ETV Bharat / state

2024-25 ಸಾಲಿನ ಇಲಾಖಾವಾರು ಬಜೆಟ್ ಅನುಷ್ಠಾನದ ಸ್ಥಿತಿಗತಿ ಹೇಗಿದೆ? ಇಲ್ಲಿದೆ ಕಂಪ್ಲೀಟ್​ ಮಾಹಿತಿ - BUDGET IMPLEMENTATION STATUS

ಕೆಡಿಪಿ ಪ್ರಗತಿ ಅಂಕಿ-ಅಂಶದ ಪ್ರಕಾರ, 2024-25 ಬಜೆಟ್ ವರ್ಷದ 10 ತಿಂಗಳಲ್ಲಿ ಇಲಾಖಾವಾರು ಒಟ್ಟು 62% ಆರ್ಥಿಕ ಪ್ರಗತಿಯಾಗಿದೆ. ಈ ಕುರಿತ ಮಾಹಿತಿ ಇಲ್ಲಿದೆ.

Vidhana Soudha
ವಿಧಾನಸೌಧ (ETV Bharat)
author img

By ETV Bharat Karnataka Team

Published : Feb 22, 2025, 6:00 PM IST

ಬೆಂಗಳೂರು : 2024-25 ಬಜೆಟ್ ವರ್ಷ ಮುಕ್ತಾಯದ ಅಂಚಿನಲ್ಲಿದೆ. ಇನ್ನೆರಡು ತಿಂಗಳಲ್ಲಿ ಆರ್ಥಿಕ‌ ವರ್ಷ ಮುಕ್ತಾಯವಾಗಲಿದೆ. 2025-26 ಸಾಲಿನ‌ ಬಜೆಟ್ ಮಂಡನೆಗೆ ಸಿಎಂ ಸಿದ್ದರಾಮಯ್ಯ ಪೂರ್ವ ತಯಾರಿ ಆರಂಭಿಸಿದ್ದಾರೆ. ಈ ಮಧ್ಯೆ ಪ್ರಸಕ್ತ ಬಜೆಟ್ ವರ್ಷದ ಇಲಾಖಾವಾರು ಆರ್ಥಿಕ ಪ್ರಗತಿಯ ಸ್ಥಿತಿಗತಿ ಏನಿದೆ ಎಂಬುದರ ಕುರಿತ ವರದಿ ಇಲ್ಲಿದೆ.

ಕಾಂಗ್ರೆಸ್ ಸರ್ಕಾರ ಪಂಚ ಗ್ಯಾರಂಟಿ ಕೇಂದ್ರೀಕೃತ ಆಡಳಿತ ನಡೆಸುತ್ತಿದೆ. 2024-25 ಸಾಲಿನ ಬಜೆಟ್ ವರ್ಷದ 10 ತಿಂಗಳು ಕಳೆದಿದೆ. ಇನ್ನೇನು ಬಜೆಟ್ ವರ್ಷ ಮುಕ್ತಾಯವಾಗಲು ಎರಡು ತಿಂಗಳು ಉಳಿದಿದೆ. ಕಾಂಗ್ರೆಸ್ ಸರ್ಕಾರ ಪಂಚ ಗ್ಯಾರಂಟಿಗಳ ಬೃಹತ್ ಹೊರೆಯೊಂದಿಗೆ ಆಡಳಿತ ನಡೆಸುತ್ತಿದೆ. ಸಂಪನ್ಮೂಲಗಳ ಕ್ರೋಢೀಕರಣದ ಸವಾಲಿನ ಮಧ್ಯೆ ಬಜೆಟ್ ಅನುಷ್ಠಾನದಲ್ಲಿ ಸಮತೋಲನ ಕಾಪಾಡುವ ಸವಾಲು ಕಾಂಗ್ರೆಸ್ ಸರ್ಕಾರದ್ದಾಗಿದೆ. ಪಂಚ ಗ್ಯಾರಂಟಿ ಹೊರೆ ಹಾಗೂ ದುಪ್ಪಟ್ಟು ಬದ್ಧ ವೆಚ್ಚದ ಮಧ್ಯೆ ಸಿಎಂ ಸಿದ್ದರಾಮಯ್ಯ ಸರ್ಕಾರ ಬಜೆಟ್ ಅನುಷ್ಠಾನದ ಕಸರತ್ತು ನಡೆಸುತ್ತಿದೆ.

ಜನವರಿವರೆಗೆ ಇಲಾಖಾವಾರು ಆರ್ಥಿಕ ಪ್ರಗತಿ 62% : ಕೆಡಿಪಿ ಪ್ರಗತಿ ಅಂಕಿ-ಅಂಶದ ಪ್ರಕಾರ, 2024-25 ಬಜೆಟ್ ವರ್ಷದ 10 ತಿಂಗಳಲ್ಲಿ ಇಲಾಖಾವಾರು ಒಟ್ಟು 62% ಆರ್ಥಿಕ ಪ್ರಗತಿ ಕಂಡಿದೆ. ಪ್ರಸಕ್ತ ಆರ್ಥಿಕ ವರ್ಷದಲ್ಲಿ ಎಲ್ಲಾ ಇಲಾಖೆಗಳಿಗೆ ಒಟ್ಟು 3,22,042 ಕೋಟಿ ರೂ. ಬಜೆಟ್ ಅನುದಾನ ಹಂಚಿಕೆ ಮಾಡಲಾಗಿದೆ. ಈ ಪೈಕಿ ಜನವರಿ ವರೆಗೆ ಒಟ್ಟು 2,21,297 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ.

ಜನವರಿವರೆಗೆ ಒಟ್ಟು 1,99,930 ಕೋಟಿ ರೂ. ವೆಚ್ಚ ಮಾಡಲಾಗಿದೆ. ಆ ಮೂಲಕ ಒಟ್ಟು ಹಂಚಿಕೆ ಎದುರು 62% ಪ್ರಗತಿ ಸಾಧಿಸಲಾಗಿದೆ. ಕಳೆದ ಆರ್ಥಿಕ ವರ್ಷಕ್ಕೆ ಇದೇ ಅವಧಿಗೆ ಹೋಲಿಸಿದರೆ ಈ ಬಾರಿ ಇಲಾಖಾವಾರು ಆರ್ಥಿಕ ಪ್ರಗತಿ ಕುಂಠಿತವಾಗಿದೆ. ಕಳೆದ ಬಾರಿ 2023-24 ಸಾಲಿನ ಈ ಅವಧಿಗೆ 73.19% ರಷ್ಟು ಆರ್ಥಿಕ ಪ್ರಗತಿ ಸಾಧಿಸಲಾಗಿತ್ತು. ಕಳೆದ ಬಜೆಟ್ ವರ್ಷದಲ್ಲಿ ಜನವರಿವರೆಗೆ ಒಟ್ಟು 2,73,194 ಕೋಟಿ ಅನುದಾನ ಬಿಡುಗಡೆ ಮಾಡಲಾಗಿತ್ತು. ಈ ಪೈಕಿ 2,16,427 ಕೋಟಿ ವೆಚ್ಚ ಮಾಡಲಾಗಿತ್ತು. ಆದರೆ, ಕಳೆದ ಬಜೆಟ್ ವರ್ಷಕ್ಕೆ ಹೋಲಿಸಿದರೆ ಪ್ರಸಕ್ತ ಬಜೆಟ್ ವರ್ಷದಲ್ಲಿ ಇಲಾಖಾವಾರು ಒಟ್ಟು ಆರ್ಥಿಕ ಪ್ರಗತಿ ಸುಮಾರು 11% ಕುಂಠಿತ ಕಂಡಿದೆ.

ಇನ್ನೂ 1,00,745 ಕೋಟಿ ವಿನಿಯೋಗಕ್ಕೆ ಬಾಕಿ : ಪ್ರಸಕ್ತ ಬಜೆಟ್ ವರ್ಷದಲ್ಲಿ ಹಂಚಿಕೆಯಾದ ಎಲ್ಲಾ ಇಲಾಖೆಗಳ ಅನುದಾನದ ಪೈಕಿ ಉಳಿದಿರುವ ಅಂತಿಮ ಎರಡು ತಿಂಗಳಲ್ಲಿ 1,00,745 ಕೋಟಿ ರೂ. ಅನುದಾನ ವಿನಿಯೋಗ ಮಾಡಬೇಕಾಗಿದೆ. ಅಂದರೆ ಉಳಿದಿರುವ ಎರಡು ತಿಂಗಳಲ್ಲಿ ಬಜೆಟ್​ನಲ್ಲಿ ಹಂಚಿಕೆಯಾದ ಅನುದಾನದ ಪೈಕಿ ಸುಮಾರು 38% ರಷ್ಟು ಆರ್ಥಿಕ ಪ್ರಗತಿ ಕಾಣಬೇಕಾಗಿದೆ.

ಜನವರಿಯವರೆಗೆ ಎಲ್ಲಾ ಇಲಾಖೆಗಳಿಗೆ ಒಟ್ಟು 2,21,297 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ. ಈ ಪೈಕಿ 1,99,930 ಕೋಟಿ ರೂ. ವೆಚ್ಚ ಮಾಡಲಾಗಿದೆ. ಅಂದರೆ ಬಿಡುಗಡೆಯಾದ ಅನುದಾನದ ಪೈಕಿ ಜನವರಿವರೆಗೆ 21,367 ಕೋಟಿ ರೂ. ಅನುದಾನ ಖರ್ಚಾಗದೇ ಉಳಿದಿದೆ. ಉಳಿದಿರುವ ಎರಡು ತಿಂಗಳಲ್ಲಿ ಸರ್ಕಾರ ಇಲಾಖಾವಾರು ಬಜೆಟ್ ಅನುಷ್ಠಾನದ ಆರ್ಥಿಕ ಪ್ರಗತಿಗೆ ಇನ್ನಷ್ಟು ವೇಗ ನೀಡಬೇಕಾಗಿದೆ.

60%ಗೂ ಅಧಿಕ ಆರ್ಥಿಕ ಪ್ರಗತಿ ಕಂಡ ಇಲಾಖೆಗಳು : ಕೆಡಿಪಿ ಪ್ರಗತಿ ಅಂಕಿ-ಅಂಶದಂತೆ ಪಶುಸಂಗೋಪನೆ ಇಲಾಖೆ (72.70%), ಇಂಧನ ಇಲಾಖೆ (80%), ಮೂಲಭೂತ ಸೌಕರ್ಯ ಇಲಾಖೆ (69.58%), ಸಾರಿಗೆ ಇಲಾಖೆ (76.17%), ಅರಣ್ಯ ಇಲಾಖೆ (61.10%), ಸಹಕಾರ ಇಲಾಖೆ (60%), ಸಮಾಜ ಕಲ್ಯಾಣ ಇಲಾಖೆ (60%), ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ (62.63%), ಶಾಲಾ ಶಿಕ್ಷಣ ಇಲಾಖೆ (60%), ಪ್ರವಾಸೋದ್ಯಮ ಇಲಾಖೆ (100%), ಉನ್ನತ ಶಿಕ್ಷಣ ಇಲಾಖೆ (68.26%), ಕಂದಾಯ ಇಲಾಖೆ (60.68%), ಲೋಕೋಪಯೋಗಿ ಇಲಾಖೆ (60%), ಸಣ್ಣ ನೀರಾವರಿ ಇಲಾಖೆ (72%), ಕಾನೂನು ಇಲಾಖೆ (71%), ಕನ್ನಡ ಮತ್ತು ಸಂಸ್ಕೃತಿ ಇಲಾಖೆ (71.78%), ವೈದ್ಯಕೀಯ ಶಿಕ್ಷಣ ಇಲಾಖೆ (72.87%), ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ(64%), ನಗರಾಭಿವೃದ್ಧಿ ಇಲಾಖೆ (68.53%), ಗೃಹ ಇಲಾಖೆ (64%), ಕಾರ್ಮಿಕ ಇಲಾಖೆ (61%)ಗಳು ಜನವರಿವರೆಗೆ 60%ಗೂ ಅಧಿಕ ಆರ್ಥಿಕ ಪ್ರಗತಿ ಕಂಡಿವೆ.

55%ಗಿಂತ ಕಡಿಮೆ ಪ್ರಗತಿ ಕಂಡ ಇಲಾಖೆಗಳು : ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ (53%), ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ (52%), ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ (48.21%), ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ (49%), ಮೀನುಗಾರಿಕೆ ಇಲಾಖೆ (33%), ಪರಿಶಿಷ್ಟ ಪಂಗಡ ಕಲ್ಯಾಣ ಇಲಾಖೆ (39%), ಐಟಿ, ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ (15.47%), ವಸತಿ ಇಲಾಖೆ 52.76%), ಗ್ರಾಮೀಣಾಭಿವೃದ್ಧಿ ಇಲಾಖೆ (45.32%), ಕೌಶಲ್ಯಾಭಿವೃದ್ಧಿ ಇಲಾಖೆ (53%), ಕೃಷಿ ಇಲಾಖೆ (52%), ಜಲಸಂಪನ್ಮೂಲ ಇಲಾಖೆ (48%) ಮಾತ್ರ ಆರ್ಥಿಕ ಪ್ರಗತಿ ಸಾಧಿಸಿವೆ.

ಇತರೆ ಪ್ರಮುಖ ಇಲಾಖೆಗಳ ಪ್ರಗತಿ ಸ್ಥಿತಿಗತಿ :

ಸಾರಿಗೆ ಇಲಾಖೆ :

ಅನುದಾನ ಹಂಚಿಕೆ- ₹6,535 ಕೋಟಿ
ಬಿಡುಗಡೆ- ₹5,050 ಕೋಟಿ
ವೆಚ್ಚ- ₹4,978 ಕೋಟಿ
ಪ್ರಗತಿ- 76%

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ :

ಅನುದಾನ ಹಂಚಿಕೆ- ₹34,406 ಕೋಟಿ
ಬಿಡುಗಡೆ- ₹22,465 ಕೋಟಿ
ವೆಚ್ಚ- ₹21,550 ಕೋಟಿ
ಪ್ರಗತಿ- ₹62.63%

ಕೃಷಿ ಇಲಾಖೆ :

ಅನುದಾನ ಹಂಚಿಕೆ- ₹5,148 ಕೋಟಿ
ಬಿಡುಗಡೆ- ₹2,901 ಕೋಟಿ
ವೆಚ್ಚ- ₹2,655 ಕೋಟಿ
ಪ್ರಗತಿ- ₹51.57%

ನಗರಾಭಿವೃದ್ಧಿ ಇಲಾಖೆ :

ಅನುದಾನ ಹಂಚಿಕೆ- 19,714 ಕೋಟಿ ರೂ‌.
ಬಿಡುಗಡೆ- 10,487 ಕೋಟಿ ರೂ.
ವೆಚ್ಚ- 13,511 ಕೋಟಿ ರೂ.
ಪ್ರಗತಿ- 68.53%

ಗೃಹ ಇಲಾಖೆ :

ಅನುದಾನ ಹಂಚಿಕೆ- ₹12,831 ಕೋಟಿ
ಬಿಡುಗಡೆ- ₹11,375 ಕೋಟಿ
ವೆಚ್ಚ- ₹8,239 ಕೋಟಿ
ಪ್ರಗತಿ- 64.21%

ಕಂದಾಯ ಇಲಾಖೆ :

ಅನುದಾನ ಹಂಚಿಕೆ- ₹3,053 ಕೋಟಿ
ಬಿಡುಗಡೆ- ₹2,833 ಕೋಟಿ
ವೆಚ್ಚ- ₹1,853 ಕೋಟಿ
ಪ್ರಗತಿ- 60.68%

ಜಲಸಂಪನ್ಮೂಲ ಇಲಾಖೆ :

ಅನುದಾನ ಹಂಚಿಕೆ- ₹16,832 ಕೋಟಿ
ಬಿಡುಗಡೆ- ₹9,627 ಕೋಟಿ
ವೆಚ್ಚ- ₹8,156 ಕೋಟಿ
ಪ್ರಗತಿ- 48.46%

ಲೋಕೋಪಯೋಗಿ ಇಲಾಖೆ:

ಅನುದಾನ ಹಂಚಿಕೆ- ₹9,926 ಕೋಟಿ
ಬಿಡುಗಡೆ- ₹6,431 ಕೋಟಿ
ವೆಚ್ಚ- ₹5,900 ಕೋಟಿ
ಪ್ರಗತಿ- 60%

ಇಂಧನ ಇಲಾಖೆ :

ಅನುದಾನ ಹಂಚಿಕೆ- ₹23,158 ಕೋಟಿ
ಬಿಡುಗಡೆ- ₹18,780 ಕೋಟಿ
ವೆಚ್ಚ- ₹18,536 ಕೋಟಿ
ಪ್ರಗತಿ- 80%

ಸಣ್ಣ ನೀರಾವರಿ ಇಲಾಖೆ:

ಅನುದಾನ ಹಂಚಿಕೆ- ₹2,388 ಕೋಟಿ
ಬಿಡುಗಡೆ- ₹1,854 ಕೋಟಿ
ವೆಚ್ಚ- ₹1,723 ಕೋಟಿ
ಪ್ರಗತಿ- 72.16%

ಆರೋಗ್ಯ ಇಲಾಖೆ :

ಅನುದಾನ ಹಂಚಿಕೆ- ₹11,261 ಕೋಟಿ
ಬಿಡುಗಡೆ- ₹7,333 ಕೋಟಿ
ವೆಚ್ಚ- ₹6,558 ಕೋಟಿ
ಪ್ರಗತಿ- 58.24%

ಶಿಕ್ಷಣ ಇಲಾಖೆ :

ಅನುದಾನ ಹಂಚಿಕೆ- ₹38,651 ಕೋಟಿ
ಬಿಡುಗಡೆ- ₹28,960 ಕೋಟಿ
ವೆಚ್ಚ- ₹23,067 ಕೋಟಿ
ಪ್ರಗತಿ- 60 %

ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ :

ಅನುದಾನ ಹಂಚಿಕೆ- ₹9,978 ಕೋಟಿ
ಬಿಡುಗಡೆ- ₹4,993 ಕೋಟಿ
ವೆಚ್ಚ- ₹4,810 ಕೋಟಿ
ಪ್ರಗತಿ- 48.21%

ಗ್ರಾಮೀಣಾಭಿವೃದ್ಧಿ ಇಲಾಖೆ :

ಅನುದಾನ ಹಂಚಿಕೆ- ₹25,082 ಕೋಟಿ
ಬಿಡುಗಡೆ- ₹11,056 ಕೋಟಿ
ವೆಚ್ಚ- ₹11,368 ಕೋಟಿ
ಪ್ರಗತಿ- 45.32%

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ :

ಅನುದಾನ ಹಂಚಿಕೆ- ₹3,489 ಕೋಟಿ
ಬಿಡುಗಡೆ- ₹2,314 ಕೋಟಿ
ವೆಚ್ಚ- ₹1,850 ಕೋಟಿ
ಪ್ರಗತಿ- 53%

ಪರಿಶಿಷ್ಟ ಪಂಗಡ ಕಲ್ಯಾಣ ಇಲಾಖೆ:

ಅನುದಾನ ಹಂಚಿಕೆ- ₹1,719 ಕೋಟಿ
ಬಿಡುಗಡೆ- ₹813 ಕೋಟಿ
ವೆಚ್ಚ- ₹674 ಕೋಟಿ
ಪ್ರಗತಿ- 39%

ಸಮಾಜ ಕಲ್ಯಾಣ ಇಲಾಖೆ :

ಅನುದಾನ ಹಂಚಿಕೆ- ₹5,125 ಕೋಟಿ
ಬಿಡುಗಡೆ- ₹3,984 ಕೋಟಿ
ವೆಚ್ಚ- ₹3,050 ಕೋಟಿ
ಪ್ರಗತಿ- 60%

ವಸತಿ ಇಲಾಖೆ :

ಅನುದಾನ ಹಂಚಿಕೆ- ₹4,452 ಕೋಟಿ
ಬಿಡುಗಡೆ- ₹2,075 ಕೋಟಿ
ವೆಚ್ಚ- ₹2,349 ಕೋಟಿ
ಪ್ರಗತಿ- 53%

ಇದನ್ನೂ ಓದಿ: ಮುಂಬರುವ 2025-26ರ ರಾಜ್ಯ ಬಜೆಟ್​ನಲ್ಲಿ ಕಾಸಿಯಾದ ನಿರೀಕ್ಷೆಗಳೇನು?

ಇದನ್ನೂ ಓದಿ: ಸಂಚಾರ ದಟ್ಟಣೆ ತಗ್ಗಿಸಲು ಟನಲ್ ರಸ್ತೆ ಬೇಕು, ಚೆಕ್‌ಪೋಸ್ಟ್‌ಗಳನ್ನು ರದ್ದುಗೊಳಿಸಿ: ಸಿಎಂಗೆ ಸಾರಿಗೆ ಸಂಘ ಸಂಸ್ಥೆಗಳ ಮನವಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.