ಹೈದರಾಬಾದ್: Grape Festival in Hyderabad 2025 - ಬಹುನಿರೀಕ್ಷಿತ ದ್ರಾಕ್ಷಿ ಉತ್ಸವ ಬಂದಿದೆ. ಹೈದರಾಬಾದ್‌ನ ರಾಜೇಂದ್ರನಗರದ ದ್ರಾಕ್ಷಿ ಸಂಶೋಧನ ಕೇಂದ್ರದಲ್ಲಿ ದ್ರಾಕ್ಷಿ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತಿದೆ. ಅವಳಿ ನಗರದ ಎಲ್ಲೆಡೆಯಿಂದ ದ್ರಾಕ್ಷಿ ಪ್ರಿಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಮೈದಾನದೆಲ್ಲಡೆ ಸುತ್ತಾಡಲು ಮತ್ತು ಹಣ್ಣಿನ ಸುವಾಸನೆ ಆನಂದಿಸಲು ಅವಕಾಶ ಕಲ್ಪಿಸಲಾಗಿದೆ. ದೇಶಾದ್ಯಂತ ಈ ವರ್ಷದ ದ್ರಾಕ್ಷಿ ಬೆಳೆ ಮಾರುಕಟ್ಟೆ ಆರಂಭವಾಗಿರುವ ಹಿನ್ನೆಲೆಯಲ್ಲಿ ಎಲ್ಲೆಂದರಲ್ಲಿ ಎರಡ್ಮೂರು ಬಗೆಯ ದ್ರಾಕ್ಷಿಗಳು ಕಾಣಸಿಗುತ್ತಿವೆ.
ವಿಶೇಷ ಎಂದರೆ ಈ ಗ್ರೇಪ್ಸ್ ಫೆಸ್ಟಿವಲ್ ನಲ್ಲಿ ವಿಜ್ಞಾನಿಗಳು ಸೃಷ್ಟಿಸಿರುವ 65 ಬಗೆಯ ಹಣ್ಣುಗಳು ಲಭ್ಯವಿದೆ. ಪ್ರವಾಸಿಗರು ರುಚಿ ನೋಡಿದ ನಂತರ ತಮಗಿಷ್ಟವಾದ ಹಣ್ಣುಗಳನ್ನು ಖರೀದಿಸುತ್ತಿದ್ದಾರೆ. ದ್ರಾಕ್ಷಿ ಮೇಳ ತುಂಬಾ ಚೆನ್ನಾಗಿ ನಡೆಯುತ್ತಿದೆ ಎಂದು ಇಲ್ಲಿಗೆ ಭೇಟಿ ನೀಡಿದವರು ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದಾರೆ. ನಗರದಲ್ಲಿಯೂ ಸಹ ದ್ರಾಕ್ಷಿತೋಟಗಳು, ಕೃಷಿ ವಿಧಾನ ಮತ್ತು ಹಣ್ಣುಗಳನ್ನು ಬೆಳೆಯಲು ಬಳಸುವ ವಿಧಾನಗಳನ್ನು ನೋಡಿ, ಸಂದರ್ಶಕರು, ರೈತರು, ವೀಕ್ಷಕರು ಆಶ್ಚರ್ಯಚಕಿತರಾದರು.
ದ್ರಾಕ್ಷಿ ಉತ್ಸವ ನೋಡಲು ವಿದ್ಯಾರ್ಥಿಗಳ ದಂಡು: ಹವಾಮಾನ ಬದಲಾವಣೆ ಮತ್ತಿತರ ಕಾರಣಗಳಿಂದ ದ್ರಾಕ್ಷಿ ಬೆಳೆ ಕಡಿಮೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಶ್ರೀಕೊಂಡ ಲಕ್ಷ್ಮಣ್ ತೆಲಂಗಾಣ ತೋಟಗಾರಿಕಾ ವಿಶ್ವವಿದ್ಯಾಲಯವು ರೈತರಲ್ಲಿ ಜಾಗೃತಿ ಮೂಡಿಸಲು ವಿಶೇಷ ಮುತುವರ್ಜಿ ವಹಿಸಿ ಈ ಮೇಳವನ್ನು ಆಯೋಜಿಸುತ್ತಿದೆ. ವಾರ್ಷಿಕ ದ್ರಾಕ್ಷಿ ಹಬ್ಬವನ್ನು ವೀಕ್ಷಿಸಲು ಮತ್ತು ದ್ರಾಕ್ಷಿಯನ್ನು ಖರೀದಿಸಲು ಉತ್ಸಾಹಿಗಳು ದೂರದ ಸ್ಥಳಗಳಿಂದ ಈ ಉತ್ಸವಕ್ಕೆ ಬರುತ್ತಿದ್ದಾರೆ. ಈ ಮೇಳವು ವಿದ್ಯಾರ್ಥಿಗಳಲ್ಲಿ ಜ್ಞಾನ, ರೈತರಲ್ಲಿ ಜಾಗೃತಿ, ಪೌಷ್ಟಿಕಾಂಶದ ಮೌಲ್ಯ ಮತ್ತು ಹಣ್ಣುಗಳ ಆರೋಗ್ಯ ಪ್ರಯೋಜನಗಳನ್ನು ಹೆಚ್ಚಿಸುವ ಗುರಿ ಹೊಂದಿದೆ. ಜನರಿಂದ ಉತ್ತಮ ಪ್ರತಿಕ್ರಿಯೆಯೂ ವ್ಯಕ್ತವಾಗುತ್ತಿದೆ ಎನ್ನುತ್ತಾರೆ ಸಂಘಟಕರು.
65 ವಿಧದ ಹಣ್ಣುಗಳು: ವಿಜ್ಞಾನಿಗಳ ಮೇಲ್ವಿಚಾರಣೆಯಲ್ಲಿ ನೈಸರ್ಗಿಕ ಸಿದ್ಧ ದ್ರಾಕ್ಷಿ ಬೇಸಾಯ, ಬಹುವಿಧದ ಹಣ್ಣುಗಳ ಗುಣಮಟ್ಟ ಮತ್ತು ಬಾಳಿಕೆ ಬರುವ ಹಣ್ಣುಗಳನ್ನು ಖರೀದಿಸಲು ನಗರವಾಸಿಗಳು ಪೈಪೋಟಿ ನಡೆಸುತ್ತಿದ್ದಾರೆ. ವೆಚ್ಚದ ಬಗ್ಗೆ ಯಾವುದೇ ಹಿಂಜರಿಕೆ ಇಲ್ಲದೇ ಹಣ್ಣುಗಳನ್ನು ಕೊಂಡು ಅವುಗಳ ರುಚಿಯನ್ನು ಸವಿಯುತ್ತಿದ್ದಾರೆ. 65 ಬಗೆಯ ದ್ರಾಕ್ಷಿ ತಳಿಗಳ ಪ್ರದರ್ಶನ ಮತ್ತು ಮಾರಾಟ ಭರದಿಂದ ಸಾಗುತ್ತಿದೆ. ಜ್ಞಾನ ಮತ್ತು ಆನಂದವನ್ನು ಪಡೆಯಬಯಸುವ ಪ್ರತಿಯೊಬ್ಬರೂ ಈ ದ್ರಾಕ್ಷಿ ಹಬ್ಬಕ್ಕೆ ಭೇಟಿ ನೀಡಿ ಅನುಭವವನ್ನು ಸವಿಯಬೇಕು ಎನ್ನುತ್ತಾರೆ ದ್ರಾಕ್ಷಿ ಸಂಶೋಧನಾ ಮುಖ್ಯಸ್ಥ ಡಾ.ಸುರೇಶ್ ಕುಮಾರ್ ರೆಡ್ಡಿ. ವಾರಾಂತ್ಯದ ರಜೆಯಲ್ಲಿ ನಗರವಾಸಿಗಳು ಹೆಚ್ಚಿನ ಸಂಖ್ಯೆಯಲ್ಲಿ ಈ ದ್ರಾಕ್ಷಿ ಹಬ್ಬಕ್ಕೆ ಭೇಟಿ ನೀಡಿ ಇನ್ನಷ್ಟು ಸದ್ದು ಮಾಡುತ್ತಾರೆ ಎನ್ನುತ್ತಾರೆ ಸಂಘಟಕರು.
ಇದನ್ನು ಓದಿ: ಪಿಎಂ-ಕಿಸಾನ್ ಯೋಜನೆ: 19ನೇ ಕಂತಿನ 22,000 ಕೋಟಿ ಹಣ ಸೋಮವಾರ ಬಿಡುಗಡೆ