thumbnail

ಮತ್ತೆ ಹಿಮಾಪಾತ: ಬರಿನಾಥ ಧಾಮ ಹಿಮಾವೃತ

By

Published : Apr 1, 2023, 3:15 PM IST

Updated : Apr 1, 2023, 3:34 PM IST

ಚಮೋಲಿ: ಉತ್ತರಾಖಂಡದ ಗುಡ್ಡಗಾಡು ಪ್ರದೇಶಗಳಲ್ಲಿ ಮಳೆ, ಹಿಮದ ಅಬ್ಬರ ಮುಂದುವರಿದಿದೆ. ಕಳೆದ ಎರಡು-ಮೂರು ದಿನಗಳಿಂದಾಗುತ್ತಿರುವ ಮಳೆ ಮತ್ತು ಹಿಮಪಾತದಿಂದಾಗಿ ಚಳಿ ಹೆಚ್ಚಾಗಿದೆ. ಜೊತೆಗೆ ಬದರಿನಾಥ ಧಾಮ ಹಿಮದಿಂದ ಆವೃತವಾಗಿದೆ. ಬದರಿನಾಥ್ ಮತ್ತು ಅದರ ಸುತ್ತಲಿನ ಬೆಟ್ಟಗವನ್ನು ಹಿಮದ ಬಿಳಿ ಮೋಡಗಳಿಂದ ಮುಚ್ಚಿದಂತಾಗಿದೆ.

ನಾರ್ ನಾರಾಯಣ, ನೀಲಕಂಠ ಮನ ಸೇರಿದಂತೆ ಇತರ ಶಿಖರಗಳೂ ಹಿಮದಿಂದ ಆವೃತವಾಗಿವೆ. ಏಪ್ರಿಲ್ 22 ರಿಂದ ಉತ್ತರಾಖಂಡದಲ್ಲಿ ಚಾರ್ಧಾಮ್ ಯಾತ್ರೆ ಪ್ರಾರಂಭ ಆಗಲಿದ್ದು, ಇದೀಗ ಬದರಿನಾಥ ಧಾಮದಲ್ಲಿ ಹಿಮಪಾತದಿಂದಾಗಿ ಯಾತ್ರೆಯ ಸಿದ್ಧತೆಗೂ ಅಡ್ಡಿಯಾಗಿದೆ. ಇದರೊಂದಿಗೆ ಧಾಮ್​ನಲ್ಲಿ ನಡೆಯುತ್ತಿರುವ ಮಾಸ್ಟರ್ ಪ್ಲಾನ್ ಕಾಮಗಾರಿಗಳ ಮೇಲೂ ಹಿಮಪಾತ ಪರಿಣಾಮ ಬೀರಿದೆ. ಇದಕ್ಕೂ ಮುನ್ನ ಕಳೆದ ದಿನ ಕೇದಾರನಾಥ ಧಾಮದಲ್ಲಿ ಹಿಮಪಾತವಾಗಿತ್ತು. ಕೆಲವು ದಿನಗಳಿಂದ ಕೇದಾರನಾಥದಲ್ಲಿ ಯಾತ್ರೆಯ ಸಿದ್ಧತೆಗಳು ಭರದಿಂದ ಸಾಗುತ್ತಿತ್ತು. ಹಿಮಪಾತದಿಂದಾಗಿ ಕೇದಾರನಾಥದಲ್ಲಿ ಪುನರ್ ನಿರ್ಮಾಣ ಕಾರ್ಯಕ್ಕೂ ಅಡ್ಡಿಯಾಗುತ್ತಿದೆ. ಇದರೊಂದಿಗೆ ಚಮೋಲಿ, ರುದ್ರಪ್ರಯಾಗ, ಮಸ್ಸೂರಿ, ಡೆಹ್ರಾಡೂನ್‌ನಲ್ಲಿ ಮಳೆಯಾಗುತ್ತಿದ್ದು, ಜನರು ಸಮಸ್ಯೆಗಳನ್ನು ಎದುರಿಸುವಂತಾಗಿದೆ.

ಏಪ್ರಿಲ್ 22 ರಂದು ಚಾರ್ಧಾಮ್ ಯಾತ್ರೆಯಲ್ಲಿ ಗಂಗೋತ್ರಿ ಮತ್ತು ಯಮುನೋತ್ರಿಯ ಪೋರ್ಟಲ್‌ಗಳನ್ನು ಮೊದಲು ತೆರೆಯಲಾಗುತ್ತದೆ. ಇದರ ನಂತರ, ಕೇದಾರನಾಥದ ಬಾಗಿಲು ಏಪ್ರಿಲ್ 25 ರಂದು ತೆರೆಯಲಾಗುತ್ತದೆ. ಏಪ್ರಿಲ್ 27 ರಂದು ಭಕ್ತರಿಗಾಗಿ ಬದರಿನಾಥ ಧಾಮದ ಬಾಗಿಲು ತೆರೆಯಲಾಗುತ್ತದೆ. ಈ ಬಾರಿ ಚಾರ್ಧಾಮ್ ಯಾತ್ರೆಯಲ್ಲಿ ದಾಖಲೆ ಪ್ರಮಾಣದಲ್ಲಿ ಯಾತ್ರಿಕರು ಆಗಮಿಸುವ ಸಾಧ್ಯತೆ ಇದೆ. ರಾಜ್ಯ ಸರ್ಕಾರ ಮತ್ತು ಆಡಳಿತ ಇದರ ಸಿದ್ಧತೆಯಲ್ಲಿ ನಿರತವಾಗಿದೆ.

ಇದನ್ನೂ ನೋದಿ: ಸಿಕ್ಕಿಂನಲ್ಲಿ ಭಾರಿ ಹಿಮಪಾತ.. 15 ಕಿ.ಮೀಟ್ರಾಫಿಕ್‌ ಜಾಮ್‌, ಒಂದು ಸಾವಿರ ಪ್ರವಾಸಿಗರನ್ನ ರಕ್ಷಿಸಿದ ಸೇನೆ

Last Updated : Apr 1, 2023, 3:34 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.