲ್ಲುಂಟು: ಅಮೃತ್ ಭಾರತ್ ಎಕ್ಸ್‌ಪ್ರೆಸ್‌ನ ಪ್ರಯಾಣಿಕರಿಗೆ ವಿವಿಧ ಸೌಲಭ್ಯಗಳನ್ನು ಒದಗಿಸಲು ಇಂಡಿಯನ್​ ರೈಲ್ವೆ ಎಲ್ಲ ಕ್ರಮಗಳನ್ನು ಕೈಗೊಂಡಿದೆ. ಈ ರೈಲಿನಲ್ಲಿ ಭದ್ರತೆಗಾಗಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಈ ಮೂಲಕ ರೈಲಿನಲ್ಲಿ ಗಲಾಟೆ ಮಾಡುವ ಮತ್ತು ರೈಲನ್ನು ಧ್ವಂಸ ಮಾಡುವ ಕಿಡಿಗೇಡಿಗಳ ಮೇಲೂ ನಿಗಾ ಇಡಬಹುದಾಗಿದೆ. ವಂದೇ ಭಾರತ್ ಎಕ್ಸ್‌ಪ್ರೆಸ್‌ನಂತೆಯೇ, ಅಮೃತ ಭಾರತ ರೈಲಿನಲ್ಲೂ ಟಾಕ್ ಬ್ಯಾಂಕ್ ವ್ಯವಸ್ಥೆ ಮಾಡಲಾಗಿದೆ. ಇದರ ಮೂಲಕ ಪ್ರಯಾಣಿಕರು ತುರ್ತು ಸಂದರ್ಭದಲ್ಲಿ ನೇರವಾಗಿ ಲೊಕೊ ಪೈಲಟ್ ಮತ್ತು ರೈಲು ವ್ಯವಸ್ಥಾಪಕರನ್ನು ಸಂಪರ್ಕಿಸಬಹುದು. ಈ ರೈಲುಗಳಲ್ಲಿನ ವಾಶ್‌ರೂಮ್‌ಗಳನ್ನು ನಿರ್ವಾತ ಜೈವಿಕ-ಶೌಚಾಲಯಗಳು ಮತ್ತು ಆರಾಮದಾಯಕ ಆಸನಗಳೊಂದಿಗೆ ಸುಧಾರಿಸಲಾಗಿದೆ.

ಈಗ ಪ್ರಾಯೋಗಿಕ ಪರೀಕ್ಷೆ ಏಕೆ?: ಪರೀಕ್ಷೆಯ ಸಮಯದಲ್ಲಿ ಬ್ರೇಕಿಂಗ್ ಸಿಸ್ಟಮ್, ಏರ್ ಸಸ್ಪೆನ್ಷನ್, ಕಪ್ಲರ್ ಫೋರ್ಸ್ ಮತ್ತು ರೈಲಿನ ವೇಗದ ಸಾಮರ್ಥ್ಯವನ್ನು ಪರಿಶೀಲಿಸಲಾಗುತ್ತದೆ. ರೈಲು ಗಂಟೆಗೆ 130 ಕಿಲೋಮೀಟರ್ ವೇಗದಲ್ಲಿ ಸಂಚರಿಸಲಿದೆ. ಅಂಕುಡೊಂಕಾದ ಟ್ರ್ಯಾಕ್‌ಗಳಲ್ಲಿಯೂ ಸರಾಗವಾಗಿ ಚಲಿಸುವಂತೆ ರೂಪಿಸಲಾಗಿದೆ.

'ಅಮೃತ್ ಭಾರತ್' ಸ್ಲೀಪರ್ ಎಕ್ಸ್‌ಪ್ರೆಸ್ 16 ಬೋಗಿಗಳನ್ನು ಹೊಂದಿದ್ದು, 11 ಎಸಿ-3 ಟೈರ್‌ ಕೋಚ್​​​​​​​​ , 4 ಎಸಿ-2 ಟೈರ್‌ ಮತ್ತು 1 ಫಸ್ಟ್ ಎಸಿ ಕೋಚ್‌ ಒಳಗೊಂಡಿರಲಿದೆ. ಪ್ರತಿಯೊಂದು ಕಂಪಾರ್ಟ್‌ಮೆಂಟ್‌ಗೆ ಪ್ರತ್ಯೇಕ ಚಾರ್ಜಿಂಗ್ ಪೋರ್ಟ್, ಫೋಲ್ಡಬಲ್ ಸ್ನ್ಯಾಕ್ ಟೇಬಲ್, ಎಲ್‌ಇಡಿ ಲೈಟಿಂಗ್, ಲ್ಯಾಪ್‌ಟಾಪ್ ಚಾರ್ಜಿಂಗ್ ಸೌಲಭ್ಯವಿದೆ. ಪ್ರಯಾಣಿಕರ ಸುರಕ್ಷತೆಗಾಗಿ, ಸಂಪೂರ್ಣ ಕೋಚ್ ಅನ್ನು ಅಗ್ನಿಶಾಮಕ ಸುರಕ್ಷತಾ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ದೃಷ್ಟಿಹೀನ ಪ್ರಯಾಣಿಕರಿಗೆ ಬ್ರೈಲ್ ನ್ಯಾವಿಗೇಷನ್ ಒದಗಿಸಲಾಗಿದೆ.

ರೈಲ್ವೆ ಆಡಳಿತವು ಪ್ರಯಾಣಿಕರ ಅನುಕೂಲಕ್ಕಾಗಿ ಈ ರೈಲಿನಲ್ಲಿ ಪ್ಯಾಂಟ್ರಿ ಕಾರುಗಳು, ಗಾರ್ಡ್ ಕೋಚ್‌ಗಳು ಮತ್ತು ಲಗೇಜ್‌ಗಾಗಿ ವಿಶೇಷ ವಿಭಾಗಗಳನ್ನು ಒದಗಿಸಿದೆ.

ಇದನ್ನು ಓದಿ: ದರ ಹೆಚ್ಚಳದ ಬಿಸಿ; ನಮ್ಮ ಮೆಟ್ರೋ ಪ್ರಯಾಣಿಕರ ಸಂಖ್ಯೆಯಲ್ಲಿ ಕುಸಿತ

ಗೂಗಲ್​ನ ವಿಶ್ವದ ಅತಿದೊಡ್ಡ ಕ್ಯಾಂಪಸ್ 'ಅನಂತ' ಬೆಂಗಳೂರಿನಲ್ಲಿ ಕಾರ್ಯಾರಂಭ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.