ಕರ್ನಾಟಕ

karnataka

ETV Bharat / bharat

ಪೇಟಿಎಂ ಫಾಸ್ಟ್​​ಟ್ಯಾಗ್​ ​​ಬಳಕೆದಾರರು ಮಾರ್ಚ್​ 15ರೊಳಗೆ ಬೇರೆ ಬ್ಯಾಂಕ್​ ಆಯ್ಕೆ ಮಾಡಿ: ​ಬಳಕೆದಾರರಿಗೆ NHAI ಸಲಹೆ

ಪೇಟಿಎಂ ಫಾಸ್ಟ್​ಟ್ಯಾಗ್​​​​​​ ಬಳಕೆದಾರರು ಮಾರ್ಚ್​ 15ರ ಬಳಿಕ ರಿಚಾರ್ಜ್​ ಅಥವಾ ಟಾಪ್​ ಅಪ್​​ ಬ್ಯಾಲೆನ್ಸ್​​ ಮಾಡಲು ಸಾಧ್ಯವಿಲ್ಲ.

Paytm FASTag users must Switch to other banks before March 15
Paytm FASTag users must Switch to other banks before March 15

By ETV Bharat Karnataka Team

Published : Mar 13, 2024, 4:21 PM IST

Updated : Mar 13, 2024, 4:40 PM IST

ನವದೆಹಲಿ:ಹೆದ್ದಾರಿಗಳಲ್ಲಿನ ಸುಗಮ ಸಂಚಾರಕ್ಕೆ ಮಾರ್ಚ್​ 15ರೊಳಗೆ ಪೇಟಿಎಂ ಫಾಸ್ಟ್​​ಟ್ಯಾಗ್​ ​​ಬಳಕೆದಾರರು ಬೇರೆ ಬ್ಯಾಂಕ್​ ಸೇವೆಯನ್ನು ಆಯ್ಕೆ ಮಾಡಿಕೊಳ್ಳುವಂತೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸಲಹೆ ನೀಡಿದೆ.

ಮಾರ್ಚ್​ 15ರ ಬಳಿಕ ಪೇಟಿಎಂ ಫಾಸ್ಟಾಗ್​​ಗಳಲ್ಲಿ ಬ್ಯಾಲೆನ್ಸ್​ ಇದ್ದರೂ ನಿಷ್ಕ್ರಿಯಗೊಳ್ಳಲಿದೆ. ಇದರ ಕಾರ್ಯಾಚರಣೆ ಸಂಪೂರ್ಣ ಬಂದ್​ ಆಗಲಿದೆ. ಇದರಿಂದ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಚಾರಿಸುವಾಗ ದುಪ್ಪಟು ದಂಡವನ್ನು ತಪ್ಪಿಸಲು ಬೇರೆ ಬ್ಯಾಂಕ್​ ಆಯ್ಕೆಗೆ ಮುಂದಾಗುವಂತೆ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಪ್ರಕಟಣೆ ತಿಳಿಸಿದೆ

ಪೇಟಿಎಂ ಪೇಮೆಂಟ್ಸ್​​ ಬ್ಯಾಂಕ್​​ ನಿರ್ಬಂಧ ಸಂಬಂಧ ಮಾರ್ಗಸೂಚಿ ಬಿಡುಗಡೆ ಮಾಡಿರುವ ಭಾರತೀಯ ರಿಸರ್ವ್​​ ಬ್ಯಾಂಕ್​, ಫಾಸ್ಟಾಗ್​​​ ಬಳಕೆದಾರರು ಮಾರ್ಚ್​ 15ರ ಬಳಿಕ ರಿಚಾರ್ಜ್​ ಅಥವಾ ಟಾಪ್​ ಅಪ್​​ ಬ್ಯಾಲೆನ್ಸ್​​ ಮಾಡಲು ಸಾಧ್ಯವಿಲ್ಲ. ಪೇಟಿಎಂ ಬದಲಾಗಿ ಬೇರೆ ಬ್ಯಾಂಕ್​ ಆಯ್ಕೆ ಮಾಡುವಂತೆ ತಿಳಿಸಿದೆ. ಈ ಸಂಬಂಧದ ಯಾವುದೇ ಸಲಹೆ ಮತ್ತು ಮಾಹಿತಿಗೆ ಪೇಟಿಎಂ ಫಾಸ್ಟ್​​​​ಟ್ಯಾಗ್​ ಗ್ರಾಹಕರು ತಮ್ಮ ಬ್ಯಾಂಕ್​ ಅಥವಾ ಭಾರತೀಯ ಹೆದ್ದಾರಿ ನಿರ್ವಹಣಾ ಕಂಪನಿ ಲಿಮಿಟೆಡ್​​ (ಐಎಚ್​ಎಂಸಿಎಲ್​) ವೆಬ್​ಸೈಟ್​​ಗೆ ಭೇಟಿ ನೀಡುವಂತೆ ಸೂಚನೆ ನೀಡಿದೆ.

ಎಲ್ಲ ಪೇಟಿಎಂ ಫಾಸ್ಟ್​​​​ಟ್ಯಾಗ್​​ ಬಳಕೆದಾರರು ದೇಶದೆಲ್ಲೆಡೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಚಲಿಸುವಾಗ ಸುಗಮ ಸಂಚಾರದ ಅನುಭವಕ್ಕೆ ಮುನ್ನೆಚ್ಚರಿಕೆ ಕ್ರಮವನ್ನು ಅನುಸರಿಸುವಂತೆ ಎನ್​ಎಚ್​ಎಐ ಒತ್ತಾಯಿಸಿದೆ. ಕಳೆದ ತಿಂಗಳು ಸೆಂಟ್ರಲ್​ ಬ್ಯಾಂಕ್​, ಪೇಟಿಎಂ ಪೇಮೆಂಟ್ಸ್​​​ ಬ್ಯಾಂಕ್​ ಲಿಮಿಟೆಡ್​​ನ ಯುಪಿಐ ಬಳಕೆ ಮಾಡುತ್ತಿರುವ ಬಳಕೆದಾರರಿಗೆ ಪರ್ಯಾಯ ವ್ಯವಸ್ಥೆಯ ಭರವಸೆ ನೀಡುವಂತೆ ನ್ಯಾಷನಲ್​ ಪೇಮೆಂಟ್​ ಕಾರ್ಪೋರೇಷನ್​ ಆಫ್​ ಇಂಡಿಯಾ (ಎನ್​ಪಿಸಿಐ)ಗೆ ಕೋರಿತ್ತು. ಈ ಮೂಲಕ ಸುಲಭವಾಗಿ ಬಳಕೆದಾರರು ಪೇಟಿಎಂನಿಂದ ಹೊರ ಬರುವ ಅವಕಾಶ ಒದಗಿಸಿದೆ.

ಪೇಟಿಎಂ ಪೇಮೆಂಟ್ಸ್​ ಬ್ಯಾಂಕ್​ನಿಂದ ನೀಡಲಾಗಿರುವ ಫಾಸ್ಟ್​​​​ಟ್ಯಾಗ್​ ಮತ್ತು ನ್ಯಾಷನಲ್​ ಕಾಮನ್​ ಮೊಬಿಲಿಟಿ ಕಾರ್ಡ್​​ಗಳು (ಎನ್​ಸಿಎಂಸಿ)ಗಳು ಮಾರ್ಚ್​ 15ರಿಂದ ಬಳಕೆಗೆ ಅಲಭ್ಯವಾಗಲಿದೆ. ಈ ಹಿನ್ನೆಲೆಯಲ್ಲಿ ಗ್ರಾಹಕರು ಇದರ ಅನಾನುಕೂಲದಿಂದ ತಪ್ಪಿಸಿಕೊಳ್ಳಲು ಮಾರ್ಚ್​ 15ರೊಳಗೆ ಇದಕ್ಕೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಬೇಕಿದೆ ಎಂದು ಆರ್​ಬಿಐ ತಿಳಿಸಿದೆ.

ಫಾಸ್ಟ್​​​​ಟ್ಯಾಗ್ ಮಾತ್ರವಲ್ಲದೇ, ಪೇಟಿಎಂ ಪೇಮೆಂಟ್ಸ್​ನ ಬ್ಯಾಂಕ್​ನ ಮುಂದಿನ ಠೇವಣಿ, ಹಣ ವರ್ಗಾವಣೆ, ಟಾಪ್​-ಅಪ್​, ಪ್ರೀ ಪೇಯ್ಡ್​​​ ಇನ್ಸ್​​​ಟ್ರುಮೆಂಟ್ಸ್​, ವಾಲೆಟ್​ ಮೇಲೆ ಕೂಡ ಈ ಪರಿಣಾಮ ಬೀರುವ ಹಿನ್ನೆಲೆ ಈ ಬಗ್ಗೆ ಗ್ರಾಹಕರು ಮುನ್ನೆಚ್ಚರಿಕೆ ವಹಿಸಬೇಕಿದೆ.

ಇದನ್ನೂ ಓದಿ:395ಕ್ಕೆ ತಲುಪಿದ ಪೇಟಿಎಂ ಷೇರು ಬೆಲೆ: ಭಾರಿ ಕುಸಿತದ ಬಳಿಕ ಸತತ ನಾಲ್ಕನೇ ದಿನವೂ ಏರಿಕೆ

Last Updated : Mar 13, 2024, 4:40 PM IST

ABOUT THE AUTHOR

...view details