ಕರ್ನಾಟಕ

karnataka

ETV Bharat / bharat

ಬಾಂಬೆ ಐಐಟಿಯಲ್ಲಿ ಶ್ರೀರಾಮನ ಅಣಕಿಸಿ ನಾಟಕ ಪ್ರದರ್ಶನ: 8 ವಿದ್ಯಾರ್ಥಿಗಳಿಗೆ ₹1.2 ಲಕ್ಷದವರೆಗೆ ದಂಡ - IIT Bombay - IIT BOMBAY

ಶ್ರೀರಾಮನ ಅಣಕಿಸುವ ಹಾಗೂ ರಾಮಾಯಣವನ್ನು ಕೆಟ್ಟದಾಗಿ ಬಿಂಬಿಸುವ ನಾಟಕ ಪ್ರದರ್ಶಿಸಿದ ವಿದ್ಯಾರ್ಥಿಗಳಿಗೆ ಬಾಂಬೆ ಐಐಟಿ ದಂಡ ವಿಧಿಸಿದೆ.

ಬಾಂಬೆ ಐಐಟಿ
IIT Bombay (ETV Bharat)

By PTI

Published : Jun 20, 2024, 5:39 PM IST

ಮುಂಬೈ(ಮಹಾರಾಷ್ಟ್ರ): ಭಗವಾನ್ ಶ್ರೀರಾಮನನ್ನು ಅಪಹಾಸ್ಯ ಮಾಡುವ ಮತ್ತು ಮಹಾಕಾವ್ಯ ರಾಮಾಯಣವನ್ನು ಕೆಟ್ಟದಾಗಿ ಬಿಂಬಿಸುವ ನಾಟಕ ಪ್ರದರ್ಶನ ಮಾಡಿದ ಆರೋಪದಡಿ ಎಂಟು ವಿದ್ಯಾರ್ಥಿಗಳಿಗೆ ಬಾಂಬೆ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) 1.2 ಲಕ್ಷ ರೂಪಾಯಿಗಳವರೆಗೆ ದಂಡದ ಬರೆ ಎಳೆದಿದೆ.

ಪರ್ಫಾರ್ಮಿಂಗ್ ಆರ್ಟ್ಸ್ ಫೆಸ್ಟಿವಲ್ (ಪಿಎಎಫ್) ಅಂಗವಾಗಿ ಕೆಲವು ವಿದ್ಯಾರ್ಥಿಗಳು ಮಾರ್ಚ್ 31ರಂದು 'ರಾಹೋವನ' ಎಂಬ ಹೆಸರಿನ ನಾಟಕ ಪ್ರಸ್ತುತಪಡಿಸಿದ್ದರು. ಈ ನಾಟಕದಲ್ಲಿ ಭಗವಾನ್ ರಾಮನನ್ನು ಅಣಕಿಸಿದ್ದಾರೆ. ರಾಮಾಯಣವನ್ನು ಅಸಭ್ಯವಾಗಿ ಮತ್ತು ಅವಹೇಳನಕಾರಿಯಾಗಿ ಬಿಂಬಿಸಲಾಗಿದೆ ಎಂದು ಆಡಳಿತ ಮಂಡಳಿಗೆ ದೂರು ನೀಡಲಾಗಿತ್ತು ಎಂದು ಸ್ನಾತಕೋತ್ತರ ವಿದ್ಯಾರ್ಥಿಯೊಬ್ಬರು ಹೇಳಿದ್ದಾರೆ.

ಎಂಟು ವಿದ್ಯಾರ್ಥಿಗಳಿಗೆ ತಲಾ 40,000 ರೂ.ಯಿಂದ 1,20,000 ರೂ.ಗಳವರೆಗೆ ದಂಡ ಹಾಕಲಾಗಿದೆ. ಈ ಬಗ್ಗೆ ಜೂನ್ 4ರಂದು ಐಐಟಿ ಬಾಂಬೆ ರಿಜಿಸ್ಟ್ರಾರ್ ಕಚೇರಿ ನೋಟಿಸ್‌ ಹೊರಡಿಸಿದೆ. ಜುಲೈ 30ರೊಳಗೆ ದಂಡ ಪಾವತಿಸಬೇಕು ಎಂದು ಸೂಚಿಸಲಾಗಿದೆ. ಆದರೆ, ಈ ಬಗ್ಗೆ ಅಧಿಕೃತವಾಗಿ ಪ್ರತಿಕ್ರಿಯಿಸಲು ಐಐಟಿ ಬಾಂಬೆ ನಿರಾಕರಿಸಿದೆ.

ವಿದ್ಯಾರ್ಥಿಗಳಿಗೆ ದಂಡ ವಿಧಿಸಿದ ಕ್ರಮವನ್ನು ಸಾಮಾಜಿಕ ಜಾಲತಾಣ ಬಳಕೆದಾರರು ಸ್ವಾಗತಿಸಿದ್ದಾರೆ. ರಾಮಾಯಣವನ್ನು ಅವಹೇಳನಕಾರಿಯಾಗಿ ಚಿತ್ರಿಸಿದ 'ರಾಹೋವನ' ನಾಟಕದಲ್ಲಿ ಭಾಗಿಯಾಗಿರುವವರ ವಿರುದ್ಧ ಬಾಂಬೆ ಐಐಟಿ ಆಡಳಿತ ಮಂಡಳಿ ಶಿಸ್ತು ಕ್ರಮ ಕೈಗೊಂಡಿರುವುದನ್ನು ಸ್ವಾಗತಿಸುತ್ತೇವೆ. ಈ ವಿದ್ಯಾರ್ಥಿಗಳು ಭಗವಾನ್ ರಾಮ, ಮಾತೆ ಸೀತೆ ಮತ್ತು ಭಗವಾನ್ ಲಕ್ಷ್ಮಣರನ್ನು ಅಪಹಾಸ್ಯ ಮಾಡಲು ತಮ್ಮ ಶೈಕ್ಷಣಿಕ ಸ್ವಾತಂತ್ರ್ಯವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಐಐಟಿಬಿ ಆಫ್​ ಭಾರತ್ (@IITBforBharat) 'ಎಕ್ಸ್​ ಖಾತೆ'ಯಲ್ಲಿ ಪೋಸ್ಟ್​ ಮಾಡಲಾಗಿದೆ.

''ಕ್ಯಾಂಪಸ್‌ನಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ನೆಪದಲ್ಲಿ ಯಾವುದೇ ಧರ್ಮವನ್ನು ಅಪಹಾಸ್ಯ ಮಾಡದಂತೆ ನೋಡಿಕೊಳ್ಳಲು ಮಾರ್ಗಸೂಚಿಗಳನ್ನು ಹೊರಡಿಸಲು ಐಐಟಿ ಆಡಳಿತ ಮಂಡಳಿಯನ್ನು ಒತ್ತಾಯಿಸುತ್ತೇವೆ'' ಎಂದು ಬರೆಯಲಾಗಿದೆ.

ABOUT THE AUTHOR

...view details