ಬಳ್ಳಾರಿ: ರಾಜಸ್ಥಾನದ ಬಟ್ಟೆ ವ್ಯಾಪಾರಿಯೊಬ್ಬ ತನ್ನ ಪತ್ನಿಯನ್ನು ನೀರಿನ ಪ್ಲಾಸ್ಕ್‌ನಿಂದ ಹೊಡೆದು ಕೊಂದು, ತಾನೂ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಗರದ ಗ್ಲಾಸ್ ಬಜಾರ್‌ನಲ್ಲಿ ಇಂದು ನಡೆದಿದೆ. ಶಂಕರ್ ರಾಮ್ (40), ಶಾಂತಿ ದೇವಿ (34) ಮೃತರು.
ದಂಪತಿಗೆ ಒಬ್ಬ ಹೆಣ್ಣು, ಇಬ್ಬರು ಗಂಡು ಮಕ್ಕಳಿದ್ದಾರೆ. ನಗರದಲ್ಲಿ 15 ವರ್ಷಗಳಿಂದ ನೆಲೆಸಿದ್ದ ಶಂಕರ್ ರಾಮ್, ಜೀನ್ಸ್ ಅಂಗಡಿ ಇಟ್ಟುಕೊಂಡಿದ್ದರು. ಪತ್ನಿಯನ್ನು ಕೊಂದ ಬಳಿಕ ಭಯದಲ್ಲಿ ಶಂಕರ್ ರಾಮ್ ನೇಣಿಗೆ ಶರಣಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ನಗರದ ಬ್ರೂಸ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
"ಘಟನೆಗೆ ಸ್ಪಷ್ಟ ಕಾರಣ ಗೊತ್ತಿಲ್ಲ. ಇಬ್ಬರ ನಡುವೆ ಆಗಾಗ ಸಣ್ಣಪುಟ್ಟ ಜಗಳವಾಗುತ್ತಿತ್ತು. ಅದನ್ನು ಹೊರತುಪಡಿಸಿ ಅನ್ಯೋನ್ಯವಾಗಿಯೇ ಇದ್ದರು" ಎಂದು ನೆರೆಹೊರೆಯವರು ತಿಳಿಸಿದ್ದಾರೆ.
ಇದನ್ನೂ ಓದಿ: ಪ್ರಿಯಕರನ ಹತ್ಯೆಗೈದು ಪತ್ನಿ ಮೇಲೆ ಮಾರಣಾಂತಿಕ ಹಲ್ಲೆ; ಪತಿ ಸೇರಿ ಮೂವರು ಸೆರೆ
ಇದನ್ನೂ ಓದಿ: ಬೆಂಗಳೂರು: ಡ್ರಗ್ ಮಾರಾಟಕ್ಕೆ ಬಂದ ವಿದೇಶಿ ಪ್ರಜೆ ಹತ್ಯೆ - ಓರ್ವನ ಬಂಧನ