ನವದೆಹಲಿ: ಜಾಗತಿಕ ತಾಪಮಾನ 3 ಡಿಗ್ರಿ ಸೆಲ್ಸಿಯಸ್ ಹೆಚ್ಚಾದರೆ ಶೇ.90ರಷ್ಟು ಹಿಮಾಲಯದ ಪ್ರದೇಶಗಳು ವರ್ಷಪೂರ್ತಿ ಭೀಕರ ಬರ ಅನುಭವಿಸಬೇಕಾಗುತ್ತದೆ ಎಂದು ಹೊಸ ವರದಿಯೊಂದು ಎಚ್ಚರಿಸಿದೆ. ಜರ್ನಲ್ ಕ್ಲೈಮೆಂಟ್ ಚೇಂಜ್ನಲ್ಲಿ ಈ ಕುರಿತು ವರದಿ ಪ್ರಕಟಗೊಂಡಿದೆ.
3 ಡಿಗ್ರಿ ಸೆಲ್ಸಿಯಸ್‌ಗೆ ಹೋಲಿಕೆ ಮಾಡಿದರೆ ಪ್ಯಾರಿಸ್ ಒಪ್ಪಂದದ ತಾಪಮಾನದ ಗುರಿಗಳನ್ನು 1.5 ಡಿಗ್ರಿ ಸೆಲ್ಸಿಯಸ್‌ಗೆ ಮಿತಿಗೊಳಿಸುವುದರಿಂದ ಭಾರತದಲ್ಲಿ ಶಾಖದೊತ್ತಡಕ್ಕೆ ಒಡ್ಡಿಕೊಳ್ಳುವುದನ್ನು ಶೇ.80ರಷ್ಟು ತಪ್ಪಿಸಬಹುದು ಎಂದು ತಿಳಿಸಿದೆ.
ಯುಕೆಯ ಈಸ್ಟ್ ಆ್ಯಂಗ್ಲಿಯಾ(ಯುಇಎ) ಯೂನಿವರ್ಸಿಟಿ ಸಂಶೋಧಕರ ತಂಡ ಈ ಅಧ್ಯಯನ ನಡೆಸಿದೆ. ಹವಾಮಾನ ಬದಲಾವಣೆ ಹೇಗೆ ಮಾನವನಿಗೆ ಅಪಾಯ ತರುತ್ತದೆ?, ಬರ ಮತ್ತು ಪ್ರವಾಹ, ಬೆಳೆ ಇಳುವರಿ ಕಡಿಮೆ ಮಾಡಿ ಮತ್ತು ಜೀವ ವೈವಿಧ್ಯತೆಗೆ ಹೇಗೆ ನಷ್ಟ ಉಂಟುಮಾಡುತ್ತದೆ?, ಪ್ರತಿ ಒಂದು ಡಿಗ್ರಿ ಸೆಲ್ಸಿಯಸ್ ಹೆಚ್ಚಳವು ಮಾನವರು ಮತ್ತು ನೈಸರ್ಗಿಕ ವ್ಯವಸ್ಥೆಗೆ ಹೇಗೆ ಬೆದರಿಕೆ ಒಡ್ಡುತ್ತದೆ? ಎಂಬುದನ್ನು ಅಧ್ಯಯನ ವರದಿ ವಿವರಿಸಿದೆ.