ನವದೆಹಲಿ:ಇಂದುಜೈನ ಧರ್ಮದ 24ನೇ ತೀರ್ಥಂಕರರಾದ ಭಗವಾನ್ ಮಹಾವೀರರ ಜಯಂತಿ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಮತ್ತು ಕೇಂದ್ರ ಗೃಹಸಚಿವ ಅಮಿತ್ ಶಾ ಶುಭಕೋರಿದ್ದಾರೆ.
ಪ್ರಧಾನಿ ಮೋದಿ ತಮ್ಮ ಎಕ್ಸ್ ಖಾತೆಯಲ್ಲಿ, "ದೇಶವಾಸಿಗಳಿಗೆ ಮಹಾವೀರ ಜಯಂತಿಯ ಶುಭ ಸಂದರ್ಭದ ಶುಭಾಶಯಗಳು. ಭಗವಾನ್ ಮಹಾವೀರರ ಶಾಂತಿ, ಸಂಯಮ ಮತ್ತು ಸದ್ಭಾವನೆಯ ಸಂದೇಶಗಳು ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸುವಲ್ಲಿ ಸ್ಫೂರ್ತಿಯಾಗಿದೆ" ಎಂದು ಬರೆದಿದ್ದಾರೆ.
ಗೃಹ ಸಚಿವ ಅಮಿತ್ ಶಾ ಶುಭಕೋರಿದ್ದು, ದೇಶದ ಸಮಸ್ತ ಜನತೆಗೆ ಭಗವಾನ್ ಮಹಾವೀರ ಜಯಂತಿಯ ಶುಭಾಶಯಗಳು. ತ್ಯಾಗ, ಸತ್ಯ ಮತ್ತು ಅಹಿಂಸೆಯ ಶಾಶ್ವತ ಸಂಕೇತವಾದ ಭಗವಾನ್ ಮಹಾವೀರರು ತಮ್ಮ ಬೋಧನೆಗಳ ಮೂಲಕ ಇಡೀ ಮಾನವ ಜನಾಂಗದ ಕಲ್ಯಾಣಕ್ಕೆ ದಾರಿ ಮಾಡಿಕೊಟ್ಟರು. ಅವರ ಪಂಚಶೀಲ ತತ್ವಗಳು ಜನರಿಗೆ ಮಾರ್ಗದರ್ಶನ ನೀಡುತ್ತಿವೆ" ಎಂದು ಪೋಸ್ಟ್ ಮಾಡಿದ್ದಾರೆ.
ಹಿಂದೂ ಕ್ಯಾಲೆಂಡರ್ ಪ್ರಕಾರ ಮಹಾವೀರರು ಜನಿಸಿದ ದಿನವಾದ ಚೈತ್ರ ಮಾಸದ ಶುಕ್ಲ ಪಕ್ಷದ ತ್ರಯೋದಶಿಯಂದು ಜಯಂತಿ ಆಚರಿಸಲಾಗುತ್ತದೆ. ಇದನ್ನು ಮಹಾವೀರ ಜಯಂತಿ ಅಥವಾ ಮಹಾವೀರ ಜನ್ಮ ಕಲ್ಯಾಣಕ್ ಎಂದೂ ಕರೆಯಲಾಗುತ್ತದೆ. ಈ ದಿನ ಜೈನ ಅನುಯಾಯಿಗಳು ಬಸದಿಗಳಲ್ಲಿ ಮಹಾವೀರರ ಮೂರ್ತಿಗೆ ಜಲಾಭಿಷೇಕ, ಅಭಿಷೇಕ ಸೇರಿದಂತೆ ವಿಶೇಷ ಪೂಜೆ ಸಲ್ಲಿಸುತ್ತಾರೆ. ಜೈನ ಪಂಥದ ಗುರುಗಳು ಭಗವಾನ್ ಮಹಾವೀರರ ಪಂಚಶೀಲ ತತ್ವಗಳನ್ನು ಬೋಧಿಸುತ್ತಾರೆ.
ಮಹಾವೀರರು ಬೋಧಿಸಿದ 5 ತತ್ವಗಳು: