ಕರ್ನಾಟಕ

karnataka

ETV Bharat / lifestyle

ಬೊಂಬಾಟ್​​​​ 'ಬಿಳಿ ಎಳ್ಳಿನ ಖಾರದ ಚಟ್ನಿ' ಟ್ರೈ ಮಾಡಿ ನೋಡಿ: ಬೇಕು ಬೇಕು ಎನಿಸುವಷ್ಟು ಸ್ವಾದಿಷ್ಟ! - SESAME RED CHILLI CHUTNEY RECIPE

ಓದುಗರ ಆಸಕ್ತಿಯ ಮೇರೆಗೆ ನಾವು ಬಿಳಿ ಎಳ್ಳಿನ ಖಾರದ ಚಟ್ನಿ ರೆಸಿಪಿ ತಂದಿದ್ದೇವೆ. ಈ ಚಟ್ನಿ ರುಚಿ ನೋಡಿದರೆ ಸಾಕು ಮತ್ತೆ ಮತ್ತೆ ತಿನ್ನಬೇಕೆನಿಸುತ್ತದೆ. ಯಾವುದೇ ಉಪಹಾರದಲ್ಲಿ ಸೇವಿಸಿದರೂ ಉತ್ತಮ ಕಾಂಬಿನೇಷನ್​ ಆಗಿರುತ್ತದೆ.

WHITE SESAME RED CHILLY CHUTNEY  SESAME RED CHILLI CHUTNEY RECIPE  SESAME RED CHILLI CHUTNEY  HOW TO MAKE SESAME CHILLI CHUTNEY
ಬಿಳಿ ಎಳ್ಳಿನ ಖಾರದ ಚಟ್ನಿ (ETV Bharat)

By ETV Bharat Lifestyle Team

Published : 4 hours ago

White Sesame Red Chilli Chutney Recipe :ನಾವು ನಿತ್ಯದ ಉಪಹಾರಗಳಿಗಾಗಿ ವಿವಿಧ ಚಟ್ನಿಗಳನ್ನು ಸಿದ್ಧಪಡಿಸಲಾಗುತ್ತದೆ. ಕೆಲವೊಮ್ಮೆ ಚಟ್ನಿ ತಯಾರಿಸಲು ಸಮಯ ಸಾಕಾಗುವುದಿಲ್ಲ. ಕೆಲವೊಮ್ಮೆ ಈ ಮಸಾಲೆ ಒಣ ಖಾರವನ್ನೇ ಸೇವಿಸಲಾಗುತ್ತದೆ. ಇಡ್ಲಿ, ಅಟ್ಟು, ಉಪ್ಪಿಟ್ಟು, ದೋಸೆ ಹೀಗೆ ವಿವಿಧ ಉಪಹಾರಗಳಲ್ಲಿ "ಮಸಾಲೆ ಖಾರದ ಚಟ್ನಿ ಸಾಮಾನ್ಯವಾಗಿರುತ್ತದೆ. ಸಮಯ ಸಿಕ್ಕಾಗ ಒಮ್ಮೆ ಮಾಡಿದರೆ ಬೇರೆ ಬೇರೆ ಚಟ್ನಿಗಳನ್ನು ರೆಡಿ ಮಾಡುತ್ತಾರೆ. ಇದೀಗ ನಾನು ನಿಮಗಾಗಿ ಹೊಸ ಚಟ್ನಿಯೊಂದನ್ನು ತಂದಿದ್ದೇವೆ. ಅದುವೇ.. ಸಖತ್​ ಟೇಸ್ಟಿಯಾದ ಬಿಳಿ ಎಳ್ಳಿನ ಖಾರದ ಚಟ್ನಿ (White Sesame Red Chilli Chutney). ಈ ತುಂಬಾ ರುಚಿಕರವಾದ ಚಟ್ನಿ ಹೇಗೆ ಮಾಡುವುದೆಂದು ಅರಿತುಕೊಳ್ಳೋಣ.

ಬಿಳಿ ಎಳ್ಳಿನ ಖಾರದ ಚಟ್ನಿ ಬೇಕಾಗುವ ಪದಾರ್ಥಗಳು:

  • ಬಿಳಿ ಎಳ್ಳು - ಅರ್ಧ ಕಪ್
  • ಗುಂಟೂರು ಮೆಣಸಿನಕಾಯಿ - 8 ರಿಂದ 10
  • ಬ್ಯಾಡಗಿ ಮೆಣಸಿನಕಾಯಿ - 10 ರಿಂದ 12
  • ಒಣ ಕೊಬ್ಬರಿ ಪೀಸ್ - ಕಾಲು ಕಪ್
  • ಉದ್ದಿನಬೇಳೆ - ಕಾಲು ಕಪ್
  • ಕಡಲೆ - ಕಾಲು ಕಪ್
  • ಜೀರಿಗೆ - ಅರ್ಧ ಚಮಚ
  • ಉಪ್ಪು - ರುಚಿಗೆ ತಕ್ಕಷ್ಟು
  • ಬೆಳ್ಳುಳ್ಳಿ ಎಸಳು - 15 ರಿಂದ 20
  • ತುರಿದ ಬೆಲ್ಲ - 1 ಟೀಸ್ಪೂನ್​
  • ಹುಣಸೆಹಣ್ಣು - ನಿಂಬೆ ಗಾತ್ರದಷ್ಟು

ಬಿಳಿ ಎಳ್ಳಿನ ಖಾರದ ಚಟ್ನಿ ತಯಾರಿಸುವ ವಿಧಾನ:

  • ಇದಕ್ಕಾಗಿ ಮೊದಲು ಒಲೆಯ ಮೇಲೆ ಬಾಣಲೆ ಇಟ್ಟು ಅದರಲ್ಲಿ ಬಿಳಿ ಎಳ್ಳು ಹಾಕಿ ಹುರಿದುಕೊಳ್ಳಿ. ಕಡಿಮೆ ಉರಿಯಲ್ಲಿ ಹುರಿದರೆ ತುಂಬಾ ಒಳ್ಳೆಯದು.
  • ಹೆಚ್ಚಿನ ಉರಿಯಲ್ಲಿ ಎಳ್ಳು ಹುರಿದರೆ ಚಟ್ನಿಯು ಅಷ್ಟೊಂದು ರುಚಿಕರವಾಗುವುದಿಲ್ಲ ಎಂಬುದು ನೆನಪಿಡಬೇಕು. ಹೀಗಾಗಿ ಕಡಿಮೆ ಉರಿಯಲ್ಲಿ ಸ್ವಲ್ಪ ಬಣ್ಣವನ್ನು ಬದಲಾಯಿಸುವವರೆಗೆ ಚಮಚದಿಂದ ತಿರುವುತ್ತಲೇ ಇರಬೇಕಾಗುತ್ತದೆ. ಇದಕ್ಕೆ ಸುಮಾರು 5 ರಿಂದ 10 ನಿಮಿಷಗಳ ಕಾಲ ತೆಗೆದುಕೊಳ್ಳಬಹುದು.
  • ಹಾಗೆ ಹುರಿದ ಬಳಿಕ ಎಳ್ಳನ್ನು ತಟ್ಟೆಯಲ್ಲಿ ತೆಗೆದುಕೊಂಡು ಪಕ್ಕಕ್ಕೆ ಇಟ್ಟುಕೊಳ್ಳಬೇಕಾಗುತ್ತದೆ.
  • ಇದಾದ ನಂತರ ಅದೇ ಬಾಣಲೆಯಲ್ಲಿ ಗುಂಟೂರು, ಬ್ಯಾಡಗಿ ಒಣ ಮೆಣಸಿನಕಾಯಿಯನ್ನು ಹಾಕಿ ಸ್ವಲ್ಪ ಬಣ್ಣ ಬದಲಾಗುವವರೆಗೆ ಹುರಿಯಿರಿ. ಬಳಿಕ ಅವುಗಳನ್ನು ಒಂದು ತಟ್ಟೆಯಲ್ಲಿ ತೆಗೆದುಕೊಂಡು ಪಕ್ಕಕ್ಕೆ ಇರಿಸಿಕೊಳ್ಳಬೇಕಾಗುತ್ತದೆ.
  • ಬ್ಯಾಡಗಿ ಮೆಣಸಿನಕಾಯಿ ಚಟ್ನಿಗೆ ಉತ್ತಮ ಬಣ್ಣ ಹಾಗೂ ಪರಿಮಳ ನೀಡುತ್ತದೆ. ಖಾರವು ಮಧ್ಯಮವಾಗಿರುತ್ತದೆ. ಅದೇ.. ಹೆಚ್ಚು ಖಾರ ಬೇಕೆಂದರೆ ಗುಂಟೂರು ಮೆಣಸಿನಕಾಯಿ ಬೆರೆಸಿಕೊಳ್ಳಬೇಕಾಗುತ್ತದೆ.

ಇವುಗಳನ್ನೂ ಓದಿ :

ABOUT THE AUTHOR

...view details