ETV Bharat / state

ಕಡಲ ಸೈನಿಕ ಅಭಿಯಾನ: ಕಡಲ್ಕೊರೆತ ತಡೆಯಲು ಕಾಂಡ್ಲಾ ಗಿಡಗಳ ಅಭಿವೃದ್ಧಿ - KANDLA PLANTS PLANTED

ಶಿರಸಿ ಸ್ಕೊಡ್ ವೆಸ್‌ಸಂಸ್ಥೆ, ಆಸ್ಟರ್ ಡಿಎಂ ಫೌಂಡೇಷನ್ ಹಾಗೂ ಅರಣ್ಯ ಇಲಾಖೆ ಸಹಯೋಗದಲ್ಲಿ ಅಘನಾಶಿನಿ ನದಿ ತೀರದಲ್ಲಿ ಕಾಂಡ್ಲಾಗಿಡಗಳನ್ನು ನೆಟ್ಟಿದ್ದಾರೆ. ಕಾಂಡ್ಲ‌ ಪ್ರದೇಶ ವಿಸ್ತರಣೆಗೆ ಅಭಿಯಾನದ ಮೂಲಕ ಹೊಸ ಹೆಜ್ಜೆ ಇಡಲಾಗುತ್ತಿದೆ.

KARWAR  UTTARA KANNADA  ಕಾಂಡ್ಲಾ ಗಿಡಗಳ ಅಭಿವೃದ್ಧಿ  AGHANASHINI RIVER
ಕಡಲ ಸೈನಿಕ ಅಭಿಯಾನ: ಕಡಲ್ಕೊರೆತ ತಡೆಯಲು ಕಾಂಡ್ಲಾ ಗಿಡಗಳ ಅಭಿವೃದ್ಧಿ (ETV Bharat)
author img

By ETV Bharat Karnataka Team

Published : Feb 21, 2025, 9:07 AM IST

ಕಾರವಾರ: ಹಸಿರೀಕರಣಕ್ಕೊಸ್ಕರ ಎಲ್ಲೆಡೆ ಗಿಡ ಮರಗಳನ್ನು ಬೆಳೆಸಲಾಗುತ್ತಿದೆ. ಅದೇ ರೀತಿ ನದಿ ಹಾಗೂ ಸಮುದ್ರ ತೀರಗಳಲ್ಲಿ ಕಡಲ ಕೊರೆತ ತಪ್ಪಿಸಿ ಭೂಮಿ ಉಳಿಸಲು ಕಾಂಡ್ಲಾಗಿಡಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ.

ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಬರ್ಗಿ ಗ್ರಾಮ ಪಂಚಾಯತ್​​ ವ್ಯಾಪ್ತಿಯ ಅಘನಾಶಿನಿ ನದಿ ತೀರದಲ್ಲಿ ಶಿರಸಿ ಸ್ಕೊಡ್ ವೆಸ್‌ಸಂಸ್ಥೆ, ಆಸ್ಟರ್ ಡಿಎಂ ಫೌಂಡೇಷನ್ ಹಾಗೂ ಅರಣ್ಯ ಇಲಾಖೆ ಸಹಯೋಗದಲ್ಲಿ ಇಂತಹದೊಂದು ವಿಶೇಷ ಅಭಿಯಾನ ಕೈಗೊಳ್ಳಲಾಗಿದೆ. ಸ್ಕೋಡ್‌ ವೆಸ್‌ಸಂಸ್ಥೆಯ ನೂರಾರು ಸಿಬ್ಬಂದಿ, ಅರಣ್ಯ ಇಲಾಖೆಯ ಸಿಬ್ಬಂದಿಗಳ ಜೊತೆ ಕೈಜೋಡಿಸಿ ಅಘನಾಶಿ ನದಿ ದಂಡೆಯಲ್ಲಿ ಸಾವಿರಾರು ಕಾಂಡ್ಲ ಸಸಿಗಳನ್ನು ನೆಡುವ ಮೂಲಕ ಕಾಂಡ್ಲ ಸಂರಕ್ಷಣೆಗೆ ತಮ್ಮದೆಯಾದ ಕೊಡುಗೆ ನೀಡಿದ್ದಾರೆ.

ಶಿರಸಿ ಸ್ಕೊಡ್ ವೆಸ್‌ಸಂಸ್ಥೆ, ಆಸ್ಟರ್ ಡಿಎಂ ಫೌಂಡೇಷನ್ ಹಾಗೂ ಅರಣ್ಯ ಇಲಾಖೆ ಸಹಯೋಗದಲ್ಲಿ ಕಾಂಡ್ಲಾ ಗಿಡಗಳ ಅಭಿವೃದ್ಧಿ (ETV Bharat)

ಇತ್ತಿಚೀನ ವರ್ಷದಲ್ಲಿ ಭಾರೀ ಮಳೆಯಿಂದಾಗಿ ನದಿ ಹಾಗೂ ಸಮುದ್ರ ಅಂಚಿನಲ್ಲಿರುವ ಅದೆಷ್ಟೋ ಕುಟುಂಬಳಿಗೆ ನದಿ ಹಾಗೂ ಸಮುದ್ರದ ಅಲೆಗಳು ಅಪ್ಪಳಿಸುತ್ತಿರುವ ಕಾರಣ ನದಿ, ಸಮುದ್ರ ತೀರದ ನಿವಾಸಿಗಳು ಅಪಾಯದಲ್ಲಿಯೇ ಜೀವನ ಕಳೆಯಬೇಕಾದ ಪರಿಸ್ಥಿತಿ ಉಂಟಾಗಿದೆ. ಇದರ‌ ಜೊತೆಗೆ ಭೂಮಿ ಸವಕಳಿಯಾಗುತ್ತಿದೆ. ಆದರೆ, ಈ ಕಾಂಡ್ಲಾ ಗಿಡ ಈ ಎಲ್ಲ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಇಂತಹದೊಂದು ವಿಶೇಷ ಅಭಿಯಾನ ಜನಚರಗಳ ಸಂರಕ್ಷಣೆಗೂ ಸಹಕಾರಿಯಾಗಲಿದೆ.

KARWAR  UTTARA KANNADA  ಕಾಂಡ್ಲಾ ಗಿಡಗಳ ಅಭಿವೃದ್ಧಿ  AGHANASHINI RIVER
ಅಘನಾಶಿನಿ ನದಿ ತೀರದಲ್ಲಿ ಕಾಂಡ್ಲಾಗಿಡಗಳ ಸಂರಕ್ಷಣಾ ಅಭಿಯಾನ (ETV Bharat)

ಕಡಲ ಸೈನಿಕ: ಕಾಂಡ್ಲಾ ಗಿಡವನ್ನು ಕರಾವಳಿಯ ಸೈನಿಕಾ‌ ಅಂತಾನೂ ಕೂಡ ಕರೆಯಲಾಗುತ್ತಿದೆ. ಇದೀಗ ಅಘನಾಶಿನಿ ನದಿ ತೀರದಲ್ಲಿ ಸುಮಾರು ಒಂದು ಸಾವಿರಕ್ಕೂ ಅಧಿಕ ಕಾಂಡ್ಲಾ ಗಿಡಗಳನ್ನು ನಾಟಿ ಮಾಡಿದ್ದು, ಈ ಮೂಲಕ ಅಭಿಯಾನಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಲಾಗಿದೆ ಎಂದು ಹೊನ್ನಾವರ ಡಿಎಫ್​​​ಒ ಯೋಗೇಶ ಮಾಹಿತಿ ನೀಡಿದರು.

ಸ್ಕೊಡ್‌ವೆಸ್ ಸಂಸ್ಥೆ ಕಳೆದ 25 ವರ್ಷಗಳಿಂದ‌ ಆರೋಗ್ಯ, ಶೈಕ್ಷಣಿಕ‌, ಸೇರಿಂದಂತೆ ಹತ್ತು ಹಲವು ಕ್ಷೇತ್ರದಲ್ಲಿ ತನ್ನದೇ ಆಗಿರುವ ಕೊಡುಗೆ ನೀಡುತ್ತಾ ಬಂದಿದೆ. ಹೀಗಾಗಿ ಇದೀಗ ಪರಿಸರ ಪೂರಕವಾಗಿರುವ ಕಾಂಡ್ಲವನ್ನು ಸಂರಕ್ಷಣೆಗೆ ಮುಂದಾಗಿದ್ದು,‌‌ ಆಸ್ಟರ್ ಡಿಎಂ ಫೌಂಡೇಷನ್ ಹಾಗೂ ಅರಣ್ಯ ಇಲಾಖೆ ಸಂಯೋಗದಲ್ಲಿ ಕರಾವಳಿ ಜಿಲ್ಲೆಯಲ್ಲಿ ಅಘನಾಶಿನಿ ನದಿ ಅಂಚಿನಿಂದ ಕಾಂಡ್ಲ ಅಭಿಯಾನಕ್ಕೆ ಕೈ ಜೊಡಿಸಿದೆ.

KARWAR  UTTARA KANNADA  ಕಾಂಡ್ಲಾ ಗಿಡಗಳ ಅಭಿವೃದ್ಧಿ  AGHANASHINI RIVER
ಕಡಲ ಸೈನಿಕ ಅಭಿಯಾನ: ಕಡಲ್ಕೊರೆತ ತಡೆಯಲು ಕಾಂಡ್ಲಾ ಗಿಡಗಳ ಅಭಿವೃದ್ಧಿ (ETV Bharat)

ಮುಂದಿನ ದಿನದಲ್ಲಿ ಇನ್ನೂ ದೊಡ್ಡ ಮಟ್ಟದಲ್ಲಿ ಕಾಂಡ್ಲಾ ಬೆಳಸಲು ಮುಂದಾಗಿದೆ. ನದಿ ತೀರದಲ್ಲಿ ಹೆಚ್ಚು ಹೆಚ್ಚು ಕಾಂಡ್ಲಾ ಗಿಡಗಳನ್ನು ಬೆಳೆಸುವುದರಿಂದ ಪ್ರವಾಸೋದ್ಯಮದ ಬೆಳವಣಿಗೆಗೆ ಸಹಾಯವಾಗಲಿದೆ. ಜೊತೆಗೆ ಇದು ಪರಿಸರ ಸಂರಕ್ಷಣೆ ನಿಟ್ಟಿನಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಿದೆ. ಸಮುದ್ರ ತೀರದಲ್ಲಿ ಉಂಟಾಗಬಹುದಾದ ವಿನಾಶವನ್ನು ತಡೆಯುವ ಅಪಾರ ಶಕ್ತಿ ಕಾಂಡ್ಲಾಕ್ಕಿದೆ. ಹೀಗಾಗಿ ಅದನ್ನು ರಕ್ಷಣೆ ಮಾಡಬೇಕಿದೆ ಎಂದು ಸ್ಕೋಡ್ವೆಸ್ ಸಂಸ್ಥೆ ಕಾರ್ಯನಿರ್ವಹಣಾಧಿಕಾರಿ ಡಾ.ವೆಂಕಟೇಶ ನಾಯ್ಕ ತಿಳಿಸಿದರು.

ಒಟ್ಟಾರೆಯಾಗಿ ಜಿಲ್ಲೆಯ ಕರಾವಳಿಯ, ನದಿ ಹಾಗೂ ಸಮುದ್ರದಲ್ಲಿ ಉಂಟಾಗುವ ಪ್ರಕೃತಿ ವಿಕೋಪದಿಂದ ನದಿ ಪಾತ್ರದ ಜನರ ರಕ್ಷಣೆಗಾಗಿ ಕಾಂಡ್ಲ ವನ ನಿರ್ಮಾಣವಾಗಬೇಕು ಎನ್ನುವ ಕೂಗಿಗೆ ಇದೀಗ ಅಘನಾಶಿನಿ ನದಿಯಲ್ಲಿ ಆರಂಭವಾಗಿರುವ ಕಾಂಡ್ಲ ಸಂರಕ್ಷಣಾ ಅಭಿನಿಯಾನ ನಿಜಕ್ಕೂ ಅಪಾಯದಲ್ಲಿ ಕಾಲ ಕಳೆಯುವ ಜನರಿಗೆ ಧೈರ್ಯ ತುಂಬುವಂತಾಗಿದೆ. ಇದು ಜಿಲ್ಲೆಯ ಕರಾವಳಿಯಾದ್ಯಂತ ನಡೆಯುವಂತಾಗಬೇಕಿದೆ.

ಇದನ್ನೂ ಓದಿ: ಕುಸಿದ ಕಾಳಿ ಸೇತುವೆ ತೆರವು ವೇಳೆ ಪಿಲ್ಲರ್ ಮುರಿದು ನದಿಗೆ ಬಿದ್ದ ಸ್ಲ್ಯಾಬ್: ತಪ್ಪಿದ ಭಾರಿ ಅನಾಹುತ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.